Homeಮುಖಪುಟಮಗಳು ನೆಗೆಯುತ್ತಾಳೆಂದು ಜೋರು ಜಗಳ: ಮಕ್ಕಳೇಕೆ ನೆಗೆಯುತ್ತವೆ?

ಮಗಳು ನೆಗೆಯುತ್ತಾಳೆಂದು ಜೋರು ಜಗಳ: ಮಕ್ಕಳೇಕೆ ನೆಗೆಯುತ್ತವೆ?

ಮಕ್ಕಳು ಯಾವ ಯಾವ ವಯಸ್ಸಿನಲ್ಲಿ ಹೇಗೆ ನೆಗೆಯುತ್ತವೆ ಎಂಬುದು ಕೂಡ ತುಂಬಾ ಕುತೂಹಲಕರ ವಿಷಯ. ದೇಹ ಮತ್ತು ಮಿದುಳಿನ ಸಮಗ್ರ ಬೆಳವಣಿಗೆಗೆ ಈ ನೆಗೆತವೇ ಸಹಕಾರಿ.

- Advertisement -
- Advertisement -

ನೆನ್ನೆ ರಾತ್ರಿ ಜೋರು ಜಗಳ!! ನಮಗೂ ಮತ್ತು ಕೆಳಗಿನ ಮನೆಯವರಿಗೂ, ಕಾರಣ ಇಷ್ಟೆ, “ಮಗಳು ನೆಗೆಯುವ ಸದ್ದು ಎದೆ ಮೇಲೆ ಕಲ್ಲು ಬಿದ್ದಂಗೆ ಆಗುತ್ತೆ, ಏನಾದರೂ ಮಾಡಿ, ನನಗೆ ಸದ್ದು ಬರಬಾರದು” ಎಂಬುದು ಅವರ ವಾದ. ಅಷ್ಟೇ ಅಲ್ಲ ದಿನದ ಯಾವ ಸಮಯದಲ್ಲೂ ನೆಗೆಯಲೇಬಾರದು. “ನಾನು ನನ್ನ ಮಗಳನ್ನು ಸಾಕಿದ್ದೇನೆ ನೋಡಿ ಬನ್ನಿ, ಅವಳು ನೆಗೆಯುವುದಿಲ್ಲ, ಕೆಳಗಿನ ಮನೆಯವರಿಗೆ ಏನೂ ತೊಂದರೆ ಕೊಡುವುದಿಲ್ಲ.” ಎಂದು ಉದಾಹರಣೆ ಕೊಟ್ಟು ನನ್ನ ಪೋಷಕತನವನ್ನೇ ಪ್ರಶ್ನೆ ಮಾಡಿದ. ಅವರ ಉದ್ದೇಶವೇ ಜಗಳ ಮಾಡುವುದಾಗಿತ್ತು. ಅವನನ್ನೂ ಸಹಾನುಭೂತಿಯಿಂದ ನೋಡಿ ಮಾತನಾಡುವ ನನ್ನ ಪ್ರಯತ್ನ ಸಫಲವಾಗಲಿಲ್ಲ. ಅಮಾಸೆ ಬೇರೆ ಇತ್ತು, ಜಗಳವಾಯ್ತು ಬಿಡಿ!. ಮಕ್ಕಳನ್ನು ನೆಗೆಯದಂತೆ ಸಾಕಬೇಕು ಎಂಬುದು ಅವರ ವಾದ. ನಾನು ಮಕ್ಕಳ ಸಾಕಾಣಿಕೆಯಲ್ಲಿ ಆಸಕ್ತನಲ್ಲ; ಮಕ್ಕಳ ಬೆಳೆಸುವುದು ನನ್ನ ಪ್ರಯತ್ನ. ಆ ಪ್ರಯತ್ನದಲ್ಲಿ ನಾನೇನು ಸಂಪೂರ್ಣ ಯಶಸ್ವಿಯಲ್ಲ, ನಿತ್ಯವೂ ಕಲಿಯುತ್ತ ನಾನು ಬದಲಾಗುತ್ತಾ ಸಾಗುತ್ತಿದ್ದೇನೆ. ಮಗಳ ಎದುರು ಜಗಳ ಮಾಡಿದ್ದಕ್ಕೆ ನಾಚಿಕೆಯೂ ಆಯ್ತು.

ಮಕ್ಕಳೇಕೆ ನೆಗೆಯುತ್ತವೆ?

ಮಕ್ಕಳು ನೆಗೆಯುವುದು ತೀರಾ ಸಹಜ ಮತ್ತು ಪ್ರಾಕೃತಿಕವಾದುದು. ಮಗುವೊಂದು ನೆಗೆಯುವುದು ಅದರ ಆರೋಗ್ಯಕರ ಬೆಳವಣಿಗೆಯ ಮೈಲಿಗಲ್ಲು. ಮಗುವು ನೆಗೆಯುತ್ತಿಲ್ಲ ಎಂದರೆ ಬೆಳವಣಿಗೆಯಲ್ಲಿ ಏನೋ ದೋಷವಿದೆ ಎಂದು ಮಕ್ಕಳ ವಿಜ್ಞಾನ ಹೇಳುತ್ತದೆ. ಮಗುವು ಅಂಬೆಗಾಲು ಇಟ್ಟು ಬೆಳೆಯುವುದನ್ನು ಕಲಿತ ನಂತರ ನೆಗೆಯುವುದನ್ನು ಕಲಿಯುತ್ತದೆ.

ನೆಗೆಯುವುದರಿಂದ ಆಗುವ ಪ್ರಯೋಜನವೆಂದರೆ, ಮಗುವು ತನ್ನ ದೇಹದ ಬ್ಯಾಲೆನ್ಸ್ ಕಲಿಯುತ್ತದೆ. ನೆಗೆಯಲು ಕಾಲಿನ ಎಲ್ಲಾ ಮಾಂಸಖಂಡಗಳ ಅಗತ್ಯಗಳು ಒಟ್ಟಿಗೆ ಸೇರಿ ಕೆಲಸ ಮಾಡುತ್ತವೆ. ಮಂಡಿಯನ್ನು ಬಾಗಿಸಿ, ಪಾದವನ್ನು ಒತ್ತಿ ನೆಗೆಯುವಾಗ ತೊಡೆಯ ಮತ್ತು ಮಂಡಿಯಿಂದ ಕೆಳಗಿನ ಮಾಂಸಖಂಡಗಳು ಸದೃಢವಾಗುತ್ತವೆ. ಪಾದವನ್ನು ಒತ್ತುವಾಗ ಮೂಳೆಗಳು ನೆಲದ ಕಡೆ ಹೆಚ್ಚು ಶಕ್ತಿ ಪ್ರಯೋಗಿಸುತ್ತವೆ, ಇದರಿಂದ ಮಗುವಿನ ದೈಹಿಕ (ಎತ್ತರ) ಬೆಳವಣಿಗೆ ಚೆನ್ನಾಗಿ ಆಗುತ್ತದೆ ದೇಹವೂ ಸದೃಢವಾಗುತ್ತದೆ ಹಾಗೂ ಮೂಳೆಗಳೂ ಗಟ್ಟಿಯಾಗುತ್ತವೆ.

ಇದು Motor Planning ಕೌಶಲ್ಯ ಅಭಿವೃದ್ಧಿಗೆ ಸಹಕಾರಿ.

Motor Planning ಎಂಬುದು ಒಂದು ಕೌಶಲ್ಯ. ಮಗುವು ಒಂದು ಚಲನೆಯಲ್ಲಿನ ಹಂತಗಳನ್ನು ನೆನಪಿನಲ್ಲಿಟ್ಟುಕೊಂಡು ಮಾಡಲು ಸಹಕಾರಿಯಾಗುತ್ತದೆ. ಉದಾಹರಣೆಗೆ, ನೆಗೆಯುವ ದೂರವನ್ನು ನಿರ್ಧರಿಸುವುದು (planning and sequencing), ಆ ದೂರಕ್ಕೆ ನೆಗೆಯಲು ಎಷ್ಟು ಶಕ್ತಿಯನ್ನು ವಿನಿಯೋಗಿಸಬೇಕು, ಎಲ್ಲಿಗೆ ನೆಗೆಯಬೇಕೆಂದು ಯೋಜಿಸುವುದು. ನೆಗೆಯುವುದು ಹೇಗೆ ಮತ್ತು ನೆಗೆದ ನಂತರ ಸುರಕ್ಷಿತವಾಗಿ ನಿಲ್ಲುವುದು ಹೇಗೆ (ಇದಕ್ಕೆ motor planning skill ಎನ್ನುತ್ತಾರೆ). ಇನ್ನೂ ಸರಳವಾಗಿ ಹೇಳಬೇಕೆಂದರೆ, ಇದೊಂದು ಅನೇಕ ಆಲೋಚನೆಗಳ ಅಗತ್ಯ ಇರುವ ಒಂದು ಸಂಕೀರ್ಣ ಕೆಲಸವನ್ನು ನಿರ್ವಹಿಸಲು ದೇಹಕ್ಕೆ ಬೇಕಾದ ಹಂತಗಳನ್ನು ‘ದೇಹವು’ ನೆನಪಿನಲ್ಲಿಟ್ಟುಕೊಳ್ಳುವುದು.  ಈ ಕೌಶಲ್ಯ ಕಲಿಯಲು ನೆಗೆತವೇ ತುಂಬಾ ಸಹಕಾರಿಯಾಗಿರುವುದು. ಈ ಕೌಶಲ್ಯದ ಕೊರತೆ ಇರುವ ಮಗುವು ಎದುರಿಸುವ ಸಮಸ್ಯೆ ಎಂದರೆ, ಮಿದುಳಿನಲ್ಲಿ ಸಂವೇದನಗಳನ್ನು ಸ್ವೀಕರಿಸುವ ಮತ್ತು ಪ್ರತಿಸ್ಪಂದಿಸುವ ನರವ್ಯೂಹದ ಕಳಪೆ ರಚನೆ. ಇದನ್ನು ತುಂಬಾ ಸುಲಭವಾಗಿ ನಿಮಗೆ ತಿಳಿಸಬೇಕೆಂದರೆ, ಮಗುವಿನ ದೈಹಿಕ ಆಟೋಟಗಳ ಆಧಾರದಲ್ಲಿಯೇ ಮಿದುಳಿನಲ್ಲಿ ನರವ್ಯೂಹ ರೂಪುಗೊಳ್ಳುತ್ತಿರುತ್ತದೆ. ದೇಹದಿಂದ ಸೂಚನೆಗಳು ಬರದೆ ಆ ನರವ್ಯೂಹಗಳು ಸರಿಗೊಳ್ಳುವುದಿಲ್ಲ. ಅದಕ್ಕಾಗಿಯೇ ಆಯಾ ಕಾಲಘಟ್ಟಕ್ಕೆ ಮಗುವು ಎನೇನು ಮಾಡಬೇಕು ಅದನ್ನು ಮಾಡಬೇಕು. ಈ ದೇಹದ ರಚನೆಯ ಈ ವಿಜ್ಞಾನವು ರೋಮಂಚನಕಾರಿಯಾಗಿದೆ. ಮಗುವು ನೆಗೆಯುವುದನ್ನು ನಿಲ್ಲಿಸಿಬಿಟ್ಟರೆ, ಇಂತಹ ಕೌಶಲ್ಯದ ಕಲಿಕೆ ನಿಂತು ಹೋಗುತ್ತದೆ.  ಇಂತಹ ಕೌಶಲ್ಯದ ಕೊರತೆಯಲ್ಲಿ ಬೆಳೆಯುವ ಮಗುವು ಮುಂದೆ ಸಣ್ಣ ಸಣ್ಣ ಹಂತಗಳನ್ನು ಒಳಗೊಂಡ ಒಂದು ಸಂಕೀರ್ಣ ಕೆಲಸಗಳನ್ನು ನಿರ್ವಹಿಸಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಅಷ್ಟೆ ಅಲ್ಲ, ಆ ಮಗು ದೈಹಿಕ ಶ್ರಮ  ಬಯಸುವ ಆಟೋಟಗಳಿಂದ ದೂರ ಉಳಿಯುತ್ತದೆ. ಉದಾಹರಣೆಗೆ ಸೈಕಲ್ ಓಡಿಸುವುದು. ಸೈಕಲ್ ಓಡಿಸಲು ಭಯಪಟ್ಟು ಕಲಿಯಲು ಆಸಕ್ತಿ ತೋರದೆ ಹೋಗಬಹುದು.

ನೆಗೆಯುವುದರಿಂದ ಆಗುವ ಇನ್ನಿತರ ಅನುಕೂಲಗಳೆಂದರೆ, ದೈಹಿಕವಾಗಿ ಮಗುವು ಗಟ್ಟಿಯಾಗಿ, ಆರೋಗ್ಯಕರವಾಗಿರುತ್ತದೆ. ಹಸಿವು, ದಣಿವು ಆಗುವುದರಿಂದ ಸರಿಯಾಗಿ ಊಟ ನಿದ್ರೆ ಆಗುತ್ತದೆ. ಇದರಿಂದ ಮಗು ಆರೋಗ್ಯವಾಗಿರುತ್ತದೆ. ನೆಗೆತದ ಅಗತ್ಯ ಇರುವ ಎಲ್ಲಾ ಆಟೋಟಗಳಲ್ಲಿ ಯಶಸ್ವಿಯಾಗಿ ಆಡಲು ಈ ಬಾಲ್ಯದ ನೆಗೆತವೇ ಸಹಕಾರಿ.

ಮಕ್ಕಳು ಯಾವ ಯಾವ ವಯಸ್ಸಿನಲ್ಲಿ ಹೇಗೆ ನೆಗೆಯುತ್ತವೆ ಎಂಬುದು ಕೂಡ ತುಂಬಾ ಕುತೂಹಲಕರ ವಿಷಯ. ಮಗುವಿನ ದೇಹ ಮತ್ತು ಮಿದುಳಿನ ಸಮಗ್ರ ಬೆಳವಣಿಗೆಗೆ ಈ ನೆಗೆತವೇ ಸಹಕಾರಿ. ಈ ಕೆಳಗಿನ ನೆಗೆತದ ಮೈಲಿಗಲ್ಲು ನೋಡಿ.

ನಿಮ್ಮ ಮಗು ನೆಗೆಯುತ್ತಿಲ್ಲವೆಂದರೆ, ನೆಗೆಯಲು ಭಯಪಡುತ್ತಿದೆಯೆಂದರೆ, ಒಂದೇ ಕಡೆ ನೆಗೆಯುತ್ತಿದೆ ಎಂದರೆ (ಅಂದರೆ, ಮುಂದಕ್ಕೆ ಅಥವಾ ಮೇಲಕ್ಕೆ ಅಥವಾ ಕೆಳಕ್ಕೆ), ನೆಗೆಯುವಾಗ ಬೀಳುತ್ತಿದೆಯೆಂದರೆ, ನೆಗೆಯಲು ಕಷ್ಟಪಡುತ್ತಿದೆಎಂದರೆ ನಿಮ್ಮ ಮಗುವಿನ ಬೆಳವಣಿಗೆಯಲ್ಲೆಲ್ಲೊ ಕುಂಠಿತವಾಗಿದೆ ಎಂದೇ ಅರ್ಥ.

ನಿಮ್ಮ ಮಗು ನೆಗೆಯಲು ಸಹಕರಿಸಲು ಅನೇಕ ಕೆಲಸ ಮಾಡಬಹುದು. ಮೃದುವಾದ ಮೆತ್ತ ಮೆತ್ತಗಿನ ನೆಲಹಾಸನ್ನು ಹಾಸಿ ನೆಗೆಯಲು ಅನುಕೂಲ ಮಾಡಿಕೊಡಿ. ಮೊದಮೊದಲು ಎರಡು ಕೈ ಹಿಡಿದು ನೆಗೆಯಲು ಸಹಾಯ ಮಾಡಿ. ನೆಗೆತವನ್ನು ಮಾಡುವಂತಹ ಆಟಗಳ ಆಡಿಸಿ, ಉದಾಹರಣೆಗೆ ಕಪ್ಪೆ ನೆಗೆತ. ನೆಲದಲ್ಲಿ ಗೆರೆಗಳ ಹಾಕಿ ನೆಗೆಯಲು ಪ್ರೋತ್ಸಾಹಿಸಿ. ರಿಂಗ್ ಗಳ ಇಟ್ಟು ಅದರಲ್ಲಿ ನೆಗೆಯಲು ಟಾಸ್ಕ್ ಕೊಡಿ. ಇಷ್ಟೆಲ್ಲಾ ಮಾಡಿಯೂ ನಿಮ್ಮ ಮಗು ನೆಗೆಯುತ್ತಿಲ್ಲವೆಂದರೆ ಮಕ್ಕಳ ತಜ್ಞರನ್ನು ಅಥವಾ ಫಿಸಿಯೋ ಥೆರಪಿಸ್ಟ್ ಗಳನ್ನು ಸಂಪರ್ಕಿಸಿರಿ.

ನೆಗೆಯುವ ಚಿಕಿತ್ಸೆ ಎಂಬ (Jumping Therapy) ಇದೆ. ಮಕ್ಕಳಿಗೆ ಯಾವ ರೀತಿ ನೆಗೆಯುವುದನ್ನು ಅಭ್ಯಾಸ ಮಾಡಿಸಬೇಕೆಂದು ಗೂಗಲ್ ನಲ್ಲಿ ಮಾಹಿತಿ ಸಿಗುತ್ತದೆ. ನಿಮ್ಮ ಮಗು ನೆಗೆಯದೆ ಇದ್ದರೆ ನೆಗೆಸಲು ಪ್ರಯತ್ನಿಸಿರಿ.

ಕೋವಿಡ್ ನಂತರ ಮಕ್ಕಳು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ನಗರದಲ್ಲಿರುವ ಮಕ್ಕಳ ಸ್ಥಿತಿ ಬೇರೇಯೆ ಆಗಿ ಭಯ ಹುಟ್ಟಿಸುತ್ತಿದೆ. ತಿಂದು ಕೂರುವುದು, ಮೊಬೈಲ್, ಟಿವಿ ನೋಡುವುದು ಅಷ್ಟೇ ಅವರಿಗೆ ಸಿಗುತ್ತಿರುವುದು. ಆಟ ಆಡಲೂ ಬಿಡುವುದಿಲ್ಲ, ಶಾಲೆಯೂ ಇಲ್ಲ, ಮನೆಯಲ್ಲೂ ಆಡುವಂತಿಲ್ಲ, ಪೋಷಕರೂ ಮಕ್ಕಳೊಂದಿಗೆ ಆಡುವುದಿಲ್ಲ. ನೀವೊಮ್ಮೆ ಅವರ ಜಾಗದಲ್ಲಿ ನಿಂತು ಯೋಚಿಸಿರಿ. ಆ ಮಗುವಿನ ಕಷ್ಟ ಅರ್ಥವಾಗುತ್ತದೆ. ಪೋಷಕರಾದವರಿಗೆ ನೆನಪಿರಬೇಕು, ಮಗುವಿಗೆ ಈಗ ಆಗುತ್ತಿರುವ ನಕಾರಾತ್ಮಾಕ ಅನುಭವವು ಮುಂದೆ ದೀರ್ಘಕಾಲಿಕ ಪರಿಣಾಮ ಉಂಟುಮಾಡುತ್ತದೆ.

ಈಗ ನನ್ನ ವಿಚಾರಕ್ಕೆ ವಾಪಸ್ಸು ಬಂದರೆ, ಮೇಲಿನ ಮನೆಯವರು ಕೆಳಗಿನ ಮನೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಅಗತ್ಯ. ಅದಕ್ಕಾಗಿ ನಾನೀಗ ಸಂಜೆಯ ವೇಳೆಯಲ್ಲಿ ಅವಳಿಗೆ ಪೇಂಟಿಂಗ್, ಅಕ್ಷರಾಭ್ಯಾಸ ಇಂತಹ ಕೆಲಸಗಳನ್ನು ಕೊಡಲು ಯೋಜಿಸಿದ್ದೇನೆ. ಸಂಜೆ ವೇಳೆ ಆಟದ ಮೈದಾನದಲ್ಲಿ ಆಗಾಗ ಜಂಪಿಂಗ್ ಮಾಡಿಸುತ್ತಿದ್ದೆನು. ಈಗ ಪ್ರತಿದಿನವೂ ಜಂಪಿಂಗ್ ಆಟಗಳ ಆಡಿಸಲು ಯೋಜಿಸಿದ್ದೇನೆ, ಇದರಿಂದ ಮನೆಯೊಳಗೆ ಜಂಪ್ ಮಾಡುವುದು ಕಡಿಮೆಯಾಗುವುದೆಂದು ಅಂದಾಜಿಸಿದ್ದೇನೆ. ಕೆಳಗಿನ ಮನೆಯವರೂ ಅಷ್ಟೇ, ಮಕ್ಕಳು ಒಮ್ಮೆಮ್ಮೆ ಜಂಪ್ ಮಾಡಿದರೆ, ಅದು ಸಹಜ ಎಂದು ಹೊಂದಾಣಿಕೆ ಮಾಡಿಕೊಳ್ಳಬೇಕು. ಅದಕ್ಕಾಗಿ ಜಗಳ ತೆಗೆಯಬಾರದು. ನೆನಪಿರಲಿ, ವಿಶ್ವ ಆರೋಗ್ಯ ಸಂಸ್ಥೆಯು ಮಕ್ಕಳಿಗಾಗಿ ಶಿಫಾರಸ್ಸು ಮಾಡಿರುವ ದೈಹಿಕ ಚಟುವಟಿಕೆಗಳಲ್ಲಿ ನೆಗೆಯುವುದಕ್ಕೆ ಮಹತ್ವದ ಸ್ಥಾನ ನೀಡಿದೆ.

  • ಅಣೇಕಟ್ಟೆ ವಿಶ್ವನಾಥ್

(ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಅಣೇಕಟ್ಟೆಯವರಾದ ವಿಶ್ವನಾಥ್‌ರವರು ಕೃಷಿಕರು ಮತ್ತು ತೆಂಗು ಬೆಳೆಗಾರರ ಸಂಘದ ಕಾರ್ಯದರ್ಶಿಗಳು. ತೆಂಗಿನ ಮೌಲ್ಯವರ್ಧನೆ ಇವರ ಆಸಕ್ತಿಯ ಕ್ಷೇತ್ರ.)


ಇದನ್ನೂ ಓದಿ: ಬಾರ್ಡರ್ ಕೇಸ್ ಬಸವಣ್ಣ: ಅಣೇಕಟ್ಟೆ ವಿಶ್ವನಾಥ್‌ರವರ ಕಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...