Homeಕರ್ನಾಟಕಮಹಾಧರಣಿ| ಕೇಂದ್ರದ ಒತ್ತಡದಿಂದ ರಾಜ್ಯದಲ್ಲಿ ಕೃಷಿ ನೀತಿಗಳು ಜಾರಿಗೆ ಬಂದಿವೆ: ಯಶವಂತ್

ಮಹಾಧರಣಿ| ಕೇಂದ್ರದ ಒತ್ತಡದಿಂದ ರಾಜ್ಯದಲ್ಲಿ ಕೃಷಿ ನೀತಿಗಳು ಜಾರಿಗೆ ಬಂದಿವೆ: ಯಶವಂತ್

- Advertisement -
- Advertisement -

ರಾಜ್ಯದಲ್ಲಿರುವ ರೈತ ವಿರೋಧಿ ಕೃಷಿ ನೀತಿಗಳು ಕೇಂದ್ರ ಸರ್ಕಾರದ ಒತ್ತಡದಿಂದ ಜಾರಿಗೆ ಬಂದಿವೆ. ಅವುಗಳನ್ನು ಸರ್ಕಾರ ರದ್ದು ಮಾಡಬೇಕು. ರೈತ ಪರವಾದ ನೀತಿಗಳನ್ನು ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಮುಖಂಡ ಯಶವಂತ್ ಆಗ್ರಹಿಸಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ‘ದುಡಿಯುವ ಜನರ ಮಹಾ ಧರಣಿ’ಯಲ್ಲಿ ಮಾತನಾಡಿದ ಅವರು, “ಕೇಂದ್ರ ಜಾರಿಗೆ ತಂದಿದ್ದ ಕೃಷಿ ನೀತಿಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಕೇರಳದ ಪಿಣರಾಯಿ ವಿಜಯನ್ ಸರ್ಕಾರ ಹೇಳಿತ್ತು. ತಮಿಳುನಾಡಿನ ಸ್ಟಾಲಿನ್ ಸರ್ಕಾರ ಕೂಡ ಆ ನೀತಿಗಳಿಗೆ ವಿರೋಧ ವ್ಯಕ್ತಪಡಿಸಿತ್ತು. ಅದರೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನವಾಗಿದ್ದಾರೆ. ಅವರು ರೈತರ ವಿರೋಧಿ ನೀತಿಗಳನ್ನು ಚಳಿಗಾಲದ ಅಧಿವೇಶನದಲ್ಲಿ ಹಿಂಪಡೆಯಬೇಕು” ಎಂದು ಒತ್ತಾಯಿಸಿದ್ದಾರೆ.

“ಕೇಂದ್ರ ಸರ್ಕಾರ ರೈತರ ಕೃಷಿ ಉತ್ಪನ್ನಗಳನ್ನು ಖರೀದಿಸಲು ನಿರಾಕರಿಸಿದೆ. ಬಂಡವಾಳಿಗರಿಗೆ ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡಬೇಕೆಂಬ ಹುನ್ನಾರವನ್ನ ಬಿಜೆಪಿ ಸರ್ಕಾರ ಹೊಂದಿದೆ. ಭಾರತದ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಸಂವಿಧಾನಕ್ಕೆ ಭಾರಿ ದೊಡ್ಡ ಗಂಡಾತರ ಬಂದಿದೆ. ಅದನ್ನು ಕಾರ್ಪೋರೇಟ್ ಪರವಾದ ಹಿಂದುತ್ವವಾದಿ ಮೋದಿ ಸರ್ಕಾರ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.

“ಇಂದಿರಾಗಾಂಧಿ ಹೇಳಿದ್ದ ತುರ್ತುಪರಿಸ್ಥಿತಿಯ ಸಮಯದಲ್ಲಿ ಅವರಿಗೆ ಸರಿಯಾದ ಪಾಠ ಕಲಿಸಿ, ದೇಶವನ್ನು ಜನರು ರಕ್ಷಿಸಿದ್ದಾರೆ. ವಾಜಪೇಯಿ ಕಾಲದಲ್ಲಿ ಕೋಮುವಾದಿ, ಉದಾರವಾದಿ ನೀತಿಗಳು ಹಾಗೂ ಖಾಸಗೀಕರಣವನ್ನು ಹೇರುವ ಮೂಲಕ ಭಾರತ ಹೊಳೆಯುತ್ತಿದೆ ಎಂದಿದ್ದರು. ಅವರಿಗೂ ಈ ದೇಶದ ಬಡ ಜನರು ಪಾಠ ಕಲಿಸಿದ್ದಾರೆ. ಇಂದು ಮೋದಿ ಸರ್ಕಾರವೂ ಅಂತದ್ದೇ ಕೆಲಸವನ್ನು ಮಾಡುತ್ತಿದೆ. ಅವರಿಗೂ ಸರಿಯಾದ ಪಾಠ ಕಲಿಸಿ, ಪ್ರಜಾಪ್ರಭುತ್ವವನ್ನು ಉಳಿಸಬೇಕಾಗಿದೆ” ಎಂದು ಯಶವಂತ್ ಹೇಳಿದ್ದಾರೆ.

ಇದನ್ನೂ ಓದಿ : ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಲ್ಲೇ ತೇಲಾಡುತ್ತಿದೆ: ರೈತ ಹೋರಾಟಗಾರ ಬಸವರಾಜಪ್ಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...