Homeಮುಖಪುಟನಾನು ಸೇಬನ್ನು ಸೇಬು ಎಂದು ಕರೆಯುತ್ತೇನೆ, ಕಿತ್ತಳೆ ಅಲ್ಲ: ಬಿಜೆಪಿಗರ ಟೀಕೆಗೆ ಸಂಸದೆ ಮೊಯಿತ್ರಾ ತಿರುಗೇಟು

ನಾನು ಸೇಬನ್ನು ಸೇಬು ಎಂದು ಕರೆಯುತ್ತೇನೆ, ಕಿತ್ತಳೆ ಅಲ್ಲ: ಬಿಜೆಪಿಗರ ಟೀಕೆಗೆ ಸಂಸದೆ ಮೊಯಿತ್ರಾ ತಿರುಗೇಟು

- Advertisement -
- Advertisement -

‘ಅಸಂಸದೀಯ’ ಭಾಷೆಯನ್ನು ಬಳಸಿದ್ದಕ್ಕಾಗಿ ಬಿಜೆಪಿ ಪಕ್ಷದ ಹಲವು ನಾಯಕರಿಂದ ಟೀಕೆಗಳನ್ನು ಎದುರಿಸುತ್ತಿರುವ ಫೈರ್‌ಬ್ರಾಂಡ್ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು ಬುಧವಾರ ಬಜೆಟ್ ಅಧಿವೇಶನದ ಸದನದಲ್ಲಿ ”ನಾನು ಸೇಬನ್ನು ಸೇಬು ಎಂದು ಕರೆಯುತ್ತೇನೆ, ಕಿತ್ತಳೆ ಅಲ್ಲ” ಎಂದು ಹೇಳುವ ಮೂಲಕ ಟೀಕೆಗೆ ತಿರುಗೇಟು ನೀಡಿದ್ದಾರೆ.

“ದೆಹಲಿಯ ಆ ಪ್ರತಿನಿಧಿ ನನ್ನನ್ನು ಕೆಣಕಿದ್ದಾರೆ. ಹಾಗಾಗಿ ನಾನು ಅವರಿಗೆ ಹೇಳುವುದು ಇಷ್ಟೇ, ನಾನು ಸೇಬನ್ನು ಸೇಬು ಎಂದು ಕರೆಯುತ್ತೇನೆ, ಕಿತ್ತಳೆ ಅಲ್ಲ ಎಂದು. ಬಿಜೆಪಿಯವರು ನನಗೆ ಸಂಸದೀಯ ಶಿಷ್ಟಾಚಾರ ಕಲಿಸುತ್ತಾರೆ ಎಂದರೆ ನನಗೆ ಆಶ್ಚರ್ಯವಾಗುತ್ತದೆ ಎಂದು ಮೊಯಿತ್ರಾ ಹೇಳಿದರು.

ಮಂಗಳವಾರ ಲೋಕಸಭೆಯಲ್ಲಿ ಅದಾನಿ ವಿಷಯದ ಕುರಿತು ಮಾತನಾಡಿದ ನಂತರ ಮೊಯಿತ್ರಾ ಅವರು ಸದನದಲ್ಲಿ ನಿಂದನೀಯ ಪದವನ್ನು ಬಳಸಿದ್ದಾರೆ ಎಂದು ಹೇಳಲಾಗಿತ್ತು.

“ಬಿಜೆಪಿಯವರು ನನಗೆ ಹೆಣ್ಣಾಗಿ ಇಂತಹ  ಬಳಸುತ್ತಾರೆ ಎಂದು ಹೇಳುತ್ತಾರೆ, ನಾನು ಅವರಿಗೆ ಪ್ರತಿಕ್ರಿಯೆ ನೀಡಲು ಗಂಡಾಗಬೇಕೆ? ಇವರಲ್ಲಿ ಪಿತೃಪ್ರಭುತ್ವವಿದೆ ಎಂದು ಹೇಳಿದರು.

ಮೊದಲ ಬಾರಿಗೆ, ಈ ಅದಾನಿ ಕಂಪನಿ ಎಂತಹದ್ದು ಎಂದು ಭಾರತದ ಜನರಿಗೆ ತೋರಿಸಲು ಸಾಧ್ಯವಾಗಿದೆ. ಬಿಜೆಪಿ ಸರ್ಕಾರ, ಕಳೆದ 3 ವರ್ಷಗಳಿಂದ ಅದಾನಿ ಕಂಪನಿಯ ಹಗರಣವನ್ನು ಕಾರ್ಪೆಟ್ ಅಡಿಯಲ್ಲಿ ತಳ್ಳಲು ಪ್ರಯತ್ನಿಸುತ್ತಿದೆ ಆದರೆ ಇದೀಗ ಅದೆಲ್ಲವೂ ಬಯಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಮೋದಿ ಸರ್ಕಾರ ಇತಿಹಾಸವನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ: ಮಹುವಾ ಮೊಯಿತ್ರಾ ಆಕ್ರೋಶ

ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದೆ ಹೇಮಾ ಮಾಲಿನಿ, ”ಎಲ್ಲರೂ ತಮ್ಮ ನಾಲಿಗೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಮಾತನಾಡಬೇಕು. ಅತಿಯಾದ ಉತ್ಸಾಹ ಮತ್ತು ಭಾವನಾತ್ಮಕತೆಗೆ ಒಳಗಾಗಬಾರದು ಎಂದು ಹೇಳಿದರು.

ಮತ್ತೊಬ್ಬ ಸಂಸದರು ಮಾತನಾಡುವಾಗ ಮೊಯಿತ್ರಾ ಅವರು ನಿಂದನೆ ಮಾಡಿರುವುದು ಕೇಳಿಬಂದಿದೆ. ಆ ಪದಬಳಕೆ ದುರದೃಷ್ಟಕರ ಮತ್ತು ಕ್ಷಮೆಯಾಚಿಸುವುದು ನಿರೀಕ್ಷಿತ ಸೌಜನ್ಯ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಸಂಸತ್ತಿನ ಹೊರಗೆ ಮಾಧ್ಯಮದವರ ಜೊತೆ ಮಾತನಾಡಿದ ಮೊಯಿತ್ರಾ, ”ನಾನು ಯಾವ ರೀತಿಯ ಭಾಷೆಯನ್ನು ಬಳಸಬೇಕು ಎನ್ನುವುದು ಗೊತ್ತಿದೆ. ಈ ಬಿಜೆಪಿ ನಮಗೆ ಸಂಸದೀಯ ಶಿಷ್ಟಾಚಾರವನ್ನು ಕಲಿಸುತ್ತಿರುವುದು ನನಗೆ ಆಶ್ಚರ್ಯ ತಂದಿದೆ. ನಾನು ಸೇಬನ್ನು ಸೇಬು ಎಂದು ಕರೆಯುತ್ತೇನೆ, ಕಿತ್ತಳೆ ಅಲ್ಲ..” ಎಂದು ಮತ್ತೊಮ್ಮೆ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ನಿನ್ನೆ ಭಾರತೀಯ ಪ್ರಜಾಪ್ರಭುತ್ವಕ್ಕೆ ಶುಭದಿನವಾಗಿದೆ ಏಕೆಂದರೆ ದೇಶವು ಅದಾನಿ ಕಂಪನಿ ಯಾವ ಪ್ರಮಾಣದಲ್ಲಿ ಹಗರಣ ಮಾಡಿದೆ ಎಂದು ದೇಶದ ಜನರು ನೋಡುವಂತಾಯಿತು ಎಂದು ಹೇಳಿದರು.

“ಈ ವಿಷಯವನ್ನು ಬಿಜೆಪಿಯವರು 2019 ರಿಂದ ನಮ್ಮಿಂದ ಮುಚ್ಚಿಡಲು ಪ್ರಯತ್ನಿಸುತ್ತಿದ್ದರು. ಆದರೆ ನಿನ್ನೆ ನಾವೆಲ್ಲರೂ ಮೊದಲ ಬಾರಿಗೆ ಅದಾನಿ ಕಂಪನಿ ಏನೆಂದು ಭಾರತಕ್ಕೆ ತೋರಿಸಿದ್ದೇವೆ. ಈಗ ಬಿಜೆಪಿ ಈ ಹಗರಣವನ್ನು ಕೆಳಗೆ ತಳ್ಳಲು ಪ್ರಯತ್ನಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ರತ್ನಗಂಬಳಿಯ ಕೆಳಗೆ ಅದಾನಿ  ಹಗರಣವನ್ನು ಬಚ್ಚಿಟ್ಟಿದ್ದರು. ಆದರೆ ನಿನ್ನೆ ಭಾರತೀಯ ಪ್ರಜಾಪ್ರಭುತ್ವಕ್ಕೆ ‘ಶುಭ್ ದಿನ್’ (ಶುಭ ದಿನ) ಏಕೆಂದರೆ ಬಿಜೆಪಿ ಮರೆಮಾಡಲು ಪ್ರಯತ್ನಿಸುತ್ತಿರುವುದನ್ನು ದೇಶದ ಜನರು ನಿಖರವಾಗಿ ನೋಡುತ್ತಿದ್ದಾರೆ. ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ ಹೊರಬಂದಿದ್ದಕ್ಕೆ ನನಗೆ ಸಂತೋಷವಾಗಿದೆ. ಅದಾನಿ ಕಂಪನಿಯ ಹಗರಣದ ವ್ಯಾಪ್ತಿಯನ್ನು ಭಾರತದ ಜನರು ನೋಡಬಹುದು.

”ನೀವು ಸದನದಲ್ಲಿ ನನ್ನ ಭಾಷಣ ಮತ್ತು ಆ ಮಹಾನುಭಾವರ ವರ್ತನೆ ನೋಡಿದ್ದರೆ ನಿಮಗೆ ಅರ್ಥವಾಗುತ್ತದೆ. ಅವರನ್ನು ನಾನು ಸಂಭಾವಿತರು ಎಂದು ಕರೆಯುವುದಿಲ್ಲ.. ದೆಹಲಿಯ ಗೌರವಾನ್ವಿತ ಪ್ರತಿನಿಧಿ ಇಡೀ ಸಮಯದಲ್ಲಿ ನನಗೆ ಮಾತನಾಡಲು ಸಹ ಅವಕಾಶ ನೀಡಲಿಲ್ಲ. ಅವರು ನನ್ನನ್ನು ನಿರಂತರವಾಗಿ ಕೆಣಕಿದರು. ಆಗ ನಾನು ಅಧ್ಯಕ್ಷರ ಬಳಿ ಐದು ಬಾರಿ ರಕ್ಷಣೆ ಕೇಳಿದೆ. ನನಗೆ ರಕ್ಷಣೆ ನೀಡಲು ಅಧ್ಯಕ್ಷರಿಗೆ ಸಾಧ್ಯವಾಗಲಿಲ್ಲ. ನಾನು ಏನು ಹೇಳಿದರೂ ದಾಖಲೆಯಲ್ಲಿ ಇಲ್ಲ” ಎಂದು ಮೊಯಿತ್ರಾ ಹೇಳಿದರು.

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಧನ್ಯವಾದ ನಿರ್ಣಯದ ಸಂದರ್ಭದಲ್ಲಿ ಟಿಡಿಪಿ ಸಂಸದ ಕೆ ರಾಮ್ ಮೋಹನ್ ನಾಯ್ಡು ಅವರು ಮಾತನಾಡುತ್ತಿದ್ದಾಗ, ಮೊಯಿತ್ರಾ ಅವರು ಬಿಜೆಪಿ ಸಂಸದ ರಮೇಶ್ ಬಿಧುರಿ ವಿರುದ್ಧ ಕೆಲವು ಅಸಂಸದೀಯ ಭಾಷೆಯನ್ನು ಬಳಸಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸಂಸದರು ಕೆಳಮನೆಯಲ್ಲಿ ಗದ್ದಲ ಆರಂಭಿಸಿದರು.

ರಾಷ್ಟ್ರಪತಿಗಳ ಭಾಷಣದ ಮೇಲಿನ ಧನ್ಯವಾದ ನಿರ್ಣಯದ ಸಂದರ್ಭದಲ್ಲಿ ಮೊಯಿತ್ರಾ ಅವರು ಚೀನಾ, ಪೆಗಾಸಸ್, ಬಿಬಿಸಿ ಸಾಕ್ಷ್ಯಚಿತ್ರ, ಮೊರ್ಬಿ ಸೇತುವೆ ಕುಸಿತ, ರಫೇಲ್ ಮತ್ತು ಅದಾನಿ ಸಮೂಹದ ಕಂಪನಿಗಳ ಇತ್ತೀಚಿನ ಹಗರಣ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಪ್ರಸ್ತಾಪಿಸಿದರು.

ಸದನದಲ್ಲಿ ಅದಾನಿಯನ್ನು ಮಿಸ್ಟರ್ ‘ಎ’ ಎಂದು ಸ್ಪಷ್ಟವಾಗಿ ಉಲ್ಲೇಖಿಸಿ, ಅವರು ಸರ್ಕಾರವನ್ನು ಮೂರ್ಖರನ್ನಾಗಿಸಿದ್ದಾರೆ ಎಂದು ಮೊಯಿತ್ರಾ ಹೇಳಿದ್ದಾರೆ.

“ಪ್ರಧಾನ ಮಂತ್ರಿಯವರೇ, ಮಿಸ್ಟರ್ ‘ಎ’ ಎನ್ನುವ ವ್ಯಕ್ತಿ ನಿಮಗೆ ಮೋಸ ಮಾಡಿದ್ದಾರೆ. ಅವರು ನಿಮ್ಮ ನಿಯೋಗಗಳಲ್ಲಿ ನಿಮ್ಮೊಂದಿಗೆ ಪ್ರಯಾಣಿಸುತ್ತಾರೆ. ಅವರು ಭಾರತಕ್ಕೆ ಭೇಟಿ ನೀಡಿದಾಗ ರಾಷ್ಟ್ರದ ಮುಖ್ಯಸ್ಥರನ್ನು ಭೇಟಿಯಾಗುತ್ತಾರೆ. ಅವರು ತಾನೇ ಪ್ರಧಾನಿ ಎನ್ನುವಂತೆ ಬಿಂಬಿಸುತ್ತಾರೆ. ಅವರು ಪ್ರಧಾನಿಯ ಹಿಂದೆ ರಿಮೋಟ್ ಕಂಟ್ರೋಲ್ ಎಂದು ಜಗತ್ತಿಗೆ ತೋರುವಂತೆ ಮಾಡುತ್ತಾರೆ” ಎಂದು ಮೊಯಿತ್ರಾ ಹೇಳಿದರು.

”ಮಹುವಾ ಹಿಂದೆ ಯಾರಿದ್ದಾರೆ ಎಂದು ಎಲ್ಲರೂ ಕೇಳುತ್ತಿದ್ದಾರೆ. ನಕಲಿ ಸುದ್ದಿ ಬ್ರಿಗೇಡ್, ಪ್ರತಿದಿನ ಹೊಸ ಕಥೆ ಹರಿಬಿಡುತ್ತದೆ. ಆದರೆ ನನ್ನ ಹಿಂದೆ ಯಾರೂ ಇಲ್ಲ, ಮಹುವಾ ಹಿಂದೆ ಸತ್ಯ ಇದೆ” ಎಂದು ಅವರು ಪ್ರತಿಪಾದಿಸಿದರು.

ಅವರ ಹೇಳಿಕೆಗೆ ಬಿಜೆಪಿ ನಾಯಕರು ಸದನದಲ್ಲಿ ಕೋಲಾಹಲ ಸೃಷ್ಟಿಸಿದರು. ಅವರ ಭಾಷಣದ ವೇಳೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಟಿಎಂಸಿ ಸಂಸದೆ ಮೋಯಿತ್ರಾ, ”ನನ್ನನ್ನು ಕೆಣಕಲು ಮತ್ತು ಭಾಷಣದ ಹರಿವನ್ನು ಹಾಳುಮಾಡಲು ಅವರು ಈ ರೀತಿ ಮಾಡುತ್ತಿರುವುದರಿಂದ ನಾನು ಅದನ್ನು ಪುನರಾವರ್ತಿಸಬೇಕಾಗಿದೆ ಎಂದು ಹೇಳುತ್ತಾ ನಾನು ಮಾತ್ರ ಸತ್ಯದ ಹಿಂದೆ ಇದ್ದೇನೆ” ಎಂದು ಮೊಯಿತ್ರಾ ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...