ಇಷ್ಟು ದಿನ ಸಿನಿ ಪ್ರೇಕ್ಷಕರು, ಕಲಾವಿದರು ಕಾಯುತ್ತಿದ್ದ ಚಿತ್ರಮಂದಿರಗಳ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಅನ್‌ಲಾಕ್ 5.0 ಮಾರ್ಗಸೂಚಿ ಬಿಡುಗಡೆ ಮಾಡಿರುವ ಕೇಂದ್ರ ಗೃಹ ಸಚಿವಾಲಯ ಅಕ್ಟೋಬರ್ 15ರಿಂದ ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಮತ್ತು ಸ್ವಿಮ್ಮಿಂಗ್ ಪೂಲ್‌ಗಳನ್ನು ತೆರೆಯಲು ಅನುಮತಿ ನೀಡಿದೆ.
ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಅನ್‌ಲಾಕ್ 5.0 ಮಾರ್ಗಸೂಚಿಯಲ್ಲಿ ಹೆಚ್ಚಿನ ಸಡಿಲಿಕೆ ಮತ್ತು ಕಡಿಮೆ ನಿರ್ಬಂಧಗಳನ್ನು ಗೃಹ ಸಚಿವಾಲಯ ನೀಡಿದೆ. ಆದರೆ ತಾನು ಹೊರಡಿಸಿರುವ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತಗಳು ಶಿಸ್ತುಬದ್ಧವಾಗಿ ಅನುಸರಿಸಬೇಕೆಂದು ಕೇಂದ್ರ ಸೂಚಿಸಿದೆ.
ಇದನ್ನೂ ಓದಿ: ಮಥುರಾ: ಈದ್ಗಾ ಮಸೀದಿ ತೆರವು ಕೋರಿದ್ದ ಮನವಿ ವಜಾ
GoI issues new guidelines for 'Re-opening'; cinema halls/multiplexes, swimming pools used for training of sportspersons & entertainment parks to re-open from 15th Oct
For re-opening of schools, States given flexibility to take a decision after Oct 15, parental consent required pic.twitter.com/KCoQ9E6HJr— ANI (@ANI) September 30, 2020
ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್‌ಗಳು ಸಿನಿಮಾ ಪ್ರದರ್ಶನಕ್ಕೆ ಶೇಕಡಾ 50ರಷ್ಟು ಜನರನ್ನು ಮಾತ್ರ ಸೇರಿಸಲು ಸೂಚಿಸಲಾಗಿದೆ. ಕ್ರೀಡಾಪಟುಗಳ ತರಬೇತಿಗಾಗಿ ಬಳಸಲಾಗುವ ಈಜು ಕೊಳಗಳು, ಮನರಂಜನಾ ಉದ್ಯಾನವನಗಳನ್ನು ತೆರೆಯಬಹುದು.
ಶಾಲೆಗಳು ಮತ್ತು ತರಬೇತಿ ಸಂಸ್ಥೆಗಳನ್ನು ಪುನಃ ತೆರೆಯಲು, ರಾಜ್ಯ ಸರ್ಕಾರಗಳಿಗೆ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ನೀಡಲಾಗಿದೆ. ಖುದ್ದು ಶಾಲೆಗೆ ಹಾಜರಾಗಲು ನಿರಾಕರಿಸಿ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳಿಗೆ ಅನುಮತಿ ನೀಡಬಹುದು. ಆದರೆ ಪೋಷಕರ ಲಿಖಿತ ಒಪ್ಪಿಗೆಯೊಂದಿಗೆ ಮಾತ್ರ ವಿದ್ಯಾರ್ಥಿಗಳು ಶಾಲೆ ಅಥವಾ ಸಂಸ್ಥೆಗಳಿಗೆ ಹಾಜರಾಗಬಹುದು.