Homeಕರ್ನಾಟಕಬೆಂಗಳೂರು ಮತದಾರರ ಮಾಹಿತಿ ಕಳ್ಳತನ: ಚಿಲುಮೆ ಎನ್‌ಜಿಒ ನಿರ್ದೇಶಕ ರವಿಕುಮಾರ್ ಬಂಧನ

ಬೆಂಗಳೂರು ಮತದಾರರ ಮಾಹಿತಿ ಕಳ್ಳತನ: ಚಿಲುಮೆ ಎನ್‌ಜಿಒ ನಿರ್ದೇಶಕ ರವಿಕುಮಾರ್ ಬಂಧನ

- Advertisement -
- Advertisement -

ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ಕೃಷ್ಣಪ್ಪ ರವಿಕುಮಾರ್ (34) ಅವರ ವಿರುದ್ಧ ದೊಡ್ಡ ಪ್ರಮಾಣದ ಮತದಾರರ ಮಾಹಿತಿ ಕಳ್ಳತನಕ್ಕೆ ಸಂಬಂಧಿಸಿದಂತೆ ಪೊಲೀಸ್ ಪ್ರಕರಣ ದಾಖಲಾಗಿದ ಮೂರು ದಿನಗಳ ನಂತರ, ನವೆಂಬರ್ 20 ರ ಭಾನುವಾರದಂದು ಬೆಂಗಳೂರು ಪೊಲೀಸರು ಅವರನ್ನು ಬಂಧಿಸಿದ್ದಾರೆ.

2013ರಲ್ಲಿ ಚಿಲುಮೆ ಸಂಸ್ಥೆಯನ್ನು ರಿಜಿಸ್ಟರ್‌‌ ಮಾಡಿದವರಲ್ಲಿ ರವಿಕುಮಾರ್ ಒಬ್ಬರಾಗಿದ್ದು, ಮತದಾರರ ಮಾಹಿತಿ ಕಳ್ಳತನ ಪ್ರಕರಣದ ಎನ್‌ಜಿಒ ಹಿಂದಿನ ಪ್ರಮುಖ ವ್ಯಕ್ತಿಯಾಗಿದ್ದಾರೆ. ದಿ ನ್ಯೂಸ್‌ ಮಿನಿಟ್‌ ಮತ್ತು ಪ್ರತಿಧ್ವನಿ ಸುದ್ದಿ ಪೋರ್ಟಾಲ್‌ ನಡೆಸಿದ ಜಂಟಿ ವರದಿಯು ಮತದಾರರ ಮಾಹಿತಿಯನ್ನು ಸಂಗ್ರಹಿಸಿರುವ ಅವರ ಎನ್‌ಜಿಒದ ರಹಸ್ಯ ಕಾರ್ಯಾಚರಣೆಯ ವಿವರಗಳನ್ನು ಬಹಿರಂಗಪಡಿಸಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿಯ ಕಲ್ಲನಾಯಕನ ಹಳ್ಳಿಯವರಾದ ರವಿಕುಮಾರ್‌ ಅವರ ಕೃತ್ಯಗಳನ್ನು ಬಯಲಿಗೆಳೆಯುತ್ತಿದ್ದಂತೆ ಅವರು ಉತ್ತರ ಕನ್ನಡ ಜಿಲ್ಲೆಗೆ ಪರಾರಿಯಾಗಿದ್ದಾರೆ ಎಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ದಿ ನ್ಯೂಸ್ ಮಿನಿಟ್‌ ವರದಿ ಹೇಳಿದೆ.

ಇದನ್ನೂ ಓದಿ: ಬೆಂಗಳೂರು ಮತದಾರರ ಮಾಹಿತಿ ಕಳ್ಳತನ: ಚಿಲುಮೆ ಸಂಸ್ಥೆಯ ಇಬ್ಬರ ಬಂಧನ, ನಿರ್ದೇಶಕ ಪರಾರಿ

ಹಗರಣ ಬಯಲಾದ ನಂತರ ಅವರು ನಿರಂತರವಾಗಿ ಸಂಚರಿಸುತ್ತಲೆ ಇದ್ದು, ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಭಾನುವಾರ ಸಂಜೆ ಬೆಂಗಳೂರಿನ ಕಬ್ಬನ್ ಪಾರ್ಕ್ ಬಳಿ ವಕೀಲರೊಬ್ಬರ ಬಳಿ ತೆರಳುತ್ತಿದ್ದಾಗ ಅವರನ್ನು ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

“ಸಂಸ್ಥೆಯ ಕ್ಷೇತ್ರ ಕಾರ್ಯಕರ್ತರು ಬಳಸಿದ ಡಿಜಿಟಲ್ ಸಮೀಕ್ಷಾ ಅಪ್ಲಿಕೇಶನ್‌ನಲ್ಲಿ ಸಂಗ್ರಹಿಸಲಾದ ಮಾಹಿತಿಯ ಪ್ರಮಾಣವನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಚಿಲುಮೆಯ ಕಚೇರಿಗಳಿಂದ ವಶಪಡಿಸಿಕೊಂಡ ದಾಖಲೆಗಳು, ಅವರ ಫೋನ್, ಇಮೇಲ್ ಮೂಲಕ ರಾಜಕಾರಣಿಗಳಿಗೂ ಅವರಿಗೂ ಇರುವ ಲಿಂಕ್‌ಗಳನ್ನು ಸಹ ಪರಿಶೀಲಿಸುತ್ತಿದ್ದೇವೆ ” ಎಂದು ತನಿಖಾಧಿಕಾರಿ ತಿಳಿಸಿದ್ದಾರೆ ಎಂದು ನ್ಯೂಸ್ ಮಿನಿಟ್‌ ಹೇಳಿದೆ.

ಡಿಜಿಟಲ್ ಸಮೀಕ್ಷಾ ಅಪ್ಲಿಕೇಶನ್ ಡೆವಲಪರ್‌ಗಳನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾಗಿ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ಬಿಬಿಎಂಪಿ ಬಳಸಿಕೊಂಡು ಮತದಾರರ ಡೇಟಾ ಕದ್ದ ಬೊಮ್ಮಾಯಿ ಸರ್ಕಾರ: ಕಾಂಗ್ರೆಸ್‌ ದೂರು

ಮತದಾರರ ಮಾಹಿತಿಯನ್ನು ಕದಿಯಲು ಚುನಾವಣಾ ಅಧಿಕಾರಿಗಳಂತೆ ನಟಿಸುವ ಕ್ಷೇತ್ರ ಕಾರ್ಯಕರ್ತರನ್ನು ಎನ್‌ಜಿಒ ನಿಯೋಜಿಸಿದೆ ಎಂದು ತನಿಖಾ ವರದಿಯಲ್ಲಿ ನ್ಯೂಸ್ ಮಿನಿಟ್ ಹೇಳಿತ್ತು. ಇಷ್ಟೆ ಅಲ್ಲದೆ, ಚಿಲುಮೆ ಸಂಸ್ಥೆಯು ಈವೆಂಟ್ ಮ್ಯಾನೇಜ್‌ಮೆಂಟ್ ಮತ್ತು ಚುನಾವಣಾ ನಿರ್ವಹಣೆಯಲ್ಲಿ ಪರಿಣತಿ ಹೊಂದಿರುವ ಚಿಲುಮೆ ಎಂಟರ್‌ಪ್ರೈಸಸ್ ಎಂಬ ಖಾಸಗಿ ಕಂಪನಿಯನ್ನು ಸಹ ನಡೆಸುತ್ತಿದೆ.

ಕಂಪೆನಿಯ ವೆಬ್‌ಸೈಟ್‌ ಇದೀಗ ನಿಷ್ಕ್ರಿಯವಾಗಿದ್ದು, ಅದರಲ್ಲಿ ರಾಜಕೀಯ ಪಕ್ಷಗಳಿಗೆ, “ವಿದ್ಯುನ್ಮಾನ ಮತಯಂತ್ರ ಮತ್ತು ಎಣಿಕೆ ಹಾಲ್ ತಯಾರಿ, ಸಿಸಿಟಿವಿ ಅಳವಡಿಕೆ, ವೆಬ್‌ಕಾಸ್ಟಿಂಗ್ ಮತ್ತು ಚೆಕ್-ಪೋಸ್ಟ್ ತಯಾರಿ” ಮಾಡುವುದಾಗಿ ಹೇಳಿಕೊಂಡಿದೆ.

ಬೆಂಗಳೂರಿನ ಮಲ್ಲೇಶ್ವರಂನ 16 ಮತ್ತು 17ನೇ ಅಡ್ಡರಸ್ತೆಯಲ್ಲಿರುವ ಚಿಲುಮೆ ಟ್ರಸ್ಟ್ ಮತ್ತು ಟ್ರಸ್ಟ್‌ಗೆ ಸಂಬಂಧಿಸಿದ ಖಾಸಗಿ ಕಂಪನಿಯ ಕಚೇರಿ ಆವರಣದಲ್ಲಿ ಪೊಲೀಸ್ ಅಧಿಕಾರಿಗಳು ತಪಾಸಣೆ ನಡೆಸಿ ವಶಪಡಿಸಿಕೊಂಡ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ: ಅಹಿಂದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಸರ್ಕಾರ ಕೈಬಿಟ್ಟಿದೆ: ಡಿ.ಕೆ.ಶಿವಕುಮಾರ್‌

ಈ ಪ್ರಕರಣದಲ್ಲಿ ರವಿಕುಮಾರ್ ಸೇರಿದಂತೆ ಈ ವರೆಗೆ ಒಟ್ಟು ಐವರನ್ನು ಬಂಧಿಸಲಾಗಿದೆ. ರವಿಕುಮಾರ್‌ ಅವರ ಹಿರಿಯ ಸಹೋದರ ಕೆಂಪೇಗೌಡ, ಎನ್‌ಜಿಒದ ಮೂವರು ಉದ್ಯೋಗಿಗಳಾದ ನಿರ್ದೇಶಕ ರೇಣುಕಾ ಪ್ರಸಾದ್, ಎಚ್‌ಆರ್ ಎಕ್ಸಿಕ್ಯೂಟಿವ್ ಧರ್ಮೇಶ್ ಮತ್ತು ಪ್ರಾಜೆಕ್ಟ್ ಎಕ್ಸಿಕ್ಯೂಟಿವ್ ಪ್ರಜ್ವಲ್ ಅವರನ್ನು ನವೆಂಬರ್ 18 ರ ಶುಕ್ರವಾರ ರಾತ್ರಿ ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಬಿಜೆಪಿ ಮಾತ್ರ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದೆ ಎಂಬ ಮೋದಿ...

0
ಮೇ 1, 2024 ರಂದು ಗುಜರಾತ್‌ನ ಬನಸ್ಕಾಂತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದ ಏಕೈಕ ಪಕ್ಷ ಬಿಜೆಪಿ"...