HomeUncategorizedಮಹಾರಾಷ್ಟ್ರ ಚುನಾವಣೆ ಬಿಜೆಪಿಗೆ ವಾಕ್ ಓವರ್ ಆಗಲಿದೆ.. : ಸುನಿಲ್ ಶಿರಸಂಗಿ

ಮಹಾರಾಷ್ಟ್ರ ಚುನಾವಣೆ ಬಿಜೆಪಿಗೆ ವಾಕ್ ಓವರ್ ಆಗಲಿದೆ.. : ಸುನಿಲ್ ಶಿರಸಂಗಿ

ಇಲ್ಲಿ ಬಿಜೆಪಿಯು ತನ್ನ ಅಭಿವೃದ್ಧಿಕಾರ್ಯದ ಮೇಲೆ ಮತ್ತು ಅಭ್ಯರ್ಥಿಗಳ ಸಾಮಥ್ರ್ಯದ ಮೇಲೆ ಚುನಾವಣೆ ಎದುರಿಸುತ್ತಿಲ್ಲ. ಬದಲಾಗಿ ಚುನಾವಣಾ ಆಯೋಗ, ಕೇಂದ್ರ ತನಿಖಾ ತಂಡಗಳು, (ED, CBI, Income Tax) ಪೊಲೀಸ್ ಮತ್ತು ನ್ಯಾಯಾಂಗದ ಬಲದೊಂದಿಗೆ ಚುನಾವಣಾ ಕಣಕ್ಕಿಳಿದಿದೆ.

- Advertisement -
- Advertisement -

ಆರ್ಥಿಕ ಹಿನ್ನಡೆ, ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ, ಹೆಚ್ಚುತ್ತಿರುವ ನಿರುದ್ಯೋಗ, ಆಡಳಿತ ವಿರೋಧಿ ಅಲೆ, ಹೆಚ್ಚುತ್ತಿರುವ ಕೋಮು ದಳ್ಳುರಿಗೆ ಈ ಚುನಾವಣೆಯಲ್ಲಿ ಯಾವ ಪಾತ್ರವು ಇಲ್ಲ. ಯಾಕೆಂದರೆ ಮತದಾರ ಪ್ರಭುವಿಗೆ ನಿತ್ಯ ತೊಂದರೆ ಕೊಡುವ ಸಮಸ್ಯೆಗಳು ಮುಖ್ಯವಾಗಿಲ್ಲ.

ಮಹಾರಾಷ್ಟ್ರ ಚುನಾವಣಾ ಅಖಾಡ ಸಿದ್ದವಾಗಿದ್ದು ಕಣವನ್ನು ಎನ್‍ಡಿಎಗಾಗಿಯೇ ಹದಗೊಳಿಸಿದಂತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಣದ ಕುಸ್ತಿಪಟು ಕಚ್ಚಿಕಟ್ಟಿಕೊಂಡು ತೊಡೆ ತಟ್ಟುತ್ತಿದ್ದಾರೆ. ಪ್ರೇಕ್ಷಕರ ಗ್ಯಾಲರಿಯಿಂದ ಭಾರೀ ಕರತಾಡನ ಕೇಳಿಬರುತ್ತಿದೆ. ಆದರೆ ಎದುರಾಳಿ ಪಡೆಯಿಂದ ಯಾರು ಅಂಕಣಕ್ಕೆ ಇಳಿಯುವುದೆಂದು ಇನ್ನೂ ನಿರ್ಧಾರವಾಗಿಲ್ಲ. ಇನ್ನು ಸಿದ್ಧತೆ ಎಲ್ಲಿಂದ ಬಂತು? ಆಶ್ಚರ್ಯವಾದರೂ ಮಹಾರಾಷ್ಟ್ರ ಚುನಾವಣೆಯಲ್ಲಿ ಕಂಡು ಬರುತ್ತಿರುವ ವಾಸ್ತವ ಇದೇ ಆಗಿದೆ.

ಚುನಾವಣೆ ಹತ್ತಿರವಿದ್ದಾಗಲೂ ಕಾಂಗ್ರೆಸ್ ಮತ್ತು NCP ಯಾಕೆ ಸಿದ್ದತೆ ಮಾಡಿಕೊಂಡಿಲ್ಲ ಅಂತ ನೋಡಲು ಹೋದರೆ ಕಂಡು ಬರುವ ದೃಶ್ಯ ಯಾರನ್ನಾರೂ ಬೆಚ್ಚಿ ಬೀಳಿಸುತ್ತದೆ. ಅನೇಕ ಪೈಲ್ವಾನರನ್ನು ಹೊಂದಿರುವ ಕಾಂಗ್ರೆಸ್ ಮತ್ತುNCPಯಲ್ಲಿ ಯಾವ ಪೈಲ್ವಾನನ್ನು ಅಖಾಡಕ್ಕೆ ಇಳಿಸುವುದು ಅಂತ ಗೊಂದಲ ಒಂದೆಡೆಯಾದರೆ, ಇನ್ನೊಂದೆಡೆ ಯಾವ ಪೈಲ್ವಾನ ಯಾರ ಪರ ಆಡುತ್ತಾನೆ ಅಂತ ತಿಳಿಯದೇ ಇರುವುದು ಇನ್ನೊಂದು ಕಾರಣ.

ಏನಪ್ಪ ಇದು ಯಾರ ಪರ ಅನ್ನುವುದು ಅಂತ ಕೇಳಿದರೆ ಅಲ್ಲೆ ಇರುವುದು ಟ್ವಿಸ್ಟ್. ಕಾಂಗ್ರೆಸ್ ಮತ್ತು ಓಅP ಪ್ರಮುಖ ನಾಯಕರನ್ನು EDತನ್ನ ತೆಕ್ಕೆಗೆ ತೆಗೆದುಕೊಂಡು ಆಗಿದೆ. ಮರಾಠ ಓಟ್ ಬ್ಯಾಂಕ್ ಹೊಂದಿರುವ ನಾಯಕರು, ಸಹಕಾರ ಚಳುವಳಿಯಲ್ಲಿ ಮುಂಚುಣಿಯಲ್ಲಿರುವ ನಾಯಕರು, ಶಿವಾಜಿಯ ವಂಶಸ್ಥರು, ಕಾಂಗ್ರೆಸ್ RSS ಪಕ್ಷದ ಹಿಂದುಳಿದ ವರ್ಗದ ನಾಯಕರು ಕಮಲದ ಬಲೆಯಲ್ಲಿ ಬಿದ್ದಾಗಿದೆ. ಇನ್ನು ಉಳಿದ ಪ್ರಮುಖ ನಾಯಕರ ಮೇಲೆ ಇಆ ತೂಗುಕತ್ತಿ ಬೀಸುತ್ತಿದೆ. ಹಾಗಾಗಿ ಯಾರ್ಯಾರು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ, ಇನ್ಯಾರು ಸ್ಪಾಟ್ ಫಿಕ್ಸಿಂಗ್ ಬಲೆಯಲ್ಲಿ ಇದ್ದಾರೆ ಎಂಬ ಲೆಕ್ಕ ಹಾಕುವುದರಲ್ಲಿ ವಿರೋಧ ಪಕ್ಷಗಳು ಸುಸ್ತಾಗಿವೆ. ಪಕ್ಷ ಬಿಟ್ಟು ಹೋದ ಶತ್ರುವನ್ನು ಎದುರಿಸುವುದು ಸುಲಭ, ಆದರೆ ಮನೆಯಲ್ಲಿ ಬಿಲ ಕೊರೆಯುವ ಶತ್ರುವನ್ನು ಎದುರಿಸುವುದು ಹೇಗೆ.. ಹೀಗಾಗಿ ಯಾರನ್ನು ಕಚ್ಚೆಕಟ್ಟಿ ಕಣಕ್ಕಿಳಿಸಿದರೆ ತಮ್ಮ ಪರ ಹಲ್ಲುಕಚ್ಚಿ ಹೋರಾಡಬಲ್ಲರು ಅಂತ ನಿರ್ಧರಿಸುವುದು ಕಾಂಗ್ರೆಸ್ ಹೈಕಮಾಂಡ್‍ನ ಸೋನಿಯಾ ಗಾಂಧಿ ಮತ್ತು ಓಅPಯ ಅಗ್ರನಾಯಕ ಶರದ್ ಪವಾರ್‍ಗೆ ಅಯೋಮಯದ ಸಂಗತಿಯಾಗಿದೆ.

ಅಳಿದುಳಿದ ಆಟಗಾರರನ್ನು ಹುರಿದುಂಬಿಸಿ ಚುನಾವಣಾ ಕಣಕ್ಕೆ ಧುಮುಕಬೇಕಾದ ಕಾಂಗ್ರೆಸ್ ಹೈಕಮಾಂಡ್ ಮಂಕಾಗಿದೆ, ಸೋನಿಯಾಗಾಂಧಿ ಆರೋಗ್ಯ ಸಾಥ್ ಕೊಡುತ್ತಿಲ್ಲ. ಇನ್ನು ರಾಹುಲ್‍ಗಾಂಧಿ 2019ರ ಲೋಕಸಭಾ ಚುನಾವಣೆಯ ಸೋಲಿನ ಹ್ಯಾಂಗ್‍ಹೋವರ್‍ನಿಂದ ಹೊರಬಂದಿಲ್ಲ. ಇದು ಕಾಂಗ್ರೆಸ್ ಕಥೆಯಾದರೆ, ಓಅP ಕಥೆ ಇನ್ನೂ ಕೆಟ್ಟದಾಗಿದೆ. ಇಲ್ಲಿನ ಚುನಾವಣಾ ರಾಜಕೀಯದಲ್ಲಿ ಗೆಲ್ಲಬಲ್ಲಂತಹ ನಾಯಕರು ಮುಖ್ಯಮಂತ್ರಿ ಫಡ್ನವಿಸ್ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಅಗ್ರ ಮರಾಠ ನಾಯಕ ಶರದ್‍ಪವಾರ್ ಮತ್ತು ಅವರ ಸಹೋದರನ ಮಗನ ಮೇಲೆ ಅಮಿತ್ ಶಾ ಇಆ ಕತ್ತಿಯನ್ನು ಕಟ್ಟಿದ್ದಾರೆ. ಇನ್ನೊಬ್ಬ ಪ್ರಮುಖ ನಾಯಕ ಪ್ರಫುಲ್ ಪಟೇಲ್‍ಗೂ ಹಗರಣ ಗಂಟು ಕಟ್ಟಲಾಗಿದೆ. ಹೀಗಾಗಿ ಮಾನಸಿಕವಾಗಿ ಸೋತು ಹೋಗಿರುವ ಪಡೆ ಕಣದಲ್ಲಿ ತೊಡೆ ತಟ್ಟುತ್ತಿದ್ದರು ಯಾರಿಗೂ ಕೇಳುತ್ತಿಲ್ಲ.

ಇನ್ನೊಂದೆಡೆ ಮಹಾರಾಷ್ಟ್ರದಲ್ಲಿ ಪೂರ್ಣ 5 ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ 2ನೇ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈಗ 2ನೇ ಇನಿಂಗ್ಸ್‍ಗೆ ಸಿದ್ದವಾಗಿದ್ದಾರೆ. ಎದುರಾಳಿ ಇಲ್ಲದೆ ಅಖಾಡದಲ್ಲಿ ತೊಡೆತಟ್ಟಿ ಹೂಂಕರಿಸುತ್ತಿದ್ದಾರೆ. ಹೈಕಮಾಂಡ್, ಪ್ರಧಾನ ಮಂತ್ರಿ ನರೇಂದ್ರಮೋದಿ ಮತ್ತು ಅಧ್ಯಕ್ಷ ಅಮಿತ್ ಶಾ ಅವರ ಜೊತೆಗೆ ಖSS ಸಂಪೂರ್ಣ ಬೆಂಬಲ ಪಡೆದಿರುವ ದೇವೇಂದ್ರ ಫಡ್ನವೀಸ್‍ಗೆ ಮಹಾರಾಷ್ಟ್ರದಲ್ಲಿ ಪರ್ಯಾಯವಿಲ್ಲದಂತಾಗಿದೆ.

ಕಳೆದ ಬಾರಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಶಿವಸೇನಾ ಮತ್ತು ಬಿಜೆಪಿಯ ಚುನಾವಣಾ ಪೂರ್ವ ಮೈತ್ರಿ ಮೂಡಿಸುವಲ್ಲಿ ಫಡ್ನವೀಸ್ ಸಫಲವಾದರಷ್ಟೇ ಅಲ್ಲ, ಸಾಂಪ್ರದಾಯಿಕವಾಗಿ ದೊಡ್ಡಣ್ಣನಾಗಿದ್ದ ಶಿವಸೇನೆಯನ್ನು ತಮ್ಮನ ಸ್ಥಾನಕ್ಕೆ ತಂದು ನಿಲ್ಲಿಸುವಲ್ಲಿ ಈ ಬ್ರಾಹ್ಮಣ ನಾಯಕನ ತಂತ್ರಗಾರಿಕೆ ಎದ್ದು ಕಾಣುತ್ತದೆ. ಹೀಗಾಗಿ ಈ ಬಾರಿBJP164 ಮತ್ತು ಶಿವಸೇನೆ 124 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ.

ದುರ್ಬಲಗೊಂಡ ಪ್ರತಿಪಕ್ಷಗಳು ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿವೆ. ಹೈಕಮಾಂಡ್‍ನ ಸಂಪೂರ್ಣ ಬೆಂಬಲದಿಂದಾಗಿ ಫಡ್ನವೀಸ್‍ರ ಸ್ವಪಕ್ಷದ ಎದುರಾಳಿಗಳು ಬಾ¯ ಮುದುರಿಕೊಂಡಿದ್ದಾರೆ. ಮರಾಠ ಮೀಸಲಾತಿಯ ಹೋರಾಟವನ್ನು ನಿಭಾಯಿಸಿದ ಮೇಲೆ ದೇವೇಂದ್ರ ಫಡ್ನವೀಸ್‍ರನ್ನು 2ನೇ ಅವಧಿಗೆ ಮುಖ್ಯಮಂತ್ರಿಯಾಗಲು ಸಿದ್ಧವಾಗುವಂತೆ ಮಾಡಿವೆ.
ಪ್ರಬಲ ಮರಾಠ ನಾಯಕ ಶರದ್ ಪವಾರ್ ಫಡ್ನವೀಸ್ ಅವರದು ಪೇಶ್ವಾ ಅಡಳಿತ ಎಂದಿದ್ದರು. ದೊಡ್ಡಣ್ಣನಿಂದ 2ನೇ ಸ್ಥಾನಕ್ಕೆ ತಲ್ಲಲ್ಪಟ್ಟ ಶಿವಸೇನೆಯ ಉದ್ಬವ್ ಠಾಕ್ರೆ ಎಲ್ಲಿ ಭಿನ್ನಾಭಿಪ್ರಾಯಗಳ ಮಧ್ಯೆಯೂ ಃಎP ಜೊತೆಗೆ ಕೈಜೋಡಿಸಿದ್ದಾರೆ. ಇದಕ್ಕೆ ಹಿಂದುತ್ವದ ನಂಟು ಕಾರಣವೆನ್ನುವ ಉದ್ಬವ್ ಶಿವಸೈನಿಕರಿಗೆ ಮುಖ್ಯಮಂತ್ರಿ ಮಾಡಬೇಕೆನ್ನುವ ಕನಸನ್ನು ಕೈಬಿಟ್ಟಿಲ್ಲ.

ಮಹಾರಾಷ್ಟ್ರದ ಆಡಳಿತ ಮಂತ್ರಾಲಯದ 6ನೇ ಮಹಡಿಯ CM ಕಛೇರಿಯಲ್ಲಿ ಶಿವಸೈನಿಕನನ್ನ ಕಾಣಲು ಬಯಸುವ ಅವರಿಗೆ ಮಗ ಆದಿತ್ಯ ಠಾಕ್ರೆ ಸಾಥ್ ಕೊಡುತ್ತಿದ್ದಾರೆ. ಠಾಕ್ರೆ ಕುಟುಂಬದಿಂದ ಚುನಾವಣೆ ಕಣಕ್ಕೆ ಧುಮುಕಿದ ಮೊದಲ ಕುಡಿ ಎಷ್ಟು ಪ್ರಭಾವ ಬೀರುತ್ತಾರೆ ಕಾದು ನೋಡಬೇಕು.
ಹುಲಿಯಂತೆ ಘರ್ಜಿಸುತ್ತಿದ್ದ MNSನ ರಾಜಠಾಕ್ರೆಯನ್ನು ಕೇಂದ್ರ ತನಿಖಾ ತಂಡಗಳ (ED) ಬಲದಿಂದ ಅಮಿತ್‍ಶಾ ಇಲಿಯನ್ನಾಗಿಸಿದ್ದಾರೆ. ಹೀಗಾಗಿ MNCಯ ಪ್ರಭಾವ ಈ ಚುನಾವಣೆಯಲ್ಲಿ ಅಷ್ಟಾಗಿ ಕಂಡುಬರುವುದಿಲ್ಲ. ಇನ್ನು ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ ಬಹುಜನ ಅಘಾದಿ (VBA) ಕೆಲವು ಕ್ಷೇತ್ರಗಳಲ್ಲಿ ಮಾತ್ರ ಗೆಲುವನ್ನು ಕಾಣಬಹುದು. ಉಳಿದೆಡೆ ಬೇರೆಯವರ ಸೋಲು-ಗೆಲುವಿಗೆ ಮಾತ್ರ ಅದು ದೊಡ್ಡ ಮಟ್ಟದಲ್ಲಿ ಕಾರಣವಾಗಬಹುದು.

ಒಟ್ಟಾರೆಯಾಗಿ ಆರ್ಥಿಕ ಹಿನ್ನಡೆ, ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ, ಹೆಚ್ಚುತ್ತಿರುವ ನಿರುದ್ಯೋಗ, ಆಡಳಿತ ವಿರೋಧಿ ಅಲೆ, ಹೆಚ್ಚುತ್ತಿರುವ ಕೋಮು ದಳ್ಳುರಿಗೆ ಈ ಚುನಾವಣೆಯಲ್ಲಿ ಯಾವ ಪಾತ್ರವು ಇಲ್ಲ. ಯಾಕೆಂದರೆ ಮತದಾರ ಪ್ರಭುವಿಗೆ ನಿತ್ಯ ತೊಂದರೆ ಕೊಡುವ ಸಮಸ್ಯೆಗಳು ಮುಖ್ಯವಾಗಿಲ್ಲ. ಮತದಾರ ಪ್ರಭು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನ ಮಂತ್ರಿಯ ಸುತ್ತಾಟ, ಮೈನಾರಿಟಿಗಳನ್ನು ಹೆದರಿಸಲು ಬಳಸುವ NRCಕಾಶ್ಮಿರದ ಸ್ವಾಯತ್ತತೆಯ ಆರ್ಟಿಕಲ್ 370 ಸೇರಿದಂತೆ ಹುಸಿ ರಾಷ್ಟ್ರಿಯ ಅಲೆಯಲ್ಲಿ ತೇಲಿಹೋಗುತ್ತಿದ್ದಾನೆ. ಹೀಗಾಗಿ ನಿತ್ಯ ಸಂಕಟಗಳು ಗೌಣವಾಗಿವೆ.

ಇಷ್ಟೆಲ್ಲಾ ಇದ್ದಾಗ್ಯೂ ಬಿಜೆಪಿಯು ತನ್ನ ಅಭಿವೃದ್ಧಿಕಾರ್ಯದ ಮೇಲೆ ಮತ್ತು ಅಭ್ಯರ್ಥಿಗಳ ಸಾಮಥ್ರ್ಯದ ಮೇಲೆ ಚುನಾವಣೆ ಎದುರಿಸುತ್ತಿಲ್ಲ. ಬದಲಾಗಿ ಚುನಾವಣಾ ಆಯೋಗ, ಕೇಂದ್ರ ತನಿಖಾ ತಂಡಗಳು, (ED, CBI, Income Tax) ಪೊಲೀಸ್ ಮತ್ತು ನ್ಯಾಯಾಂಗದ ಬಲದೊಂದಿಗೆ ಚುನಾವಣಾ ಕಣಕ್ಕಿಳಿದಿದೆ.

ಈ ರೀತಿಯಾಗಿ ಮಹಾರಾಷ್ಟ್ರದ ಚುನಾವಣೆಯು ಒಂದು ರೀತಿಯ ವಾಕ್ ಓವರ್ ಇದ್ದಂತೆ ಎಂದೇ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಹರಿಯಾಣದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಇದನ್ನು ಮೀರಿದ ಫಲಿತಾಂಶ ಎರಡು ರಾಜ್ಯಗಳಲ್ಲಿ ಎಲ್ಲಿ ಬಂದರೂ ಅದು ಪವಾಡವೇ ಸರಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಕ್ಷೌರ ಮಾಡಲು ತಡವಾಗಿ ಬಂದ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿದ ಪೊಲೀಸ್‌ ಅಧಿಕಾರಿ

0
ಕ್ಷೌರಕ್ಕಾಗಿ ಮನೆಗೆ ಕ್ಷೌರಿಕ ತಡವಾಗಿ ಬಂದ ಎಂದು ಪೊಲೀಸ್‌ ಅಧಿಕಾರಿಯೋರ್ವ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿರುವ ಅಮಾನವೀಯ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಬುದೌನ್‌ನ ಪೊಲೀಸ್ ಠಾಣೆಯೊಂದರಲ್ಲಿ ನಡೆದಿದೆ. ಸರ್ಕಲ್ ಆಫೀಸರ್(ಸಿಒ) ಸುನೀಲ್ ಕುಮಾರ್...