Homeಮುಖಪುಟಕಾರವಾನ್ ಪತ್ರಕರ್ತರ ಮೇಲೆ ಹಲ್ಲೆ: ಪೋಲೀಸರಿಂದ ವರದಿ ಕೇಳಿದ ಪ್ರೆಸ್ ಕೌನ್ಸಿಲ್

ಕಾರವಾನ್ ಪತ್ರಕರ್ತರ ಮೇಲೆ ಹಲ್ಲೆ: ಪೋಲೀಸರಿಂದ ವರದಿ ಕೇಳಿದ ಪ್ರೆಸ್ ಕೌನ್ಸಿಲ್

ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಪತ್ರಕರ್ತರ ಮೇಲಿನ ದಾಳಿಯನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಪೊಲೀಸರು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

- Advertisement -
- Advertisement -

ಆಗಸ್ಟ್ 11 ರಂದು ಕಾರವಾನ್ ನಿಯತಕಾಲಿಕೆಯ ಪತ್ರಕರ್ತತ ಮೇಲೆ ನಡೆದ ಹಲ್ಲೆಯ ಕುರಿತ ವರದಿ ನೀಡುವಂತೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾವು ದೆಹಲಿ ಪೋಲೀಸರು ಮತ್ತು ದೆಹಲಿಯ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ.

ಪತ್ರಕರ್ತರ ಮೇಲಿನ ದಾಳಿಯ ಕುರಿತು ಸ್ವಯಂ-ಪ್ರಕರಣ ದಾಖಲಿಸಿಕೊಂಡು ಪ್ರೆಸ್ ಕೌನ್ಸಿಲ್ ದೆಹಲಿ ಪೋಲೀಸರು ಮತ್ತು ಮುಖ್ಯ ಕಾರ್ಯದರ್ಶಿಯವರಿಂದ ವರದಿ ಕೇಳಲಾಗಿದೆ ಎಂದು ಟ್ವೀಟ್ ಮಾಡಿದೆ.

ಕಾರವಾನ್ ನಿಯತಕಾಲಿಕೆಯ ಮೂವರು ಪತ್ರಕರ್ತರು ಆಗಸ್ಟ್ 11 ರಂದು ಈಶಾನ್ಯ ದೆಹಲಿಯ ಸುಭಾಷ್ ಮೊಹಲ್ಲಾದ ಬಳಿ ವರದಿ ಮಾಡುತ್ತಿದ್ದಾಗ ಜನರ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿತ್ತು.

ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿಪೂಜೆ ಸಮಾರಂಭದ ನಂತರ ಆಗಸ್ಟ್ 5 ರ ರಾತ್ರಿ ಈ ಪ್ರದೇಶದಲ್ಲಿ ಭುಗಿಲೆದ್ದ ಕೋಮು ಉದ್ವಿಗ್ನತೆಯನ್ನು, ಪತ್ರಕರ್ತರಾದ ಪ್ರಬ್ಜಿತ್ ಸಿಂಗ್, ಶಾಹಿದ್ ತಂತ್ರೆ ಮತ್ತು ಅವರ ಸಹೋದ್ಯೋಗಿ ಸುದ್ಧಿ ಮಾಡುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆದಿದೆ.

“ನಾನು ಮಧ್ಯಪ್ರವೇಶಿಸದಿದ್ದಿದ್ದರೆ, ಶಾಹಿದ್ ತಂತ್ರೆಯನ್ನು ಆತ ಒಬ್ಬ ಮುಸ್ಲಿಂ ಎಂಬ ಕಾರಣಕ್ಕೆ ಆ ಜನರಗುಂಪು ಅವನನ್ನು ಹೊಡೆದು ಸಾಯಿಸುತ್ತಿತ್ತು” ಎಂದು ಪ್ರಬ್ಜಿತ್ ಸಿಂಗ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

“ಪತ್ರಕರ್ತರ ಮೇಲಿನ ಹಲ್ಲೆಯು ಅಪಾಯಕಾರಿ ಬೆಳವಣಿಗೆಯನ್ನು ತೋರಿಸುತ್ತದೆ. ಅಲ್ಲಿನ ಜನರು ಪೋಲೀಸರ ಎದುರೇ ಪತ್ರಕರ್ತರ ಮೇಲೆ ಹಲ್ಲೆ ನಡೆಸುತ್ತಾರೆಂದರೆ ಅವರಿಗೆ ಪೋಲೀಸರ ಮೇಲೆ ಭಯವಿಲ್ಲ ಎಂಬುದಾಗಿ ಅರ್ಥೈಸಿಕೊಳ್ಳಬಹುದು, ಅಥವಾ ಪೋಲೀಸರೇ ಅಸಡ್ಡೆಯನ್ನು ತೋರಿಸಿದ್ದಾರೆ ಎಂಬುದಾಗಿ ತಿಳಿದುಕೊಳ್ಳಬಹುದು” ಎಂದು ಕಾರವಾನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಆಗಸ್ಟ್ 13 ರಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಆಯೋಜಿಸಿದ್ದ ಸಭೆಯಲ್ಲಿ ಪತ್ರಕರ್ತರು, ‘ದೆಹಲಿ ಪೊಲೀಸರು ಅಸಹಾಯಕರಾಗಿ, ಭಯಗೊಂಡಿದ್ದರು’. ಅವರು ನಮ್ಮ ರಕ್ಷಣೆಗೆ ಏನೇನೂಮಾಡಲಿಲ್ಲ ಎಂದು ಹೇಳಲಾಗಿದೆ.

ಮೂವರು ಪತ್ರಕರ್ತರ ಮೇಲೆ ನಡೆದ ದಾಳಿಯ ಬಗ್ಗೆ ಹಲವಾರು ಪತ್ರಕರ್ತರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ, ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಪತ್ರಕರ್ತರ ಮೇಲಿನ ದಾಳಿಯನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಪೊಲೀಸರು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.


ಇದನ್ನೂ ಓದಿ: ಕಳೆದೊಂದು ವಾರದಲ್ಲಿ 8 ಪತ್ರಕರ್ತರ ಮೇಲೆ ಹಲ್ಲೆ: ತೀವ್ರ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...