Homeಮುಖಪುಟಕೇರಳ: ರಾಮಮಂದಿರ ಉದ್ಘಾಟನೆ ದಿನ ಅನುಮತಿಯಿಲ್ಲದೆ ಶಾಲೆಗೆ ರಜೆ; ತನಿಖೆಗೆ ಆದೇಶ

ಕೇರಳ: ರಾಮಮಂದಿರ ಉದ್ಘಾಟನೆ ದಿನ ಅನುಮತಿಯಿಲ್ಲದೆ ಶಾಲೆಗೆ ರಜೆ; ತನಿಖೆಗೆ ಆದೇಶ

- Advertisement -
- Advertisement -

ಕೇರಳ ಸರಕಾರದ ಅನುಮತಿಯಿಲ್ಲದೆ ಅಯೋಧ್ಯೆಯಲ್ಲಿ ನಡೆದ ಪ್ರಾಣ ಪ್ರತಿಷ್ಠಾನ ಸಮಾರಂಭದ ನಿಮಿತ್ತ ಕಾಸರಗೋಡು ಜಿಲ್ಲೆಯ ಪ್ರೌಢಶಾಲೆಗೆ ಸೋಮವಾರ ರಜೆ ಘೋಷಿಸಿರುವ ಘಟನೆ ನಡೆದಿದ್ದು, ಈ ಕುರಿತು ತನಿಖೆಗೆ ಕೇರಳ ಸರಕಾರ ಆದೇಶಿಸಿದೆ.

ಕೇರಳದಲ್ಲಿ ಪಿಣರಾಯ್‌ ವಿಜಯನ್‌ ನೇತೃತ್ವದ ಸಿಪಿಐ(ಎಂ) ಸರಕಾರವಿದೆ. ರಾಮಮಂದಿರ ಉದ್ಘಾಟನೆ ದಿನ ಯಾವುದೇ ಸರಕಾರಿ ರಜೆಯನ್ನು ಸರಕಾರಿ ಕಚೇರಿ ಅಥವಾ ಶಿಕ್ಷಣ ಸಂಸ್ಥೆಗಳಿಗೆ ಘೋಷಿಸಿರಲಿಲ್ಲ. ಆದರೆ ಕಾಸರಗೋಡಿನ ಕೂಡ್ಲುನಲ್ಲಿರುವ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಿತ್ತು.

ಈ ಬಗ್ಗೆ ತಿಳಿಯುತ್ತಿದ್ದಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ  ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಅವರು ಸಾರ್ವಜನಿಕ ಶಿಕ್ಷಣ ಮಹಾನಿರ್ದೇಶಕರಿಂದ ವರದಿ ಕೇಳಿದ್ದಾರೆ. ಶಿಕ್ಷಣ ಇಲಾಖೆಯಿಂದ ಯಾವುದೇ ಅಧಿಕೃತ ನಿರ್ದೇಶನವಿಲ್ಲದೆ ನಿರ್ದಿಷ್ಟ ಶಾಲೆಗೆ ಏಕೆ ರಜೆ ಘೋಷಿಸಲಾಗಿದೆ ಎಂಬುದರ ಕುರಿತು 24 ಗಂಟೆಗಳ ಒಳಗೆ ವರದಿ ಸಲ್ಲಿಸುವಂತೆ ಮಹಾನಿರ್ದೇಶಕರಿಗೆ ತಿಳಿಸಲಾಗಿದೆ ಎಂದು ಸಚಿವರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಕೂಡ್ಲುನಲ್ಲಿರುವ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯು ಬಿಜೆಪಿ ಆಡಳಿತವಿರುವ ಮಧೂರು ಪಂಚಾಯತ್‌ ವ್ಯಾಪ್ತಿಯಲ್ಲಿದೆ. ಪಂಚಾಯಿತಿಯ 20 ವಾರ್ಡ್‌ಗಳಲ್ಲಿ 13 ಮಂದಿ ಬಿಜೆಪಿಯ ಪ್ರತಿನಿಧಿಗಳಿದ್ದಾರೆ.

ಬಿಜೆಪಿ ಆಡಳಿತದ ಪಂಚಾಯತ್ ಮತ್ತು ಪೋಷಕರ ಒಂದು ವಿಭಾಗದ ಒತ್ತಡದಿಂದಾಗಿ ಶಾಲೆಯ ಮುಖ್ಯೋಪಾಧ್ಯಾಯರು ಸೋಮವಾರ ರಜೆ ಘೋಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಾಲೆಯು ಸೋಮವಾರ ರಜೆ ಘೋಷಿಸಲು ಇಲಾಖೆಯಿಂದ ಅನುಮತಿ ಕೋರಿತ್ತು, ಆದರೆ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಬೇಡಿಕೆಯನ್ನು ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಾಣ ಪ್ರತಿಷ್ಠಾನ ಸಮಾರಂಭವನ್ನು ರಾಜ್ಯದ ಕಾರ್ಯಕ್ರಮವಾಗಿ ವೀಕ್ಷಣೆಗೆ ಅವಕಾಶ ನೀಡಲು ನಿರಾಕರಿಸಿದ್ದರು. ಸಂವಿಧಾನವನ್ನು ಸಂರಕ್ಷಿಸಲು ಪ್ರತಿಜ್ಞೆ ಮಾಡಿದವರಾಗಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪಿಣರಾಯ್‌ ವಿಜಯನ್‌ ನಿರಾಕರಿಸಿದ್ದರು. ಪ್ರಾಣ ಪ್ರತಿಷ್ಠಾ ಸಮಾರಂಭವು ರಾಜಕೀಯ ತಿರುವು ಪಡೆದುಕೊಂಡಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಧಾರ್ಮಿಕ ಆರಾಧನೆಯ ಸ್ಥಳದಲ್ಲಿ ನಡೆಯುವ ಸಮಾರಂಭವನ್ನು ರಾಷ್ಟ್ರದ ಕಾರ್ಯಕ್ರಮವಾಗಿ ಆಚರಿಸುವುದು ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ. ಭಾರತದ ಜಾತ್ಯತೀತತೆ ಎಂದರೆ ಧರ್ಮ ಹಾಗೂ ರಾಷ್ಟ್ರದ ಪ್ರತ್ಯೇಕತೆ. ಆ ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳುವ ಸಂಪ್ರದಾಯವನ್ನು ನಾವು ಹೊಂದಿದ್ದೇವೆ ಎಂದು ಹೇಳಿದ್ದರು.

ಇದನ್ನು ಓದಿ: ರಾಮಮಂದಿರದ ಉದ್ಘಾಟನೆಯಲ್ಲಿ ಮೋದಿ: ಕಳವಳ ವ್ಯಕ್ತಪಡಿಸಿ ಹೇಳಿಕೆ ಬಿಡುಗಡೆ ಮಾಡಿದ 22 ಅನಿವಾಸಿ ಸಂಸ್ಥೆಗಳು

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...