Homeಮುಖಪುಟಇವಿಎಂ ಬದಲು ಬ್ಯಾಲೆಟ್ ಪೇಪರ್‌ ಮತದಾನಕ್ಕೆ ಮರಳಿದ ಬಾಂಗ್ಲಾದೇಶ

ಇವಿಎಂ ಬದಲು ಬ್ಯಾಲೆಟ್ ಪೇಪರ್‌ ಮತದಾನಕ್ಕೆ ಮರಳಿದ ಬಾಂಗ್ಲಾದೇಶ

- Advertisement -
- Advertisement -

ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಪ್ರಭಾವ ಬೀರಬಹುದಾದ ಮಹತ್ವದ ಕ್ರಮವನ್ನು ನೆರೆಯ ಬಾಂಗ್ಲಾದೇಶ ತೆಗೆದುಕೊಂಡಿದೆ. ಮತದಾನಕ್ಕಾಗಿ ಇವಿಎಂ (ವಿದ್ಯುನ್ಮಾನ ಮತಯಂತ್ರ) ಬದಲು ಬ್ಯಾಲೇಟ್ ಪೇಪರ್‌ ಬಳಸಲು ಬಾಂಗ್ಲಾ ಮುಂದಾಗಿದೆ ಎಂದು ‘ನ್ಯಾಷನಲ್‌ ಹೆರಾಲ್ಡ್‌’ ವರದಿ ಮಾಡಿದೆ.

ಮತದಾನಕ್ಕಾಗಿ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ರದ್ದುಗೊಳಿಸಿರುವ ಬಾಂಗ್ಲಾದೇಶ ಚುನಾವಣಾ ಆಯೋಗವು (ಬಿಇಸಿ) ಮುಂದಿನ ಸಂಸತ್ತಿನ ಚುನಾವಣೆಯಲ್ಲಿ ಇವಿಎಂಗಳನ್ನು ಬಳಸದಿರಲು ನಿರ್ಧರಿಸಿದೆ. ಮುಂದಿನ ಜನವರಿ 24ರಂದು ಚುನಾವಣೆ ನಡೆಯಬಹುದು.

ಎಲ್ಲಾ 300 ಸಂಸದೀಯ ಸ್ಥಾನಗಳಿಗೆ ಬ್ಯಾಲೆಟ್ ಪೇಪರ್‌ಗಳು ಮತ್ತು ಪಾರದರ್ಶಕ ಬ್ಯಾಲೆಟ್ ಬಾಕ್ಸ್‌ಗಳನ್ನು ಬಳಸಿಕೊಂಡು ಮುಂದಿನ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲು ಬಿಇಸಿ ನಿರ್ಧರಿಸಿದೆ ಎಂದು ಬಾಂಗ್ಲಾದೇಶದ ಚುನಾವಣಾ ಆಯುಕ್ತರು ಸೋಮವಾರ ತಿಳಿಸಿದ್ದಾರೆ.

“ಈ ಹಿಂದೆ, ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ 150 ಕ್ಷೇತ್ರಗಳಲ್ಲಿ ಮಾತ್ರ ಇವಿಎಂ ಬಳಸುವ ಯೋಜನೆಯನ್ನು ಚುನಾವಣಾ ಆಯೋಗ ಕೈಗೆತ್ತಿಕೊಂಡಿತ್ತು. ಆದರೆ, ಚುನಾವಣಾ ಆಯೋಗ ಯೋಜಿಸಿದ್ದ 8700 ಕೋಟಿ ಟಾಕಾ (ಬಾಂಗ್ಲಾದೇಶದ ಕರೆನ್ಸಿ) ಪ್ರಸ್ತಾವನೆಯನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗಲಿಲ್ಲ. ಇವಿಎಂಗಳ ನವೀಕರಣವನ್ನು ಸಹ ಸರ್ಕಾರವು ಅನುಮೋದಿಸಿರಲಿಲ್ಲ” ಎಂದು ಎಐಆರ್‌ ವರದಿ ಮಾಡಿದೆ.

ಕುತೂಹಲಕಾರಿ ಸಂಗತಿಯೆಂದರೆ ಇವಿಎಂಗಳನ್ನು ರದ್ದುಗೊಳಿಸುತ್ತಿರುವುದಕ್ಕೆ ಯಾವುದೇ ಕಾರಣವನ್ನು ಬಾಂಗ್ಲಾ ಚುನಾವಣಾ ಆಯೋಗ ನೀಡಿಲ್ಲ. ಇವಿಎಂಗಳನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಸೇರಿದಂತೆ ಪ್ರತಿಪಕ್ಷಗಳು ಆರೋಪಿಸಿದ್ದರಿಂದ ಜನರ ವಿಶ್ವಾಸಾರ್ಹತೆಯನ್ನು ಪಡೆಯುವುದಕ್ಕೆ ಶೇಖ್ ಹಸೀನಾ ಸರ್ಕಾರ ಬಯಸಲಿದೆ ಎಂದು ಊಹಿಸಲಾಗಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾಂಗ್ಲಾದೇಶದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಇವಿಎಂಗಳನ್ನು ಬಳಸುವುದಿಲ್ಲ. ಮಾಧ್ಯಮಗಳ ವರದಿ ಪ್ರಕಾರ ಈ ಬಾರಿ ಕನಿಷ್ಠ 150 ಕ್ಷೇತ್ರಗಳಲ್ಲಿ ಇವಿಎಂ ಮೂಲಕ ಮತದಾನ ನಡೆಸಲು ಬಿಇಸಿ ಸಿದ್ಧತೆ ನಡೆಸಿದೆ.

ಮತದಾನಕ್ಕಾಗಿ ಹಳೆಯ ಬ್ಯಾಲೆಟ್ ಪೇಪರ್ ವ್ಯವಸ್ಥೆಗೆ ಹಿಂತಿರುಗಲು ಬಾಂಗ್ಲಾದೇಶ ನಿರ್ಧಾರ ಕೈಗೊಂಡಿರುವುದಿರಂದ ಭಾರತದಲ್ಲೂ ಚರ್ಚೆ ಹುಟ್ಟಿಕೊಳ್ಳಬಹುದು, ಇವಿಎಂ ಬದಲು ಬ್ಯಾಲೆಟ್ ಪೇಪರ್‌ ಬಳಸಿ ಎಂಬ ಬೇಡಿಕೆಗೆ ಮರುಜೀವ ಬರಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ. ಮತದಾನ ವ್ಯವಸ್ಥೆಯಲ್ಲಿ ಇವಿಎಂಗಳ ದುರ್ಬಳಕೆ ನಡೆಯುತ್ತಿದೆ ಎಂದು ಕಾಂಗ್ರೆಸ್ ಸೇರಿದಂತೆ ಬಹುತೇಕ ವಿರೋಧ ಪಕ್ಷಗಳು ತೀವ್ರ ಕಳವಳ ವ್ಯಕ್ತಪಡಿಸುತ್ತಾ ಬಂದಿವೆ.

ಆದರೆ, ಭಾರತೀಯ ಚುನಾವಣಾ ಆಯೋಗ (ಇಸಿಐ) ಮತ್ತು ಕೇಂದ್ರ ಸರ್ಕಾರ ಪದೇ ಪದೇ ಈ ಬೇಡಿಕೆಯನ್ನು ತಿರುಸ್ಕರಿಸುತ್ತಾ ಬಂದಿವೆ ಎಂದು ‘ನ್ಯಾಷನಲ್‌ ಹೆರಾಲ್ಡ್‌’ ವರದಿ ಉಲ್ಲೇಖಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...