Homeಮುಖಪುಟಮುಸ್ಲಿಂ ಆಟೋ ಚಾಲಕನಿಗೆ ಕಿರುಕುಳ ನೀಡಿದ್ದ ರೈಲಿನಲ್ಲಿ ನಾಲ್ವರ ಹಂತಕ RPF ಪೇದೆ

ಮುಸ್ಲಿಂ ಆಟೋ ಚಾಲಕನಿಗೆ ಕಿರುಕುಳ ನೀಡಿದ್ದ ರೈಲಿನಲ್ಲಿ ನಾಲ್ವರ ಹಂತಕ RPF ಪೇದೆ

- Advertisement -
- Advertisement -

ಮುಂಬೈ-ಜೈಪುರ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹಿರಿಯ ಅಧಿಕಾರಿ ಮತ್ತು ಮೂವರು ಮುಸ್ಲಿಂ ಪ್ರಯಾಣಿಕರನ್ನು ಹತ್ಯೆ ಮಾಡಿದ್ದ ಆರ್ ಪಿಎಫ್ ಪೇದೆ ಚೇತನ್ ಸಿಂಗ್  ಚೌದರಿ ಈ  ಹಿಂದೆಯೂ ಮುಸ್ಲಿಂ ಆಟೋ ಚಾಲಕನಿಗೆ ಹಲ್ಲೆ ನಡೆಸಿ ದುರ್ವರ್ತನೆ ತೋರಿದ್ದ ಎನ್ನುವುದು ಪೊಲೀಸ್ ತನಿಖೆಯ ಹಂತದಲ್ಲಿ ಬಯಲಾಗಿದೆ.ಈ ವೇಳೆ ಆತನ ಮೇಲಾಧಿಕಾರಿ ಆತನಿಗೆ ಕಾನೂನು ಬಾಹಿರವಾಗಿ ನಡೆದುಕೊಳ್ಳದಂತೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.

ಉಜ್ಜೈನಿಯ 45 ವರ್ಷದ ವಹೀದ್ ಖಾನ್ ಎಂಬ ಆಟೋ ಡ್ರೈವರ್ ನನ್ನ ಮೇಲೆ 2017ರಲ್ಲಿ ಚೇತನ್ ಸಿಂಗ್  ಚೌದರಿ ಹಲ್ಲೆ ನಡೆಸಿ ಕಿರುಕುಳ ನೀಡಿದ್ದ ಎಂದು ಹೇಳಿದ್ದಾರೆ.

ಇವರು ನನಗೆ ಕಿರುಕುಳ ನೀಡುತ್ತಿದ್ದರು ಮತ್ತು ಒಂದು ದಿನ ನನ್ನನ್ನು ಬಂಧಿಸಿ  ನನ್ನನ್ನು ಭಯೋತ್ಪಾದಕ ಎಂದು ಕರೆದರು. ಇದರಿಂದಾಗಿ ನನ್ನ ಕುಟುಂಬ ಅವನಿಗೆ ಹೆದರುತ್ತಿತ್ತು.ನನ್ನನ್ನು  ಚೌದರಿ ಸುಳ್ಳು ಪ್ರಕರಣದಲ್ಲಿ ಸಿಲುಕಿಸುತ್ತಾನೆ ಎಂಬ ಭಯ ಅವರಿಗೆ ಇತ್ತು. ನನಗೆ ಜೀವ ಭಯ ಇದ್ದ ಕಾರಣ ಆತನ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದೆ ಎಂದು ಖಾನ್  ಹೇಳಿದ್ದಾರೆ.

ಫೆಬ್ರವರಿ 18, 2017ರಂದು ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎಂಎಲ್ ಮೀನಾ ಎಂಬವರು ಕನ್ನಡಕ ಬಿಟ್ಟು ಬಂದ ಕಾರಣ ಖಾನ್ ಅವರಿಗೆ ಕರೆ ಮಾಡಿ ಕನ್ನಡಕ ತರುವಂತೆ ಕೇಳಿದ್ದರು.  ಅದರಂತೆ ಖಾನ್ ಕನ್ನಡಕವನ್ನು ನೀಡಲು ಹೋದಾಗ, ಚೌಧರಿ ಅವರನ್ನು ಹಿಡಿದು ಪ್ಲಾಟ್‌ಫಾರ್ಮ್ ಟಿಕೆಟ್ ತೆಗೆದುಕೊಂಡು ಹೋಗಲಿಲ್ಲ ಎಂಬ ಆರೋಪದಲ್ಲಿ 270 ರೂಪಾಯಿ ದಂಡ ವಿಧಿಸಲು ಪ್ರಯತ್ನಿಸಿದರು. ಬಳಿಕ ಸ್ಥಳೀಯ ಎಸ್‌ಎಚ್‌ಒ ಮಧ್ಯಪ್ರವೇಶಿಸಿದ ನಂತರ ಅವರು ಅಲ್ಲಿಂದ ತೆರಳಿದ್ದರು.

ಫೆಬ್ರವರಿ 19 ರಂದು, ಚೌಧರಿ ಅವರು ಮತ್ತೆ ರೈಲ್ವೆ ನಿಲ್ದಾಣದ ಸರಕುಗಳ ಗೋದಾಮಿನ ಬಳಿ ಖಾನ್ ಅವರನ್ನು ಹಿಡಿದರು ಮತ್ತು ಅವರನ್ನು ಮತ್ತೆ ನಿಂದಿಸಿದರು ಮತ್ತು “ನಿಮ್ಮನ್ನು ಈಗ ಯಾರು ರಕ್ಷಿಸುತ್ತಾರೆಂದು ನೋಡೋಣ” ಎಂದಿದ್ದಾರೆ  ಎಂದು ಹೇಳಿದ್ದಾರೆ.

ಚೌಧರಿ ಅವರನ್ನು ಈ ಬಗ್ಗೆ ಆರ್‌ಪಿಎಫ್ ಪ್ರಶ್ನಿಸಿದಾಗ,  ನನ್ನ ಮೇಲೆ ಮಾನಸಿಕ ಒತ್ತಡವನ್ನು ಸೃಷ್ಟಿಸಲು ಸುಳ್ಳು ದೂರು ದಾಖಲಿಸಲಾಗಿದೆ ಎಂದು ಸಮಜಾಯಿಸಿ ನೀಡಿದ್ದಾರೆ.

ನಾನು ನನ್ನ ವೈಯಕ್ತಿಕ ಕೆಲಸಕ್ಕಾಗಿ ವಾಹಿದ್ ಖಾನ್ ಅವರ ಆಟೋ ರಿಕ್ಷಾವನ್ನು ಬಾಡಿಗೆಗೆ ಪಡೆದಿಲ್ಲ, ಅಥವಾ ನಾನು ಅವನನ್ನು ಮೊದಲು ತಿಳಿದಿರಲಿಲ್ಲ, ಅಥವಾ ನಾನು ಅವನನ್ನು ಯಾವುದೇ ರೀತಿಯಲ್ಲಿ ನಿಂದಿಸಿಲ್ಲ ಅಥವಾ ಬೆದರಿಕೆ ಹಾಕಿಲ್ಲ ಎಂದು ಕಾನ್‌ಸ್ಟೆಬಲ್ ಹೇಳಿದರು.

ಫೆಬ್ರವರಿ 18 ರಂದು ಸಂಜೆ 5:30 ರ ಸುಮಾರಿಗೆ ಪ್ಲಾಟ್‌ಫಾರ್ಮ್ ನಂಬರ್ 1 ರಲ್ಲಿ ಅನುಮಾನಾಸ್ಪದ ವ್ಯಕ್ತಿಯೊಬ್ಬ ನಿಂತಿರುವುದನ್ನು ಕಂಡಿದ್ದೇನೆ ಎಂದು ಚೌಧರಿ ಹೇಳಿದರು. ನಾನು ಏನು ಮಾಡುತ್ತಿದ್ದೀರಿ ಎಂದು ನಾನು ಅವರನ್ನು ಕೇಳಿದಾಗ, ಆಟೋ ಚಾಲಕನಾಗಿದ್ದ ಆ ವ್ಯಕ್ತಿ ಪ್ರಯಾಣಿಕರಿಗೆ ಅನಾನುಕೂಲತೆಯನ್ನುಂಟುಮಾಡುವಂತೆ ಕೂಗಲು ಪ್ರಾರಂಭಿಸಿದರು.ಹಾಗಾಗಿ ಆತನನ್ನು ಠಾಣೆಗೆ ಕರೆತಂದಿದ್ದೇನೆ ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಬ್-ಇನ್ಸ್‌ಪೆಕ್ಟರ್ ಸಚಿನ್ ಕುಮಾರ್ ಯಾದವ್, ಚೌಧರಿ, ಖಾನ್ ಅವರನ್ನು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆಂದು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಚೌದರಿ ಯುನಿಫಾರ್ಮ್ ನಲ್ಲಿ ಇರಲಿಲ್ಲ. ಒಂದು ವೇಳೆ ಖಾನ್ ಕೆಟ್ಟದಾಗಿ ವರ್ತಿಸಿದರೆ ಆತನ ಮೆಲೆ ಕಾನೂನಿನ ಪ್ರಕರ ದೂರು ನೀಡಬೇಕೆಂದು  ಸೂಚಿಸಿದ್ದೆ ಎಂದು ಹೇಳಿದ್ದಾರೆ. ಇದಲ್ಲದೆ ಕರ್ತವ್ಯದ ಸಮಯದಲ್ಲಿ ಯುನಿಫಾರ್ಮ್ ಧರಿಸಬೇಕು ಮತ್ತು ಯಾರ ಜೊತೆಯು ಕಾನೂನು ಬಾಹಿರವಾಗಿ ವರ್ತಿಸಬಾರದು ಎಂದು ಹೇಳಿರುವುದಾಗಿ  ಅವರು ತಿಳಿಸಿದ್ದಾರೆ.

ಇದನ್ನು ಓದಿ: ಇಡಿ ತನಿಖೆಯಿಂದ ತಪ್ಪಿಸಿಕೊಳ್ಳಲು ಕೆಲವರು NCP ತೊರೆದರು: ಶರದ್ ಪವಾರ್

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...