Homeಮುಖಪುಟಪ್ರತಿಷ್ಟಿತ ಇಂಡೆಕ್ಸ್ ಆಫ್ ಸೆನ್ಸಾರ್ಶಿಪ್ ಪ್ರಶಸ್ತಿಗೆ ಪತ್ರಕರ್ತ ಮೊಹಮ್ಮದ್ ಝುಬೈರ್‌ ನಾಮನಿರ್ದೇಶನ

ಪ್ರತಿಷ್ಟಿತ ಇಂಡೆಕ್ಸ್ ಆಫ್ ಸೆನ್ಸಾರ್ಶಿಪ್ ಪ್ರಶಸ್ತಿಗೆ ಪತ್ರಕರ್ತ ಮೊಹಮ್ಮದ್ ಝುಬೈರ್‌ ನಾಮನಿರ್ದೇಶನ

- Advertisement -
- Advertisement -

ಫ್ಯಾಕ್ಟ್‌ ಚೆಕ್‌ ವೆಬ್‌ಸೈಟ್‌ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮತ್ತು ಪತ್ರಕರ್ತ ಮೊಹಮ್ಮದ್ ಝುಬೈರ್‌ ಲಂಡನ್‌ ಮೂಲದ  ಪ್ರತಿಷ್ಟಿತ ಇಂಡೆಕ್ಸ್ ಆಫ್ ಸೆನ್ಸಾರ್ಶಿಪ್ (Index on Censorship) ನ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಇಂಡೆಕ್ಸ್ ಆಫ್ ಸೆನ್ಸಾರ್ಶಿಪ್‌ನ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಶಸ್ತಿಯು ವಿಶ್ವದ ಯಾವುದೇ ಭಾಗದಲ್ಲಿ ಸೆನ್ಸಾರ್ಶಿಪ್ ವಿರುದ್ಧದ ಹೋರಾಟದಲ್ಲಿ ವಿಶೇಷ ಪ್ರಯತ್ನ ಮಾಡಿದವರನ್ನು ಗುರುತಿಸಿ ನೀಡಲಾಗುತ್ತದೆ.

ಕಲಾ, ಪ್ರಚಾರ, ಪತ್ರಿಕೋದ್ಯಮ ಮತ್ತು ಟ್ರಸ್ಟಿ ಎಂಬ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಗೆ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ವಿಜೇತರಿಗೆ ಲಂಡನ್‌ನ ಗಾಲಾ ಆಚರಣೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಸತ್ಯ-ಪರಿಶೀಲನಾ ವೇದಿಕೆ ಆಲ್ಟ್ ನ್ಯೂಸ್‌ನ್ನು ಸ್ಥಾಪಿಸಿದ ಮಹಮ್ಮದ್ ಝುಬೈರ್ ಅವರು ಆಡಳಿತದ ಪರವಾಗಿರುವವರು ಪ್ರಚಾರ ಮಾಡಿದ ಸುಳ್ಳು ಅಥವಾ  ತಿರುಚಿದ ಮಾಹಿತಿಯನ್ನು ಬಯಲಿಗೆಳೆದ ಬಳಿಕ ಬೆದರಿಕೆಗಳನ್ನು ಎದುರಿಸಿದ್ದಾರೆ ಎಂದು ಇಂಡೆಕ್ಸ್ ಆಫ್ ಸೆನ್ಸಾರ್ಶಿಪ್ ಹೇಳಿದೆ.

ಇದನ್ನು ಓದಿ: ರಸಾಯನಶಾಸ್ತ್ರ ವಿಭಾಗದ ಮೂವರು ವಿಜ್ಞಾನಿಗಳಿಗೆ ನೊಬೆಲ್ ಬಹುಮಾನ ಘೋಷಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...