Homeಮುಖಪುಟಅದಾನಿ ಮಾಲಿಕತ್ವದ ಬಂದರಿನ ವಿರುದ್ಧ ಪ್ರತಿಭಟಿಸಿದ ಚರ್ಚ್‌ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ ಮೋದಿ ಸರಕಾರ

ಅದಾನಿ ಮಾಲಿಕತ್ವದ ಬಂದರಿನ ವಿರುದ್ಧ ಪ್ರತಿಭಟಿಸಿದ ಚರ್ಚ್‌ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ ಮೋದಿ ಸರಕಾರ

- Advertisement -
- Advertisement -

ಕೇರಳದಲ್ಲಿ ಅದಾನಿ ಸಮೂಹದ ಮಾಲೀಕತ್ವದ ಬಂದರಿನ ವಿರುದ್ಧ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಚರ್ಚ್‌ವೊಂದರ ಬ್ಯಾಂಕ್ ಖಾತೆಗಳನ್ನು ಮೋದಿ ಸರಕಾರ ಸ್ಥಗಿತಗೊಳಿಸಿರುವ ಆರೋಪ ಕೇಳಿ ಬಂದಿದೆ.

ಲೋಕಸಭೆ ಚುನಾವಣೆಗೆ ಕೇರಳದಲ್ಲಿ ಮತದಾನಕ್ಕೆ ಇನ್ನೇನು ಎರಡೇ ದಿನಗಳು ಬಾಕಿ ಇರುವಾಗ ತಿರುವನಂತಪುರಂನ ಪ್ರಮುಖ ಲ್ಯಾಟಿನ್‌ ಚರ್ಚ್‌ ಈ ಹೇಳಿಕೆಯನ್ನು ನೀಡಿದ್ದು, ಅದಾನಿ ಗ್ರೂಪ್‌ನ  ವಿಜಿಂಜಂ ಅಂತರಾಷ್ಟ್ರೀಯ ಬಂದರು ವಿರುದ್ಧ 2022ರಲ್ಲಿ ಪ್ರತಿಭಟನೆ ಮಾಡಿದ ನಂತರ ದ್ರ ಸರ್ಕಾರವು ತನ್ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ. ಖಾತೆಯ ಸ್ಥಗಿತದಿಂದ ಈಗಲೂ ಸಮಸ್ಯೆ ಮುಂದುವರಿದಿದೆ ಎಂದು ಹೇಳಿಕೊಂಡಿದೆ.

ಕೇರಳದ ರಾಜಧಾನಿಯಲ್ಲಿನ ಕರಾವಳಿಯ ಕುಗ್ರಾಮವಾದ ವಿಝಿಂಜಂ ಬಂದರಿನ ವಿರುದ್ಧ ಭಾರೀ ಪ್ರತಿಭಟನೆಗಳು ನಡೆದಿತ್ತು. ಪ್ರತಿಭಟನೆ ನವೆಂಬರ್ 2022ರಲ್ಲಿ ಹಿಂಸಾಚಾರಕ್ಕೆ ಕಾರಣವಾಗಿತ್ತು. ಭಾನುವಾರ ಚರ್ಚ್‌ನಲ್ಲಿ ನಡೆದ ಪ್ರಾರ್ಥನೆ ವೇಳೆ ಓದಲಾದ ಪತ್ರದಲ್ಲಿ ಚರ್ಚ್‌ ಈ ಮಾಹಿತಿ ಹಂಚಿಕೊಂಡಿದೆ. ಖಾತೆ ಸ್ಥಗಿತಗೊಳಿಸಿರುವ ಕಾರಣ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ ಎಂದು ತಿಳಿಸಿದೆ. ವಿವಿಧ ಲ್ಯಾಟಿನ್‌ ಚರ್ಚ್‌ಗಳಲ್ಲೂ ಈ ಪತ್ರವನ್ನು ಓದಲಾಗಿದ್ದು, ಚರ್ಚ್‌ನ ವೆಚ್ಚಗಳನ್ನು ಭರಿಸಲು ಆರ್ಥಿಕ ನೆರವು ನೀಡಬೇಕು ಎಂದು ಕೇಳಿಕೊಳ್ಳಲಾಗಿದೆ.

ನಾವು ನಮ್ಮ ಮಿಷನರಿ ಉದ್ದೇಶಗಳಿಗಾಗಿ ಸಹ ಹಣವನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಏಕೆಂದರೆ  ವಿಝಿಂಜಂ ಪ್ರತಿಭಟನೆಯ ನಂತರ ಅಧಿಕಾರಿಗಳು ನಮ್ಮ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ. ಆ ಪರಿಸ್ಥಿತಿಯು ಈಗಲೂ ಮುಂದುವರೆದಿದೆ ಚರ್ಚಿನಲ್ಲಿ ಓದಲಾದ ಪತ್ರದಲ್ಲಿ ಹೇಳಲಾಗಿದೆ.ಚರ್ಚ್‌ನ ವಿವಿಧ ವೆಚ್ಚಗಳಿಗಾಗಿ ಭಕ್ತರಿಂದ ಹಣಕಾಸಿನ ನೆರವು ಕೋರಿ ಬರೆದ ಪತ್ರದಲ್ಲಿ ಖಾತೆ ಸ್ಥಗಿತದ ವಿಷಯವನ್ನು ಉಲ್ಲೇಖಿಸಲಾಗಿದೆ.

ಕೇರಳದಲ್ಲಿ ಏಪ್ರಿಲ್ 26 ರಂದು ಲೋಕಸಭೆ ಚುನಾವಣೆ ನಡೆಯಲಿದ್ದು, ಜೂನ್ 4ರಂದು ರಾಷ್ಟ್ರವ್ಯಾಪಿ ಫಲಿತಾಂಶ ಪ್ರಕಟವಾಗಲಿದೆ. ಲೋಕಸಭೆ ಚುನಾವಣೆ ಹಿನ್ನೆಲೆ ಕೇರಳದಲ್ಲಿ ಕ್ರಿಶ್ಚಿಯನ್‌ ಸಮುದಾಯವನ್ನು ಓಲೈಕೆ ಮಾಡಲು ಮೋದಿ ಮತ್ತು ಬಿಜೆಪಿ ಮುಂದಾಗಿತ್ತು, ಇತ್ತೀಚೆಗೆ ಕೇರಳಕ್ಕೆ ಭೇಟಿ ನೀಡಿದ್ದ ಮೋದಿ ವಿವಿಧ ಚರ್ಚ್‌ನ ಪಾದ್ರಿಗಳನ್ನು ಭೇಟಿ ಮಾಡಿ ಮಾತುಕತೆಯನ್ನು ನಡೆಸಿದ್ದರು. ಇದೀಗ ಕೇಂದ್ರ ಸರಕಾರ ಲ್ಯಾಟಿನ್‌ ಚರ್ಚ್‌ನ ಬ್ಯಾಂಕ್‌ ಖಾತೆ ಸ್ಥಗಿತಗೊಳಿಸಿರುವ ಮಾಹಿತಿ ಬಹಿರಂಗವಾಗಿದ್ದು, ಚುನಾವಣೆ ಹೊಸ್ತಿಲಲ್ಲೇ ಕ್ರಿಶ್ಚಿಯನ್‌ ಸಮುದಾಯ ಬಿಜೆಪಿ ವಿರುದ್ಧ ಮುನಿಸಿಕೊಳ್ಳಲು ಕಾರಣವಾಗಿದೆ.

ಇದನ್ನು ಓದಿ: ಕಾಂಗ್ರೆಸ್ ವಿರುದ್ಧದ ಮೋದಿಯವರ ನಿರಂತರ ದಾಳಿ ಬುದ್ಧಿವಂತ ನಿರ್ಧಾರವಲ್ಲ: ಪವಾರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...