Homeರಂಜನೆಕ್ರೀಡೆ5 ಸಿಕ್ಸರ್ ಸಿಡಿಸಿ ಧೋನಿ ದಾಖಲೆ ಮುರಿದ ಅಕ್ಸರ್ ಪಟೇಲ್: ಕೊನೆಯ ಓವರ್‌ನಲ್ಲಿ ಭಾರತಕ್ಕೆ ರೋಚಕ...

5 ಸಿಕ್ಸರ್ ಸಿಡಿಸಿ ಧೋನಿ ದಾಖಲೆ ಮುರಿದ ಅಕ್ಸರ್ ಪಟೇಲ್: ಕೊನೆಯ ಓವರ್‌ನಲ್ಲಿ ಭಾರತಕ್ಕೆ ರೋಚಕ ಜಯ

- Advertisement -
- Advertisement -

ಅತಿಥೇಯ ವೆಸ್ಟ್ ಇಂಡೀಸ್ ತಂಡದ ಎದುರು ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು ದಾಖಲಿಸಿದೆ. ಬೌಲರ್ ಅಕ್ಸರ್ ಪಟೇಲ್ ಗೆಲುವಿಗೆ ಆರು ರನ್ ಬೇಕಿದ್ದಾಗ ಸಿಕ್ಸರ್ ಸಿಡಿಸುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು. ಆ ಮೂಲಕ ಭಾರತ 3 ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ವಶಪಡಿಸಿಕೊಂಡಿದೆ. ಆ ಮೂಲಕ ವೆಸ್ಟ್‌ ಇಂಡೀಸ್ ವಿರುದ್ಧ ಸತತ 12ನೇ ಸರಣಿ ಗೆದ್ದ ವಿಶ್ವ ದಾಖಲೆ ನಿರ್ಮಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ಗಮನಾರ್ಹ ಪ್ರದರ್ಶನ ನೀಡಿತು. ಶಾಹ್ ಹೋಪ್ ತಮ್ಮ ನೂರನೇ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ಸಾಧನೆಗೈದರೆ ತಂಡದ ನಾಯಕ ನಿಕೋಲಸ್ ಪೂರನ್ 74 ರನ್ ಗಳಿಸುವ ಮೂಲಕ ತಂಡ 311 ರನ್ ಪೇರಿಸಲು ಸಹಾಯ ಮಾಡಿದರು. ಆದರೆ ವೆಸ್ಟ್ ಇಂಡೀಸ್ ತಂಡದ ಗೆಲುವಿನ ಕನಸನ್ನು ಭಾರತದ ಬೌಲರ್ ಅಕ್ಸರ್ ಪಟೇಲ್ ಸ್ಪೋಟಕ ಬ್ಯಾಟಿಂಗ್ ಮೂಲಕ ನುಚ್ಚೂ ನೂರು ಮಾಡಿದರು. ಪರಿಣಾಮ ಭಾರತವು ಇನ್ನು ಎರಡು ಎಸೆತಗಳು ಬಾಕಿ ಇರುವಂತೆ 312ರನ ಗಳಿಸಿ ಎರಡು ವಿಕೆಟ್‌ಗಳ ಮಹತ್ವದ ಜಯ ಸಾಧಿಸಿತು.

ಈ ಮೂಲಕ ಅಕ್ಸರ್ ಪಟೇಲ್ ವೆಸ್ಟ್ ಇಂಡೀಸ್ ತಂಡದ ವಿರುದ್ಧ ವೇಗದ ಅರ್ಧಶತಕ ದಾಖಲಿಸಿದ ಎರಡನೇ ಆಟಗಾರ ಎನಿಸಿಕೊಂಡರು. ಅಲ್ಲದೆ ಚೇಸಿಂಗ್‌ನಲ್ಲಿ ಭಾರತ ಗೆಲುವು ಕಂಡ ಪಂದ್ಯಗಳಲ್ಲಿ 7 ಅಥವಾ ಅದಕ್ಕಿಂತ ನಂತರದ ಕ್ರಮಾಂಕದಲ್ಲಿ ಬಂದು ಅತಿ ಹೆಚ್ಚು ಸಿಕ್ಸರ್ ಗಳಿಸಿದ್ದ ಮಹೇಂದ್ರ ಸಿಂಗ್ ಧೋನಿಯವರ 17 ವರ್ಷದ ದಾಖಲೆಯನ್ನು ಅಳಿಸಿಹಾಕಿದರು. ಕೇವಲ 35 ಎಸೆತಗಳಲ್ಲಿ 64 ರನ್ ಗಳಿಸಿದ ಅಕ್ಸರ್ ಪಟೇಲ್ 5 ಸಿಕ್ಸರ್ ಸಿಡಿಸಿ ಈ ಸಾಧನೆಗೈದರು.

2005ರಲ್ಲಿ ಧೋನಿ ಜಿಂಬಾಬ್ವೆ ಎದುರಿನ ಚೇಸಿಂಗ್‌ನಲ್ಲಿ 7ನೇ ಕ್ರಮಾಂಕ ಆಟಗಾರನಾಗಿ ಕಣಕ್ಕಿಳಿದು 3 ಸಿಕ್ಸರ್ ಸಿಡಿಸಿ ತಂಡ ಗೆಲ್ಲಿಸುವಲ್ಲಿ ದಾಖಲೆ ಮಾಡಿದ್ದರು. ಆನಂತರ ಯುಸುಫ್ ಪಠಾಣ್ ಸಹ 2011ರಲ್ಲಿ ಎರಡು ಬಾರಿ ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ಎದುರು ತಲಾ ಮೂರು ಸಿಕ್ಸರ್ ಸಿಡಿಸಿ ಧೋನಿ ದಾಖಲೆ ಸರಿಗಟ್ಟಿದ್ದರು. ಆದರೆ ನಿನ್ನೆಯ ಪಂದ್ಯದಲ್ಲಿ ಅಕ್ಸರ್ ಪಟೇಲ್ ಒಟ್ಟು 5 ಸಿಕ್ಸರ್ ಸಿಡಿಸುವ ಮೂಲಕ ಆ ದಾಖಲೆ ಮುರಿದಿದ್ದಾರೆ. ಅವರ ಈ ಇನ್ನಿಂಗ್ಸ್‌ನಲ್ಲಿ ಮೂರು ಬೌಂಡರಿಗಳು ಸಹ ದಾಖಲಾಗಿವೆ.

312 ರನ್ ಬೆನ್ನಟ್ಟಿದ್ದ ಭಾರತ 18 ಓವರ್‌ನಲ್ಲಿ ಸಂದರ್ಭದಲ್ಲಿ ಮೂರು ವಿಕೆಟ್ ಕಳೆದುಕೊಂಡು ಕೇವಲ 79 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಆನಂತರ ಶ್ರೇಯಸ್ ಅಯ್ಯರ್ (63) ಮತ್ತು ಸಂಜು ಸ್ಯಾಮ್ಸನ್ (54) ಇಬ್ಬರೂ ಅರ್ಧಶತಕ ಸಿಡಿಸಿ ತಂಡಕ್ಕೆ ಆಸೆಯಾದರು. 205 ರನ್ ಗಳಿಸಿದ್ದಾಗ ಸ್ಯಾಮ್ಸನ್ ರನ್ ಔಟ್ ಆದರು. ಆಗ ಭಾರತ 68 ಎಸೆತಗಳಲ್ಲಿ 107 ರನ್ ಗಳಿಸಬೇಕಾದ ಒತ್ತಡದಲ್ಲಿತ್ತು. ಆಗ ಕ್ರೀಸ್‌ಗಿಳಿಸಿದ ಅಕ್ಸರ್ ಪಟೇಲ್ ದಿಟ್ಟ ಆಟ ಪ್ರದರ್ಶಿಸಿದರು. ಇನ್ನೊಂದೆಡೆ ದೀಪಕ್ ಹೂಡ, ಶಾರ್ದುಲ್ ಠಾಕೂರ್, ಆವೇಶ್ ಖಾನ್ ಒಬ್ಬರ ನಂತರ ಒಬ್ಬರು ಔಟ್ ಆಗತ್ತಿದ್ದರೂ ಧೃತಿಗೆಡದೆ ಆಟವಾಡಿದರು. ಕೊನೆಯ ಓವರ್‌ನಲ್ಲಿ 6 ಎಸೆತಗಳಿಗೆ 8 ರನ್ ಗಳಿಸಬೇಕಿತ್ತು. ಅಕ್ಸರ್ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಇದನ್ನೂ ಓದಿ: ನಿರ್ಗಮಿತ ರಾಷ್ಟ್ರಪತಿಗೆ ಪ್ರಧಾನಿ ಮೋದಿ ಅಗೌರವ ತೋರಿದರೆ? ವೈರಲ್‌ ವಿಡಿಯೊದ ವಾಸ್ತವವೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...