Homeಮುಖಪುಟಭಾರತ್‌ ಜೋಡೋ ನ್ಯಾಯ ಯಾತ್ರೆ: ಅಸ್ಸಾಂನಲ್ಲಿ ಜೈರಾಮ್‌ ರಮೇಶ್‌ ಕಾರಿನ ಮೇಲೆ ದಾಳಿ

ಭಾರತ್‌ ಜೋಡೋ ನ್ಯಾಯ ಯಾತ್ರೆ: ಅಸ್ಸಾಂನಲ್ಲಿ ಜೈರಾಮ್‌ ರಮೇಶ್‌ ಕಾರಿನ ಮೇಲೆ ದಾಳಿ

- Advertisement -
- Advertisement -

ಭಾರತ್‌ ಜೋಡೋ ನ್ಯಾಯ ಯಾತ್ರೆ 8ನೇ ದಿನವಾದ ಇಂದು ಅಸ್ಸಾಂನಲ್ಲಿ ಮುಂದುವರಿದಿದ್ದು, ಸುನೀತ್‌ಪುರದ ಜುಮುಗುರಿಹತ್‌ನಲ್ಲಿ ನನ್ನ ವಾಹನದ ಮೇಲೆ ಬಿಜೆಪಿ ಗುಂಪು ದಾಳಿ ಮಾಡಿದೆ ಎಂದು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಆರೋಪಿಸಿದ್ದಾರೆ.

ಅವರು ಕಾರನ್ನು ಅಡ್ಡಗಟ್ಟಿದ್ದಾರೆ, ಭಾರತ್ ಜೋಡೋ ನ್ಯಾಯ ಯಾತ್ರೆಯ ಸ್ಟಿಕ್ಕರ್‌ಗಳನ್ನು ವಿಂಡ್‌ಶೀಲ್ಡ್‌ನಿಂದ ಹರಿದು ಹಾಕಿದ್ದಾರೆ. ನೀರು ಎಸೆದು ಘೋಷಣೆಗಳನ್ನು ಕೂಗಿದ್ದಾರೆ. ಆದರೆ ನಾವು ನಮ್ಮ ಸಂಯಮವನ್ನು ಕಾಯ್ದುಕೊಂಡು, ಪುಂಡ ಪೋಕರಿಗಳಿಗೆ ಕೈ ಬೀಸಿ ಮುಂದೆ ಸಾಗಿದ್ದೇವೆ. ಇದು ನಿಸ್ಸಂದೇಹವಾಗಿ ಅಸ್ಸಾಂ ಸಿಎಂ
ಹಿಮಂತ ಬಿಸ್ವಾ ಶರ್ಮಾ ಮಾಡಿಸುತ್ತಿರುವುದು, ಇದಕ್ಕೆ ನಾವು ಬೆದರುವುದಿಲ್ಲ ಮತ್ತು ಸೈನಿಕರಾಗಿ ಮುಂದುವರಿಯುತ್ತೇವೆ ಎಂದು ಜೈರಾಮ್‌ ರಮೇಶ್‌ ಹೇಳಿದ್ದಾರೆ.

ಭಾರತ್‌ ಜೋಡೋ ನ್ಯಾಯ ಯಾತ್ರೆ ಇಂದು ನಾಗಾನ್ ಜಿಲ್ಲೆಯ ಕಡೆಗೆ ಸಾಗುತ್ತಿದೆ. ಈ ವೇಳೆ ಮಾತನಾಡಿದ ರಾಹುಲ್‌ ಗಾಂಧಿ, ನಾನು ಮತ್ತು ಅಸ್ಸಾಂನ ಜನರು ಸಿಎಂಗೆ ಹೆದರುವುದಿಲ್ಲ, ಭಾರತದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಯಾರು? ಉತ್ತರ ಹಿಮಂತ ಬಿಸ್ವಾ ಶರ್ಮಾ, ಇದು ಅಸ್ಸಾಂನ ಜನರು ಮತ್ತು ಇಡೀ ದೇಶಕ್ಕೆ ತಿಳಿದಿದೆ. ಇದು ರಾಹುಲ್ ಗಾಂಧಿಯ ಪ್ರಯಾಣವಲ್ಲ, ಅಸ್ಸಾಂನ ಜನರ ಪ್ರಯಾಣ ಎಂದು ನಮಗೆ ಬೆದರಿಕೆ ಹಾಕುತ್ತಿರುವವರು ತಿಳಿದುಕೊಳ್ಳಬೇಕು ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಅಸ್ಸಾಂನ ಯುವಕರು ಮತ್ತು ರೈತರಿಗೆ ಅನ್ಯಾಯವಾಗುತ್ತಿದೆ. ಇಲ್ಲಿನ ಯುವಕರು ಲಕ್ಷಗಟ್ಟಲೆ ಖರ್ಚು ಮಾಡಿ ಶಾಲಾ-ಕಾಲೇಜಿಗೆ ಹೋಗುತ್ತಾರೆ, ಆದರೆ ಅಸ್ಸಾಂನಲ್ಲಿ ಅವರಿಗೆ ಉದ್ಯೋಗ ಸಿಗುವುದಿಲ್ಲ. ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯಿಂದ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ಸಣ್ಣ ಪುಟ್ಟ ವ್ಯಾಪಾರಗಳು ಕೂಡ ಹಾಳಾಗಿದೆ. ಆಯ್ದ ಕೈಗಾರಿಕೋದ್ಯಮಿಗಳಿಗಾಗಿ ಇಡೀ ದೇಶದ ಸರ್ಕಾರ ನಡೆಯುತ್ತದೆ. ಇದರ ವಿರುದ್ಧ ನಾವು ಭಾರತ್ ಜೋಡೋ ನ್ಯಾಯ ಯಾತ್ರೆ ಕೈಗೊಂಡಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯಿಂದ ಅಪಹರಣಕ್ಕೊಳಗಿ 2015ರಿಂದ ನಾಪತ್ತೆಯಾಗಿರುವ ವ್ಯಕ್ತಿಯ ಕುಟುಂಬಸ್ಥರಾದ ಅಮೋನಿ ದಿರು ಪುಲ್ಲೋಮ್ ಅವರನ್ನು ಅರುಣಾಚಲ ಪ್ರದೇಶದ ರಾಜಧಾನಿ ಬಳಿಯ ಕ್ಯಾಂಪ್‌ಸೈಟ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಯಾಗಿದ್ದಾರೆ.

ವಕೀಲರಾದ ಪುಲ್ಲೋಮ್ ಅವರ ಮಾವ 2015ರಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯಿಂದ ಅಪಹರಣಕ್ಕೊಳಗಾಗಿದ್ದರು ಮತ್ತು ಅಂದಿನಿಂದ ಅವರು ಪತ್ತೆಯಾಗಿರಲಿಲ್ಲ. ಅವರು ರಾಹುಲ್‌ ಗಾಂಧಿ ಜೊತೆ ನೋವನ್ನು ಹಂಚಿಕೊಂಡಿದ್ದಾರೆ. ತನ್ನ ಮಾವನನ್ನು ಬೇಗ ಭಾರತಕ್ಕೆ ಕರೆಸಿಕೊಳ್ಳುವಂತೆ ಆಗ್ರಹಿಸಿದ್ದಾರೆ. ರಾಹುಲ್‌ ಗಾಂಧಿ ಆಕೆಯ ನೋವುಗಳನ್ನು ಆಲಿಸಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.

ಇದನ್ನು ಓದಿ: ಕೇಂದ್ರದ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ: ಕಾಸರಗೋಡಿನಿಂದ-ತಿರುವನಂತಪುರಂವರೆಗೆ DYFIನಿಂದ ಮಾನವ ಸರಪಳಿ: ಲಕ್ಷಾಂತರ ಜನರು ಭಾಗಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...