Homeಮುಖಪುಟ2007ರ ಆಂಧ್ರದ ಗ್ಯಾಂಗ್‌ರೇಪ್ ಪ್ರಕರಣದಲ್ಲಿ ಆರೋಪಿ ಪೊಲೀಸರ ಖುಲಾಸೆ; ಪೊಲೀಸರ ತನಿಖೆಯಲ್ಲೂ ಅನ್ಯಾಯ ಎಂದ ಸಂತ್ರಸ್ತೆ

2007ರ ಆಂಧ್ರದ ಗ್ಯಾಂಗ್‌ರೇಪ್ ಪ್ರಕರಣದಲ್ಲಿ ಆರೋಪಿ ಪೊಲೀಸರ ಖುಲಾಸೆ; ಪೊಲೀಸರ ತನಿಖೆಯಲ್ಲೂ ಅನ್ಯಾಯ ಎಂದ ಸಂತ್ರಸ್ತೆ

- Advertisement -
- Advertisement -

2007ರಲ್ಲಿ ಆಂಧ್ರಪ್ರದೇಶದ ಪೊಲೀಸ್ ಸಿಬ್ಬಂದಿಗಳ ಗುಂಪು ಸಾಮೂಹಿಕ ಅತ್ಯಾಚಾರವೆಸಗಿದ್ದರು ಎಂದು ಹೇಳಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಡಕಟ್ಟು ಮಹಿಳೆಯೊಬ್ಬರು, ಪೊಲೀಸರು ಇನ್ನೊಬ್ಬ ಪೋಲೀಸರ ಅಪರಾಧವನ್ನು ಎಂದಿಗೂ ತನಿಖೆ ಮಾಡುವುದಿಲ್ಲ ಎಂದು ಭಾನುವಾರ ಆರೋಪಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ವರದಿ ಮಾಡಿದೆ.

ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯಲ್ಲಿ 2007ರ ಆಗಸ್ಟ್ 20ರಂದು 11 ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ ಹೊತ್ತಿದ್ದ ಎಲ್ಲ 13 ಪೊಲೀಸರನ್ನು ವಿಶಾಖಪಟ್ಟಣಂನ ಜಿಲ್ಲಾ ನ್ಯಾಯಾಲಯವು ಏಪ್ರಿಲ್ 6ರಂದು ಖುಲಾಸೆಗೊಳಿಸಿದೆ. ಈ ಪ್ರಕರಣದ ತನಿಖಾಧಿಕಾರಿ ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಲು ವಿಫಲರಾಗಿದ್ದರು ಎಂದು ದಿ ನ್ಯೂಸ್ ಮಿನಿಟ್ ಹೇಳಿದೆ.

ವಿಶೇಷ ನ್ಯಾಯಾಧೀಶ ಎಲ್.ಶ್ರೀಧರ್ ಅವರು, ತನಿಖಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ ಮತ್ತು ಮಹಿಳೆಯರಿಗೆ ಪರಿಹಾರ ನೀಡುವಂತೆ ಸೂಚಿಸಿದರು.

”ನಮಗೆ ಪರಿಹಾರವನ್ನು ಒದಗಿಸಲು ನ್ಯಾಯಾಲಯದ ಆದೇಶ ನೀಡಿರುವುದು ಬೆಳ್ಳಿ ರೇಖೆ ಎಳೆದಂತಾಗಿದೆ ಅಂದರೆ ನಾವು ಬಲಿಪಶುಗಳು ಎಂದು ನ್ಯಾಯಾಲಯ ನಂಬುತ್ತದೆ” ಎಂದು ಬುಡಕಟ್ಟು ಮಹಿಳೆ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಇದನ್ನೂ ಓದಿ: ಜಾರ್ಖಂಡ್: 4 ದಿನದ ಹಸುಗೂಸನ್ನು ತುಳಿದ ಕೊಂದ ಆರೋಪ: ಆರು ಪೊಲೀಸ್ ಅಧಿಕಾರಿಗಳು ಸಸ್ಪೆಂಡ್

ಸಾಮೂಹಿಕ ಅತ್ಯಾಚಾರ ಪ್ರಕರಣ

ಆಗಸ್ಟ್ 2007ರಲ್ಲಿ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ವಾಕಪಲ್ಲಿ ಗ್ರಾಮದಲ್ಲಿ ವಿಶೇಷ ಮಾವೋವಾದಿ ವಿರೋಧಿ ತಂಡವು ನಡೆಸಿದ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಪೊಲೀಸರು ತಮ್ಮ ಮೇಲೆ ಬಂದೂಕು ತೋರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಕೊಂಡ್ ಬುಡಕಟ್ಟು ಜನಾಂಗದ ಹನ್ನೊಂದು ಮಹಿಳೆಯರು ಆರೋಪಿಸಿದ್ದಾರೆ.

ಎಫ್‌ಐಆರ್‌ ತಡವಾಗಿ ದಾಖಲಿಸಿಕೊಳ್ಳಲಾಗಿದೆ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲೂ ವಿಳಂಬ ಮಾಡಲಾಗಿದೆ. ಈ ಪ್ರಕರಣದ ತನಿಖೆ ಕೂಡ ನಿಧಾನಗತಿಯಲ್ಲಿ ನಡೆಸಿ ಲೋಪ ಎಸಗಲಾಗಿದೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376(2) (ಪೊಲೀಸ್ ಅಧಿಕಾರಿಯಿಂದ ಅತ್ಯಾಚಾರ) ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ಬಳಿಕ ಸರಿಸುಮಾರು 11 ವರ್ಷಗಳ ನಂತರ ಆಪಾದಿತ ಸಾಮೂಹಿಕ ಅತ್ಯಾಚಾರದ ಪ್ರಕರಣದ ವಿಚಾರಣೆಯು ಆಗಸ್ಟ್ 2018ರಲ್ಲಿ ಪ್ರಾರಂಭವಾಯಿತು ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ವಿಚಾರಣೆ ಪ್ರಾರಂಭವಾಗುವ ವೇಳೆಗೆ 11 ಮಹಿಳೆಯರಲ್ಲಿ ಇಬ್ಬರು ಸಾವನ್ನಪ್ಪಿದ್ದರು.

ತನಿಖೆಯಲ್ಲಿ ಲೋಪ

ಮಹಿಳೆಯರು ತಮ್ಮ ಮೇಲೆ ಅತ್ಯಾಚಾರವೆಸಗಿದ್ದಾರೆಂದು ದೂರು ನೀಡಿದ ಆರು ದಿನಗಳ ನಂತರ 2007ರ ಆಗಸ್ಟ್ 26ರಂದು ಪೊಲೀಸರು ಈ ಪ್ರಕರಣದ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವಿಶಾಕಪಟ್ಟಣಂ ಜಿಲ್ಲಾ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸುಂಕರ ರಾಜೇಂದ್ರ ಪ್ರಸಾದ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ಈ ಆರೋಪಗ ತನಿಖೆಗಾಗಿ ಆಗಸ್ಟ್ 27, 2007ರಂದು ವಿಶಾಖಪಟ್ಟಣಂ ಗ್ರಾಮಾಂತರದ ಉಪ ಪೊಲೀಸ್ ವರಿಷ್ಠಾಧಿಕಾರಿ ಬಿ ಆನಂದ ರಾವ್ ಅವರನ್ನು ನೇಮಿಸಿತು. ಆದರೆ, ಸೆಪ್ಟೆಂಬರ್ 8ರವರೆಗೆ ರಾವ್ ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಅಪರಾಧದ ಸ್ಥಳವನ್ನು ಸುರಕ್ಷಿತವಾಗಿರಿಸಲಾಗಿಲ್ಲ, ಪುರಾವೆಗಳನ್ನು ಸಂಗ್ರಹಿಸಲಾಗಿಲ್ಲ ಮತ್ತು ಆರೋಪಿಗಳ ಸಾಮೂಹಿಕ ಅತ್ಯಾಚಾರದ ನಂತರ 17 ದಿನಗಳವರೆಗೆ ದೂರುದಾರರ ಹೇಳಿಕೆಗಳನ್ನು ದಾಖಲಿಸಲಾಗಿಲ್ಲ.

ಎಫ್‌ಐಆರ್ ದಾಖಲಿಸಲು ಆರು ದಿನಗಳ ವಿಳಂಬದ ನಂತರ, ಪೊಲೀಸರು ಮಹಿಳೆಯರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲು ಮತ್ತೆರೆಡು ದಿನ ವಿಳಂಬ ಮಾಡಿದ್ದರು. ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲು ಅಸಮರ್ಪಕ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಗೆ ಆ ಮಹಿಳೆಯರನ್ನು ಕಳುಹಿಸಲು ಪೊಲೀಸರು ಪ್ರಯತ್ನಿಸಿದರು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

2018ರಲ್ಲಿ ವಿಚಾರಣೆ ಪ್ರಾರಂಭವಾಗುವವರೆಗೂ ಆರೋಪಿಗಳನ್ನು ಪರೀಕ್ಷೆಯನ್ನು ಮಾಡಲಾಗಿಲ್ಲ. ಈ ಘಟನೆಯ ನಂತರ ಅವರನ್ನು ತಮ್ಮ ಗ್ರಾಮದಲ್ಲಿ ಬಹಿಷ್ಕರಿಸಲಾಗಿದೆ ಎಂದು ದೂರುದಾರರಲ್ಲಿ ಒಬ್ಬ ಮಹಿಳೆ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

”ನಮ್ಮ ಗಂಡಂದಿರು ಮತ್ತು ಗ್ರಾಮದ ಹಿರಿಯರಿಂದ ನಾವು ಕ್ರೂರ ಮತ್ತು ಅಮಾನವೀಯ ಚಿಕಿತ್ಸೆಗೆ ಒಳಗಾಗಿದ್ದೇವೆ” ಎಂದು ಅವರು ಹೇಳಿದರು. ”..ನಮ್ಮ ಮಕ್ಕಳೊಂದಿಗೆ ಸಂವಹನ ನಡೆಸಲು ನಮಗೆ ಅವಕಾಶವಿರಲಿಲ್ಲ. ಹಲವಾರು ದಿನಗಳ ನಂತರ ನಮ್ಮನ್ನು ನಮ್ಮ ಮನೆಗಳಿಗೆ ಮರಳಿ ಅನುಮತಿಸಲಾಯಿತು ಮತ್ತು ಶುದ್ಧೀಕರಣ ಸ್ನಾನವನ್ನು ತೆಗೆದುಕೊಳ್ಳಬೇಕಾಯಿತು” ಎಂದು ಮಹಿಳೆ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...