Homeಮುಖಪುಟನಮ್ಮನ್ನು ಮೊದಲು ಸಂಪರ್ಕಿಸಿದ್ದು ಅಜಿತ್‌ ಪವಾರ್‌, ಅವರೇಳಿದ ಅರ್ಧ ಸತ್ಯವನ್ನು ನಂಬಿದ್ದೆವು: ಫಡ್ನವಿಸ್‌

ನಮ್ಮನ್ನು ಮೊದಲು ಸಂಪರ್ಕಿಸಿದ್ದು ಅಜಿತ್‌ ಪವಾರ್‌, ಅವರೇಳಿದ ಅರ್ಧ ಸತ್ಯವನ್ನು ನಂಬಿದ್ದೆವು: ಫಡ್ನವಿಸ್‌

- Advertisement -
- Advertisement -

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಕುರಿತು ಅಜಿತ್‌ ಪವಾರ್‌ರವರೆ ನಮ್ಮನ್ನು ಮೊದಲು ಸಂಪರ್ಕಿಸಿದ್ದರು.  ಶರದ್ ಪವಾರ್ ಅವರು ಪ್ರಧಾನಿ ಮೋದಿ ಅವರೊಂದಿಗೆ ನಡೆಸಿದ ಸಂಭಾಷಣೆಯನ್ನು ಅರ್ಧವನ್ನಷ್ಟೆ ಅವರು ನಮಗೆ ಹೇಳಿದ್ದರು. ನಾವದನ್ನು ನಂಬಿದ್ದೆವು ಎಂದು ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ಮರಾಠಿ ಸುದ್ದಿ ಚಾನೆಲ್ ಝೀ 24 ತಾಸ್‌ಗೆ ನೀಡಿದ ಸಂದರ್ಶನದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಭಾರತೀಯ ಜನತಾ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ತಾವು ಏಕೆ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಬೇಕಾಯಿತು ಎಂಬುದನ್ನು ವಿವರಿಸಿದ್ದಾರೆ.

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖಂಡ ಅಜಿತ್ ಪವಾರ್ ಅವರೇ ಸ್ವಯಂ ಇಚ್ಛೆಯಿಂದ ತಮ್ಮ ಬಳಿಗೆ ಬಂದರು ಮತ್ತು ಅವರು ಸರ್ಕಾರವನ್ನು ರಚಿಸಲು ಕೈಜೋಡಿಸಿದರು. ಇದೆಲ್ಲವೂ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ರವರಿಗೆ ತಿಳಿದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಶರದ್ ಪವಾರ್ ನಡುವಿನ ಭೇಟಿಯ ವೇಳೆ ಈ ಎಲ್ಲಾ ವಿಚಾರಗಳನ್ನು ಮಾತನಾಡಿದ್ದಾರೆ, ಹಾಗಾಗಿ ಸರ್ಕಾರ ರಚಿಸಲು ಅಡ್ಡಿಯಿಲ್ಲ ಎಂದು ತಮಗೆ ಬೇಕಾಗ ಹಾಗೆ ಮಾಹಿತಿನ್ನು ನೀಡಿದ್ದರು ಎಂದ ಫಡ್ನವೀಸ್, ಅದರ ಬಗ್ಗೆ ಉಳಿದ ಮಾಹಿತಿಯನ್ನು ಸೂಕ್ತ ಸಮಯದಲ್ಲಿ ಬಹಿರಂಗಪಡಿಸುತ್ತೇನೆ ಎಂದಿದ್ದಾರೆ.

ಕಾಂಗ್ರೆಸ್ ಜೊತೆ ಮೈತ್ರಿ ಸಾಧ್ಯವಾಗದ ಕಾರಣ ಹೆಚ್ಚಿನ ಎನ್‌ಸಿಪಿ ಶಾಸಕರು ಬಿಜೆಪಿಯೊಂದಿಗೆ ಹೋಗಲು ಬಯಸಿದ್ದಾರೆ ಎಂದು ಅಜಿತ್ ಪವಾರ್ ಹೇಳಿದ್ದರು. ಜೊತೆಗೆ ಕೆಲವು ಶಾಸಕರಿಗೆ ಫೋನ್ ಮಾಡಿಸಿ ನನ್ನೊಡನೆ ಮಾತನಾಡಿಸಿದ್ದರು. ಫಲಿತಾಂಶ ಪ್ರಕಟವಾಗಿ ತಿಂಗಳಾದರೂ “ಅಜಿತ್ ಪವಾರ್ ನಮ್ಮನ್ನು ಸಂಪರ್ಕಿಸುವವರೆಗೂ ನಾವು ಯಾವುದೇ ಶಾಸಕರನ್ನು ಸೆಳೆಯುವ ಅಥವಾ ಯಾವುದೇ ಪಕ್ಷವನ್ನು ವಿಭಜಿಸುವ ಪ್ರಯತ್ನ ಮಾಡಿರಲಿಲ್ಲ ಎಂದು ದೇವೇಂದ್ರ ಫಡ್ನವಿಸ್‌ ಹೇಳಿದ್ದಾರೆ.

ನವೆಂಬರ್ 23 ರಂದು ಪ್ರಮಾಣವಚನ ಸ್ವೀಕಾರಕ್ಕೆ ಸುಮಾರು ಒಂದೆರಡು ದಿನ ಮುಂಚಿತವಾಗಿ, ಅಜಿತ್ ಪವಾರ್ ನಮ್ಮ ಬಳಿಗೆ ಬಂದರು. ಸರ್ಕಾರ ರಚಿಸಲು ಬಿಜೆಪಿಯೊಂದಿಗೆ ಕೈಜೋಡಿಸಲು ತಮ್ಮ ಇಡೀ ಪಕ್ಷ ಸಿದ್ಧವಾಗಿದೆ ಎಂದರು. ಈ ಕ್ರಮದ ಬಗ್ಗೆ ಶರದ್ ಪವಾರ್ ಅವರಿಗೆ ಸಂಪೂರ್ಣ ತಿಳಿದಿದೆ ಎಂದು ಅವರು ನಮಗೆ ತಿಳಿಸಿದರು. ಇದು ಜೂಜಾಟ ಎಂದು ನಮಗೆ ತಿಳಿದಿತ್ತು, ಆದರೆ ರಾಜಕೀಯದಲ್ಲಿ ಜೂಜು ಅನಿವಾರ್ಯವಾಗಿದೆ, ಆದರೂ ಈ ಸಂದರ್ಭದಲ್ಲಿ ಅದು ವಿಫಲವಾಗಿದೆ ಎಂದು ಫಡ್ನವಿಸ್‌ ತಿಳಿಸಿದ್ದಾರೆ.

ನವೆಂಬರ್ 23 ರಂದು ಫಡ್ನವೀಸ್ ಮುಖ್ಯಮಂತ್ರಿಯಾಗಿ ಮತ್ತು ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಿದರು, ನಂತರ ಸರ್ಕಾರ ರಚಿಸಲು 54 ಎನ್‌ಸಿಪಿ ಶಾಸಕರ ಬೆಂಬಲ ಪತ್ರವನ್ನು ಹಸ್ತಾಂತರಿಸಲಾಯಿತು. ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರ ಶಾಸಕರು ಯಾರೂ ಅಜಿತ್‌ ಪವಾರ್‌ ಜೊತೆ ಹೋಗಲು ಬಿಡಲಿಲ್ಲ. ಎನ್‌ಸಿಪಿ ಶಾಸಕರು ತಮ್ಮೊಂದಿಗೆ ಇಲ್ಲ ಎಂದು ತಿಳಿದ ನಂತರ ಇಬ್ಬರೂ ಮೂರು ದಿನಗಳಲ್ಲಿ ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ: ಸುಪ್ರಿಯ ಸುಳೆಯನ್ನು ಮಂತ್ರಿ ಮಾಡುವ ಆಫರ್‌ ಅನ್ನು ಮೋದಿ ನೀಡಿದ್ದರು: ಶರದ್‌ ಪವಾರ್‌

ಇತ್ತೀಚಿನ ಸಂದರ್ಶನವೊಂದರಲ್ಲಿ, ಶರದ್ ಪವಾರ್ ಅವರು ನವೆಂಬರ್ 20 ರಂದು ನಡೆದ ಸಭೆಯಲ್ಲಿ ನರೇಂದ್ರ ಮೋದಿಯವರು ಜೊತೆಗೂಡಿ ಕೆಲಸ ಮಾಡುವ ಪ್ರಸ್ತಾಪ ಮುಂದಿಟ್ಟಿದ್ದರು. ಜೊತೆಗೆ ಪವಾರ್‌ ಅವರ ಪುತ್ರಿ ಸುಪ್ರಿಯ ಸುಳೆಗೆ ಕೇಂದ್ರ ಮಂತ್ರಿ ಸ್ಥಾನ ನೀಡುವ ಆಫರ್‌ ಸಹ ನೀಡಿದ್ದರು. ಆದರೆ ನನು ಅದನ್ನು ತಿರಸ್ಕರಿಸಿದ್ದೆ ಎಂದು ಅವರು ತಿಳಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...