Homeಮುಖಪುಟಇಡಿ ತನಿಖೆಯಿಂದ ತಪ್ಪಿಸಿಕೊಳ್ಳಲು ಕೆಲವರು NCP ತೊರೆದರು: ಶರದ್ ಪವಾರ್

ಇಡಿ ತನಿಖೆಯಿಂದ ತಪ್ಪಿಸಿಕೊಳ್ಳಲು ಕೆಲವರು NCP ತೊರೆದರು: ಶರದ್ ಪವಾರ್

- Advertisement -
- Advertisement -

ಕೇಂದ್ರ ಸರಕಾರವು ಇಡಿ(ಜಾರಿ ನಿರ್ದೇಶನಾಲಯ)ವನ್ನು ಮುಂದಿಟ್ಟು ತನಿಖೆ ನಡೆಸುವುದಾಗಿ ಬೆದರಿಕೆ ಹಾಕಿದ ಕಾರಣ ಕೆಲವರು ಎನ್‍ಸಿಪಿ ತೊರೆದರು ಎಂದು ಎನ್‍ಸಿಪಿ ವರಿಷ್ಠ ಶರದ್ ಪವಾರ್ ಅವರು ಅಜಿತ್ ಪವಾರ್ ಅವರನ್ನು ಉದ್ದೇಶಿಸಿ ಹೇಳಿದ್ದಾರೆ.

ಪಕ್ಷದ ಸಾಮಾಜಿಕ ಮಾಧ್ಯಮ ಸಭೆಯಲ್ಲಿ ಎನ್‍ಸಿಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶರದ್ ಪವಾರ್, ಅಭಿವೃದ್ಧಿಯ ಕಾರಣಕ್ಕಾಗಿ ಸರ್ಕಾರಕ್ಕೆ ಸೇರ್ಪಡೆಗೊಂಡಿದ್ದೇವೆ ಎಂಬ ಅಜಿತ್ ಪವಾರ್ ಬಣದ ಹೇಳಿಕೆಗಳನ್ನು ತಳ್ಳಿಹಾಕಿದ್ದಾರೆ.ಈ ಹಿಂದೆ ಕೆಲವು ಬದಲಾವಣೆಗಳಾಗಿವೆ, ನಮ್ಮ ಕೆಲವು ಸದಸ್ಯರು ನಮ್ಮನ್ನು ತೊರೆದರು. ಅವರು ಅವರು ಅಭಿವೃದ್ಧಿ ಮಾಡಲು ಹೋಗಿದ್ದಾರೆ ಎಂದು ಹೇಳುತ್ತಾರೆ. ಆದರೆ ನಿಜವಾಗಿ ಕೇಂದ್ರವು ಅವರ ವಿರುದ್ಧ ಇಡಿ ತನಿಖೆಯನ್ನು ಪ್ರಾರಂಭಿಸಿದೆ. ಮತ್ತು ಬಿಜೆಪಿ ಜೊತೆ ಸೇರುವಂತೆ ಬೆದರಿಸಿದೆ ಎಂದು ಹೇಳಿದ್ದಾರೆ.

ಕೆಲ ಶಾಸಕರ ಬೆಂಬಲದೊಂದಿಗೆ ಅವರ ಸೋದರಳಿಯ ಅಜಿತ್ ಪವಾರ್ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಸೇರಿದ ಒಂದು ತಿಂಗಳ ನಂತರ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಅವರು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ಉದಾಹರಣೆಯನ್ನು ಸಹ ಉಲ್ಲೇಖಿಸಿದರು ಮತ್ತು ಕೆಲವು ಸದಸ್ಯರು ವಿಚಾರಣೆಯನ್ನು ಎದುರಿಸಲು ಸಿದ್ಧರಾಗಿದ್ದರು. ಅನಿಲ್ ದೇಶಮುಖ್ 14 ತಿಂಗಳು ಜೈಲಿನಲ್ಲಿದ್ದರು. ದೇಶಮುಖ್ ಅವರನ್ನು ಕೂಡ ಪಕ್ಷ ಬಿಡುವಂತೆ ಕೇಳಲಾಯಿತು.ಅವರು ನಿಷ್ಠೆಯಲ್ಲಿದ್ದರು ಮತ್ತು ಅವರು ಪಕ್ಷದ ಜೊತೆ ದೃಢವಾಗಿ ನಿಂತಿದ್ದರು ಎಂದು ಹೇಳಿದ್ದಾರೆ.

ಕಳೆದ ತಿಂಗಳು ಎನ್‍ಸಿಪಿ ತೊರೆದು ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಇತರ 8 ಮಂದಿ ಶಾಸಕರು ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಇದನ್ನು ಓದಿ: ಕೇಂದ್ರದ ಗೃಹ, ರೈಲ್ವೆ, ಬ್ಯಾಂಕ್‌ ಸಿಬ್ಬಂದಿಗಳ ಮೇಲೆ ಹೆಚ್ಚು ಭ್ರಷ್ಟಾಚಾರದ ದೂರು ದಾಖಲು:ಸಿವಿಸಿ ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...