ಪ್ರಚಲಿತ ಸಮಸ್ಯೆಗಳ ಬಗ್ಗೆ ಫೇಸ್‌ಬುಕ್ ಲೈವ್ ವಿಡಿಯೋಗಳ ಮೂಲಕ ಖ್ಯಾತರಾದ ಮತ್ತು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಂತ್ರಸ್ತ ಯುವತಿಯ ಪರ ನಿಂತ ವಕೀಲರಾದ ಜಗದೀಶ್‌ ಕೆ.ಎನ್‌. ಮಹಾದೇವ್‌ರವರು ಸೋಮವಾರ ಆಮ್‌ ಆದ್ಮಿ ಪಕ್ಷ ಸೇರಲಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಆಪ್ ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ವಿ. ಸದಂ, “ಅಸಂಖ್ಯಾತ ಯುವ ಅಭಿಮಾನಿಗಳಿಂದ “ವಕೀಲ್‌ ಸಾಬ್”‌ ಎಂದೇ ಕರೆಸಿಕೊಳ್ಳುತ್ತಿರುವ ಖ್ಯಾತ ವಕೀಲರಾದ ಜಗದೀಶ್‌ ಕೆ.ಎನ್‌. ಮಹಾದೇವ್‌ರವರು ಆಮ್‌ ಆದ್ಮಿ ಪಾರ್ಟಿಯನ್ನು ಸೇರಲಿದ್ದಾರೆ. ರಮೇಶ್‌ ಜಾರಕಿಹೊಳಿಯವರು ಯುವತಿಯನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಸಂತ್ರಸ್ತರ ಧ್ವನಿಯಾದ ಹೆಗ್ಗಳಿಕೆ ಇವರದ್ದು. ಆಮ್‌ ಆದ್ಮಿ ಪಾರ್ಟಿಯ ಮೂಲಕ ಇವರು ಸಕ್ರಿಯ ರಾಜಕೀಯ ಪ್ರವೇಶಿಸುತ್ತಿರುವುದು ಸಮಾಜದ ಹಿತದೃಷ್ಟಿಯಿಂದ ಆಶಾದಾಯಕ ಬೆಳವಣಿಗೆಯಾಗಿದೆ” ಎಂದು ತಿಳಿಸಿದ್ದಾರೆ.

ಅಕ್ಟೋಬರ್ 11ರ ಸೋಮವಾರ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಾನು ಆಮ್ ಆದ್ಮಿ ಪಕ್ಷ ಸೇರಲಿದ್ದೇನೆ ಎಂದು ಜಗದೀಶ್‌ ಮಹಾದೇವ್‌ರವರು ತಮ್ಮ ಫೇಸ್‌ಬುಕ್ ಮೂಲಕ ಘೋಷಿಸಿದ್ದಾರೆ.


ಇದನ್ನೂ ಓದಿ : ಈ ವಾರದ ಟಾಪ್ 10 ಸುದ್ದಿಗಳು; ಮಿಸ್‌ ಮಾಡದೆ ಓದಿ

LEAVE A REPLY

Please enter your comment!
Please enter your name here