Photo Courtesy: IndianLink News

ಸಿಖ್ಖರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಭಾರತೀಯ ಮೂಲದ ವ್ಯಕ್ತಿಯನ್ನು ಗಡಿಪಾರು ಮಾಡಿರುವುದಾಗಿ ಆಸ್ಟ್ರೇಲಿಯಾದ ವಲಸೆ, ಪೌರತ್ವ ಮತ್ತು ಬಹುಸಂಸ್ಕೃತಿ ವ್ಯವಹಾರಗಳ ಸಚಿವರು ತಿಳಿಸಿದ್ದಾರೆ.

ಭಾರತದ ಹರಿಯಾಣ ರಾಜ್ಯದ ವಿಶಾಲ್ ಜೂದ್ ಎನ್ನುವ 25 ವರ್ಷದ ವ್ಯಕ್ತಿ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದನು. ಆದರೆ ಆತ 2020ರ ಸೆಪ್ಟಂಬರ್ ಮತ್ತು 2021ರ ಫೆಬ್ರವರಿಯಲ್ಲಿ ಸಿಖ್ಖರ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ತಪ್ಪಿತಸ್ಥನೆಂದು ಘೋಷಿಸಲಾಗಿತ್ತು. ಅದಕ್ಕಾಗಿ ಆತನಿಗೆ ಒಂದು ವರ್ಷದ ಜೈಲು ಶಿಕ್ಷೆ ಸಹ ವಿಧಿಸಲಾಗಿತ್ತು.

ಆಸ್ಟ್ರೇಲಿಯಾದ ಸಾಮಾಜಿಕ ಒಗ್ಗಟ್ಟನ್ನು ಹಾಳು ಮಾಡುವ ಪ್ರಯತ್ನಗಳನ್ನು ಸಹಿಸಲಾಗುವುದಿಲ್ಲ ಎಂದು ಟ್ವೀಟ್ ಮಾಡಿರುವ ಆಸ್ಟ್ರೇಲಿಯಾದ ವಲಸೆ ಮತ್ತು ಪೌರತ್ವ ಸಚಿವ ಅಲೆಕ್ಸ್ ಹಾಕ್ ಆತನನ್ನು ಬಿಡುಗಡೆಯಾದ ನಂತರ ಭಾರತಕ್ಕೆ ಇರುವ ಮೊದಲ ವಿಮಾನದಲ್ಲಿ ಆಸ್ಟ್ರೇಲಿಯಾದಿಂದ ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ವಿಶಾಲ್ ಜೂದ್ ವಿರುದ್ಧ ಸಿಖ್ಖರ ಮೇಲಿನ ಹಲ್ಲೆ ಕುರಿತು ಹತ್ತು ಪ್ರಕರಣಗಳು ದಾಖಲಾಗಿದ್ದವು. ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್‌ರವರು ಪ್ರಕರಣಗಳನ್ನು ಕೈಬಿಡುವಂತೆ ಆಸ್ಟ್ರೇಲಿಯಾ ಸರ್ಕಾರಕ್ಕೆ ಒತ್ತಾಯಿಸಿದ್ದರು. 7 ಪ್ರಕರಣಗಳನ್ನು ಕೈಬಿಟ್ಟ ಆಸ್ಟ್ರೇಲಿಯಾ ಸರ್ಕಾರ 3 ಪ್ರಕರಣಗಳಲ್ಲಿ ಆತ ತಪ್ಪಿತಸ್ಥ ಎಂದು ಘೋಷಿಸಿತ್ತು. ಇದೇ ಸಂದರ್ಭದಲ್ಲಿ ಆತ ಖಾಲಿಸ್ತಾನಿ ಬೆಂಬಲಿಗ ಸಿಖ್ಖರ ವಿರುದ್ಧವೆಂದು ಜೂದ್ ಪರ ಮೆರವಣಿಗೆಗಳು ನಡೆದಿದ್ದವು. ಅಲ್ಲದೇ ಆತನನ್ನು ಭಾರತದಲ್ಲಿ ಸ್ವಾಗತಿಸಿ ಮೆರವಣಿಗೆ ಸಹ ನಡೆಸಲಾಗಿದೆ ಎಂದು ವರದಿಯಾಗಿವೆ.


ಇದನ್ನೂ ಓದಿ: ಉತ್ತರ ಪ್ರದೇಶ: ನ್ಯಾಯಾಲಯ ಅಂಗಳದಲ್ಲಿ ವಕೀಲನಿಗೆ ಗುಂಡಿಕ್ಕಿ ಹತ್ಯೆ

LEAVE A REPLY

Please enter your comment!
Please enter your name here