Homeಅಂಕಣಗಳುಮಾತು ಮರೆತ ಭಾರತ-34; ಲಾಕ್‌ಡೌನ್ ಫೈಲ್: ಹಾಸನದಲ್ಲಿ ಮರ್‍ಯಾದೆಗೇಡು ಹತ್ಯೆ

ಮಾತು ಮರೆತ ಭಾರತ-34; ಲಾಕ್‌ಡೌನ್ ಫೈಲ್: ಹಾಸನದಲ್ಲಿ ಮರ್‍ಯಾದೆಗೇಡು ಹತ್ಯೆ

- Advertisement -
- Advertisement -

(ಭಾರತದ Dalit Human Rights Defenders Network ಎಂಬ ಸಂಸ್ಥೆಯು ‘No lockdown on Caste Atrocities’ ಎಂಬ ಪುಸ್ತಕದಲ್ಲಿ ನೈಜ ಘಟನೆಗಳನ್ನು ವರದಿ ಮಾಡಿದೆ. ಭಾರತದ ಏಳು ರಾಜ್ಯಗಳಲ್ಲಿ ’ಕೋವಿಡ್ ಲಾಕ್‌ಡೌನ್’ ಸಮಯದಲ್ಲಿ ನಡೆದ ದಲಿತರ ಮೇಲಿನ 60 ದೌರ್ಜನ್ಯಗಳನ್ನು ಓದುಗರಿಗೆ ಕಟ್ಟಿಕೊಟ್ಟಿದೆ. ಒಂದೊಂದೂ ಭೀಕರ ಮತ್ತು ಹಿಂದೂ ಮೇಲ್ಜಾತಿ ಜನರು ದಲಿತರ ಮೇಲೆ ನಡೆಸಿರುವ ಕ್ರೂರ ಕೃತ್ಯಗಳನ್ನು ಬಯಲುಗೊಳಿಸುತ್ತವೆ. ಇದನ್ನು ವರದಿ ಮಾಡುವ ಉದ್ದೇಶ ಖಂಡಿತವಾಗಿಯೂ ಹಿಂದೂ ಮೇಲ್ಜಾತಿ ಜನರ ಮನ ಪರಿವರ್ತಿಸುವುದಲ್ಲ; ಬದಲಾಗಿ ’ಹಿಂದೂ ನಾವೆಲ್ಲ ಒಂದೂ’ ಎನ್ನುತ್ತಿರುವ ದಲಿತರ ಅಂಧಕಾರವನ್ನು ಕಳಚುವುದಾಗಿದೆ.)

ಅದು ಸೊಪ್ಪಿನಹಳ್ಳಿ ಎಂಬ ಗ್ರಾಮ. ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿದೆ. ಹಳೆ ಮೈಸೂರು ಜಿಲ್ಲೆಯಲ್ಲಿರುವ ಒಕ್ಕಲಿಗರ ಪ್ರಾಬಲ್ಯ ಇಲ್ಲಿಯೂ ಇದೆ. ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಮುಂದುವರೆದಿರುವ ಒಕ್ಕಲಿಗ ಸಮಾಜ, ಸಾಮಾಜಿಕವಾಗಿಯೂ ಇಂದು ಮೇಲ್ಮುಖ ಚಲನೆಯನ್ನು ಹೊಂದಿದೆ. ಇದಕ್ಕೆ ತದ್ವಿರುದ್ಧವಾಗಿ ದಲಿತ ಸಮಾಜ ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಒಂದಷ್ಟು ಸ್ಥಾನಮಾನ ಗಿಟ್ಟಿಸಿಕೊಂಡಿದ್ದರೂ ಸಾಮಾಜಿಕವಾಗಿ ಬಹಳ ಹಿಂದೆಯೇ ಉಳಿಯುವಂದತೆ ನೋಡಿಕೊಳ್ಳಲಾಗಿದೆ. ಈ ಚಿತ್ರಣವನ್ನೇ ಹೊದ್ದುಕೊಂಡಿರುವ ಸೊಪ್ಪಿನಹಳ್ಳಿಯಲ್ಲಿ ಶಿವಮ್ಮ ವಾಸಿಸುತ್ತಿದ್ದಳು. ಒಬ್ಬಂಟಿಯಾಗಿ ತನ್ನ ಎರಡು ಗಂಡು ಮಕ್ಕಳನ್ನು ಸಾಕಿ ಸಲುಹಿ ತಕ್ಕಮಟ್ಟಿಗೆ ವಿದ್ಯಾಭ್ಯಾಸವನ್ನೂ ಮಾಡಿಸಿದಳು. ಹಿರಿಯ ಮಗ ಮಧು ಪದವಿ ಓದುತ್ತಿದ್ದ. ಕಿರಿಯವನಾದ ಮನು ಕಾಲೇಜು ಶಿಕ್ಷಣಕ್ಕೆ ಕಾಲಿಟ್ಟಿದ್ದ.

ಶಿವಮ್ಮ ಹೋಟೆಲ್ ಒಂದರಲ್ಲಿ ಪಾತ್ರೆ ತೊಳೆಯುತ್ತಾ ತನ್ನ ಮಕ್ಕಳನ್ನು ಸಾಕಿದ್ದಳು. ತನ್ನ ಊರಿನಲ್ಲಿ ತಮಗಿರುವ ಸ್ಥಾನ ಯಾವುದೆಂಬುದನ್ನು ಬಹಳ ಚೆನ್ನಾಗಿ ಅರಿತಿದ್ದ ಆಕೆ ತಾನಾಯಿತು ತನ್ನ ಕೆಲಸವಾಯಿತು ಎಂದು ಜೀವಿಸುತ್ತಾ ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಂಡಿದ್ದಳು.

ಇದನ್ನೂ ಓದಿ: ಮಾತು ಮರೆತ ಭಾರತ-32; ಕಾಶ್ಮೀರಿ-ದಲಿತ್ ಫೈಲ್: ದಲಿತರ ಜೀವಕ್ಕಿಲ್ಲಿ ಬೆಲೆ ಇಲ್ಲ

ಆಗ ತಾನೇ ಹದಿಹರೆಯವನ್ನು ದಾಟಿದ್ದ 20 ವರ್ಷದ ಮಧುವಿಗೆ ವಯೋಸಹಜ ಪ್ರೇಮ ಮೂಡಿತು. ಅದೇ ಊರಿನ ಒಕ್ಕಲಿಗ ಕುಟುಂಬದ ರೇಖಾ ಅವನ ಮನದರಸಿ. ಆಕೆಯು ಸಹ ಮಧುವಿಗೆ ನಿರಾಸೆಯನ್ನುಂಟು ಮಾಡಲಿಲ್ಲ. ಇಬ್ಬರೂ ಪ್ರಕೃತಿ ಸಹಜ ಪ್ರೇಮದಲ್ಲಿ ಮುಳುಗಿದರು. ಈ ಪ್ರೇಮಕ್ಕೆ ರೇಖಾಳ ವಯಸ್ಸು ಅಡ್ಡಗಾಲಾಕಿ ನಿಂತಿತ್ತು. ರೇಖಾಳಿಗೆ ಇನ್ನೂ 17 ವರ್ಷವೆಂದು ಈ ’ಪ್ರೇಮ’ಕ್ಕೆ ಹೇಳುವವರಾರು? ಹಾಗಿದ್ದರೂ ಎಲ್ಲಾ ಪ್ರೇಮಿಗಳೂ ಮಾಡುವಂತೆ ’ಮುಂದೇನಾಗತ್ತೋ ನೋಡಿಯೇ ಬಿಡೋಣ’ ಎಂದುಕೊಂಡು ಮುಂದುವರೆದಿದ್ದಾರೆ.

ಇವರಿಬ್ಬರ ಪ್ರೇಮದ ವಿಚಾರ ರೇಖಾಳ ಮನೆಯವರಿಗೆ ತಿಳಿದಂತಿದೆ. ಪ್ರೇಮಿಗಳಿಬ್ಬರಿಗೂ ಪರಸ್ಪರ ಪ್ರತ್ಯೇಕಗೊಳ್ಳುವ ಭೀತಿ ಶುರುವಾಗಿದೆ. ಮುಖ ನೋಡದೇ ಒಂದು ದಿನವೂ ಇರಲಾಗದವರಿಗೆ ಶಾಶ್ವತವಾಗಿ ಬೇರೆಯಾಗುವುದು ಭಯ ಮೂಡಿಸಿರಲೇಬೇಕಲ್ಲವೆ? ಇಬ್ಬರೂ ಮನೆ ಬಿಟ್ಟು ಹೊರನಡೆದಿದ್ದಾರೆ. ಭಾರತದ ಕಾನೂನಿನ ಪ್ರಕಾರ ಅಪ್ರಾಪ್ತೆಯನ್ನು ಜೊತೆ ಕರೆದೊಯ್ಯುವುದು ಗಂಭೀರ ಅಪರಾಧವಾಗಿದೆ. ಹಾಗಾಗಿ ಪೋಕ್ಸೋ ಕಾಯ್ದೆಯಲ್ಲಿ ರೇಖಾಳ ಮನೆಯವರು ಮಧುವಿನ ಮೇಲೆ ದೂರು ದಾಖಲಿಸಿದ್ದಾರೆ. ಕೆಲವೇ ದಿನಗಳಲ್ಲಿ ಇಬ್ಬರನ್ನೂ ಪತ್ತೆ ಹಚ್ಚಿದ ಪೊಲೀಸರು ಮಧುವನ್ನು ಬಂಧಿಸಿದರು. ಮಧು ಕೆಲವು ತಿಂಗಳುಗಳ ಕಾಲ ಜೈಲಿನಲ್ಲಿಯೇ ಉಳಿಯಬೇಕಾಯಿತು.

ತಾಯಿ ಮತ್ತು ಇತರ ಕುಟುಂಬ ಸದಸ್ಯರು (PC: The Hindu)

ಇಂತಹ ಪರಿಸ್ಥಿತಿಯಲ್ಲಿ ಮಧುವಿನ ಪರವಾಗಿ ಗಟ್ಟಿಯಾಗಿ ನಿಂತುಕೊಂಡ ಅವನ ತಾಯಿ ಮತ್ತು ತಮ್ಮ, ಇದ್ದಬದ್ದ ಹಣವನ್ನೆಲ್ಲ ನ್ಯಾಯಾಲಯದ ವಿಚಾರಣೆಗೆ ಸುರಿದು ಕೊನೆಗೂ ಮಗನನ್ನು ಜಾಮೀನಿನ ಮೇಲೆ ಹೊರತಂದರು. ಅಲ್ಲಿಗೆ ಶಿವಮ್ಮನ ಮನಸ್ಸು ಒಂದಷ್ಟು ನಿರಾಳವಾಯಿತು. ಊರಿನಲ್ಲಿಯೇ ಇದ್ದರೆ ಮಧುವಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರಿತ ಶಿವಮ್ಮ ಮತ್ತು ಮನು, ಮಧುವನ್ನು ಬೆಂಗಳೂರಿಗೆ ಕಳಿಸಿದರು. ಮನಸ್ಸಿಲ್ಲದಿದ್ದರೂ ಅಮ್ಮನ ಮಾತಿಗೆ ಇಲ್ಲವೆನ್ನದೆ ಬೆಂಗಳೂರಿಗೆ ತೆರಳಿದ ಮಧು, ತಿಂಗಳುಗಳ ಕಾಲ ಸುತ್ತಾಡಿ ಒಂದು ಕೆಲಸ ಗಿಟ್ಟಿಸಿಕೊಂಡನು. ಬರುವ ಸಂಬಳದಲ್ಲಿ ಒಂದಷ್ಟು ಮನೆಗೂ ಕಳಿಸುತ್ತಿದ್ದನು.

ಎಲ್ಲವೂ ಸರಿ ಹೋಯಿತು ಎಂದುಕೊಂಡು ಶಿವಮ್ಮ ನಿಟ್ಟುಸಿರುಬಿಡುವಷ್ಟರಲ್ಲಿ ಕೋವಿಡ್ 19 ಭಾರತಕ್ಕೆ ಲಗ್ಗೆ ಇಟ್ಟಿತು. ಮಾರ್ಚ್ 2019ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತದಾದ್ಯಂತ ಲಾಕ್‌ಡೌನ್ ಹೇರಿದರು. ದೇಶದಾದ್ಯಂತ ಕೆಲಸ ಮಾಡುತ್ತಿದ್ದ ಕಾರ್ಮಿಕ ವರ್ಗದಂತೆ ಮಧುವೂ ಕೆಲಸವಿಲ್ಲದೆ ಬೆಂಗಳೂರು ಬಿಟ್ಟು ತವರೂರು ಸೊಪ್ಪಿನಹಳ್ಳಿಗೆ ಬಂದನು. ಅದೇ ಗ್ರಾಮದ ವರ್ಕ್‌ಶಾಪ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡನು. ಅಂತೂ ಇಂತು ನನ್ನಿಬ್ಬರು ಮಕ್ಕಳೂ ಈಗ ನನ್ನೊಂದಿಗೆ ಇದ್ದಾರೆ ಎಂಬ ಖುಷಿಯಲ್ಲಿ ಶಿವಮ್ಮ ತೇಲುತ್ತಿದ್ದಳು. ಇತ್ತ ಸೊಪ್ಪಿನಹಳ್ಳಿಗೆ ಬಂದ ಮಧುವಿನ ಹೃದಯದಲ್ಲಿ ಮಲಗಿದ್ದ ರೇಖಾಳ ನೆನಪಿಗೆ ಜೀವ ಬಂದಿತು. ರೇಖಾಳನ್ನು ಬಂಧಿಸಿಟ್ಟುಕೊಳ್ಳುವಲ್ಲಿ ಸಫಲವಾಗಿದ್ದೇವೆಂದು ನಂಬಿಕೊಂಡಿದ್ದ ಆಕೆಯ ಸಂಬಂಧಿಕರಿಗೆ ಒಳಗೊಳಗೇ ಪ್ರತಿಷ್ಠೆಯ ಅಮಲು ನೆತ್ತಿಗೇರಿ ಸುಖ ನೀಡುತ್ತಿತ್ತು.

ಇದನ್ನೂ ಓದಿ: ಮಾತು ಮರೆತ ಭಾರತ-32; ಲಾಕ್‌ಡೌನ್ ಫೈಲ್ಸ್: ಪ್ರೀತಿಯನ್ನು ಮಣಿಸಿದ ಜಾತಿ

ಶಿವಮ್ಮ ಮತ್ತು ಮನು ಇಬ್ಬರೂ ಮಧುವಿಗೆ ಆಗಾಗ ಎಚ್ಚರಿಕೆ ನೀಡುತ್ತಲೇ ಇದ್ದರು. ಯಾವುದೇ ಕಾರಣಕ್ಕೂ ರೇಖಾಳ ಸಹವಾಸಕ್ಕೆ ಹೋಗಬೇಡ, ಆಕೆಯೊಂದಿಗೆ ಮತ್ತೆ ಸಂಪರ್ಕ ಬೆಸೆಯಬೇಡ ಎಂದು ತಾಕೀತು ಮಾಡುತ್ತಿದ್ದರು. ಆದರೇನು ಮಾಡುವುದು? ಅದು ಪ್ರೇಮವಲ್ಲವೇ? ಎಂಟು ದಿಕ್ಕುಗಳಲ್ಲೂ ಯೋಚಿಸಿ ಮುಂದುವರೆಯಲು ಅದೇನು ಯುದ್ಧತಂತ್ರವೇ?

ಅಂದು ಜುಲೈ 15. ಮಧು ತನ್ನ ಸ್ನೇಹಿತರೊಡನೆ ಊರಿನ ದೇಗುಲಕ್ಕೆ ಹೋಗಿ ವಾಪಸ್ಸು ಬರುತ್ತಿದ್ದನು. ಅಚಾನಕ್ಕಾಗಿ ಅವರೆಲ್ಲರ ಎದುರಿಗೆ ರೇಖಾಳ ಚಿಕ್ಕಪ್ಪ ರೂಪೇಶ್ ಬಂದು ನಿಂತನು. ಅವನ ಕೈಯಲ್ಲಿ ಡಬಲ್ ಬ್ಯಾರೆಲ್ ಕಂಟ್ರಿ ಮೇಡ್ ಬಂದೂಕು ಇತ್ತು. ಆಗ ಸಮಯ ಮಧ್ಯಾಹ್ನ 3 ಗಂಟೆ. ಕ್ಷಣಹೊತ್ತೂ ಕಾಯದೇ, ರೇಖಾಳ ನೆನಪನ್ನೇ ತುಂಬಿಕೊಂಡಿದ್ದ ಮಧುವಿನ ಎದೆಗೆ ಗುರಿಯಿಟ್ಟು ಗುಂಡು ಹಾರಿಸಿದನು. ಮಿಸುಕಾಡುತ್ತಲೇ ಮಧುವಿನ ದೇಹ ತಣ್ಣಗಾಯಿತು. ಅವನ ಕಣ್ಣ ತುಂಬ ತುಂಬಿಕೊಂಡಿದ್ದ ರೇಖಾಳನ್ನು ನೋಡಿಯೇ ರೂಪೇಶ್ ಕೆಲಸ ಮುಗಿಸಿ ಹೋಗಿರಬೇಕು. ರೂಪೇಶ್ ಎಂಬ ಜಾತಿ ಮೃಗಗಳು ಇಂದಿಗೂ ಜೀವಂತ ಇವೆ. ಮರ್‍ಯಾದೆ ಹೆಸರಿನಲ್ಲಿ ಕೊಲೆಯನ್ನೂ ಮಾಡಿಸಿಬಿಡುವ ಜಾತಿವ್ಯವಸ್ಥೆ ಜೀವಂತ ಇರುವವರೆಗೂ ಇಂತಹ ನಾಡುಮೃಗಗಳ ಸಂಖ್ಯೆ ಕಡಿಮೆ ಆಗುವುದಿಲ್ಲ. ಇಂತಹ ನಾಡುಮೃಗಗಳ ಹೆಡೆಮುರಿ ಕಟ್ಟಬೇಕಿದ್ದ ಕಾನೂನಿನ ಆಯಕಟ್ಟಿನ ಸ್ಥಾನದಲ್ಲಿಯೂ ಮೃಗಗಳೇ ತುಂಬಿಕೊಂಡಿರುವಾಗ ಕಟಕಟೆಯಲ್ಲಿಯಾದರೂ ಮಧು-ರೇಖಾಳ ಪ್ರೇಮಕ್ಕೆ ಗೆಲುವು ಸಿಗುವುದೇ ಕಾದು ನೋಡಬೇಕಿದೆ.

2019ರ ಎನ್‌ಸಿಆರ್‌ಬಿ ವರದಿ ಪ್ರಕಾರ ದಲಿತರ ಮೇಲೆ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ದೌರ್ಜನ್ಯಗಳು ನಡೆದಿವೆ. ಆದರೆ ಕರ್ನಾಟಕದಲ್ಲಿ ದಲಿತರ ಮೇಲೆ ನಡೆಯುವ ದೌರ್ಜನ್ಯ ದರ ಉತ್ತರಪ್ರದೇಶಕ್ಕಿಂತಲೂ ಹೆಚ್ಚಿದೆ. ಉತ್ತರಪ್ರದೇಶದಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಶೇ.5.6ರಷ್ಟು ದೌರ್ಜನ್ಯಗಳು ದಲಿತರ ಮೇಲೆ ಘಟಿಸಿದರೆ, ಕರ್ನಾಟಕದಲ್ಲಿ ಅದರ ಪ್ರಮಾಣ ಶೇ.12.8. ಇಂತಹ ಪ್ರಕರಣಗಳಲ್ಲಿ ಶಿಕ್ಷೆ ನೀಡುವ ಪ್ರಮಾಣವೂ ಸಹ ಕರ್ನಾಟಕದಲ್ಲಿ ಅತ್ಯಂತ ಕಡಿಮೆ. ಅದು ಕೇವಲ ಶೇ.0.4.

ನಾಡುಮೃಗ ರೂಪೇಶ್ ಜೈಲಿನಲ್ಲಿದ್ದಾನೆ. ಶಿವಮ್ಮ ಮತ್ತೆ ನ್ಯಾಯಾಲಯದ ಸುತ್ತಾ ಸುತ್ತುತ್ತಿದ್ದಾರೆ. ಸೊಪ್ಪಿನಹಳ್ಳಿ ಮಧುವನ್ನು ಬಹುತೇಕ ಮರೆತಂತಿದೆ. ಆದರೆ ರೇಖಾಳ ಹೃದಯ ಮರೆತಿರುವುದಕ್ಕೆ ಸಾಕ್ಷಿ ಇನ್ನೂ ಸಿಕ್ಕಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಗಲಕೋಟೆಯ ವಿವಿಧ ಪ್ರದೇಶಗಳಲ್ಲಿ ಎಸ್‌ಐಆರ್‌ ವಿರುದ್ಧ ಜನಜಾಗೃತಿ ಜಾಥಾ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಬಾಗಲಕೋಟೆ ನಗರದ ವಿವಿಧ ಭಾಗಗಳಲ್ಲಿ ಭಾನುವಾರ (ಜೂ.14) ಜಾಗೃತಿ ಜಾಥಾ ನಡೆಯಿತು. ನವನಗರದ ವಿದ್ಯಾಗಿರಿ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಸರ್ಕಲ್‌ನಿಂದ ಪ್ರಾರಂಭವಾದ ಜಾಥಾ...

SIR ವಿರೋಧಿ ಜನಜಾಗೃತಿ ಜಾಥಾ: ಕಾಫಿ ನಾಡು ಚಿಕ್ಕಮಗಳೂರಲ್ಲಿ ಅದ್ದೂರಿ ಸ್ವಾಗತ

ಚಿಕ್ಕಮಗಳೂರು: ರಾಜ್ಯಾದ್ಯಂತ ಐದು ವಿಭಾಗಗಳಲ್ಲಿ ಸಂಚರಿಸುತ್ತಿರುವ 'SIR ವಿರೋಧಿ ಜನಜಾಗೃತಿ ಜಾಥಾ'ದ 3ನೇ ಮಾರ್ಗದ ತಂಡಕ್ಕೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಭಾನುವಾರ ಬೆಳಗ್ಗೆ ಜಿಲ್ಲೆಯ ಕೊಪ್ಪ ತಾಲ್ಲೂಕಿಗೆ ಆಗಮಿಸಿದ ಜಾಥಾ...

ಚಿಕ್ಕಮಗಳೂರಿನಲ್ಲಿ ಎಸ್‌ಐಆರ್ (SIR) ವಿರೋಧಿ ಜಾಥಾ: ಮತದಾರರ ಹಕ್ಕು ಕಸಿಯುವ ಹುನ್ನಾರದ ವಿರುದ್ಧ ಆಕ್ರೋಶ

ಭಾರತ ಚುನಾವಣಾ ಆಯೋಗವು ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆ (SIR - Special Intensive Revision) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ....

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...