Homeಮುಖಪುಟಬುಡಕಟ್ಟು ಮಹಿಳೆ ಅತ್ಯುನ್ನತ ಸ್ಥಾನಕ್ಕೇರಿರುವುದು ಪ್ರಜಾಪ್ರಭುತ್ವದ ಶಕ್ತಿ: ನೂತನ ರಾಷ್ಟ್ರಪತಿ ಮುರ್ಮು ಮೊದಲ ಭಾಷಣ ಹೀಗಿತ್ತು...

ಬುಡಕಟ್ಟು ಮಹಿಳೆ ಅತ್ಯುನ್ನತ ಸ್ಥಾನಕ್ಕೇರಿರುವುದು ಪ್ರಜಾಪ್ರಭುತ್ವದ ಶಕ್ತಿ: ನೂತನ ರಾಷ್ಟ್ರಪತಿ ಮುರ್ಮು ಮೊದಲ ಭಾಷಣ ಹೀಗಿತ್ತು…

- Advertisement -
- Advertisement -

ದ್ರೌಪದಿ ಮುರ್ಮು ಸೋಮವಾರ ಭಾರತದ 15ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. “ಬುಡಕಟ್ಟು ಸಮುದಾಯದದ ಮಹಿಳೆಯೂ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಏರಿರುವುದು ಪ್ರಜಾಪ್ರಭುತ್ವದ ಶಕ್ತಿಯನ್ನು ತೋರಿಸುತ್ತದೆ. ಬಡವರು ಸಹ ತಮ್ಮ ಕನಸನ್ನು ನನಸು ಮಾಡಬಹುದು” ಎಂದು ಅವರು ಹೇಳಿದ್ದಾರೆ.

ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರು ಪ್ರಮಾಣ ವಚನ ಬೋಧಿಸಿದ ನಂತರ ನೂತನ ರಾಷ್ಟ್ರಪತಿ ಮುರ್ಮು ಅವರು ತಮ್ಮ ಮೊದಲ ಭಾಷಣ ಮಾಡಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಒಡಿಶಾದ ಬುಡಕಟ್ಟು ಗ್ರಾಮದಿಂದ ದೇಶದ ಅತ್ಯುನ್ನತ ಸಾಂವಿಧಾನಿಕ ಕಚೇರಿಗೆ ಮಾಡಿದ ಪ್ರಯಾಣವು ಪ್ರಜಾಪ್ರಭುತ್ವದ ಶಕ್ತಿಯನ್ನು ತೋರಿಸುತ್ತದೆ. ಇದು ವೈಯಕ್ತಿಕ ಸಾಧನೆಯಲ್ಲ, ಬದಲಾಗಿ ಪ್ರತಿಯೊಬ್ಬ ಬಡ ಭಾರತೀಯನ ಸಾಧನೆಯಾಗಿದೆ” ಎಂದು ತಿಳಿಸಿದರು.

“ನಾನು ಒಡಿಶಾದ ಬಡ ಬುಡಕಟ್ಟು ಗ್ರಾಮದಿಂದ ಬಂದಿದ್ದೇನೆ. ಅಲ್ಲಿ ಮೂಲಭೂತ ಶಿಕ್ಷಣವನ್ನು ಪಡೆಯುವುದು ಕನಸಾಗಿತ್ತು. ಆದರೆ ಅಡೆತಡೆಗಳ ನಡುವೆಯೂ ನಾನು ಜಗ್ಗಲಿಲ್ಲ. ನನ್ನ ಹಳ್ಳಿಯಲ್ಲಿ ಕಾಲೇಜು ಮೆಟ್ಟಿಲೇರಿದ ಮೊದಲ ವ್ಯಕ್ತಿ ನಾನಾಗಿದ್ದೆ” ಎಂದು ಸ್ಮರಿಸಿದ್ದಾರೆ.

“ನಾನು ಎಸ್‌ಟಿ (ಪರಿಶಿಷ್ಟ ಬುಡಕಟ್ಟು) ಸಮುದಾಯದಿಂದ ಬಂದವಳು. ವಾರ್ಡ್ ಕೌನ್ಸಿಲರ್ ಆಗುವುದರಿಂದ ಹಿಡಿದು ರಾಷ್ಟ್ರಪತಿ ಆಗುವವರೆಗೆ ಅವಕಾಶಗಳನ್ನು ಪಡೆದುಕೊಂಡಿದ್ದೇನೆ. ಇದು ಭಾರತದ ಪ್ರಜಾಪ್ರಭುತ್ವದ ಹಿರಿಮೆಯನ್ನು ತೋರಿಸುತ್ತದೆ. ದೂರದ ಹಳ್ಳಿಯ ಬಡ ಕುಟುಂಬದಲ್ಲಿ ಜನಿಸಿದ ಮಹಿಳೆ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ತಲುಪಿರುವುದು ಪ್ರಜಾಪ್ರಭುತ್ವದ ಶಕ್ತಿಯಾಗಿದೆ” ಎಂದು ಬಣ್ಣಿಸಿದ್ದಾರೆ.

ಆಡಳಿತಾರೂಢ ಎನ್‌ಡಿಎ ಅಭ್ಯರ್ಥಿಯಾಗಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮುರ್ಮು, ಜುಲೈ 21ರಂದು ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ವಿರುದ್ಧ 64.3% ಮತಗಳನ್ನು ಪಡೆದು ಆಯ್ಕೆಯಾದರು.

“ಭಾರತದ ಬಡವರು ಕನಸು ಕಾಣುತ್ತಾರೆ. ಅವರ ಕನಸುಗಳನ್ನು ನನಸಾಗಿಸಬಹುದು ಎಂಬುದಕ್ಕೆ ನನ್ನ ಚುನಾವಣೆ ಸಾಕ್ಷಿಯಾಗಿದೆ. ಶತಮಾನಗಳಿಂದ ವಂಚಿತರಾದವರು, ಅಭಿವೃದ್ಧಿಯ ಲಾಭದಿಂದ ದೂರವಿರುವವರು, ಬಡವರು, ದೀನದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಜನಾಂಗದವರು ತಮ್ಮ ಪ್ರತಿಬಿಂಬವನ್ನು ನನ್ನಲ್ಲಿ ಕಾಣುತ್ತಿರುವುದು ನನಗೆ ಅತ್ಯಂತ ತೃಪ್ತಿಯ ವಿಷಯವಾಗಿದೆ” ಎಂದಿರುವ ಅವರು ಬೆಂಬಲ ನೀಡಿದ ಶಾಸಕರಿಗೆ ಧನ್ಯವಾದ ತಿಳಿಸಿದ್ದಾರೆ.

“ಇಂದು ನಾನು ಎಲ್ಲಾ ದೇಶವಾಸಿಗಳಿಗೆ, ವಿಶೇಷವಾಗಿ ಭಾರತದ ಯುವಕರು ಮತ್ತು ಮಹಿಳೆಯರಿಗೆ ಭರವಸೆ ನೀಡುತ್ತೇನೆ. ಈ ಸ್ಥಾನದಲ್ಲಿ ಕೆಲಸ ಮಾಡುವಾಗ ನಿಮ್ಮ ಹಿತಾಸಕ್ತಿಯೇ ನನಗೆ ಅತ್ಯಂತ ಮಹತ್ವದ್ದಾಗಿದೆ” ಎಂದಿದ್ದಾರೆ.

ಸ್ವಾತಂತ್ರ್ಯದ ನಂತರ ಜನಿಸಿದವರಾದ ಮುರ್ಮು, ದೇಶವು ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತಿರುವ ನಿರ್ಣಾಯಕ ಸಮಯದಲ್ಲಿ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಮೊದಲು ಶಾಲಾ ಶಿಕ್ಷಕಿಯಾಗಿದ್ದ ಮುರ್ಮು ಅವರು, ದೇಶವು 50ನೇ ಸ್ವಾತಂತ್ರ್ಯದ ವರ್ಷವನ್ನು ಆಚರಿಸುತ್ತಿರುವಾಗ ತನ್ನ ರಾಜಕೀಯ ಪ್ರಯಾಣವನ್ನು ಆರಂಭಿಸಿದ್ದರು.

ಇದನ್ನೂ ಓದಿರಿ: ನಿರ್ಗಮಿತ ರಾಷ್ಟ್ರಪತಿಗೆ ಪ್ರಧಾನಿ ಮೋದಿ ಅಗೌರವ ತೋರಿದರೆ? ವೈರಲ್‌ ವಿಡಿಯೊದ ವಾಸ್ತವವೇನು?

“ಇಂದು ಸ್ವಾತಂತ್ರ್ಯದ 75ನೇ ವರ್ಷದಲ್ಲಿ, ನಾನು ಈ ಹೊಸ ಜವಾಬ್ದಾರಿಯನ್ನು ಪಡೆದುಕೊಂಡಿದ್ದೇನೆ” ಎಂದಿರುವ ಅವರು, “ಭಾರತವು ಮುಂದಿನ 25 ವರ್ಷಗಳ ಮುನ್ನೋಟವನ್ನು ಸಾಧಿಸಲು ಸಜ್ಜಾಗುತ್ತಿರುವ ಐತಿಹಾಸಿಕ ಸಮಯದಲ್ಲಿ ಈ ಜವಾಬ್ದಾರಿಯನ್ನು ತನಗೆ ವಹಿಸಲಾಗಿದೆ” ಎಂದು ಹೇಳಿದ್ದಾರೆ.

“ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸುಗಳನ್ನು ನನಸಾಗಿಸಲು ನಾವು ತ್ವರಿತ ಗತಿಯಲ್ಲಿ ಕೆಲಸ ಮಾಡಬೇಕಾಗಿದೆ” ಎಂದು ಆಶಿಸಿದ್ದಾರೆ.

ಪ್ರಮಾಣ ವಚನ ಸಮಾರಂಭಕ್ಕೂ ಮುನ್ನ ಅವರು ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೊಂದಿಗೆ ಸಂಸತ್ತಿಗೆ ಆಗಮಿಸಿದರು. ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಮತ್ತು ಸಿಜೆಐ ಅವರನ್ನು ಬರಮಾಡಿಕೊಂಡರು. ರಾಷ್ಟ್ರಪತಿ ಭವನಕ್ಕೆ ಆಗಮಿಸುವ ಮುನ್ನ ಅವರು ರಾಜ್‌ಘಾಟ್‌ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌ | Naanu Gauri

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌

0
ದೇಶದ ತುಂಬ ಹರಡಿರುವ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ ಎಂದು ಸ್ವರಾಜ್ ಪಕ್ಷದ ಮುಖ್ಯಸ್ಥ, ರೈತ ಹೋರಾಟಗಾರ ಯೋಗೇಂದ್ರ ಯಾದವ್‌ ಬುಧವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಅವರು ‘ಕರ್ನಾಟಕದ ಜನ ಯಾಕೆ...