HomeUncategorizedಮಹುವಾ ಪ್ರಕರಣ: ಸ್ಪೀಕರ್‌ಗೆ ಅಧೀರ್ ರಂಜನ್ ಚೌಧರಿ ಪತ್ರ

ಮಹುವಾ ಪ್ರಕರಣ: ಸ್ಪೀಕರ್‌ಗೆ ಅಧೀರ್ ರಂಜನ್ ಚೌಧರಿ ಪತ್ರ

- Advertisement -
- Advertisement -

ಸೋಮವಾರ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರ ಉಚ್ಚಾಟನೆಗೆ ಶಿಫಾರಸು ಮಾಡುವ ವರದಿಯನ್ನು ಲೋಕಸಭೆಯ ನೈತಿಕ ಸಮಿತಿಯು ಮಂಡಿಸಲು ಸಿದ್ಧವಾಗುತ್ತಿದೆ. ಈ ಮಧ್ಯೆ ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಶನಿವಾರ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಉಚ್ಛಾಟನೆಯು ಅತ್ಯಂತ ಗಂಭೀರ ಶಿಕ್ಷೆ ಎಂದು ಹೇಳಿದ್ದು ಸಮಿತಿಯು ತನಿಖೆಯ ಕಾರ್ಯವಿಧಾನಗಳನ್ನು ಅನುಸರಿಸಿದೆಯೇ ಎಂದು ಪ್ರಶ್ನಿಸಿದ್ದಾರೆ.

ಸ್ಪೀಕರ್‌ಗೆ 4 ಪುಟಗಳ ಪತ್ರವನ್ನು ಬರೆದ ಚೌಧರಿ ಅವರು, ಪ್ರಾಥಮಿಕವಾಗಿ ಲೋಕಸಭೆಯ ಸದಸ್ಯರ ಹಿತಾಸಕ್ತಿ ಮತ್ತು ಹಕ್ಕುಗಳಿಗೆ ಸಂಬಂಧಿಸಿದ ವಿಶೇಷಾಧಿಕಾರಗಳ ಸಮಿತಿ ಮತ್ತು ನೈತಿಕ ಸಮಿತಿಯಂತಹ ಸಂಸದೀಯ ಸಮಿತಿಗಳ ಕಾರ್ಯಚಟುವಟಿಕೆಗೆ ಸಂಬಂಧಿಸಿದ ನಿಯಮಗಳು ಮತ್ತು ಪ್ರಕ್ರಿಯೆಗಳ ಮರುಪರಿಶೀಲನೆಗೆ  ಒತ್ತಾಯಿಸಿದ್ದಾರೆ.

ಶಿಕ್ಷೆ ವಿಧಿಸುವಂತಹ ವಿಚಾರಗಳಲ್ಲಿ ಸವಲತ್ತುಗಳ ಸಮಿತಿ ಮತ್ತು ನೈತಿಕತೆ ಸಮಿತಿಗೆ ಯಾವುದೇ ಸ್ಪಷ್ಟ ನಿಯಮಗಳಿಲ್ಲ. ಅಷ್ಟೇ ಅಲ್ಲದೆ ನೈತಿಕವಲ್ಲದ ವರ್ತನೆ ಮತ್ತು ನೀತಿ ಸಂಹಿತೆ ಕುರಿತು ಸ್ಪಷ್ಟ ವ್ಯಾಖ್ಯಾನವಿಲ್ಲ. ಈ ಪ್ರಕರಣವನ್ನು ಪುನರಾವಲೋಕಿಸಿ ಸಂಸದೀಯ ಸಮಿತಿಗಳ ಕಾರ್ಯಾಚರಣೆಗಳ ನಿಯಮಗಳು ಮತ್ತು ಪ್ರಕ್ರಿಯೆಗಳನ್ನು ಪರಿಶೀಲಿಸಬೇಕೆಂದು ಅವರು ಕೋರಿದ್ದಾರೆ.

ನಗದು-ಪ್ರಶ್ನೆ ಪ್ರಕರಣದಲ್ಲಿ ಮೊಯಿತ್ರಾ ಅವರನ್ನು ಉಚ್ಚಾಟಿಸಲು ಶಿಫಾರಸು ಮಾಡುವ ಲೋಕಸಭೆಯ ನೈತಿಕ ಸಮಿತಿಯ ವರದಿಯನ್ನು ಸೋಮವಾರ ಕೆಳಮನೆಯಲ್ಲಿ ಮಂಡಿಸುವ ಸಾಧ್ಯತೆ ಇದೆ. ಲೋಕಸಭೆ ಸೆಕ್ರೆಟರಿಯೇಟ್ ಹಂಚಿಕೊಂಡ ಮಾಹಿತಿ ಪ್ರಕಾರ ನೀತಿ ಸಮಿತಿಯ ಅಧ್ಯಕ್ಷ ವಿನೋದ್ ಕುಮಾರ್ ಸೋಂಕರ್ ಅವರು ಸಮಿತಿಯ ವರದಿಯನ್ನು ಸದನದ ಮುಂದಿಡಲಿದ್ದಾರೆ.

ನ.9ರಂದು ನಡೆದ ಸಭೆಯಲ್ಲಿ ಸಮಿತಿಯು ಪ್ರಶ್ನೆಗಾಗಿ ನಗದು ಆರೋಪದಲ್ಲಿ ಲೋಕಸಭೆಯಿಂದ ಮೊಯಿತ್ರಾ ಅವರನ್ನು ಉಚ್ಚಾಟಿಸುವಂತೆ ಶಿಫಾರಸು ಮಾಡುವ ತನ್ನ ವರದಿಯನ್ನು ಅಂಗೀಕರಿಸಿದೆ. ಮೊಯಿತ್ರಾ ವಿರುದ್ಧ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಆರೋಪಿಸಿದ ಆರೋಪದ ಬಗ್ಗೆ ವಿಚಾರಣೆ ನಡೆಸಿದ ನೈತಿಕ ಸಮಿತಿಯು ನ.9ರಂದು ತನ್ನ ಕರಡು ವರದಿಯನ್ನು ಅಂಗೀಕರಿಸಿದೆ.

ಮೊಯಿತ್ರಾ ಅವರು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಸುಪ್ರೀಂಕೋರ್ಟ್ ವಕೀಲ ಜೈ ಅನಂತ್ ದೇಹದ್ರಾಯ್ ಅವರು ಸಿಬಿಐಗೆ ದೂರು ಸಲ್ಲಿಸಿದ್ದರು. ದೇಹದ್ರಾಯ್ ಅವರು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರಿಗೂ ಈ ಸಂಬಂಧ ಪತ್ರ ಬರೆದಿದ್ದಾರೆ. ದುಬೆ ಮಹುವಾ ಮೊಯಿತ್ರಾ ವಿರುದ್ದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ಲೋಕಪಾಲರಿಗೆ ದೂರು ನೀಡಿದ್ದರು. ಈ ಸಂಬಂಧ ಲೋಕಸಭೆಯ ನೈತಿಕ ಸಮಿತಿ ಮಹುವಾ ಮೊಯಿತ್ರಾ ಅವರ ಹೇಳಿಕೆ ದಾಖಲಿಸಿಕೊಂಡಿತ್ತು.

ಇದನ್ನು ಓದಿ: ದುಂಡಾ ಜಾತಿ ಹಿಂಸಾಚಾರ: ದಲಿತರಿಗೆ ನ್ಯಾಯ ಒದಗಿಸಲು ವಿಫಲವಾಗಿದ್ದ ಬಿಜೆಪಿ ಸರಕಾರ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...