Homeಮುಖಪುಟಸಲಿಂಗ ವಿವಾಹ ವಿಚಾರ ಸಂಸತ್ತಿಗೆ ಬಿಡುವಂತೆ ಸುಪ್ರೀಂ ಕೋರ್ಟ್‌ಗೆ ಬಾರ್ ಕೌನ್ಸಿಲ್ ಮನವಿ

ಸಲಿಂಗ ವಿವಾಹ ವಿಚಾರ ಸಂಸತ್ತಿಗೆ ಬಿಡುವಂತೆ ಸುಪ್ರೀಂ ಕೋರ್ಟ್‌ಗೆ ಬಾರ್ ಕೌನ್ಸಿಲ್ ಮನವಿ

- Advertisement -
- Advertisement -

ಸಲಿಂಗ ವಿವಾಹದ ವಿಷಯವನ್ನು ಶಾಸಕಾಂಗಕ್ಕೆ ಬಿಡುವಂತೆ ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸುವ ನಿರ್ಣಯವನ್ನು ಬಾರ್ ಕೌನ್ಸಿಲ್ ಭಾನುವಾರ ಅಂಗೀಕರಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.

”ದೇಶದ 99.9% ಕ್ಕಿಂತ ಹೆಚ್ಚು ಜನರು ಸಲಿಂಗ ವಿವಾಹದ ಕಲ್ಪನೆಯನ್ನು ವಿರೋಧಿಸುತ್ತಾರೆ” ಎಂದು ಬಾರ್ ಕೌನ್ಸಿಲ್ ಹೇಳಿಕೊಂಡಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠವು ಭಾರತದಲ್ಲಿ ಸಲಿಂಗ ವಿವಾಹಗಳಿಗೆ ಕಾನೂನು ನಿಬಂಧನೆಗಳನ್ನು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸುತ್ತಿದೆ.

ಪುರುಷ ಮತ್ತು ಮಹಿಳೆಯ ನಡುವಿನ ವಿವಾಹವನ್ನು ಮಾತ್ರ ಗುರುತಿಸುವ ಕಾನೂನುಗಳ ಸಾಂವಿಧಾನಿಕತೆಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಈ ನಿಬಂಧನೆಗಳು LGBTQIA+ ಸಮುದಾಯದ ವಿರುದ್ಧ ತಾರತಮ್ಯ, ಘನತೆ ಮತ್ತು ಗೌಪ್ಯತೆಗೆ ಅವರ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತವೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಸಲಿಂಗ ವಿವಾಹಗಳನ್ನು ”ಭಾರತೀಯ ಕುಟುಂಬ ವ್ಯವಸ್ಥೆಯ ಪರಿಕಲ್ಪನೆಯೊಂದಿಗೆ ಹೋಲಿಸಲಾಗುವುದಿಲ್ಲ” ಎಂದು ವಾದಿಸುವ ಅರ್ಜಿಗಳನ್ನು ಕೇಂದ್ರವು ವಿರೋಧಿಸಿದೆ.

ಸಲಿಂಗ ವಿವಾಹದ ವಿಷಯವು ”ಅತ್ಯಂತ ಸೂಕ್ಷ್ಮ” ಮತ್ತು ”ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಅರ್ಥಗಳನ್ನು” ಹೊಂದಿದೆ ಹಾಗಾಗಿ ಈ ಬಗ್ಗೆ ಸಾಕಷ್ಟು ಸಮಾಲೋಚನೆಗಳು ನಡೆಯುವ ಅಗತ್ಯವಿದೆ ಎಂದು ಬಾರ್ ಕೌನ್ಸಿಲ್ ಭಾನುವಾರ ಹೇಳಿದೆ.

”ಸುಪ್ರೀಂ ಕೋರ್ಟ್‌ನಲ್ಲಿ ಈ ವಿಷಯ ಚರ್ಚೆಯಾಗುತ್ತಿರುವುದನ್ನು ನೋಡುತ್ತಿರುವ ದೇಶದ ಪ್ರತಿಯೊಬ್ಬ ಜವಾಬ್ದಾರಿಯುತ ಮತ್ತು ವಿವೇಕಯುತ ನಾಗರಿಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ” ಎಂದು ಬಾರ್ ಕೌನ್ಸಿಲ್ ಹೇಳಿದೆ.

ಸುಪ್ರೀಂ ಕೋರ್ಟ್‌ ಅರ್ಜಿದಾರರ ಪರವಾಗಿ ನೀಡುವ ಯಾವುದೇ ನಿರ್ಧಾರವು ದೇಶದ ಸಾಂಸ್ಕೃತಿಕ ಮತ್ತು ಸಾಮಾಜಿಕ-ಧಾರ್ಮಿಕ ರಚನೆಗೆ ವಿರುದ್ಧವಾಗಿರುತ್ತದೆ ಎಂದು ಬಹುಪಾಲು ಜನಸಂಖ್ಯೆಯು ನಂಬುತ್ತದೆ ಎಂದು ಬಾರ್ ಕೌನ್ಸಿಲ್ ನಿರ್ಣಯವು ಹೇಳಿದೆ.

”ಬಾರ್ ಕೌನ್ಸಿಲ್, ಸಾಮಾನ್ಯ ಜನರ ಮುಖವಾಣಿಯಾಗಿದೆ. ಹಾಗಾಗಿ ಈ ವಿಚಾರ ಸೂಕ್ಷ್ಮ ವಿಷಯವಾಗಿದೆ, ಈ ಬಗ್ಗೆ ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಿದೆ” ಎಂದು ಹೇಳಿಕೆಯಲ್ಲಿ ತಿಳಿಸಿದೆ.

”ಗೌರವಾನ್ವಿತ ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಯಾವುದೇ ಸಹಾನುಭೂತಿ ತೋರಿಸಿದರೆ, ಅದು ಮುಂದಿನ ದಿನಗಳಲ್ಲಿ ನಮ್ಮ ದೇಶದ ಸಾಮಾಜಿಕ ರಚನೆಯನ್ನು ಅಸ್ಥಿರಗೊಳಿಸಲು ಕಾರಣವಾಗುತ್ತದೆ ಎಂದು ಜಂಟಿ ಸಭೆಯು ಸ್ಪಷ್ಟ ಅಭಿಪ್ರಾಯವನ್ನು ಹೊಂದಿದೆ.

ಕೇಂದ್ರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರಕರಣಕ್ಕೆ ಕಕ್ಷಿದಾರರನ್ನಾಗಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...