Homeಮುಖಪುಟಬಿಹಾರ ಚುನಾವಣೆಯಲ್ಲಿ ಆಜಾದ್ ಸಮಾಜ ಪಕ್ಷ ಸ್ಪರ್ಧೆ: ಚಂದ್ರಶೇಖರ್ ಆಜಾದ್

ಬಿಹಾರ ಚುನಾವಣೆಯಲ್ಲಿ ಆಜಾದ್ ಸಮಾಜ ಪಕ್ಷ ಸ್ಪರ್ಧೆ: ಚಂದ್ರಶೇಖರ್ ಆಜಾದ್

ಆಜಾದ್ ಸಮಾಜ ಪಕ್ಷವು ಮತ್ತೊಂದು ರಾಜಕೀಯ ಪಕ್ಷವಲ್ಲ, ಬದಲಾಗಿ ಪ್ರತಿಯೊಬ್ಬ ವ್ಯಕ್ತಿಯ ಸಾಂವಿಧಾನಿಕ ಹಕ್ಕುಗಳನ್ನು ಪುನಃ ಪಡೆದುಕೊಳ್ಳುವ ಚಳುವಳಿಯಾಗಿದೆ ಎಂದು ಅವರು ಘೋಷಿಸಿದ್ದಾರೆ.

- Advertisement -
- Advertisement -

ಆಜಾದ್ ಸಮಾಜ ಪಕ್ಷವು ಈ ವರ್ಷ ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಮತ್ತು ಪಕ್ಷವು ಇದಕ್ಕಾಗಿ ತಯಾರಿ ಆರಂಭಿಸಿದೆ ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ’ರಾವಣ್’ ಘೋಷಿಸಿದ್ದಾರೆ.

ಬಿಹಾರದ ಅರ್ಧದಷ್ಟು ಪ್ರದೇಶಗಳು ಇನ್ನೂ ಪ್ರವಾಹಕ್ಕೆ ಸಿಲುಕಿದ್ದು, ಬಿಹಾರದಲ್ಲಿ ಭಾರಿ ನಿರುದ್ಯೋಗ ಸಮಸ್ಯೆಯಿದೆ, ಹೆಚ್ಚಿನ ಸಂಖ್ಯೆಯ ಜನರು ಕೆಲಸಕ್ಕಾಗಿ ಇತರ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಆಜಾದ್ ಪ್ರಸ್ತುತ ಜೆಡಿಯು – ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ.

ಉದ್ಯೋಗದ ಕೊರತೆ ಮತ್ತು ಆರ್ಥಿಕತೆಯ ಕುಸಿತದಿಂದಾಗಿ ಬಿಹಾರವು ದೇಶದಲ್ಲೇ ಅತೀ ಹೆಚ್ಚಿನ ವಲಸೆ ಹೋಗುತ್ತಿರುವ ರಾಜ್ಯವಾಗಿದೆ. ಇವರಲ್ಲಿ ಹೆಚ್ಚಿನವರು ಕಾರ್ಮಿಕ ವಲಸಿಗರು, ಅದರಲ್ಲೂ ಐತಿಹಾಸಿಕವಾಗಿ ತುಳಿತಕ್ಕೊಳಗಾದ ಮತ್ತು ತಳಸಮುದಾಯಗಳಾದ ದಲಿತ- ಹಿಂದುಳಿದ ಹಿಂದೂಗಳು, ಮುಸ್ಲಿಮರು ಹೆಚ್ಚಿನವರಾಗಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಮಾರ್ಚ್ 15, 2020 ರಂದು ಅಧಿಕೃತವಾಗಿ ಪ್ರಾರಂಭವಾದ ಆಜಾದ್ ಸಮಾಜ ಪಕ್ಷವು ಕೇವಲ ರಾಜಕೀಯ ಪಕ್ಷವಲ್ಲ, ಪ್ರತಿಯೊಬ್ಬ ವ್ಯಕ್ತಿಯ ವಿಶೇಷವಾಗಿ ದಲಿತರು, ಬುಡಕಟ್ಟು ಜನರು, ತಳ ಸಮುದಾಯಗಳು ಮತ್ತು ಮಹಿಳೆಯರ ಸಾಂವಿಧಾನಿಕ ಹಕ್ಕುಗಳನ್ನು ಪುನಃ ಪಡೆದುಕೊಳ್ಳುವ ಚಳುವಳಿಯಾಗಿದೆ. ಇದು ಡಾ.ಬಿ.ಆರ್. ಅಂಬೇಡ್ಕರ್ ಆದರ್ಶಗಳಲ್ಲಿ ಮತ್ತು ಕಾನ್ಶಿರಾಮ್ ಅವರ ರಾಜಕೀಯ ದೃಷ್ಟಿಕೋನಲ್ಲಿ ದೃಡವಾಗಿ ನೆಲೆಗೊಂಡಿದೆ ಎಂದು ಚಂದ್ರಶೇಖರ್ ಆಜಾದ್ ಪ್ರತಿಪಾದಿಸಿದ್ದಾರೆ.

ಆಜಾದ್ ಸಮಾಜ ಪಕ್ಷವು ಮತ್ತೊಂದು ರಾಜಕೀಯ ಪಕ್ಷವಲ್ಲ, ಬದಲಾಗಿ ಪ್ರತಿಯೊಬ್ಬ ವ್ಯಕ್ತಿಯ ಸಾಂವಿಧಾನಿಕ ಹಕ್ಕುಗಳನ್ನು ಪುನಃ ಪಡೆದುಕೊಳ್ಳುವ ಚಳುವಳಿಯಾಗಿದೆ ಎಂದು ಅವರು ಘೋಷಿಸಿದ್ದಾರೆ.

ಸಾಮಾಜಿಕ ನ್ಯಾಯದ ಸಂದೇಶದೊಂದಿಗೆ ಮತ್ತು ರಾಜ್ಯದ ಬಹುಜನರಿಗೆ ಆದ್ಯತೆ ನೀಡುವ ಭರವಸೆಯೊಂದಿಗೆ, ಆಜಾದ್ ಸಮಾಜ ಪಕ್ಷವು ಈ ಚುನಾವಣೆಯಲ್ಲಿ ಭಾಗವಹಿಸುವುದು ಅತ್ಯಂತ ಭರವಸೆ ಮೂಡಿಸಿದೆ ಎನ್ನಲಾಗಿದೆ. ಅವರು ಸಾಕಷ್ಟು ಸ್ಥಾನಗಳನ್ನು ಗೆದ್ದರೆ, ಜಾತಿ ಆಧಾರಿತ ದಬ್ಬಾಳಿಕೆಯನ್ನು ಹಿಮ್ಮೆಟ್ಟಿಸುವ ಹೊಸ ಯುಗಕ್ಕೆ ರಾಜ್ಯವು ಪ್ರವೇಶಿಸಲಿದೆ ಎಂದು ಸಾಮಾಜಿಕ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.


ಓದಿ: ಪ್ರಭುತ್ವಕ್ಕೆ “ಚಂದ್ರಶೇಖರ್‌ ಆಝಾದ್ ರಾವಣ್” ಎಂದರೆ ಆತಂಕ ಯಾಕೆ?


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...