Homeರಾಜಕೀಯಮಸೀದಿ ಧ್ವನಿವರ್ಧಕಗಳ ವಿರುದ್ಧ ರ್‍ಯಾಲಿ ನಡೆಸಲು ಹೊರಟ ರಾಜ್‌ ಠಾಕ್ರೆಗೆ ಇಫ್ತಾರ್ ಆಹ್ವಾನ ನೀಡಿದ AIMIM...

ಮಸೀದಿ ಧ್ವನಿವರ್ಧಕಗಳ ವಿರುದ್ಧ ರ್‍ಯಾಲಿ ನಡೆಸಲು ಹೊರಟ ರಾಜ್‌ ಠಾಕ್ರೆಗೆ ಇಫ್ತಾರ್ ಆಹ್ವಾನ ನೀಡಿದ AIMIM ಸಂಸದ

- Advertisement -
- Advertisement -

ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ತೆಗೆಯಬೇಕು ಎಂದು ಅಭಿಯಾನ ನಡೆಸುತ್ತಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS)ಯ ಮುಖ್ಯಸ್ಥ ರಾಜ್ ಠಾಕ್ರೆ ಅವರಿಗೆ AIMIM ನ ಔರಂಗಾಬಾದ್ ಸಂಸದ ಇಮ್ತಿಯಾಜ್ ಜಲೀಲ್ ಅವರು ಇಫ್ತಾರ್ ಕೂಟದ ಆಹ್ವಾನ ನೀಡಿದ್ದಾರೆ ಎಂದು ವರದಿಯಾಗಿದೆ. MNS ಮುಂದಿನ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡುವ ಸಂಭವವಿದೆ ಎಂದು ಊಹಿಸಲಾಗಿದೆ.

ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ತೆಗೆಯಬೇಕು ಎಂದು ರಾಜ್‌ ಠಾಕ್ರೆ ಔರಂಗಾಬಾದ್‌ನಲ್ಲಿ ರ್‍ಯಾಲಿಯಲ್ಲಿ ಆಯೋಜಿಸಿದ್ದಾರೆ. ಈ ಮಧ್ಯೆ ಅವರಿಗೆ AIMIM ಸಂಸದ ಇಫ್ತಾರ್‌ ಔತಣ ಕೂಟ ಆಹ್ವಾನ ನೀಡಿದ್ದಾರೆ. ಆದರೆ, ರಾಜ್‌‌ ಠಾಕ್ರೆ ಈ ಇಫ್ತಾರ್‌ ಕೂಟದಲ್ಲಿ ಭಾಗವಹಿಸುತ್ತಾರೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ರಾಜ್ ಠಾಕ್ರೆ ಮೇ 3 ರೊಳಗೆ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕುವ ಸಂಬಂಧ ಆಡಳಿತಕ್ಕೆ ನೀಡಿದ ಗಡುವಿನ ಹಿನ್ನೆಲೆಯಲ್ಲಿ, ಭಾನುವಾರ ಔರಂಗಾಬಾದ್‌ನಲ್ಲಿ ತಮ್ಮ ಯೋಜಿತ ರ್‍ಯಾಲಿಯನ್ನು ನಡೆಸಲಿದ್ದಾರೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಸಚಿನ್, ಲತಾ ಮಂಗೇಶ್ಕರ್ ಟ್ರೋಲ್‌ಗೊಳಗಾಗಲು ಕೇಂದ್ರ ಸರ್ಕಾರವೇ ಕಾರಣ: ರಾಜ್ ಠಾಕ್ರೆ

ಈ ಮಧ್ಯೆ, ಮಹಾರಾಷ್ಟ್ರದಲ್ಲಿ MNS ಮತ್ತು ಬಿಜೆಪಿ ನಡುವಿನ ಸಂಭವನೀಯ ಮೈತ್ರಿಯ ಬಗ್ಗೆ ಊಹಾಪೋಹಗಳು ಹೆಚ್ಚಾಗ ತೊಡಗಿದೆ. ಆದರೆ MNS ನಿಕಟ ಮೂಲಗಳು ಈ ವಿಷಯದ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಊಹಾಪೋಹಗಳನ್ನು ನಿರಾಕರಿಸಿವೆ.

MNS ರ್‍ಯಾಲಿಯ ಕುರಿತು ಪ್ರತಿಕ್ರಿಯಿಸಿದ ಶಿವಸೇನೆ ವಕ್ತಾರ ಸಂಜಯ್ ರಾವತ್, “ಅವರು (ರಾಜ್ ಠಾಕ್ರೆ) ತಮ್ಮ ನಿಲುವನ್ನು ಎಷ್ಟು ಬಾರಿ ಬದಲಾಯಿಸಿದ್ದಾರೆ ಎಂಬುದು ಪಿಎಚ್‌ಡಿ ವಿಷಯವಾಗಿದೆ” ಎಂದು ವ್ಯಂಗ್ಯವಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...