Homeಮುಖಪುಟದಲಿತ ಹೋರಾಟಗಾರ ಹಾರೋಹಳ್ಳಿ ರವೀಂದ್ರವರಿಗೆ ಮಧ್ಯಂತರ ಜಾಮೀನು

ದಲಿತ ಹೋರಾಟಗಾರ ಹಾರೋಹಳ್ಳಿ ರವೀಂದ್ರವರಿಗೆ ಮಧ್ಯಂತರ ಜಾಮೀನು

- Advertisement -
- Advertisement -

ದಲಿತ ಹೋರಾಟಗಾರ, ಚಿಂತಕ, ಬರಹಗಾರ ಹಾಗೂ ಪತ್ರಕರ್ತ ಮೈಸೂರು ಜಿಲ್ಲೆಯ ಹಾರೋಹಳ್ಳಿ ರವೀಂದ್ರರವರಿಗೆ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ನಿನ್ನೆ ಮೈಸೂರಿನ ವರುಣದಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಠಾಣೆ ಪೊಲೀಸರು ರವೀಂದ್ರ ಅವರನ್ನು ಬಂಧಿಸಿದ್ದರು. ಹಳೆಯ ಫೇಸ್‌ಬುಕ್‌ ಪೋಸ್ಟ್‌‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.

ಹಾರೋಹಳ್ಳಿ ರವೀಂದ್ರ ಅವರು ದಲಿತ ಯುವ ಚಿಂತಕರಲ್ಲಿ ಮೈಸೂರು ಭಾಗದ ದಿಟ್ಟ ದನಿ. ದಲಿತರ ವಿಚಾರವಾಗಿ ಅವರು ಸದಾ ದನಿ ಎತ್ತುತ್ತಾ ಕೆಲವು ಪ್ರಕರಣಗಳಲ್ಲಿ ಸಿಲುಕಿದ್ದರು.

2017ರಲ್ಲಿ ಸಂಸದ ಅನಂತ್‌ಕುಮಾರ್‌ ಹೆಗಡೆ, “ಜಾತ್ಯತೀತರಿಗೆ ಅಪ್ಪ ಅಮ್ಮ ಇಲ್ಲ” ಎಂದು ಹೇಳಿಕೆ ನೀಡಿದ್ದರು. ಹೆಗಡೆ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದವು. ಆಗ ಹಾರೋಹಳ್ಳಿಯವರು ಕಟುವಾಗಿ ಪೋಸ್ಟ್ ಹಾಕಿದ್ದರು. ಹಿಂದೂ ದೇವರುಗಳಿಗೆ ಅಪಮಾನ ಮಾಡಲಾಗಿದೆ ಎಂದು ರವೀಂದ್ರ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read