Homeಮುಖಪುಟಧರ್ಮದೊಂದಿಗೆ ರಾಜಕೀಯ ಬೆರೆಸುವುದನ್ನು ನಿಲ್ಲಿಸಿ, ದ್ವೇಷ ಭಾ‍ಷಣ ನಿಲ್ಲುತ್ತೆ: ರಾಜಕಾರಣಿಗಳಿಗೆ ಸುಪ್ರೀಂ ತಾಖೀತು

ಧರ್ಮದೊಂದಿಗೆ ರಾಜಕೀಯ ಬೆರೆಸುವುದನ್ನು ನಿಲ್ಲಿಸಿ, ದ್ವೇಷ ಭಾ‍ಷಣ ನಿಲ್ಲುತ್ತೆ: ರಾಜಕಾರಣಿಗಳಿಗೆ ಸುಪ್ರೀಂ ತಾಖೀತು

- Advertisement -
- Advertisement -

ರಾಜಕಾರಣಿಗಳು ಧರ್ಮವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ನಿಲ್ಲಿಸಿದರೆ ದ್ವೇಷ ಭಾಷಣಗಳು ನಿಲ್ಲತ್ತವೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ ಎಂದು ಪಿಟಿಐ ವರದಿ ಮಾಡಿದೆ.

”ರಾಜಕಾರಣಿಗಳು ಧರ್ಮದೊಂದಿಗೆ ರಾಜಕೀಯವನ್ನು ಬೆರೆಸಿದಾಗ ದೊಡ್ಡ ಸಮಸ್ಯೆ ಉದ್ಭವಿಸುತ್ತದೆ. ರಾಜಕೀಯ ಮತ್ತು ಧರ್ಮವನ್ನು ಪ್ರತ್ಯೇಕಿಸಿದ ಕ್ಷಣ ದ್ವೇಷಭಾಷಣಗಳು ಕೊನೆಯಾಗುತ್ತವೆ. ನಮ್ಮ ಇತ್ತೀಚಿನ ತೀರ್ಪಿನಲ್ಲೂ ರಾಜಕೀಯವನ್ನು ಧರ್ಮದೊಂದಿಗೆ ಬೆರೆಸುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಹೇಳಿದ್ದೇವೆ” ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರ ಪೀಠವು ದ್ವೇಷ ಭಾಷಣದ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ವೇಳೆ, ”ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡಲು ದ್ವೇಷದ ಮಾತುಗಳನ್ನು ಬಿಡುವುದು ಅತ್ಯಗತ್ಯವಾಗಿದೆ” ಎಂದು ನ್ಯಾಯಾಲಯ ಮಂಗಳವಾರ ಅಭಿಪ್ರಾಯಪಟ್ಟಿದೆ.

ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ವಕೀಲ ನಿಜಾಮ್ ಪಾಷಾ ಅವರು, ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿನ ಲೇಖನವನ್ನು ಉಲ್ಲೇಖಿಸಿ, ಮಹಾರಾಷ್ಟ್ರದಲ್ಲಿ ನಾಲ್ಕು ತಿಂಗಳಲ್ಲಿ 50 ರ್ಯಾಲಿಗಳು ನಡೆದಿವೆ. ಈ ರ್ಯಾಲಿಗಳಲ್ಲಿ ‘ಲವ್ ಜಿಹಾದ್’ ಮತ್ತು ‘ಲ್ಯಾಂಡ್ ಜಿಹಾದ್’ ನಂತಹ ವಿಚಾರಗಳನ್ನು ಮಾತನಾಡಿ ಮುಸ್ಲಿಂ ಸಮುದಾಯದ ವಿರುದ್ದ ಪಿತೂರಿ ಮಾಡಲು ಚರ್ಚಿಸಲಾಗಿದೆ ಎಂದು ಹೇಳಿದರು.

ಆ ಎಲ್ಲಾ ರ್ಯಾಲಿಗಳಲ್ಲಿ, ಭಾಷಣಕಾರರು ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿದ್ದಾರೆ. ಸಮುದಾಯದ ಬಗ್ಗೆ ಪಿತೂರಿ ಸಿದ್ಧಾಂತಗಳನ್ನು ತೇಲಿ ಬಿಡಲಾಗುತ್ತಿದೆ ಎಂದು ಸ್ಕ್ರಾಲ್ ವರದಿ ಮಾಡಿದೆ.

ರ್ಯಾಲಿಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದ ಮಹಾರಾಷ್ಟ್ರದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಕೋರಿ ಪಾಷಾ ಅವರು ಬುಧವಾರದ ವಿಚಾರಣೆಯಲ್ಲಿ ಅರ್ಜಿ ಸಲ್ಲಿಸಿದರು. ನ್ಯಾಯಾಲಯವು ಅದನ್ನು ಪರಿಗಣಿಸಿದೆ.

ಈ ನ್ಯಾಯಾಂಗ ನಿಂದನೆ ಅರ್ಜಿಯು ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿ ಅಲ್ಲ. ದ್ವೇಷ ಭಾಷಣವನ್ನು ನಿಗ್ರಹಿಸುವುದು ಮುಖ್ಯವಾಗಿದೆ ಎಂದು ಹೇಳಿದ ಪಾಷಾ ಅವರು, ”ಹತ್ಯಾಕಾಂಡವು ಗ್ಯಾಸ್ ಚೇಂಬರ್‌ಗಳಿಂದ ಪ್ರಾರಂಭವಾಗಲಿಲ್ಲ ಅದು ದ್ವೇಷ ಭಾಷಣದಿಂದ ಪ್ರಾರಂಭವಾಯಿತು” ಎಂದು ವಿಶ್ವಸಂಸ್ಥೆಯ ವಿಶೇಷ ಸಲಹೆಗಾರ ಅಡಮಾ ಡಿಯೆಂಗ್ ಅವರು ಹೇಳಿಕೆಯನ್ನು ಉಲ್ಲೇಖಿಸಿದರು.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ನೀವು ನಿಮಗೆ ಬೇಕಾದ ಕೆಲವು ಘಟನೆಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಮಾತನಾಡುತ್ತಿದ್ದೀರಿ ಎಂದರು.

”ಅರ್ಜಿದಾರರಿಗೆ ದ್ವೇಷ ಭಾಷಣದ ಬಗ್ಗೆ ಕಾಳಜಿ ಇದ್ದರೆ, ಅವರು ಕೇರಳ ಮತ್ತು ತಮಿಳುನಾಡಿನಲ್ಲಿ ಹಿಂದೂಗಳ ವಿರುದ್ಧ ಮಾಡಿದ ದ್ವೇಷಪೂರಿತ ಮಾತುಗಳ ಬಗ್ಗೆ ಚರ್ಚಿಸಲಿ, ಅಂತಹ ಎಲ್ಲಾ ನಿದರ್ಶನಗಳ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಮೆಹ್ತಾ ಹೇಳಿದರೆಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.

ನಿಮ್ಮ ಈ ಅರ್ಜಿಗೆ ಸೇರಿಸಬೇಕಾದ ಕೆಲವು ಹೇಳಿಕೆಗಳನ್ನು ನಾವು ಸಹ ಸೇರಿಸಬೇಕಿದೆ. ”ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಗಂ) ಪಕ್ಷದ ನಾಯಕರು ನಿಮಗೆ ಸಮಾನತೆ ಬೇಕಾದರೆ ಎಲ್ಲಾ ಬ್ರಾಹ್ಮಣರನ್ನು ಕಡಿಯಬೇಕು ಎಂದು ಹೇಳುತ್ತಾರೆ….” ದಯವಿಟ್ಟು ಕೇರಳದ ಈ ಕ್ಲಿಪ್ ಅನ್ನು ಕೇಳಿ, ಇದು ಆಘಾತಕಾರಿಯಾಗಿದೆ. ಇದು ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತವನ್ನುಂಟು ಮಾಡುತ್ತದೆ. ”ಹಿಂದೂಗಳು ಮತ್ತು ಕ್ರೈಸ್ತರು ಅಂತಿಮ ವಿಧಿವಿಧಾನಗಳಿಗೆ ಸಿದ್ಧರಾಗಬೇಕು” ಇದನ್ನು ಮಾಡಲು ಮಗುವನ್ನು ಹುಟ್ಟಿಸಬೇಕು ಎಂದು ಹೇಳುತ್ತಾರೆ. ಇದು ನಾಚಿಕೆಪಡುವ ವಿಚಾರ” ಎಂದು ಮೆಹ್ತಾ ಹೇಳಿದರು.

ನಂತರ ಪಾಷಾ ಮಧ್ಯಪ್ರವೇಶಿಸಿ. ಒಂದೇ ಕಡೆ ವಾಲುವುದು ಸೂಕ್ತವಲ್ಲ ಎಂದು, ಸಾಲಿಸಿಟರ್ ಜನರಲ್‌ಗೆ ಹೇಳಿದರು.

ನ್ಯಾಯಾಲಯವು ದ್ವೇಷ ಭಾಷಣ ನಿದರ್ಶನಗಳ ವಿರುದ್ಧ ತ್ವರಿತ ಕ್ರಮವನ್ನು ತೆಗೆದುಕೊಳ್ಳುವಲ್ಲಿ ಅಧಿಕಾರಿಗಳ ವೈಫಲ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.

”ರಾಜ್ಯ ದುರ್ಬಲವಾಗಿದೆ, ಶಕ್ತಿಹೀನವಾಗಿದೆ. ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಈ ರೀತಿ ದ್ವೇಷ ಭಾಷಣದ ವಿರುದ್ಧ ಮೌನವಾಗಿದ್ದರೆ ನಮಗೆ ರಾಜ್ಯ ಏಕೆ?” ಎಂದು ನ್ಯಾಯಮೂರ್ತಿ ಜೋಸೆಫ್ ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...