Homeಕರ್ನಾಟಕ‘ಕಾರ್ಟೂನ್‌ ಹಬ್ಬ-2021’ ಉದ್ಘಾಟಿಸಿದ ನಟ ಡಾಲಿ ದನಂಜಯ್‌‌

‘ಕಾರ್ಟೂನ್‌ ಹಬ್ಬ-2021’ ಉದ್ಘಾಟಿಸಿದ ನಟ ಡಾಲಿ ದನಂಜಯ್‌‌

- Advertisement -
- Advertisement -

ವಿಶ್ವದ ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್‌ ಆಚಾರ್ಯ ಅವರ ನೇತೃತ್ವದಲ್ಲಿ ನಡೆಯುವ ‘ಕಾರ್ಟೂನ್‌ ಹಬ್ಬ- 2021’ ಉಡುಪಿ ಜಿಲ್ಲೆಯ ಕುಂದಾಪುರದ ಅಥರ್ವಾ ಕಾಂಪ್ಲೆಕ್ಸ್‌ನಲ್ಲಿ ಶುಕ್ರವಾರದಂದು ಆರಂಭವಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡದ ಖ್ಯಾತ ನಟ ಡಾಲಿ ದನಂಜಯ್ ಮತ್ತು ಕಲಾವಿದ ಬಾದಲ್ ನಂಜುಂಡಸ್ವಾಮಿಯವರು ಅವರು ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರ ವ್ಯಂಗ್ಯಚಿತ್ರ ಬರೆಯುವ ಮೂಲಕ ಉದ್ಘಾಟನೆ ಮಾಡಿದರು.

ಪ್ರಸ್ತುತ ನಡೆಯುತ್ತಿರುವ ಕಾರ್ಟೂನ್‌ ಹಬ್ಬವು ಎಂಟನೇ ಆವೃತ್ತಿಯ ಕಾರ್ಯಕ್ರಮವಾಗಿದ್ದು, ಇಂದಿನಿಂದ ಭಾನುವಾರದವರೆಗೆ ಒಟ್ಟು ಮೂರು ದಿನಗಳ ಕಾಲ ನಡೆಯಲಿದೆ.

ಇದನ್ನೂ ಓದಿ:ಡಾ.ಜೆ.ಬಾಲಕೃಷ್ಣರ ವ್ಯಂಗ್ಯಚಿತ್ರ-ಚರಿತ್ರೆ; ನಡೆದುಬಂದ ದಾರಿ

‘ಭಾರತ ಮುಂದಿನ 75 ವರ್ಷಗಳು’ ಎಂಬ ವಿಷಯದ ಕೇಂದ್ರವಾಗಿಟ್ಟು ಪ್ರಾರಂಭವಾದ ಕಾರ್ಯಕ್ರದ ದಿಕ್ಸೂಚಿ ವಿಡಿಯೊ ಸಂದೇಶವನ್ನು ಸಂಸದ ಡಾ. ಶಶಿ ತರೂರ್‌ ನೀಡಿದ್ದಾರೆ.

ವ್ಯಂಗ್ಯಚಿತ್ರ ಪ್ರದರ್ಶನ, ಸ್ಥಳದಲ್ಲೇ ಕ್ಯಾರಿಕೇಚರ್‌, ವ್ಯಂಗ್ಯಚಿತ್ರ ಸ್ಪರ್ಧೆ, ಭಾರತ-75 ವ್ಯಂಗ್ಯಚಿತ್ರಗಳು, ಕಾರ್ಟೂನ್‌ ಡೈಲಾಗ್‌ ಸ್ಪರ್ಧೆ, ಕ್ಯಾರಿಕೇಚರ್‌ ಬಿಡಿಸುವ ಸ್ಪರ್ಧೆ, ಕ್ಯಾರಿಕೇಚರ್‌ ವರ್ಕ್‌ಶಾಪ್‌, ಸ್ಥಳೀಯ ಕೊರೊನಾ ಯೋಧರಿಗೆ ಸನ್ಮಾನ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಮೂರು ದಿನಗಳ ಕಾರ್ಟೂನ್‌ ಹಬ್ಬದಲ್ಲಿ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ:ಸರ್ವಾಧಿಕಾರಿ ಹಿಟ್ಲರ್ ಮತ್ತು ಆತನ ಬಗೆಗಿನ ಗಮನ ಸೆಳೆದ ವ್ಯಂಗ್ಯಚಿತ್ರಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...