Homeಮುಖಪುಟಇನ್ನು ಮುಂದೆ ರೈಲುಗಳಲ್ಲಿ ಅಲ್ಯೂಮಿನಿಯಂ ಬಾಟೆಲ್ ನೀರು ಪೂರೈಕೆ

ಇನ್ನು ಮುಂದೆ ರೈಲುಗಳಲ್ಲಿ ಅಲ್ಯೂಮಿನಿಯಂ ಬಾಟೆಲ್ ನೀರು ಪೂರೈಕೆ

- Advertisement -
- Advertisement -

ಕೆಲವು ರೈಲುಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳಿಗೆ ಬದಲಾಗಿ ಅಲ್ಯೂಮಿನಿಯಂ ಅಥವಾ ಸ್ಟೀಲ್ ಬಾಟೆಲ್‍ಗಳಲ್ಲಿ ಕುಡಿಯುವ ನೀರು ವಿತರಿಸುವ ಗ್ರಾಹಕ ವ್ಯವಹಾರಗಳ ಸಚಿವಾಲಯದ ಪ್ರಸ್ತಾವನೆಗೆ ಕೇಂದ್ರ ಸಂಪುಟ ಅನುಮತಿ ನೀಡಿದೆ.

ತೇಜಸ್ ಎಕ್ಸ್‌ಪ್ರೆಸ್ ಮತ್ತು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಇದುವರೆಗೆ ರೈಲ್ವೆ ಪ್ರಯಾಣಿಕರಿಗೆ ಪ್ಲಾಸ್ಟಿಕ್ ಬಾಟೆಲ್‍ಗಳ ನೀರು ವಿತರಣೆ ಮಾಡಲಾಗುತ್ತಿತ್ತು. ಪ್ರಧಾನಿ ನೇತೃತ್ವದ ಸಂಪುಟ ಅಲ್ಯೂಮಿನಿಯಂ ಅಥವಾ ಸ್ಟೀಲ್ ಬಾಟೆಲ್ ನೀರು ಪೂರೈಕೆಗೆ ಅನುಮತಿ ನೀಡಿರುವುದರಿಂದ ಇನ್ನು ಮುಂದೆ ಈ ಟ್ರೈನ್‍ಗಳಲ್ಲಿ ಅಲ್ಯೂಮಿನಿಯಂ ಬಾಟೆಲ್ ನೀರು ದೊರೆಯಲಿದೆ.

ಪ್ಲಾಸ್ಟಿಕ್‍ನ್ನು ಹಂತಹಂತವಾಗಿ ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮಕ್ಕೆ ಗ್ರಾಹಕರ ವ್ಯವಹಾರಗಳ ಸಚಿವಾಲಯ ಮುಂದಾಗಿದೆ. ಸ್ಟೀಲ್ ಅಥವಾ ಅಲ್ಯೂಮಿನಿಯಂ ಬಾಟೆಲ್ ನೀರು ಪೂರೈಸುವ ಸಂಬಂಧ ಭಾರತೀಯ ಸ್ಟೀಲ್ ಪ್ರಾಧಿಕಾರದ ಜೊತೆ ಮಾತುಕತೆ ನಡೆದಿದ್ದು ಕ್ಯಾನ್‍ಗಳನ್ನು ತಯಾರಿಸಲು ಮನವಿ ಮಾಡಲಾಗಿದೆ.

ಅಮೆರಿಕಾದಲ್ಲಿ 2020 ರಿಂದ ಅಲ್ಯೂಮಿನಿಯಂ ಬಾಟೆಲ್ ನೀರು ವಿತರಣೆಗೆ ಸಿದ್ದತೆ ನಡೆದಿದೆ. ಪೆಪ್ಸಿಕೋಲ ಮತ್ತು ಕೋಕಾ ಕೋಲಾ ಕಂಪನಿಗಳು ಅಲ್ಯೂಮಿನಿಯಂ ಬಾಟೆಲ್‍ಗಳಲ್ಲಿ ನೀರು ಪೂರೈಸಲು ಸಮ್ಮತಿಸಿವೆ.

ಹೀಗಾಗಿ ನಿಗದಿತ ರೈಲುಗಳಲ್ಲಿ ಇಂತಹ ಕ್ರಮಗಳ ಕೈಗೊಳ್ಳುತ್ತಿದ್ದು ಹಂತಹಂತವಾಗಿ ಪ್ಲಾಸ್ಟಿಕ್ ಬಾಟೆಲ್‍ಗಳನ್ನು ಕಡಿಮೆ ಮಾಡಲಾಗುವುದು ಎಂದು ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೋರೇಷನ್ ತಿಳಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : 2014ಕ್ಕಿಂತ ಮೊದಲು ಭಾರತದಲ್ಲಿ ಕೇವಲ 300 ಸ್ಟಾರ್ಟ್ ಅಪ್‌ಗಳಿದ್ದವು ಎಂಬುವುದು...

0
"ನವ ಭಾರತ ವೇಗವಾಗಿ ಮುನ್ನೆಡೆಯುತ್ತಿದೆ. 2014ರಲ್ಲಿ ಭಾರತದಲ್ಲಿ ಇದ್ದದ್ದು ಕೇವಲ 300 ಸ್ಟಾರ್ಟ್‌ ಅಪ್‌ಗಳು, ಈಗ 1 ಲಕ್ಷಕ್ಕೂ ಅಧಿಕ ಸ್ಟಾರ್ಟ್‌ ಅಪ್‌ಗಳು ಭಾರತದಲ್ಲಿವೆ. ಅದಕ್ಕೆ ದೇಶದಲ್ಲಿ ಮೋದಿಜಿ ಇದ್ದರೆ ಎಲ್ಲವೂ ಸಾಧ್ಯ"...