Homeಮುಖಪುಟಕಾವೇರಿ ವಿಚಾರದಲ್ಲಿ ಮತ್ತೆ ಹಿನ್ನಡೆ: ಅ.15ರವೆಗೆ ಪ್ರತಿದಿನ 3 ಸಾವಿರ ಕ್ಯೂಸೆಕ್ಸ್ ನೀರು ಬಿಡಲೇಬೇಕು ಎಂದ...

ಕಾವೇರಿ ವಿಚಾರದಲ್ಲಿ ಮತ್ತೆ ಹಿನ್ನಡೆ: ಅ.15ರವೆಗೆ ಪ್ರತಿದಿನ 3 ಸಾವಿರ ಕ್ಯೂಸೆಕ್ಸ್ ನೀರು ಬಿಡಲೇಬೇಕು ಎಂದ ನಿರ್ವಹಣಾ ಪ್ರಾಧಿಕಾರ

- Advertisement -
- Advertisement -

ಕರ್ನಾಟಕ ಬಂದ್‌ ನಡುವೆಯೇ ರಾಜ್ಯಕ್ಕೆ ಮತ್ತೆ ಶಾಕ್ ಎದುರಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂ ಎಂಎ), ತಮಿಳುನಾಡಿಗೆ ಅ. 15ರವರೆಗೆ ದಿನಕ್ಕೆ 3 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಸೂಚಿಸಿದೆ.

ಸೆ. 26ರಂದು ನಡೆದಿದ್ದ ಸಭೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯು (ಸಿಡಬ್ಲ್ಯೂಆರ್ ಸಿ) ಸೆ. 27ರಿಂದ ಅ. 15ರವರೆಗೆ ದಿನನಿತ್ಯ 3 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ಹೊರಡಿಸಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಕರ್ನಾಟಕ ಸರ್ಕಾರ, ಕಾವೇರಿ ನೀರು ನಿಯಂತ್ರಣ ಸಮಿತಿಗೂ ಮೇಲ್ಪಟ್ಟದ ಸಂಸ್ಥೆಯಾದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮೊರೆ ಹೋಗಿ, ನಿಯಂತ್ರಣ ಸಮಿತಿಯು ನೀಡಿರುವ ಆದೇಶವನ್ನು ಪುನರ್ ಪರಿಶೀಲಿಸುವಂತೆ ಕೇಳಿತ್ತು.

ಮತ್ತೊಂದೆಡೆ ನಿಯಂತ್ರಣ ಸಮಿತಿಯ ಆದೇಶದಿಂದ ತಮಿಳುನಾಡು ಸಹ ಪ್ರಾಧಿಕಾರದ ಮೊರೆಹೋಗಿ, ತನಗೆ ಕರ್ನಾಟಕದಿಂದ ದಿನಕ್ಕೆ 12,500 ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶಿಸಬೇಕು ಎಂದು ಅಹವಾಲು ಸಲ್ಲಿಸಿತ್ತು.

ಕರ್ನಾಟಕ ಹಾಗೂ ತಮಿಳುನಾಡಿನ ವಾದಗಳನ್ನು ಆಲಿಸಲು ಸೆ. 29ರಂದು ಮಧ್ಯಾಹ್ನ ಸಭೆ ನಡೆಸಿದ ಪ್ರಾಧಿಕಾರ, ಸೆ. 26ರಂದು ನಿಯಂತ್ರಣ ಸಮಿತಿ ನೀಡಿದ್ದ ತೀರ್ಪನ್ನೇ ಪಾಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ. ಇದರಿಂದಾಗಿ, ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕಕ್ಕೆ ತೀವ್ರ ಹಿನ್ನೆಡೆಯಾಗಿದೆ.

ಸೆ. 29ರಂದು ನಡೆದಿದ್ದ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕ ಸರ್ಕಾರ, ಬಲವಾದ ವಾದವನ್ನು ಮಂಡಿಸಿತು. ಕಾವೇರಿ ಪ್ರಾಧಿಕಾರ ಹಾಗೂ ಕಾವೇರಿ ನೀರು ನಿಯಂತ್ರಣಾ ಸಮಿತಿಯ ಆದೇಶಗಳನ್ನು ಕರ್ನಾಟಕ ಸತತವಾಗಿ ಪಾಲನೆ ಮಾಡುತ್ತಾ ಬಂದಿದ್ದು, ಅದರಿಂದ ಕರ್ನಾಟಕದಲ್ಲಿರುವ ಕಾವೇರಿ ಕೊಳ್ಳದ ಜಲಾಶಯಗಳು ನಿಧಾನವಾಗಿ ಖಾಲಿಯಾಗುತ್ತಿವೆ. ಜನರ ಆಕ್ರೋಶವೂ ಹೆಚ್ಚಾಗುತ್ತಿದೆ. ಅದರಿಂದಾಗಿ, ರಾಜ್ಯದಲ್ಲಿ ಸತತವಾಗಿ ಪ್ರತಿಭಟನೆಗಳು, ಬಂದ್‌ಗಳು ನಡೆಯುತ್ತಿವೆ’ ಎಂದು ಹೇಳಿತ್ತು.

ಇದನ್ನೂ ಓದಿ: ಕಾವೇರಿ ನೀರು ಬಿಡಬಾರದೆನ್ನುವುದೇ ನಮ್ಮ ಅನಿಸಿಕೆ, ತಜ್ಞರ ಜತೆ ಚರ್ಚೆ ಬಳಿಕ ತೀರ್ಮಾನ: ಸಿಎಂ ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್‌ ವೇಮುಲಾ ಪ್ರಕರಣ ಮರುತನಿಖೆ ನಡೆಸುವಂತೆ ತೆಲಂಗಾಣ ಸಿಎಂಗೆ ಭೇಟಿ ಮಾಡಿದ ರಾಧಿಕಾ ವೇಮುಲಾ

0
ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ ಪ್ರಕರಣದಲ್ಲಿ ತೆಲಂಗಾಣ ಪೊಲೀಸರು ಪ್ರಕರಣದ ಮುಕ್ತಾಯದ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದರು, ಇದೀಗ ಪ್ರಕರಣದ ಮರು ತನಿಖೆ ನಡೆಸುವಂತೆ ರೋಹಿತ್ ವೇಮುಲಾ ತಾಯಿ ರಾಧಿಕಾ...