Homeಮುಖಪುಟವಿಧಾನಸಭಾ ಫಲಿತಾಂಶ: ನಾಗಲ್ಯಾಂಡ್, ತ್ರಿಪುರದಲ್ಲಿ ಬಿಜೆಪಿ ಮುನ್ನಡೆ - ಮೇಘಾಲಯದಲ್ಲಿ NPP ಮುನ್ನಡೆ

ವಿಧಾನಸಭಾ ಫಲಿತಾಂಶ: ನಾಗಲ್ಯಾಂಡ್, ತ್ರಿಪುರದಲ್ಲಿ ಬಿಜೆಪಿ ಮುನ್ನಡೆ – ಮೇಘಾಲಯದಲ್ಲಿ NPP ಮುನ್ನಡೆ

- Advertisement -
- Advertisement -

ಮೂರು ರಾಜ್ಯಗಳಲ್ಲಿ ಫೆಬ್ರವರಿಯಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಇಂದು ಆರಂಭವಾಗಿದೆ. ಆರಂಭಿಕ ಹಂತಗಳ ಮತ ಎಣಿಕೆಯ ಪ್ರಕಾರ ನಾಗಲ್ಯಾಂಡ್, ತ್ರಿಪುರದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಮುನ್ನಡೆ ಸಾಧಿಸಿದರೆ, ಮೇಘಾಲಯದಲ್ಲಿ NPP ಅಲ್ಪ ಮುನ್ನಡೆ ಕಾಯ್ದುಕೊಂಡಿದೆ.

ಮೂರು ರಾಜ್ಯಗಳು ತಲಾ 60 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿವೆ. ಬಹುಮತಕ್ಕೆ 31 ಸ್ಥಾನಗಳ ಅಗತ್ಯವಿದೆ. ಸದ್ಯದ ಮತ ಎಣಿಕೆಯ ಪ್ರಕಾರದ ಮುನ್ನಡೆ ಈ ಕೆಳಗಿನಂತಿದೆ.

ತ್ರಿಪುರ

ಬಿಜೆಪಿ: 30 (ಮುನ್ನಡೆ)

ಕಾಂಗ್ರೆಸ್ ಮತ್ತು ಎಡ ಪಕ್ಷಗಳ ಮೈತ್ರಿ: 17

TIPRA: 12

ಇತರರು: 01

ಈಗಿನ ಮುನ್ನಡೆಯಂತೆಯೆ ಅಂತಿಮ ಫಲಿತಾಂಶ ಬಂದಲ್ಲಿ ತ್ರಿಪುರದಲ್ಲಿ ಮತ್ತೊಮ್ಮೆ ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ.

ನಾಗಲ್ಯಾಂಡ್

ಎನ್‌ಡಿಪಿಪಿ ಮತ್ತು ಬಿಜೆಪಿ ಮೈತ್ರಿಕೂಟ: 34

ಎನ್‌ಪಿಎಫ್: 05

ಕಾಂಗ್ರೆಸ್: 03

ಇತರರು: 18

ಈಗಿನ ಮುನ್ನಡೆಯಂತೆಯೆ ಅಂತಿಮ ಫಲಿತಾಂಶ ಬಂದಲ್ಲಿ ನಾಗಲ್ಯಾಂಡ್‌ನಲ್ಲಿ ಮತ್ತೊಮ್ಮೆ ಎನ್‌ಡಿಪಿಪಿ ಮತ್ತು ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ.

2018ರ ಬಲಾಬಲ

ಬಿಜೆಪಿ 12, ಎನ್‌ಡಿಪಿಪಿ 17, ಎನ್‌ಪಿಎಫ್ 26, ಎನ್‌ಪಿಪಿ 02 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು.

ಮೇಘಾಲಯ

ಎನ್‌ಪಿಪಿ: 25

ಟಿಎಂಸಿ: 06

ಕಾಂಗ್ರೆಸ್: 06

ಯುಡಿಪಿ: 06

ಬಿಜೆಪಿ: 07

ಇತರರು: 10

ಈಗಿನ ಮುನ್ನಡೆಯಂತೆಯೆ ಅಂತಿಮ ಫಲಿತಾಂಶ ಬಂದಲ್ಲಿ ಮೇಘಾಲಯದಲ್ಲಿ ಎನ್‌ಪಿಪಿ ಇತರ ಪಕ್ಷಗಳ ಮೈತ್ರಿಯೊಂದಿಗೆ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ. ಅದು ಕಳೆದ ಬಾರಿ ಬಿಜೆಪಿ ಜೊತೆ ಸೇರಿ ಆಡಳಿತ ನಡೆಸಿತ್ತು. ಆದರೆ ಚುನಾವಣೆಗೆ 1 ತಿಂಗಳು ಇರುವಂತೆ ಮೈತ್ರಿಯಿಂದ ಹೊರಬಂದು ಸ್ವತಂತ್ರವಾಗಿ ಚುನಾವಣೆ ಎದುರಿಸಿತ್ತು.

2018ರ ಬಲಾಬಲ

ಕಾಂಗ್ರೆಸ್ – 21, ಎನ್‌ಪಿಪಿ 19, ಯುನೈಟೈಡ್ ಡೆಮಾಕ್ರಟಿಕ್ ಪಾರ್ಟಿ 06, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ 04 ಮತ್ತು ಬಿಜೆಪಿ 02 ಕಡೆಗಳಲ್ಲಿ ಜಯ ಗಳಿಸಿತ್ತು.

ಇದನ್ನೂ ಓದಿ: ಸಿಸೋಡಿಯಾ, ಜೈನ್ ಬಿಜೆಪಿ ಸೇರಿದರೆ ನಾಳೆಯೇ ಜೈಲಿನಿಂದ ಹೊರಬರುತ್ತಾರೆ: ಅರವಿಂದ್ ಕೇಜ್ರಿವಾಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...