Homeಮುಖಪುಟಕಳೆದೊಂದು ವಾರದಲ್ಲಿ 8 ಪತ್ರಕರ್ತರ ಮೇಲೆ ಹಲ್ಲೆ: ತೀವ್ರ ಆಕ್ರೋಶ

ಕಳೆದೊಂದು ವಾರದಲ್ಲಿ 8 ಪತ್ರಕರ್ತರ ಮೇಲೆ ಹಲ್ಲೆ: ತೀವ್ರ ಆಕ್ರೋಶ

ಬೆಂಗಳೂರಿನಲ್ಲಿ ಆಗಸ್ಟ್ 11 ರಂದು ನಡೆದ ಹಿಂಸಾಚಾರದಲ್ಲಿ ಪೊಲೀಸ್ ತೆಗೆದುಕೊಂಡ ಕ್ರಮಗಳ ಕುರಿತು ವರದಿ ಮಾಡುವಾಗ ಇಂಡಿಯಾ ಟುಡೆ, ದಿ ನ್ಯೂಸ್ ಮಿನಿಟ್ ಮತ್ತು ಸುವರ್ಣ ನ್ಯೂಸ್‌ನ ಐದು ಪತ್ರಕರ್ತರ ಮೇಲೆ ಬೆಂಗಳೂರು ಪೊಲೀಸರು ಹಲ್ಲೆ ನಡೆಸಿದ್ದಾರೆ.

- Advertisement -
- Advertisement -

ದೇಶದಲ್ಲಿ ಪತ್ರಕರ್ತರ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ಖಂಡಿಸಿ, ಹಲವಾರು ಪತ್ರಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. ಹಲ್ಲೆ ತಡೆಗೆ ಆಗ್ರಹಿಸಿ ಆನ್‌ಲೈನ್ ಅಭಿಯಾನವನ್ನು ಆರಂಭಿಸಿದ್ದಾರೆ.

ಕಳೆದ ವಾರವೊಂದರಲ್ಲೆ ಎರಡು ಪ್ರತ್ಯೇಕ ಘಟನೆಗಳಲ್ಲಿ ಎಂಟು ಪತ್ರಕರ್ತರು ತಮ್ಮ ಕೆಲಸ ನಿರ್ವಹಿಸುವಾಗ ಹಲ್ಲೆಗೊಳಗಾಗಿದ್ದಾರೆ. ದೆಹಲಿ ಮೂಲದ ಕಾರವಾನ್ ನಿಯತಕಾಲಿಕೆಗೆ ಸೇರಿದ ಶಾಹಿದ್ ತಂತ್ರ, ಪ್ರಬ್ಜಿತ್ ಸಿಂಗ್ ಮತ್ತು ಮಹಿಳಾ ಪತ್ರಕರ್ತರ ಮೇಲೆ ಈಶಾನ್ಯ ದೆಹಲಿಯಲ್ಲಿ ಜನಸಮೂಹವೊಂದು ಹಲ್ಲೆ ನಡೆಸಿದೆ.

ಬೆಂಗಳೂರಿನಲ್ಲಿ ಆಗಸ್ಟ್ 11 ರಂದು ನಡೆದ ಹಿಂಸಾಚಾರದಲ್ಲಿ ಪೊಲೀಸ್ ತೆಗೆದುಕೊಂಡ ಕ್ರಮಗಳ ಕುರಿತು ವರದಿ ಮಾಡುವಾಗ ಇಂಡಿಯಾ ಟುಡೆ, ದಿ ನ್ಯೂಸ್ ಮಿನಿಟ್ ಮತ್ತು ಸುವರ್ಣ ನ್ಯೂಸ್‌ನ ಐದು ಪತ್ರಕರ್ತರ ಮೇಲೆ ಬೆಂಗಳೂರು ಪೊಲೀಸರು ಹಲ್ಲೆ ನಡೆಸಿದ್ದಾರೆ.

ದೈಹಿಕ ಹಲ್ಲೆಯಿಂದ ಆರಂಭವಾಗಿ ಸುಳ್ಳು ಕೇಸ್‌ ಹಾಕುವವರೆಗೆ ಪತ್ರಕರ್ತರು ಕೆಲಸ ನಿರ್ವಹಿಸುವಾಗ ನಾನಾ ರೀತಿಯ ತೊಂದರೆಗಳನ್ನು ಎದರಿಸುತ್ತಿದ್ದಾರೆ. ಕಳೆದ ವರ್ಷದಲ್ಲಿ ಈ ದಾಳಿಗಳು ನಾಟಕೀಯವೆಂಬಂತೆ ಹೆಚ್ಚಾಗಿವೆ. ಅದರಲ್ಲೂ ವಿಶೇಷವಾಗಿ ದೆಹಲಿ ಗಲಭೆಗಳು ಮತ್ತು ಕೊರೊನಾ ಸಾಂಕ್ರಾಮಿಕದಿಂದ ವಿಧಿಸಲಾದ ಲಾಕ್‌ಡೌನ್‌ನಲ್ಲಿನ ಸರ್ಕಾರದ ನ್ಯೂನತೆಗಳ ಬಗ್ಗೆ ವರದಿ ಮಾಡುತ್ತಿರುವವರ ಮೇಲೆ ಹಲ್ಲೆ, ದಾಳಿ ನಡೆಯುತ್ತಲೇ ಇದೆ ಎಂಬ ಆರೋಪ ಕೇಳಿಬಂದಿದೆ.

ಕಾಶ್ಮೀರ ಮತ್ತು ಛತ್ತೀಸ್‌ಗಢದ ಸಂಘರ್ಷ ಪ್ರದೇಶಗಳಲ್ಲಿನ ಪತ್ರಕರ್ತರನ್ನು ನಿಯಮಿತವಾಗಿ ಬೆದರಿಸಲಾಗುತ್ತಿದ್ದು, ಪ್ರಶ್ನಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ಹಾಗಾಗಿ ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲು ಮತ್ತು ಪತ್ರಕರ್ತರು ನಿರ್ಭೀತಿಯಿಂದ ಕೆಲಸ ಮಾಡುವ ವಾತವಾರಣಕ್ಕೆ ಆಗ್ರಹಿಸಿ ಈ ಆನ್‌ಲೈನ್ ಅಭಿಯಾನ ಆರಂಭವಾಗಿದೆ.

ಹಲವಾರು ಪತ್ರಕರ್ತರು ದುಷ್ಕರ್ಮಿಗಳ ವಿರುದ್ಧ ಕ್ರಮಕೈಗೊಳ್ಳಲು ಒತ್ತಾಯಿಸುತ್ತಿದ್ದಂತೆ, #StopMediaLockdown ಎಂದು ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ.

ದಿ ವೈರ್‌ನ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್, “ಉದ್ದೇಶಪೂರ್ವಕ ದಾಳಿ, ಸುಳ್ಳು ಪ್ರಕರಣಗಳು, ಪೊಲೀಸ್ ಹಿಂಸಾಚಾರವನ್ನು ನಿಲ್ಲಿಸಿ” ಎಂದು ಟ್ವೀಟ್ ಮಾಡಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ಅಯೋಧ್ಯೆಯಲ್ಲಿ ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ಹಾಜರಾಗುವ ಯೋಗಿ ಆದಿತ್ಯನಾಥ್ ಸರ್ಕಾರದ ಕ್ರಮಗಳ ಕುರಿತು ವರದಿಯನ್ನು ಪ್ರಕಟಿಸಿದ್ದಕ್ಕಾಗಿ ದಿ ವೈರ್ ಮತ್ತು ವರದರಾಜನ್ ವಿರುದ್ಧ ಎರಡು ಎಫ್‌ಐಆರ್ ದಾಖಲಿಸಲಾಗಿದೆ.

ಸ್ಕ್ರಾಲ್‌ನ ಸಂಪಾದಕ ನರೇಶ್ ಫರ್ನಾಂಡಿಸ್ “ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿನಿಧಿಸುವ ಕ್ಷೇತ್ರವಾದ ವಾರಣಾಸಿಯ ನಿವಾಸಿಗಳು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ವರದಿ ಮಾಡಿದ್ದಕ್ಕಾಗಿ ವೆಬ್‌ಸೈಟ್‌ನ ಕಾರ್ಯನಿರ್ವಾಹಕ ಸಂಪಾದಕ ಸುಪ್ರಿಯಾ ಶರ್ಮಾ ಅವರನ್ನು ಇತ್ತೀಚೆಗೆ ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಹಲ್ಲೆಯಾಗಿದೆ ದೂರಲಾಗಿದೆ.

ಬಿಜೆಪಿ ನೇತೃತ್ವದ ರಾಜ್ಯಗಳಿಂದ ಹೆಚ್ಚಿನ ಹಿಂಸಾಚಾರ ಮತ್ತು ಪೊಲೀಸರ ಮಿತಿಮೀರಿದ ಪ್ರಕರಣಗಳು ವರದಿಯಾಗಿವೆ. ಇತರ ರಾಜ್ಯಗಳಲ್ಲಿಯೂ ಸಹ, ಪೊಲೀಸರು ವರದಿಗಾರರ ವಿರುದ್ಧ, ವಿಶೇಷವಾಗಿ ಸಾಂಕ್ರಾಮಿಕ ರೋಗದ ಬಗ್ಗೆ ವರದಿ ಮಾಡುವವರ ವಿರುದ್ಧ ಕ್ರಿಮಿನಲ್ ಕ್ರಮವನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಕೊರೊನಾ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸಲು ಮತ್ತು ಸೋಂಕಿತ ಜನರಿಗೆ ಸೂಕ್ತವಾದ ವೈದ್ಯಕೀಯ ವ್ಯವಸ್ಥೆಗಳನ್ನು ಮಾಡಲು ರಾಜ್ಯ ಸರ್ಕಾರದ ವೈಫಲ್ಯವನ್ನು ಬಹಿರಂಗಪಡಿಸಿದ್ದಕ್ಕಾಗಿ ಮಹಾರಾಷ್ಟ್ರದ ಪ್ರಾದೇಶಿಕ ಪತ್ರಿಕೆಗಳ ಕನಿಷ್ಠ 15 ವರದಿಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕನಿಷ್ಠ ಎರಡು ನಿದರ್ಶನಗಳಲ್ಲಿ ವರದಿಗಾರರನ್ನು ಜೈಲಿಗೆ ಕಳುಹಿಸಲಾಗಿದೆ.


ಇದನ್ನೂ ಓದಿ: ಪತ್ರಕರ್ತರ ಬಂಧನ: ಯೋಗಿಯ ಉತ್ತರಪ್ರದೇಶ ಸರ್ಕಾರಕ್ಕೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...