Homeಮುಖಪುಟಸಿಕ್ಕಿಂನಲ್ಲಿ ಕಮರಿಗೆ ಬಿದ್ದ ಸೇನಾ ಟ್ರಕ್: ಸೈನಿಕ ಅಧಿಕಾರಿಗಳು ಸೇರಿ 16 ಯೋಧರ ದುರ್ಮರಣ

ಸಿಕ್ಕಿಂನಲ್ಲಿ ಕಮರಿಗೆ ಬಿದ್ದ ಸೇನಾ ಟ್ರಕ್: ಸೈನಿಕ ಅಧಿಕಾರಿಗಳು ಸೇರಿ 16 ಯೋಧರ ದುರ್ಮರಣ

- Advertisement -
- Advertisement -

ಸಿಕ್ಕಿಂನಲ್ಲಿ ಪ್ರಯಾಣಿಸುತ್ತಿದ್ದ ಸೇನಾ ಟ್ರಕ್ ಕಮರಿಗೆ ಬಿದ್ದು ಮೂವರು ಅಧಿಕಾರಿಗಳು ಸೇರಿದಂತೆ 16 ಸೈನಿಕರು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಇಂದು ಬೆಳಿಗ್ಗೆ ಸಿಕ್ಕಿಂನ ಚಟೆನ್‌ನಿಂದ ಥಂಗು ಕಡೆಗೆ ಚಲಿಸುತ್ತಿದ್ದ ಮೂರು ವಾಹನಗಳಲ್ಲಿ ಬೆಂಗಾವಲು ಟ್ರಕ್ ಆಯಾ ತಪ್ಪಿ ಕಮರಿಗೆ ಬಿದ್ದಿದೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.

“ಉತ್ತರ ಸಿಕ್ಕಿಂನ ಝೆಮಾದಲ್ಲಿ ಸಾಗುತ್ತಿದ್ದಾಗ, ವಾಹನವು ತೀಕ್ಷ್ಣವಾದ ತಿರುವಿನಲ್ಲಿ ಕಡಿದಾದ ಇಳಿಜಾರಿಗೆ ಬಿದ್ದಿದೆ. ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದ್ದು ಗಾಯಗೊಂಡ ನಾಲ್ವರು ಸೈನಿಕರನ್ನು ಹೆಲಿಕ್ಯಾಪ್ಟರ್ ಮೂಲಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೃತಪಟ್ಟ ಸೈನಿಕರ ಕುಟುಂಬದೊಂದಿಗೆ ಭಾರತೀಯ ಸೇನೆ ಇರುತ್ತದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮೃತ ಸೈನಿಕರ ಸಂತಾಪ ಸೂಚಿಸಿ ರಾಷ್ಟ್ರಪತಿ ಮತ್ತು ಪ್ರಧಾನಿ ಕಾರ್ಯಾಲಯ ಟ್ವೀಟ್ ಮಾಡಿದೆ. “ಸಿಕ್ಕಿಂನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭಾರತೀಯ ಸೇನೆಯ ವೀರ ಸೈನಿಕರು ಪ್ರಾಣ ಕಳೆದುಕೊಂಡ ಬಗ್ಗೆ ತಿಳಿದು ದುಃಖವಾಯಿತು. ಮೃತರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮುರವರು ಟ್ವೀಟ್ ಮಾಡಿದ್ದಾರೆ.

“ಸಿಕ್ಕಿಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ ನಮ್ಮ ವೀರ ಸೇನಾ ಸಿಬ್ಬಂದಿಯ ಪ್ರಾಣಹಾನಿಯಿಂದ ನೋವಾಗಿದೆ. ಮೃತ ಕುಟುಂಬಗಳಿಗೆ ಸಂತಾಪ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ” ಎಂದು ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ.

ಇದನ್ನ ಓದಿ: ಗುಜರಾತ್: ದಲಿತ ಯುವಕನಿಗೆ ನಡುರಸ್ತೆಯಲ್ಲಿ ಮಾರಣಾಂತಿಕ ಥಳಿತ- ಐವರು ಸವರ್ಣೀಯರ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪ| ತಾನು ನಿರ್ದೋಷಿ ಎಂದ ಬ್ರಿಜ್ ಭೂಷಣ್ ಸಿಂಗ್: ವಿಚಾರಣಾ ಹಂತ...

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ತಾನು ನಿರ್ದೋಷಿ ಎಂದು ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಂಗಳವಾರ...