Homeಮುಖಪುಟಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಗೋವಾ ಕೋರ್ಟ್‌ನಿಂದ ಕೇಜ್ರಿವಾಲ್‌ಗೆ ಸಮನ್ಸ್

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಗೋವಾ ಕೋರ್ಟ್‌ನಿಂದ ಕೇಜ್ರಿವಾಲ್‌ಗೆ ಸಮನ್ಸ್

- Advertisement -
- Advertisement -

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಮಂಗಳವಾರ ಗೋವಾದ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ನವೆಂಬರ್ 29 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ನ್ಯಾಯಾಲಯದ ಮೂಲಗಳ ಪ್ರಕಾರ, ಕೇಜ್ರಿವಾಲ್ ವಿರುದ್ಧ IPC ಪ್ರಜಾಪ್ರತಿನಿಧಿ ಕಾಯ್ದೆ ಮತ್ತು ಸೆಕ್ಷನ್ 171 (E) (ಇದು ಲಂಚದ ಬಗ್ಗೆ ವ್ಯವಹರಿಸುವ ಪ್ರಕರಣ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಕೇಜ್ರಿವಾಲ್ ಅವರು ನ.29 ರಂದು ನ್ಯಾಯಾಲಯಕ್ಕೆ ಹಾಜರಾಗಬೇಕು ಎಮದು ಹೇಳಲಾಗಿದೆ ಆದರೆ ನಾವು ಅದರ ಒಂದು ದಿನ ಮೊದಲು ಅಂದರೆ ನ.28ರಂದು ನ್ಯಾಯಾಲಯದಿಂದ ಸಮನ್ಸ್ ಸ್ವೀಕರಿಸಿದ್ದೇವೆ ಎಂದು ಎಎಪಿ ಗೋವಾ ಮುಖ್ಯಸ್ಥ ಅಮಿತ್ ಪಾಲೇಕರ್ ಹೇಳಿದ್ದಾರೆ.

”2018ರಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಿರುವಂತೆ ತೋರುತ್ತಿದೆ, ಆದರೆ ಪ್ರಕರಣದ ವಿವರಗಳು ನಮಗೆ ತಿಳಿದಿಲ್ಲ” ಎಂದು ಅವರು ಹೇಳಿದರು.

ವಕೀಲರೂ ಆಗಿರುವ ಪಾಲೇಕರ್ ಅವರು ಬುಧವಾರ ಕೇಜ್ರಿವಾಲ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿಸಿದ್ದಾರೆ.

”ನಾವು ಪ್ರಕರಣದ ದಾಖಲೆಗಳನ್ನು ಪಡೆಯುತ್ತೇವೆ ಮತ್ತು ನಂತರ ಉನ್ನತ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಪ್ರಶ್ನಿಸುತ್ತೇವೆ” ಎಂದು ಅವರು ಹೇಳಿದರು.

2017 ಮತ್ತು 2022ರಲ್ಲಿ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಸ್ಪರ್ಧಿಸಿತು. ಅದು 2017 ರಲ್ಲಿ ಖಾತೆ ತೆರಯಲಿಲ್ಲ, ಆದರೆ 2022 ರಲ್ಲಿ ಎರಡು ಸ್ಥಾನಗಳನ್ನು ಗೆದ್ದಿತು.

ಇದನ್ನೂ ಓದಿ: ಪಾಕ್‌ ಕಲಾವಿದರನ್ನು ನಿಷೇಧಿಸುವಂತೆ ಅರ್ಜಿ: ಸಂಕುಚಿತ ಮನೋಭಾವ ಬೇಡ ಎಂದ ಸುಪ್ರೀಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...