Homeಮುಖಪುಟಮಧ್ಯಂತರ ಬಜೆಟ್‌ನಲ್ಲಿ 'ಅದ್ಭುತ ಘೋಷಣೆ’ಗಳು ಇರುವುದಿಲ್ಲ: ನಿರ್ಮಲಾ ಸೀತಾರಾಮನ್

ಮಧ್ಯಂತರ ಬಜೆಟ್‌ನಲ್ಲಿ ‘ಅದ್ಭುತ ಘೋಷಣೆ’ಗಳು ಇರುವುದಿಲ್ಲ: ನಿರ್ಮಲಾ ಸೀತಾರಾಮನ್

- Advertisement -
- Advertisement -

‘ಕೇಂದ್ರ ಸರ್ಕಾರದ ಮುಂಬರುವ ಬಜೆಟ್‌ನಲ್ಲಿ ಯಾವುದೇ ‘ಅದ್ಭುತ ಘೋಷಣೆ’ಗಳು ಇರುವುದಿಲ್ಲ. ಜುಲೈನಲ್ಲಿ ನಿಯಮಿತ ಬಜೆಟ್ ಮಂಡನೆಯಾಗುತ್ತದೆ. ವಿಶೇಷ ಘೋಷಣೆಗಳಿಗಾಗಿ ನೀವು ಅಲ್ಲಿಯವರೆಗೆ ಕಾಯಬೇಕಾಗುತ್ತದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆದ ಸಿಐಐನ ಗ್ಲೋಬಲ್ ಎಕನಾಮಿಕ್ ಪಾಲಿಸಿ ಫೋರಂ-2023 ರಲ್ಲಿ ಭಾಗವಹಿಸಿ ಮಾತನಾಡಿದ ನಿರ್ಮಲಾ, ‘ಮುಂದಿನ ಫೆಬ್ರವರಿ 1ರಂದು ಮಂಡಿಸುವ ಬಜೆಟ್ ಕೇವಲ ‘ವೋಟ್ ಆನ್ ಅಕೌಂಟ್’ ಆಗಿರುತ್ತದೆ. ಮುಂದಿನ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ವೆಚ್ಚವನ್ನು ಸರಿದೂಗಿಸುವ ಬಜೆಟ್ ಆಗಿರುವದರಿಂದ ಯಾವುದೇ ಅದ್ಭುತ ಘೋಷಣೆಗಳಿರುವದಿಲ್ಲ. ವಿಶೇಷ ಬಜೆಟ್‌ಗಾಗಿ ನೀವು ಸಾರ್ವತ್ರಿಕ ಚುನಾವಣೆ ಮುಗಿಯುವವರೆಗೆ ಕಾಯಬೇಕಾಗುತ್ತದೆ’ ಎಂದರು.

ಏನಿದು ವೋಟ್ ಆನ್ ಅಕೌಂಟ್?

‘ವೋಟ್ ಆನ್ ಅಕೌಂಟ್’ ಎಂದು ಕರೆಯಲ್ಪಡುವ ಮಧ್ಯಂತರ ಬಜೆಟ್, ಹೊಸ ಸರ್ಕಾರ ರಚನೆಯಾಗುವವರೆಗೆ ಅಧಿಕಾರದಲ್ಲಿರುವ ಸರ್ಕಾರಕ್ಕೆ ವೆಚ್ಚಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. ಮುಖ್ಯವಾಗಿ ಮಧ್ಯಂತರ ಬಜೆಟ್ ಸರ್ಕಾರದ ವೆಚ್ಚ, ಆದಾಯ, ಹಣಕಾಸಿನ ಕೊರತೆ, ಹಣಕಾಸಿನ ಕಾರ್ಯಕ್ಷಮತೆ ಮತ್ತು ಚುನಾವಣೆವರೆಗಿನ ಅಂದಾಜು ಖರ್ಚುವೆಚ್ಚಗಳನ್ನು ಒಳಗೊಂಡಿದೆ.

ಈ ಮಧ್ಯಂತರ ಬಜೆಟ್‌ನಲ್ಲಿ ಯಾವುದೇ ಪ್ರಮುಖ ನೀತಿಗಳನ್ನು ಘೋಷಣೆ ಮಾಡುವುದಿಲ್ಲ. ಇದರಿಂದ ಸರ್ಕಾರಕ್ಕೂ ಭರವಸೆ ನೀಡುವು ಅನಿವಾರ್ಯತೆ ಇರುವುದಿಲ್ಲ. ಚುನಾವಣಾ ಆಯೋಗದ ನೀತಿ ಸಂಹಿತೆಯ ಪ್ರಕಾರ, ಮಧ್ಯಂತರ ಬಜೆಟ್ ಯಾವುದೇ ಪ್ರಮುಖ ಯೋಜನೆಯನ್ನು ಒಳಗೊಂಡಿರಬಾರದು. ಏಕೆಂದರೆ, ಅವರ ಘೊಷಣೆಗಳು ಆಡಳಿತಾರೂಢ ಸರ್ಕಾರದ ಪರವಾಗಿ ಮತದಾರರ ಮೇಲೆ ಪ್ರಭಾವ ಬೀರಬಹುದು ಎಂದು ಹೇಳುತ್ತದೆ.

ಸಂಸತ್ತು ಮಧ್ಯಂತರ ಬಜೆಟ್ ಮೂಲಕ ‘ವೋಟ್ ಆನ್ ಅಕೌಂಟ್’ ಅನ್ನು ಅಂಗೀಕರಿಸುತ್ತದೆ. ವೋಟ್-ಆನ್-ಅಕೌಂಟ್ ಅನ್ನು ಪ್ರಸ್ತುತ ಸರ್ಕಾರವು ನೌಕರರ ಸಂಬಳ ಮತ್ತು ಪ್ರಗತಿಯಲ್ಲಿರುವ ಕಾಮಗಾರಿಗಳ ವೆಚ್ಚಗಳಂತಹ ಅಗತ್ಯ ಸರ್ಕಾರಿ ವೆಚ್ಚಗಳಿಗೆ ಸಂಸತ್ತಿನ ಅನುಮೋದನೆಯನ್ನು ಪಡೆಯುವ ಒಂದು ಪ್ರಕ್ರಿಯೆ ಎಂದು ವಿವರಿಸಬಹುದು.

ಇದನ್ನೂ ಓದಿ; ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣ ವಚನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಗ್ನಿಪಥ ಯೋಜನೆ ಬಗ್ಗೆ ಮಾತನಾಡದಂತೆ ಚುನಾವಣಾ ಆಯೋಗ ಕಾಂಗ್ರೆಸ್‌ಗೆ ನಿರ್ದೇಶನ ನೀಡಿದ್ದು ತಪ್ಪು: ಚಿದಂಬರಂ

0
ಅಗ್ನಿಪಥ ಯೋಜನೆಯನ್ನು ರಾಜಕೀಯಗೊಳಿಸದಂತೆ ಚುನಾವಣಾ ಆಯೋಗವು ತನ್ನ ಪಕ್ಷಕ್ಕೆ ನಿರ್ದೇಶನ ನೀಡಿರುವುದು ಅತ್ಯಂತ ತಪ್ಪು, ಸರ್ಕಾರದ ನೀತಿಯನ್ನು ಟೀಕಿಸುವುದು ವಿರೋಧ ಪಕ್ಷದ ಹಕ್ಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಪ್ರತಿಪಾದಿಸಿದರು. ಚುನಾವಣಾ...