HomeUncategorizedರಸಾಯನಶಾಸ್ತ್ರ ವಿಭಾಗದ ಮೂವರು ವಿಜ್ಞಾನಿಗಳಿಗೆ ನೊಬೆಲ್ ಬಹುಮಾನ ಘೋಷಣೆ

ರಸಾಯನಶಾಸ್ತ್ರ ವಿಭಾಗದ ಮೂವರು ವಿಜ್ಞಾನಿಗಳಿಗೆ ನೊಬೆಲ್ ಬಹುಮಾನ ಘೋಷಣೆ

- Advertisement -
- Advertisement -

2023ರ ಸಾಲಿನ ರಸಾಯನಶಾಸ್ತ್ರ ವಿಭಾಗಕ್ಕೆ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ವಿಜ್ಞಾನಿಗಳಾದ ಮೌಂಗಿ ಬವೆಂಡಿ, ಲೂಯಿಸ್ ಬ್ರೂಸ್ ಮತ್ತು ಅಲೆಕ್ಸಿ ಎಕಿಮೊವ್ ಅವರು ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ರಸಾಯನ ಶಾಸ್ತ್ರ ವಿಭಾಗದಲ್ಲಿ ಮಾಡಿದ ಶ್ರೇಷ್ಠ ಸಾಧನೆಗೆ ಈ ಬಹುಮಾನವನ್ನು ನೀಡಲಾಗುತ್ತಿದ್ದು, ಈ ಬಾರಿಯ ನೊಬೆಲ್‌ ಬಹುಮಾನವನ್ನು ಕ್ವಾಂಟಮ್ ಡಾಟ್‌ಗಳ ಅನ್ವೇಷಣೆ ಮತ್ತು ಸಂಶ್ಲೇಷಣೆಗಾಗಿ ನೀಡಲಾಗಿದೆ. ಕ್ವಾಂಟಮ್ ಡಾಟ್ಸ್ ಎಂದು ಕರೆಯಲ್ಪಡುವ ಕಣಗಳು ಈಗ ನ್ಯಾನೊತಂತ್ರಜ್ಞಾನದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ ಎಂದು ರಸಾಯನಶಾಸ್ತ್ರದ ನೊಬೆಲ್ ಸಮಿತಿಯು ಬುಧವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ನ್ಯಾನೊಪರ್ಟಿಕಲ್ಸ್ ಮತ್ತು ಕ್ವಾಂಟಮ್ ಡಾಟ್‌ಗಳನ್ನು ಎಲ್ಇಡಿ ದೀಪಗಳಲ್ಲಿ ಬಳಸಲಾಗುತ್ತದೆ ಮತ್ತು ಕ್ಯಾನ್ಸರ್ ಪೀಡಿತ ಭಾಗದ ಶಸ್ತ್ರಚಿಕಿತ್ಸೆಗೆ ವೈದ್ಯರಿಗೆ ಬಳಕೆಯಾಗಲಿದೆ.

ಬಹುಮಾನವನ್ನು ಘೋಷಿಸುವ ಮೊದಲು ಸ್ವೀಡಿಷ್ ಮಾಧ್ಯಮವು ವಿಜೇತರ ಹೆಸರನ್ನು ವರದಿ ಮಾಡಿತ್ತು. ಪ್ರಕಟಣೆಗೂ ಮುನ್ನ ಸೋರಿಕೆಯಾದ ಹೆಸರುಗಳ ಬಗ್ಗೆ ಅಕಾಡೆಮಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್‌ ಈ ಬಹುಮಾನವನ್ನು ನೀಡುತ್ತದೆ.

2023ರ ಭೌತಶಾಸ್ತ್ರದ ನೊಬೆಲ್‌ ಬಹುಮಾನವನ್ನು ನಿನ್ನೆ ಘೋಷಣೆ ಮಾಡಲಾಗಿದ್ದು, ವಿಜ್ಞಾನಿಗಳಾದ ಪಿಯರೆ ಅಗೊಸ್ಟಿನಿ, ಫೆರೆಂಕ್ ಕ್ರೌಸ್ಜ್ ಮತ್ತು ಆನ್ನೆ ಎಲ್ ಹುಲ್ಲಿಯರ್ ಅವರು ಭೌತಶಾಸ್ತ್ರದ ನೊಬೆಲ್‌ ಬಹುಮಾನಕ್ಕೆ ಪಾತ್ರರಾಗಿದ್ದರು. ಇದಲ್ಲದೆ ಕೋವಿಡ್ -19 ವಿರುದ್ಧ ಹೋರಾಡಲು ಮೊದಲು ಲಸಿಕೆ ಅಭಿವೃದ್ಧಿಪಡಿಸಿದ ವಿಜ್ಞಾನಿಗಳಾದ ಕ್ಯಾಟಲಿನ್ ಕಾರಿಕೊ ಹಾಗೂ ಡ್ರ್ಯೂ ವೈಸ್‌ಮನ್ ಅವರಿಗೆ ಕೂಡ 2023ನೇ ಸಾಲಿನ ವೈದ್ಯಕೀಯ ವಿಭಾಗದ ನೋಬೆಲ್ ಪುರಸ್ಕಾರ ದೊರೆತಿದೆ.

ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಈ ಬಹುಮಾನವನ್ನು ನೀಡಲಿದೆ. ಈ ವಾರದಲ್ಲಿ ವೈದ್ಯಕೀಯ, ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರ ವಿಭಾಗಕ್ಕೆ ಬಹುಮಾನವನ್ನು ನೀಡಲಾಗಿದೆ.

ಇದನ್ನು ಓದಿ: NDAಯಿಂದ ಮೈತ್ರಿ ಪಕ್ಷಗಳೆಲ್ಲ ಹೊರಬಂದಿದೆ, ಈಗ ಇರುವುದು ಕೇವಲ ಸಿಬಿಐ, ಇಡಿ, ಐಟಿ ಮಾತ್ರ: ಕೆಟಿ ರಾಮರಾವ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೊಪ್ಪಳ: ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಲು ಕಾಂಗ್ರೆಸ್‌ಗೆ ಸುವರ್ಣಾವಕಾಶ!?

0
ಹಿಂದುತ್ವ ರಾಜಕಾರಣದ ವಿಚಾರದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ಕಳೆದ ಒಂದೂವರೆ ದಶಕದಿಂದ ಥೇಟ್ ಚಿಕ್ಕಮಗಳೂರು-ಶಿವಮೊಗ್ಗದ ತದ್ರೂಪಿ. ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಹಿಂದುತ್ವದ ಅಜೆಂಡಾ ಇಲ್ಲಿ ನಿರ್ಣಾಯಕ. ಆದರೆ, 2014ರಲ್ಲಿ ಲೋಕಸಭಾ ಕಣಕ್ಕೆ ಸಂಗಣ್ಣ ಕರಡಿ...