Homeಮುಖಪುಟಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ನಿಷಿದ್ಧ ಯೌನ ಸಂಬಂಧಗಳು; ಕೊನೆಯ ಭಾಗ

ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ನಿಷಿದ್ಧ ಯೌನ ಸಂಬಂಧಗಳು; ಕೊನೆಯ ಭಾಗ

- Advertisement -
- Advertisement -

ತಾಯಿಯೊಂದಿಗೆ ಮಗನ ಯೌನ ಸಂಬಂಧ

ಮಗನಾದವನು ತನ್ನ ತಾಯಿಯೊಂದಿಗೆ ಯೌನ ಸಂಬಂಧಗಳನ್ನು ಹೊಂದಿದ್ದ ಉದಾಹರಣೆಗಳೂ ಹಿಂದೂ ಗ್ರಂಥಗಳಲ್ಲಿ ದೊರಕುತ್ತವೆ. ಋಗ್ವೇದದಲ್ಲಿಯೂ ಇಂತಹ ಸಂಬಂಧಗಳ ಪ್ರಸ್ತಾಪವಿದೆ. ಋಗ್ವೇದವನ್ನು ಕನ್ನಡಕ್ಕೆ ಅನುವಾದ ಮಾಡಿ ದೀರ್ಘವಾದ ಭಾಷ್ಯ ಬರೆದಿರುವ ಎಚ್.ಪಿ. ವೆಂಕಟರಾಯರು ಋಗ್ವೇದದ 4ನೆಯ ಮಂಡಲದ 16ನೆಯ ಸೂಕ್ತದ 10ನೆಯ ಋಕ್ಕುಗಳನ್ನು (14) ಹೀಗೆ ಅನುವಾದಿಸಿದ್ದಾರೆ: ’ಎಲೈ ಇಂದ್ರನೇ, ದಸ್ಯುವನ್ನು ಕೊಲ್ಲತಕ್ಕ ಮನಸ್ಸ್ಸಿನಿಂದ ಕೂಡಿದ ನೀನು ಕುತ್ಸನ ಮನೆಗೆ ದಯಮಾಡು. ಕುತ್ಸನೂ ಕೂಡ ನಿನ್ನ ಸಖಿತ್ವವನ್ನು ಸಂಪಾದಿಸುವುದರಲ್ಲಿ ಆಸೆಯುಳ್ಳವನಾಗಿದ್ದಾನೆ. ಅನಂತರ ನೀವಿಬ್ಬರೂ ನಿನ್ನ ಗೃಹಕ್ಕೆ ತೆರಳಿ ಒಟ್ಟಿಗೆ ಕುಳಿತುಕೊಳ್ಳಿ, ಸತ್ಯವನ್ನು ನೋಡಲು ಸಮರ್ಥಳಾದ ಇಂದ್ರಭಾರ್ಯೆಯು ಸಮಾನವಾದ ರೂಪವುಳ್ಳ ನಿಮ್ಮಿಬ್ಬರನ್ನೂ ನೋಡಿ ಸಂಶಯಗೊಂಡಳು’.

ಋಗ್ವೇದ ಸೂಕ್ಷ್ಮವಾಗಿ ಸೂಚಿಸಿದ್ದನ್ನು ಜೈಮಿನೀಯ ಬ್ರಾಹ್ಮಣ (1.199-200) ವಿವರವಾಗಿ ಹೇಳುತ್ತದೆ. ಆ ಎರಡು ಬ್ರಾಹ್ಮಣಗಳು ಬಹಳ ವಿಸ್ತೃತವಾಗಿ ಇರುವುದರಿಂದ ಅವುಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸುತ್ತೇನೆ. “ಇಂದ್ರ ಒಮ್ಮೆ ತನ್ನ ಮಗ ಕುತ್ಸ ಔರವನನ್ನು ತನ್ನ ಹೆಂಡತಿ ಪುಲೋಮನ ಮಗಳಾದ ಶಚಿಯೊಡನೆ ಸುಖಿಸುತ್ತಿದ್ದುದನ್ನು ನೋಡಿದ. ’ನೀನು ಹೀಗೆ ಮಾಡಲು ಹೇಗೆ ಸಾಧ್ಯ’ ಎಂದು ಆತ ಅವಳನ್ನು ಕೇಳಿದಾಗ ಅವಳು ನಿಮ್ಮಿಬ್ಬರಲ್ಲಿ ನನಗೆ ವ್ಯತ್ಯಾಸ ಗೊತ್ತಾಗಲಿಲ್ಲ ಎಂದಳು. ಆಗ ಇಂದ್ರ ಹಾಗಾದರೆ ನಾನು ಅವನ ತಲೆಯನ್ನು ಬೋಳು ಮಾಡುತ್ತೇನೆ, ಆಗ ನೀನು ನಮ್ಮಿಬ್ಬರಲ್ಲಿ ವ್ಯತ್ಯಾಸವನ್ನು ಗುರುತಿಸಬಹುದು ಎಂದು ಹೇಳಿ ಕುತ್ಸನ ತಲೆ ಬೋಳಿಸಿದ. ಆದರೆ ಕುತ್ಸ ತನ್ನ ತಲೆಗೆ ಒಂದು ರುಮಾಲು ಸುತ್ತಿಕೊಂಡು ಮತ್ತೆ ಅವಳನ್ನು ಸೇರಿದ. ಇಂತಹ ರುಮಾಲನ್ನೇ ರಥದ ಸಾರಥಿಗಳು ಸುತ್ತಿಕೊಳ್ಳುತ್ತಾರೆ.”

ಕೃಷ್ಣನ ಮಗ ಸಾಂಬ ಕೂಡ ತನ್ನ ತಾಯಿಯೊಂದಿಗೆ ಯೌನ ಸಂಬಂಧ ಹೊಂದಿದ್ದ ಎಂಬುದನ್ನು ಮತ್ಸ್ಯ ಪುರಾಣ ಹೇಳುತ್ತದೆ. ಇದನ್ನು ಗಮನಿಸಿದ ಕೃಷ್ಣ ಸಾಂಬನ ಮೇಲೆ ಕೋಪಗೊಂಡು ಅವನನ್ನು ಹಾಗೂ ತನ್ನ ಆ ಹೆಂಡರನ್ನು ಶಪಿಸಿದ. ಹರಿವಂಶದ ವಿಷ್ಣು ಪರ್ವದ 109ನೆಯ ಅಧ್ಯಾಯ ಕೃಷ್ಣನ ಇನ್ನೊಬ್ಬ ಮಗ ಪ್ರದ್ಯುಮ್ನ ತನಗೆ ಮೊಲೆಹಾಲು ಉಣಿಸಿದ ತಾಯಿ ಮಾಯಾವತಿಯನ್ನು ಮದುವೆಯಾದದ್ದನ್ನು ಪ್ರಸ್ತಾಪ ಮಾಡುತ್ತದೆ. ಈ ಘಟನೆಗಳನ್ನು ಮಹಾಭಾರತದ ವನ ಪರ್ವದ ಅಧ್ಯಾಯ 233ರಲ್ಲಿ ಪ್ರಸ್ತಾಪಿಸಲಾಗಿರುವ ಸತ್ಯಭಾಮಾ-ದ್ರೌಪದಿ ಸಂವಾದ ಪುಷ್ಟೀಕರಿಸುತ್ತದೆ. ತನ್ನ ಗಂಡಂದಿರ ಮೇಲೆ ತಾನು ಹೇಗೆ ಅಧಿಕಾರ ಹೊಂದಿರುವೆ ಎನ್ನುವುದನ್ನು ಸತ್ಯಭಾಮಾಗೆ ವಿವರಿಸುವಾಗ ದ್ರೌಪದಿ, “ಪುರುಷರ ಸಮ್ಮುಖದಲ್ಲಿ ಎಲ್ಲಾ ಉತ್ಸಾಹ ಮತ್ತು ಅಜಾಗರೂಕತೆಯನ್ನು ತ್ಯಜಿಸಿ ಮೌನವನ್ನು ಆಚರಿಸುವ ಮೂಲಕ ನಿಮ್ಮ ಒಲವುಗಳನ್ನು ಮರೆಮಾಚಬೇಕು ಮತ್ತು ನೀವು ನಿಮ್ಮ ಮಕ್ಕಳಾದ ಪ್ರದ್ಯುಮ್ನ ಮತ್ತು ಸಾಂಬರೊಂದಿಗೆ ಏಕಾಂತದಲ್ಲಿ ವಾಸ ಮಾಡಬಾರದು ಹಾಗೂ ಮಾತನಾಡಲೂಬಾರದು” ಎಂದು ಹೇಳುತ್ತಾಳೆ. ಇದು ಸಾಂಬ ಹಾಗೂ ಪ್ರದ್ಯುಮ್ನರು ನಿಷಿದ್ಧ ಯೌನ ಸಂಬಂಧವನ್ನು ಹೊಂದಿರುವುದನ್ನು ಪುಷ್ಟೀಕರಿಸುತ್ತದೆ.

ಸಹೋದರ ಸಹೋದರಿಯರ ನಡುವಣ ನಿಷಿದ್ಧ ಯೌನ ಸಂಬಂಧ

ಮಹಾಭಾರತ ನಿಷಿದ್ಧ ಯೌನ ಸಂಬಂಧಗಳ ಹಲವಾರು ಉದಾಹರಣೆಗಳನ್ನು ದಾಖಲಿಸುತ್ತದೆ. ಉದಾಹರಣೆಗೆ, ವಾಸುದೇವ ಮತ್ತು ಕುಂತಿ ಅಣ್ಣ ತಂಗಿಯರಾಗಿದ್ದರು. ಅಂದ ಮೇಲೆ ವಾಸುದೇವನ ಮಗಳು ಸುಭದ್ರೆ ಮತ್ತು ಅವಳನ್ನು ವರಿಸಿದ ಕುಂತಿಯ ಮಗ ಅರ್ಜುನ ಸೋದರ ಸಂಬಂಧಿಗಳಾಗಲಿಲ್ಲವೇ?

ಸಹೋದರ ಸಹೋದರಿಯರ ನಡುವಣ ನಿಷಿದ್ಧ ಯೌನ ಸಂಬಂಧಗಳ ಬಗ್ಗೆ ಋಗ್ವೇದದಲ್ಲಿ ಹಲವಾರು ಪ್ರಸ್ತಾಪಗಳಿವೆ. ಇಂತಹ ನಿಷಿದ್ಧ ಯೌನ ಸಂಬಂಧದ ಮೊದಲ ಪ್ರಸ್ತಾಪ ಬರುವುದು ಋಗ್ವೇದದ 6ನೆಯ ಮಂಡಲದ 55ನೆಯ ಸೂಕ್ತದ 4ರಿಂದ 6ನೆಯ ಋಕ್ಕುಗಳಲ್ಲಿ. ಇವುಗಳಲ್ಲಿ ಪೂಷಾಣ ತನ್ನ ಸಹೋದರಿ ಹಾಗೂ ತಾಯಿಯ ಜೊತೆಗೆ ನಿಷಿದ್ಧ ಯೌನ ಸಂಬಂಧ ಹೊಂದಿದ ಬಗ್ಗೆ ಹೇಳಲಾಗಿದೆ. (15) ಋಗ್ವೇದದ ಮೇಲೆ 16ನೆಯ ಶತಮಾನದಲ್ಲಿ ಭಾಷ್ಯ ಬರೆದ ಸಾಯಣರು ಈ ಋಕ್ಕಿನ ಬಗ್ಗೆ ಬರೆಯುತ್ತ ನಿಷಿದ್ಧ ಯೌನ ಸಂಬಂಧವನ್ನು ಪ್ರಸ್ತಾಪ ಮಾಡುತ್ತಾರೆ: “ತನ್ನ ಸಹೋದರಿ ಉಷಸ್ಸಿನ ಪ್ರೇಮಿ ಎಂದೇ ಪ್ರಸಿದ್ಧಿ ಪಡೆದಿರುವ ಪೂಷಣನನ್ನು ಆರಾಧಿಸೋಣ”. ಪ್ರೊ. ಟಿ.ಎಚ್.ಗ್ರಿಪ್ಫಿತ್ ಅವರು ಈ ಋಕ್ಕನ್ನು ಹೀಗೆ ಅನುವಾದಿಸುತ್ತಾರೆ: “ತನ್ನ ಸಹೋದರಿಯ ಪ್ರಿಯಕರ ಎಂದೇ ಕರೆಯಲ್ಪಡುವ, ಕುರಿಗಳನ್ನು, ಕುದುರೆಗಳನ್ನು ಪಾಲಿಸುವ ಆ ಶಕ್ತಿಯುತ ಪೂಷಣನನ್ನು ಹೊಗಳೋಣ. ತನ್ನ ತಾಯಿಯ ಪ್ರಿಯಕರನನ್ನು ನಾನು ಸಂಬೋಧಿಸುತ್ತೇನೆ. ತನ್ನ ಸಹೋದರಿಯನ್ನು ಪ್ರೀತಿಸುವವನೇ, ಇಂದ್ರನ ಸಹೋದರನೇ, ನನ್ನ ಮಿತ್ರನೇ ಕೇಳು”. ಮೈಸೂರು ಮಹಾರಾಜರ ಆಶಯದ ಮೇರೆಗೆ ಋಗ್ವೇದವನ್ನು ಕನ್ನಡಕ್ಕೆ ಅನುವಾದ ಮಾಡಿ ಭಾಷ್ಯ ಬರೆದಿರುವ ಎಚ್.ಪಿ.ವೆಂಕಟರಾಯರು ಈ ಋಕ್ಕನ್ನು ಹೀಗೆ ಅನುವಾದಿಸುತ್ತಾರೆ: “ಯಾವ ಪೂಷದೇವನು ತನ್ನ ಸಹೋದರಿಯಾದ ಉಷಸ್ಸಿಗೆ ಉಪಪತಿ ಎಂದು ಪ್ರಸಿದ್ಧನಾಗಿದ್ದಾನೆಯೋ ಅಂತಹ ಅಜರೂಪವಾದ ವಾಹನವುಳ್ಳವನೂ, ಶಕ್ತಿಯುತನೂ, ಪೋಷಕನೂ ಆದ ಪೂಷದೇವನನ್ನು ಈಗ ಸ್ತುತಿಸಿ ಪೂಜಿಸೋಣ”.

ಋಗ್ವೇದದ 10ನೆಯ ಮಂಡಲದ 3ನೆಯ ಸೂಕ್ತದ 3ನೆಯ ಋಕ್ಕು ಅಗ್ನಿಯನ್ನು ತನ್ನ ಸಹೋದರಿಯ ಪ್ರಿಯಕರ ಎಂದು ಹೇಳುತ್ತದೆ. (16) ಇದನ್ನು ವೆಂಕಟರಾಯರು ಹೀಗೆ ಅನುವಾದಿಸುತ್ತಾರೆ: “ಕಲ್ಯಾಣಾತ್ಮಕನಾದ ಅಗ್ನಿಯು ಮಂಗಳಕರವಾದ ತೇಜಸ್ಸಿನಿಂದ ಸೇವಿಸಲ್ಪಟ್ಟವನಾಗಿ ಬಂದಿದ್ದಾನೆ. ಅನಂತರ ಶತ್ರುನಾಶಕನಾದ ಅಗ್ನಿಯು ತನ್ನ ಭಗಿನಿಯಾದ ಉಷಸ್ಸನ್ನು ಸಮೀಪಿಸುತ್ತಾನೆ. ಉತ್ತಮವಾದ ಪ್ರಜ್ಞಾಪಕಗಳಾದ ಕಾಂತಿಗಳಿಂದ ಸರ್ವತ್ರ ವ್ಯಾಪಿಸಿರುವ ಅಗ್ನಿಯು ಶ್ವೇತವರ್ಣಗಳುಳ್ಳ ತೇಜಸ್ಸುಗಳಿಂದ ರಾತ್ರಿಯ ಕತ್ತಲೆಯನ್ನು ಆಕ್ರಮಿಸಿ ನಿಂತಿದ್ದಾನೆ”. ಗ್ರಿಪ್ಫಿಥ್ ಹೀಗೆ ಅನುವಾದಿಸುತ್ತಾರೆ: “ಮಂಗಳಾತ್ಮಕ ವನಿತೆಯ ಸೇವಕನಾಗಿ ಮಂಗಳಾತ್ಮಕನಾದವನು ಬಂದಿದ್ದಾನೆ. ತನ್ನ ಸಹೋದರಿಯನ್ನು ಪ್ರಿಯಕರ ಹಿಂಬಾಲಿಸುತ್ತಾನೆ. ಅಗ್ನಿ, ಹೊಳೆಯುವ ಬೆಳಕನ್ನು ದೂರದವರೆಗೆ ಹರಡುತ್ತ ರಾತ್ರಿಯನ್ನು ಶುಭ್ರವಾದ ಬಟ್ಟೆಗಳಿಂದ ಆಚ್ಛಾದಿಸಿದ್ದಾನೆ”.

ಇಂತಹ ನಿಷಿದ್ಧ ಯೌನ ಸಂಬಂಧಗಳು ಹಿಂದೂಗಳ ವಿಶೇಷತೆಯೇನಾಗಿರಲಿಲ್ಲ. ಬೈಬಲ್ ಕೂಡ ಇಂತಹ ಸಂಬಂಧಗಳನ್ನು ಉಲ್ಲೇಖಿಸುತ್ತದೆ. ಆಡಮ್‌ನ ಮಗ ಕೇನ್ ಕೂಡ ತನ್ನ ಸಹೋದರಿಯನ್ನೇ ಮದುವೆಯಾಗಬೇಕಾಯಿತು, ಯಾಕೆಂದರೆ ಆತನ ತಾಯಿ ಈವಳನ್ನು ಹೊರತುಪಡಿಸಿ ಬೇರಾವ ಹೆಂಗಸೂ ಇರಲಿಲ್ಲ, ಎಂದು ಜೆನೆಸಿಸ್ 19.31-32 ಹೇಳುತ್ತದೆ: “ಒಂದು ದಿನ ಅಕ್ಕ ತನ್ನ ತಂಗಿಗೆ ಹೇಳಿದಳು: ’ನಮ್ಮ ತಂದೆಗೆ ವಯಸ್ಸಾಗುತ್ತ ಬಂದಿದೆ, ಅವನನ್ನು ಬಿಟ್ಟು ನಮ್ಮನ್ನು ಬಸುರಿ ಮಾಡಲು ಬೇರಾವ ಗಂಡಸೂ ದೇಶದಲ್ಲಿ ಉಳಿದಿಲ್ಲ, ನಮ್ಮ ತಂದೆಗೆ ಹೆಂಡಕುಡಿಸಿ ಅವನೊಂದಿಗೆ ಮಲಗಿಕೊಳ್ಳೋಣ. ನಾವು ನಮ್ಮ ತಂದೆಯ ಮೂಲಕ ಮಕ್ಕಳನ್ನು ಪಡೆಯೋಣ ನಮ್ಮ ಪರಿವಾರವನ್ನು ಬದುಕುಳಿಸಲು ಇದೊಂದೇ ನಮಗಿರುವ ಅವಕಾಶ’”. ಎಕ್ಸೋಡಸ್ 6.20 ಕೂಡ ಮೋಸಸ್ ಇಂತಹುದೇ ಒಂದು ನಿಷಿದ್ಧ ಯೌನ ಸಂಬಂಧದ ಮೂಲಕ ಹುಟ್ಟಿದ್ದ ಎಂದು ಹೇಳುತ್ತದೆ.

ಬೈಬಲ್ ಉಲ್ಲೇಖ ಮಾಡುವ ಇಬ್ರಾಹಿಮ್ ಕೂಡ ತನ್ನ ಅರ್ಧ-ಸಹೋದರಿಯಾದ ಸಾರಾಳನ್ನು ಮದುವೆ ಆಗಿದ್ದುದಾಗಿ ಹೇಳುತ್ತದೆ. ಆದರೆ ಅತ್ಯಂತ ಪ್ರಚಲಿತ ಉದಾಹರಣೆ ಎಂದರೆ ಇಡಿಪಸ್‌ನದು. ಇವನ ನಿಷಿದ್ಧ ಯೌನ ಸಂಬಂಧವನ್ನು ನಿಷ್ಕಳಂಕ ನಿಷಿದ್ಧ ಯೌನ ಸಂಬಂಧ ಎಂದು ಹೇಳಬಹುದು. ಯಾಕೆಂದರೆ ಈತ ತನಗೆ ಗೊತ್ತಿಲ್ಲದೇ ಅಂಥ ಸಂಬಂಧವನ್ನು ಹೊಂದಿದ್ದ. ಆದರೆ ಇತಿಹಾಸದಲ್ಲಿ ದಾಖಲಾಗಿರುವ ಹೆಚ್ಚಿನ ನಿಷಿದ್ಧ ಯೌನ ಸಂಬಂಧಗಳು ಗೊತ್ತಿದ್ದೂ ಮಾಡಿದ ಸಂಬಂಧಗಳೇ ಆಗಿವೆ. ಉದಾಹರಣೆಗೆ ಇಜಿಪ್ಟಿನ ರಾಜ ಮನೆತನಗಳಲ್ಲಿ ನಡೆಯುತ್ತಿದ್ದ ಸಹೋದರ-ಸಹೋದರಿ ಮದುವೆಗಳು.

ಇದನ್ನೂ ಓದಿ: ಅಂದಿನಿಂದ ಇಂದಿನವರೆಗೆ ಮುಂದುವರಿಯುತ್ತಿರುವ ನರಬಲಿ; ಸನಾತನ ಧರ್ಮದ ಕುರುಹುಗಳು

ಹಿಂದೂಗಳಲ್ಲೂ ಇಂತಹ ನಿಷಿದ್ಧ ಯೌನ ಸಂಬಂಧಗಳು ಇದ್ದುದೇನೂ ವಿಶೇಷವಲ್ಲವಾದರೂ ಇಂತಹ ಸಂಬಂಧಗಳ ಬಗ್ಗೆ ಹಿಂದೂ ಮತಾಂಧರು ಬಹಳ ಮುಜುಗರ ಪಡುತ್ತಾರೆ. ಮನುಸ್ಮೃತಿ ಮಹಿಳೆಯರು ಮತ್ತು ಶೂದ್ರರ ಬಗ್ಗೆ ಬಹಳ ಕೀಳಾಗಿ ಹೇಳುತ್ತವೆ ಎನ್ನುವ ಮುಜುಗರದಿಂದ ಮತ್ತು ಪ್ರಾಚೀನ ಭಾರತದಲ್ಲಿ ಆರ್ಯರು ಮಾಂಸಾಹಾರಿಗಳಾಗಿದ್ದರು ಎನ್ನುವ ಮುಜುಗರದಿಂದ ತಪ್ಪಿಸಿಕೊಳ್ಳಲು ಈ ಮತಾಂಧರು ಮನುಸ್ಮೃತಿಯಲ್ಲಿರುವ ಅಂತಹ ಶ್ಲೋಕಗಳನ್ನೇ ಕಲಬೆರಕೆಯಾದ ಶ್ಲೋಕಗಳು ಎಂದು ನೆಪಮಾಡಿ ತೆಗೆದುಹಾಕಿ, ಬೇರೆ ಶ್ಲೋಕಗಳನ್ನು ಮಾತ್ರ ಉಳಿಸಿಕೊಂಡು, ಅದನ್ನು ’ವಿಶುದ್ಧ ಮನುಸ್ಮೃತಿ’ ಎಂದು ಪ್ರಕಟಿಸುತ್ತಾರೆ. ಆದರೆ ಒಂದು ಮನುಸ್ಮೃತಿಯನ್ನು ಹಾಗೆ ಮಾಡುವ ಮೂಲಕ ಇಂತಹ ಆಪಾದನೆಗಳಿಂದ ಹಿಂದೂ ಗ್ರಂಥಗಳನ್ನು ಉಳಿಸಿಕೊಳ್ಳಲಾಗದು.

(ಮೂಲ ಪಠ್ಯಗಳು)

(14) ಆ ದಸ್ಯುಘ್ನಾ ಮನಸಾ ಯಾಹ್ಯಸ್ತಂ ಭುವತ್ತೇ ಕುತ್ಸಃ ಸಖ್ಯೇ ನಿಕಾಮಃ, ಸ್ವೇ ಯೋನೌ ನಿ ಷದತಂ ಸರೂಪಾ ವಿ ವಾಂ ಚಿಕಿತ್ಸದೃತಚಿದ್ಧ ನಾರೀ.

(15) ಪೂಷಣಂ ನ್ವಜಾಶ್ವಮುಪ ಸ್ತೋಷಾಮ ವಾಜಿನಮ್, ಸ್ವಸುರ್ಯೋ ಜಾರ ಉಚ್ಯತೆ. ಮಾತುರ್ದಿಧಿಷುಮಬ್ರವವಂ ಸ್ವಸುಜರಿಃ ಶೃಣೋತು ನಃ, ಭ್ರಾತೇನ್ದ್ರಸ್ಯ ಸಖಾ ಮಮಂ.

(16) “ಭದ್ರೋ ಭದ್ರಯಾ ಸಚಮಾನ ಆಗತ್ವ್ಸಸಾರಂ ಜಾರೋ ಅಭ್ಯೇತಿ ಪಶ್ಚಾತ್, ಸುಪ್ರಕೇತೈರ್ದ್ಯುಭಿರಗ್ನಿರ್ವಿತಿಷ್ಠನ್ರುಶದ್ಭಿರ್ವರ್ಣೈರಭಿ ರಾಮಮಸ್ಥಾತ್”.

ಬಾಪು ಹೆದ್ದೂರಶೆಟ್ಟಿ

ಬಾಪು ಹೆದ್ದೂರಶೆಟ್ಟಿ
ವಕೀಲರು ಹಾಗೂ ಸಮಾಜವಾದಿ ಚಿಂತಕ-ಲೇಖಕ-ಚಳವಳಿಕಾರ. ’ಲೋಹಿಯಾ – ವ್ಯಕ್ತಿ ಮತ್ತು ವಿಚಾರ’, ’ಗಾಂಧಿ-ಅಂಬೇಡ್ಕರ್ ಮತ್ತು ಸಮಾಜವಾದ’, ’ಸಮಾಜವಾದ: ವಾದ-ವಿವಾದ’ ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...