Homeಮುಖಪುಟಪ್ರಜಾಸತ್ತಾತ್ಮಕ ತತ್ವಗಳನ್ನು ಅನ್ವಯಿಸಿ: ರಾಹುಲ್ ಅನರ್ಹತೆಗೆ ಜರ್ಮನಿ ಪ್ರತಿಕ್ರಿಯೆ

ಪ್ರಜಾಸತ್ತಾತ್ಮಕ ತತ್ವಗಳನ್ನು ಅನ್ವಯಿಸಿ: ರಾಹುಲ್ ಅನರ್ಹತೆಗೆ ಜರ್ಮನಿ ಪ್ರತಿಕ್ರಿಯೆ

- Advertisement -
- Advertisement -

ರಾಹುಲ್ ಗಾಂಧಿಯವರ ಅನರ್ಹತೆ ಕುರಿತು ಜರ್ಮನ್ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದ್ದು, “ನ್ಯಾಯಾಂಗ ಸ್ವಾತಂತ್ರ್ಯದ ಮಾನದಂಡಗಳು ಮತ್ತು ಪ್ರಜಾಸತ್ತಾತ್ಮಕ ತತ್ವಗಳನ್ನು ಅನ್ವಯಿಸುವುದನ್ನು ನಿರೀಕ್ಷಿಸುತ್ತೇವೆ” ಎಂದಿದೆ.

ಯೂರೋಪ್ ಒಕ್ಕೂಟದಿಂದ ರಾಹುಲ್ ಗಾಂಧಿ ವಿಚಾರವಾಗಿ ಪ್ರತಿಕ್ರಿಯಿಸಿದ ಮೊದಲ ರಾಷ್ಟ್ರ ಜರ್ಮನಿಯಾಗಿದೆ. “ರಾಹುಲ್ ಗಾಂಧಿ ವಿರುದ್ಧದ ಮೊದಲ ತೀರ್ಪು ಮತ್ತು ಅವರ ಸಂಸದೀಯ ಸ್ಥಾನದ ಅಮಾನತನ್ನು” ಜರ್ಮನ್ ಸರ್ಕಾರ ಗಮನಿಸಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

“ನಮಗೆ ತಿಳಿದಿರುವಂತೆ, ರಾಹುಲ್ ಗಾಂಧಿ ಅವರು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ತಯಾರಿಯಲ್ಲಿದ್ದಾರೆ. ಈ ತೀರ್ಪು ಮಾನ್ಯವಾಗುತ್ತದೆಯೇ ಅವರ ಸಂಸತ್ ಸ್ಥಾನದ ಅಮಾನತಿಗೆ ಯಾವುದೇ ಆಧಾರವಿಲ್ಲ ಎಂಬುದು ನಂತರ ಸ್ಪಷ್ಟವಾಗುತ್ತದೆ” ಎಂದು ಹೇಳಲಾಗಿದೆ.

ನ್ಯಾಯಾಂಗದ ಸ್ವಾತಂತ್ರ್ಯದ ಮಾನದಂಡಗಳು ಮತ್ತು ಮೂಲಭೂತ ಪ್ರಜಾಪ್ರಭುತ್ವದ ತತ್ವಗಳು ರಾಹುಲ್ ಗಾಂಧಿ ವಿರುದ್ಧದ ಪ್ರಕ್ರಿಯೆಗಳಿಗೆ ಸಮಾನವಾಗಿ ಅನ್ವಯಿಸುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ವಕ್ತಾರರು ತಿಳಿಸಿದ್ದಾರೆ.

ಈ ಕುರಿತು ಕಾಂಗ್ರೆಸ್ ಪಕ್ಷದ ಮುಖಂಡ ದಿಗ್ವಿಜಯ್ ಸಿಂಗ್ ಜರ್ಮನ್ ವಕ್ತಾರರಿಗೆ ಧನ್ಯವಾದ ತಿಳಿಸಿದ್ದಾರೆ.

ಆದರೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಜರ್ಮನಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಭಾರತದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಲು ವಿದೇಶಿ ಶಕ್ತಿಗಳನ್ನು ಆಹ್ವಾನಿಸಿದ್ದಕ್ಕಾಗಿ ರಾಹುಲ್ ಗಾಂಧಿ ಅವರಿಗೆ ಧನ್ಯವಾದಗಳು. ವಿದೇಶಿ ಹಸ್ತಕ್ಷೇಪದಿಂದ ಭಾರತೀಯ ನ್ಯಾಯಾಂಗದ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ಮುಂಚೆ ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರನ್ನು ಲೋಕಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವುದು ”ಗಾಂಧಿ ತತ್ವಕ್ಕೆ ಎಸಗಿದ ದ್ರೋಹ” ಎಂದು ಭಾರತ ಮೂಲದ ಅಮೆರಿಕದ ಕಾಂಗ್ರೆಸ್‌ ಸದಸ್ಯ ರೋ ಖನ್ನಾ ಹೇಳಿದ್ದಾರೆ.

”ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಹೊರಹಾಕಿರುವುದು ಗಾಂಧಿ ತತ್ವಗಳಿಗೆ ಮತ್ತು ಭಾರತದ ಮೌಲ್ಯಗಳಿಗೆ ಎಸಗಿದ ದೊಡ್ಡ ದ್ರೋಹವಾಗಿದೆ. ನನ್ನ ಅಜ್ಜ (ಮಹಾತ್ಮ ಗಾಂಧಿ) ಹಲವು ವರ್ಷಗಳ ಕಾಲ ಜೈಲಿನಲ್ಲಿ ಇದ್ದದ್ದು, ತ್ಯಾಗ ಮಾಡಿದ್ದು ಇದಕ್ಕಾಗಿ ಅಲ್ಲ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇನ್ನೂ ಓದಿ: ಧರ್ಮದೊಂದಿಗೆ ರಾಜಕೀಯ ಬೆರೆಸುವುದನ್ನು ನಿಲ್ಲಿಸಿ, ದ್ವೇಷ ಭಾ‍ಷಣ ನಿಲ್ಲುತ್ತೆ: ರಾಜಕಾರಣಿಗಳಿಗೆ ಸುಪ್ರೀಂ ತಾಖೀತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...