Homeಕರ್ನಾಟಕಲಿಂಗಾಯತ ಮತಬ್ಯಾಂಕ್‌ಗಾಗಿ ಬಿಜೆಪಿ- ಕಾಂಗ್ರೆಸ್‌ ನಡುವೆ ಜಟಾಪಟಿ

ಲಿಂಗಾಯತ ಮತಬ್ಯಾಂಕ್‌ಗಾಗಿ ಬಿಜೆಪಿ- ಕಾಂಗ್ರೆಸ್‌ ನಡುವೆ ಜಟಾಪಟಿ

- Advertisement -
- Advertisement -

ಲಿಂಗಾಯತ ಸಮುದಾಯದ ಮತಬ್ಯಾಂಕ್‌ಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡೂ ಜಟಾಪಟಿ ನಡೆಸಲು ಆರಂಭಿಸಿವೆ. ಉಭಯ ಪಕ್ಷಗಳ ಟ್ವೀಟ್‌ ವಾರ್‌ ಲಿಂಗಾಯತ ಸಮುದಾಯವನ್ನು ಕೇಂದ್ರವಾಗಿಸಿಕೊಂಡಿದೆ.

ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು, ಮುಖ್ಯಮಂತ್ರಿ ಬೊಮ್ಮಾಯಿವರನ್ನು ಭ್ರಷ್ಟ ಮುಖ್ಯಮಂತ್ರಿ ಎಂದಿದ್ದರು. ಲಿಂಗಾಯತರು ಭ್ರಷ್ಟರು ಎಂದು ಸಿದ್ದರಾಮಯ್ಯ ಹೇಳಿದ್ದಾರೆಂದು ಬಿಜೆಪಿ ಟ್ವೀಟ್ ಮಾಡಿತ್ತು. ನಂತರ ಸಿದ್ದರಾಮಯ್ಯನವರು ಸ್ಪಷ್ಟನೆ ನೀಡಿ, “ಕೇವಲ ಬೊಮ್ಮಾಯಿಯವರನ್ನು ಭ್ರಷ್ಟ ಎಂದಿದ್ದೇನೆ ಹೊರತು, ಇಡೀ ಲಿಂಗಾಯತ ಸಮುದಾಯವನ್ನಲ್ಲ” ಎಂದಿದ್ದರು.

ಈಗ ಪ್ರಧಾನಿ ನರೇಂದ್ರ ಮೋದಿಯವರು ಇದೇ ಮಾತನ್ನು ಪುನರುಚ್ಚರಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿರುವ ಅವರು, “ಸ್ವಲ್ಪ ಸಮಯದ ಹಿಂದೆ ನಾನು ಶ್ರೀ ಬಸವೇಶ್ವರರ ಕರ್ಮ ಭೂಮಿಯಲ್ಲಿದ್ದೆ, ಈಗ ಶ್ರೀ ಬಸವೇಶ್ವರರ ಜನ್ಮಭೂಮಿಯಲ್ಲಿ ನಿಂತಿದ್ದೇನೆ” ಎಂದಿದ್ದಾರೆ.

“ದೇಶ ವಿದೇಶಗಳಲ್ಲಿ ಬಸವಣ್ಣನವರ ಆದರ್ಶಗಳನ್ನು ಪಸರಿಸುವ ಸೌಭಾಗ್ಯ ನನಗೆ ದೊರತಿದೆ. ಲಂಡನ್‌ನ ಥೇಮ್ಸ್ ನದಿ ತೀರದಲ್ಲಿ ಬಸವಣ್ಣನವರ ಪುತ್ಥಳಿ ಅನಾವರಣ ಮಾಡಿದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ.

“ಲಿಂಗಾಯತರನ್ನು ಕರ್ನಾಟಕ ಕಾಂಗ್ರೆಸ್ ಕಳ್ಳರು ಎಂದು ದೂರುತ್ತದೆ. ಅದೂ ಕಾಂಗ್ರೆಸ್‌ನಲ್ಲಿ ದೊಡ್ಡ ನಾಯಕರು ಅನಿಸಿಕೊಂಡವರೇ ಹೀಗೆ ಮಾಡುತ್ತಾರೆ” ಎಂದು ಆರೋಪಿಸಿದ್ದಾರೆ.

ಮತ್ತೊಂದೆಡೆ ಕಾಂಗ್ರೆಸ್ ಕೂಡ ಸರಣಿ ಟ್ವೀಟ್‌ಗಳ ಮೂಲಕ ಮರುದಾಳಿ ನಡೆಸಿದೆ. ರಾಜ್ಯ ಬಿಜೆಪಿಯಲ್ಲಿ ಆಗಿರುವ ಪಲ್ಲಟಗಳನ್ನು ಮುಖ್ಯವಾಗಿಟ್ಟುಕೊಂಡು ಪ್ರತಿಕ್ರಿಯೆ ನೀಡುತ್ತಿದೆ.

“ಬಸವಣ್ಣನ ತತ್ವಗಳಿಗೂ ಬಿಜೆಪಿ ನಂಬಿರುವ ಮನುವಾದಕ್ಕೂ ವೈರುದ್ಯಗಳಿವೆ. ಹೀಗಾಗಿಯೇ ಪಠ್ಯದಲ್ಲಿ ಬಸವಣ್ಣನವರನ್ನು ಅವಮಾನಿಸಿದ ಬಿಜೆಪಿ ಈಗ ಲಿಂಗಾಯತ ನಾಯಕರನ್ನೇ ಮುಗಿಸಲು ಹೊರಟಿದೆ. ಬಿ.ಎಸ್.ಯುಡಿಯೂರಪ್ಪ, ಶೆಟ್ಟರ್, ಸವದಿಯಂತಹ ನಾಯಕರನ್ನು ರಾಜಕಾರಣದಿಂದಲೇ ಹೊರದಬ್ಬುವ ಬಿಜೆಪಿ ಪ್ರಯತ್ನಕ್ಕೆ ಲಿಂಗಾಯತರು ಪಾಠ ಕಲಿಸುವುದು ನಿಶ್ಚಿತ” ಎಂದು ಕಾಂಗ್ರೆಸ್ ಎಚ್ಚರಿಸಿದೆ.

ಇದನ್ನೂ ಓದಿರಿ: ಲಿಂಗಾಯತರನ್ನು ಕಳ್ಳರೆಂದು ಬಿಜೆಪಿ ನಿಂದಿಸಿದೆ: ಮೋದಿ ಹೇಳಿರುವುದಾಗಿ ರಾಜ್ಯ ಬಿಜೆಪಿ ಟ್ವೀಟ್!

ಬಿಜೆಪಿ ಡಿಲೀಟ್ ಮಾಡಿರುವ ಟ್ವೀಟ್‌ಅನ್ನು ಉಲ್ಲೇಖಿಸಿರುವ ಕಾಂಗ್ರೆಸ್, “ಹೌದು ಮೋದಿ ಹೇಳಿದ್ದು ನಿಜವೇ. ಕರ್ನಾಟಕದಲ್ಲಿ ಬಿಜೆಪಿ ಲಿಂಗಾಯತರಿಗೆ ಅಪಮಾನಿಸಿದೆ. ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿತು ಶೆಟ್ಟರ್ – ಸವದಿಯವರನ್ನು ಕಿಕ್ ಔಟ್ ಮಾಡಿತು. ಸೋಮಣ್ಣರನ್ನು ಬಲಿಪಶು ಮಾಡುತ್ತಿದೆ ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು” ಎಂದಿದೆ.

“ಹಾಗೆಯೇ ಮೋದಿಯವರನ್ನೂ ನಿಮ್ಮ ಶಾಸಕ ಶಿವರಾಜ್ ಪಾಟೀಲ್ ಅವಮಾನಿಸಿದ್ದಾರೆ. ಈ ಸತ್ಯವನ್ನು ಒಪ್ಪಿಕೊಂಡಿದ್ದಕ್ಕೆ ಮೋದಿಗೂ ಹಾಗೂ ಬಿಜೆಪಿಗೂ ಧನ್ಯವಾದಗಳು” ಎಂದು ತಿರುಗೇಟು ನೀಡಿದೆ.

“ಜಗದೀಶ್ ಶೆಟ್ಟರ್ ಸಾಯಲಿ ಎಂದು ಈಶ್ವರಪ್ಪನವರ ಬಾಯಲ್ಲಿ ಹೇಳಿಸಿರುವ ಬಿಜೆಪಿ ಲಿಂಗಾಯತರ ನಾಯಕತ್ವದ ನಾಶವನ್ನಷ್ಟೇ ಅಲ್ಲ, ಲಿಂಗಾಯತ ಸಮುದಾಯವು ಬದುಕಿಯೇ ಇರಬಾರದು ಎನ್ನುವ ಧೋರಣೆ ಹೊಂದಿದೆಯೇ? ನರೇಂದ್ರಮೋದಿಯವರೇ, ತಾವು ಲಿಂಗಾಯತ ನಾಯಕರ ಸಾವನ್ನು ಬಯಸುತ್ತಿದ್ದೀರಾ? ತಮ್ಮ ಪಕ್ಷ ಲಿಂಗಾಯತರನ್ನು ಮುಗಿಸಲು ಹೊಂಚು ಹಾಕಿದೆಯೇ?” ಎಂದು ಪ್ರಶ್ನಿಸಿದೆ.

“ಹಿಂದೆ ಬಿ.ಎಸ್.ಯಡಿಯೂರಪ್ಪನವರ ರಾಜೀನಾಮೆ ಪಡೆದು, ಜೈಲಿಗೆ ಕಳಿಸಿದ್ದು ಬಿಜೆಪಿಯೇ. ನಂತರವೂ ಅವರನ್ನು ಕಣ್ಣೀರು ಹಾಕಿಸಿ, ಅಧಿಕಾರ ಕಸಿದಿದ್ದೂ ಬಿಜೆಪಿಯೇ. ಸಂತೋಷ (ಬಿ.ಎಲ್.ಸಂತೋಷ್) ಕೂಟದ ಆಟಕ್ಕೆ ಲಿಂಗಾಯತರು ಬಲಿಯಾಗಿದ್ದು ಸುಳ್ಳೇ? ಲಿಂಗಾಯತರ ಮತ ಬೇಡ ಎಂಬ ಸಂದೇಶವಲ್ಲವೇ ಇದು. ಯಡಿಯೂರಪ್ಪನವರ ರಾಜೀನಾಮೆ ಪಡೆದಿದ್ದೇಕೆ ಎಂಬ ಒಂದೇ ಪ್ರಶ್ನೆಗೆ ಮೋದಿ ಉತ್ತರಿಸಲಿ ಸಾಕು” ಎಂದು ಆಗ್ರಹಿಸಿದೆ.

ಇದನ್ನೂ ಓದಿರಿ: ‘ಈದಿನ’ ಚುನಾವಣಾ ಸಮೀಕ್ಷೆ: ಯೋಗೇಂದ್ರ ಯಾದವ್‌- ಬಿ.ಎಲ್.ಸಂತೋಷ್ ನಡುವೆ ಟ್ವೀಟ್ ವಾರ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...