Homeಮುಖಪುಟ100ನೇ ದಿನಕ್ಕೆ ಕಾಲಿಟ್ಟ ಯುದ್ಧ: ನೆತನ್ಯಾಹು ಪ್ರತಿಜ್ಞೆ

100ನೇ ದಿನಕ್ಕೆ ಕಾಲಿಟ್ಟ ಯುದ್ಧ: ನೆತನ್ಯಾಹು ಪ್ರತಿಜ್ಞೆ

- Advertisement -
- Advertisement -

ಗಾಝಾ ಮೇಲೆ ಇಸ್ರೇಲ್‌ ಬಾಂಬ್‌ ದಾಳಿ 100ನೇ ದಿನಕ್ಕೆ ಕಾಲಿಟ್ಟಿದೆ. ಗಾಝಾ ಪಟ್ಟಿಯಲ್ಲಿ ಅಪಾರ ಜೀವಹಾನಿ ಮತ್ತು ಭಯದ ಬಗ್ಗೆ ಅಂತರಾಷ್ಟ್ರೀಯ ಸಮುದಾಯದ ಎಚ್ಚರಿಕೆ, ಪ್ರಾದೇಶಿಕ ಘರ್ಷಣೆಯ ಭೀತಿ ಮಧ್ಯೆ ಇದೀಗ ಯುದ್ಧವನ್ನು ಮತ್ತೆ ಮುಂದುವರಿಸುವುದಾಗಿ ಇಸ್ರೇಲ್‌ ಪ್ರತಿಜ್ಞೆ ಮಾಡಿದೆ.

ಗಾಝಾ ಮೇಲಿನ ಮಿಲಿಟರಿಯ ಆಕ್ರಮಣದ ವಿರುದ್ಧ ತಡೆಯಾಜ್ಞೆಯ ಕುರಿತು ಅಂತರಾಷ್ಟ್ರೀಯ ನ್ಯಾಯಾಲಯದ ಆದೇಶಕ್ಕೆ ಎದುರು ನೋಡುತ್ತಿರುವಾಗ ಇಸ್ರೇಲ್‌ ಒಟ್ಟು ವಿಜಯದವರೆಗೆ ಯುದ್ಧ ಮುಂದುವರಿಸುವ ಪ್ರತಿಜ್ಞೆಯನ್ನು ಮಾಡಿದೆ.

ಅ.7ರಂದು ಇಸ್ರೇಲ್‌ ಯುದ್ಧ ಘೋಷಿಸಿ ಗಾಝಾ ಮೇಲೆ ದಾಳಿಯನ್ನು ಪ್ರಾರಂಭಿಸಿದ ಬಳಿಕ 23,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರನ್ನು ಹತ್ಯೆ ಮಾಡಿದೆ. ಅವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಗಾಝಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ನಾವು ಸಂಪೂರ್ಣ ವಿಜಯದವರೆಗೆ, ನಾವು ನಮ್ಮ ಎಲ್ಲಾ ಗುರಿಗಳನ್ನು ಸಾಧಿಸುವವರೆಗೆ ಯುದ್ಧವನ್ನು ಮುಂದುವರೆಸುತ್ತೇವೆ ಎಂದು ನೆತನ್ಯಾಹು ದೂರದರ್ಶನದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಹಮಾಸ್‌ನ್ನು ನಿರ್ಮೂಲನೆ ಮಾಡುವುದು, ನಮ್ಮ ಎಲ್ಲಾ ಒತ್ತೆಯಾಳುಗಳನ್ನು ವಾಪಾಸ್ಸು ಕರೆಸಿಕೊಳ್ಳುವುದು ಮತ್ತು ಗಾಝಾ ಮೇಲೆ ಎಂದಿಗೂ ಮತ್ತೆ ಇಸ್ರೇಲ್‌ ದಾಳಿ ನಡೆಸದಂತೆ ಖಾತ್ರಿಪಡಿಸಿಕೊಳ್ಳುವುದು ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.

ಲೆಬನಾನ್‌ನ ಹಿಜ್ಬುಲ್ಲಾ ಮತ್ತು ಯೆಮೆನ್‌ನ ಹೌತಿಗಳು ಪ್ಯಾಲೆಸ್ತೀನಿಯನ್ನರಿಗೆ ಬೆಂಬಲಿಸಿರುವುದು ವ್ಯಾಪಕ ಸಂಘರ್ಷದ ಭೀತಿಯನ್ನು ಹೆಚ್ಚಿಸಿವೆ. ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ಮೇಲೆ ಹೌತಿ ದಾಳಿಗಳಿಗೆ ಪ್ರತಿಯಾಗಿ ಯೆಮೆನ್‌ನಲ್ಲಿನ ಹೌತಿ ಕೇಂದ್ರಿತ ಪ್ರದೇಶಗಳ ಮೇಲೆ ಅಮೆರಿಕ ಗುರುವಾರ ಮತ್ತು ಶುಕ್ರವಾರ ವೈಮಾನಿಕ ದಾಳಿಗಳನ್ನು ನಡೆಸಿದೆ. ಇದೇ ವೇಳೆ ಇಸ್ರೇಲ್-ಲೆಬನಾನ್ ಗಡಿಯಾದ್ಯಂತ ಘರ್ಷಣೆಗಳು ಮುಂದುವರಿದಿದೆ.

ಭಾನುವಾರ ಲೆಬನಾನ್‌ನಿಂದ ಉಡಾವಣೆಯಾದ ಕ್ಷಿಪಣಿಯು ಉತ್ತರ ಇಸ್ರೇಲ್‌ನ ಮನೆಯೊಂದಕ್ಕೆ ಬಡಿದಿದೆ. ಘಟನೆಯಲ್ಲಿ ಇಬ್ಬರ ಹತ್ಯೆ ನಡೆದಿದೆ. ಲೆಬನಾನ್‌ನಲ್ಲಿನ ಹೆಜ್ಬೊಲ್ಲಾ ಕೇಂದ್ರಗಳ ಮೇಲೆ ತನ್ನ ಫೈಟರ್ ಜೆಟ್‌ಗಳು ದಾಳಿ ಮಾಡಿದೆ ಮತ್ತು ಗುಂಡಿನ ಚಕಮಕಿ ನಡೆದಿದೆ ಎಂದು ಇಸ್ರೇಲ್‌ ಮಿಲಿಟರಿ ಹೇಳಿದೆ.

ಉತ್ತರದ ಗಡಿ ಪ್ರದೇಶಗಳಿಂದ ಸಾವಿರಾರು ಇಸ್ರೇಲ್‌ ನಾಗರಿಕರನ್ನು ಸ್ಥಳಾಂತರಿಸಲಾಗಿದ್ದು, ಗಡಿ ಪ್ರದೇಶದಿಂದ ಸಾವಿರಾರು ಲೆಬನಾನಿನ ನಾಗರಿಕರು ಕೂಡ ನಿವೇಶನಗಳನ್ನು ಬಿಟ್ಟು ತೆರಳಿದ್ದಾರೆ. ಭಾನುವಾರ ಹಿಜ್ಬುಲ್ಲಾದ ನಾಯಕ ಹಸನ್ ನಸ್ರಲ್ಲಾ ಅವರು ಗಾಝಾ ಮೇಲೆ ಇಸ್ರೇಲ್‌ ಯುದ್ಧ 99 ದಿನಕ್ಕೆ ಕಾಲಿಡುತ್ತಿದ್ದಂತೆ ನಾವು ಯುದ್ಧಕ್ಕೆ ಸಿದ್ಧರಿದ್ದೇವೆ. ನಾವು ಅದಕ್ಕೆ ಹೆದರುವುದಿಲ್ಲ ಎಂದು ಹೇಳಿಕೆಯನ್ನು ಕೂಡ ನೀಡಿದ್ದಾರೆ. ಇಸ್ರೇಲ್‌ ಗಾಝಾ ಯುದ್ಧ ಇದೀಗ ನಿಧಾನವಾಗಿ ಪ್ರಾದೇಶಿಕ ಘರ್ಷಣೆಯಾಗಿ ಮಾರ್ಪಟ್ಟಿದೆ.

ಇದನ್ನು ಓದಿ: ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ರಾಜಕೀಯ ಹಸ್ತಕ್ಷೇಪ ಸರಿಯಲ್ಲ: ಪುರಿ ಶಂಕರಾಚಾರ್ಯ

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...