HomeUncategorizedವಿವೋ-ಇಂಡಿಯಾ ಸೇರಿ ಇತರ ಕಂಪೆನಿಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

ವಿವೋ-ಇಂಡಿಯಾ ಸೇರಿ ಇತರ ಕಂಪೆನಿಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

- Advertisement -
- Advertisement -

ಚೀನಾದ ಸ್ಮಾರ್ಟ್‌ಫೋನ್ ತಯಾರಕ ವಿವೋ-ಇಂಡಿಯಾ ಮತ್ತು ಇತರ ಕೆಲವು ಕಂಪೆನಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಆರೋಪ ಪಟ್ಟಿಯನ್ನು ಸಲ್ಲಿಸಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ವಿಶೇಷ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ದೂರನ್ನು ದಾಖಲಿಸಿತ್ತು. ಈ ಪ್ರಕರಣದಲ್ಲಿ ವಿವೋ-ಇಂಡಿಯಾವನ್ನು ಆರೋಪಿ ಎಂದು ಹೆಸರಿಸಲಾಗಿದೆ.

ಈ ತನಿಖೆಯಲ್ಲಿ ಲಾವಾ ಇಂಟರ್‌ನ್ಯಾಶನಲ್ ಮೊಬೈಲ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್‌ ಹರಿ ಓಂ ರೈ ಸೇರಿದಂತೆ ನಾಲ್ವರನ್ನು ಈ ಮೊದಲು ತನಿಖಾ ಸಂಸ್ಥೆ ಬಂಧಿಸಿದೆ. ಚೀನಾದ ಪ್ರಜೆ ಗುವಾಂಗ್ವೆನ್ ಅಲಿಯಾಸ್ ಆಂಡ್ರ್ಯೂ ಕುವಾಂಗ್, ಲೆಕ್ಕಪರಿಶೋಧಕರಾದ ನಿತಿನ್ ಗಾರ್ಗ್ ಮತ್ತು ರಾಜನ್ ಮಲಿಕ್ ಅವರನ್ನು ಬಂಧಿಸಲಾಗಿತ್ತು.

ಚೀನಾದ ಪ್ರಜೆಗಳು ಮತ್ತು ಅನೇಕ ಭಾರತೀಯ ಕಂಪನಿಗಳನ್ನು ಒಳಗೊಂಡ ಪ್ರಮುಖ ಮನಿ ಲಾಂಡರಿಂಗ್ ದಂಧೆಯನ್ನು ಭೇದಿಸಲು ಕಳೆದ ವರ್ಷ ಜುಲೈನಲ್ಲಿ ವಿವೋ-ಇಂಡಿಯಾ ಮತ್ತು ಅದರ ಸಂಬಂಧಿತ ವ್ಯಕ್ತಿಗಳ ಮೇಲೆ ಇಡಿ ದಾಳಿ ನಡೆಸಿತ್ತು.

ಭಾರತದಲ್ಲಿ ತೆರಿಗೆ ಪಾವತಿಯನ್ನು ತಪ್ಪಿಸಲು 62,476 ಕೋಟಿ ರೂಪಾಯಿಗಳನ್ನು ವಿವೋ-ಇಂಡಿಯಾ ಚೀನಾಕ್ಕೆ ಕಾನೂನುಬಾಹಿರವಾಗಿ ವರ್ಗಾಯಿಸಿದೆ ಎಂದು ಇಡಿ ಆರೋಪಿಸಿತ್ತು.

ಒಂದು ದಶಕದ ಹಿಂದೆ ಭಾರತದಲ್ಲಿ ಜಂಟಿ ಉದ್ಯಮವನ್ನು ಪ್ರಾರಂಭಿಸಲು ತಮ್ಮ ಕಂಪನಿ ಮತ್ತು ವಿವೋ-ಇಂಡಿಯಾ ಮಾತುಕತೆ ನಡೆಸುತ್ತಿದ್ದರೂ, 2014ರಿಂದ ಚೀನಾದ ಸಂಸ್ಥೆ ಅಥವಾ ಅದರ ಪ್ರತಿನಿಧಿಗಳೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ರೈ ಇತ್ತೀಚೆಗೆ ನ್ಯಾಯಾಲಯಕ್ಕೆ ತಿಳಿಸಿದ್ದರು. ಅವರು ಯಾವುದೇ ಹಣಕಾಸಿನ ಲಾಭವನ್ನು ಪಡೆದಿಲ್ಲ ಅಥವಾ ಅವರು ವಿವೋ-ಇಂಡಿಯಾ ಅಥವಾ ವಿವೋಗೆ ಸಂಬಂಧಿಸಿದ ಯಾವುದೇ ಘಟಕದೊಂದಿಗೆ ಯಾವುದೇ ವಹಿವಾಟಿನಲ್ಲಿ ತೊಡಗಿಸಿಕೊಂಡಿಲ್ಲ ಎಂದು ರೈ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ವಿವೋ-ಇಂಡಿಯಾ, ಗ್ರ್ಯಾಂಡ್ ಪ್ರಾಸ್ಪೆಕ್ಟ್ ಇಂಟರ್‌ನ್ಯಾಶನಲ್ ಕಮ್ಯುನಿಕೇಶನ್ ಪ್ರೈವೇಟ್‌ ಲಿಮಿಟೆಡ್‌ ಸಂಯೋಜಿತ ಕಂಪನಿ, ನಿರ್ದೇಶಕರು, ಷೇರುದಾರರು ಮತ್ತು ಇತರರ ವಿರುದ್ಧ ಕಳೆದ ವರ್ಷ ಡಿಸೆಂಬರ್‌ನಲ್ಲಿ ಪೊಲೀಸ್ ಎಫ್‌ಐಆರ್‌ಗೆ ಸಮಾನವಾದ ಇಡಿ ಎನ್‌ಫೋರ್ಸ್‌ಮೆಂಟ್ ಕೇಸ್ (ಇಸಿಐಆರ್) ದಾಖಲಿಸಿತ್ತು.

GPICPL ಮತ್ತು ಅದರ ಷೇರುದಾರರು ಡಿಸೆಂಬರ್ 2014ರಲ್ಲಿ ನಕಲಿ ಗುರುತಿನ ದಾಖಲೆಗಳು ಮತ್ತು ಸುಳ್ಳು ವಿಳಾಸಗಳನ್ನು ನೀಡಿದ್ದರು  ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಪೊಲೀಸ್ ದೂರು ದಾಖಲಿಸಿತ್ತು.

ಇದನ್ನು ಓದಿ: ಮದ್ರಸಾಗಳಲ್ಲಿ ಧಾರ್ಮಿಕ ಶಿಕ್ಷಣದ ಜೊತೆ ಕನ್ನಡ ಸೇರಿ ಇತರ ವಿಷಯಗಳ ಬೋಧನೆ ಕಡ್ಡಾಯ: ಕೃಷ್ಣ ಭೈರೇಗೌಡ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರ ಕನ್ನಡ “ಲೋಕ” ಲಡಾಯಿ; ಕೇಸರಿಪಡೆಯ ಕಲಹ ಕಾಂಗ್ರೆಸ್‌ಗೆ ವರವಾದೀತೆ?

0
ಉತ್ತರ ಕನ್ನಡದ ಅಷ್ಟೂ ಎಂಟು ವಿಧಾನಸಭಾ ಕ್ಷೇತ್ರಗಳ ಜತೆ ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರು ಸೇರಿಸಿ ರಚಿಸಲಾಗಿರುವ "ಉತ್ತರ ಕನ್ನಡ ಲೋಕಸಭಾ ಕ್ಷೇತ್ರ" ವಿಭಿನ್ನತೆ, ವೈವಿಧ್ಯತೆಗಳ ವಿಶಿಷ್ಟ ಸೀಮೆ. ಭೋರ್ಗರೆವ ಅರಬ್ಬೀ...