Homeಮುಖಪುಟಪೂಂಚ್‌ ದಾಳಿ: ಭಯೋತ್ಪಾದರಿಗೆ ಸಹಕರಿಸಿದ್ದ 6 ಮಂದಿ ಸ್ಥಳೀಯರ ಬಂಧನ

ಪೂಂಚ್‌ ದಾಳಿ: ಭಯೋತ್ಪಾದರಿಗೆ ಸಹಕರಿಸಿದ್ದ 6 ಮಂದಿ ಸ್ಥಳೀಯರ ಬಂಧನ

- Advertisement -
- Advertisement -

ಏಪ್ರಿಲ್ 20ರಂದು ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನದ ಮೇಲೆ ದಾಳಿ ನಡೆಸಿದ ಉಗ್ರರಿಗೆ ಆಶ್ರಯ ನೀಡಿದ ಆರೋಪದಲ್ಲಿ ಆರು ಮಂದಿ ಸ್ಥಳೀಯರನ್ನು ಬಂಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.

ಉಗ್ರರು ಹೊಂಚುಹಾಕಿ ವಾಹನದ ಮೇಲೆ ದಾಳಿ ನಡೆಸಿದ್ದರಿಂದ ಐವರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ದಾಳಿಯನ್ನು ಮೂರರಿಂದ ಐದು ಉಗ್ರರು ವ್ಯವಸ್ಥಿತವಾಗಿ ಯೋಜಿಸಿ ಕಾರ್ಯಗತಗೊಳಿಸಿದ್ದಾರೆ ಎಂದು ದಿಲ್ಬಾಲ್ ಸಿಂಗ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

“ಬಂಧಿತರು ಉಗ್ರಗಾಮಿಗಳಿಗೆ ಸಂಘಟನಾತ್ಮಕ ಬೆಂಬಲವನ್ನೂ ಪೊಲೀಸರು ನೀಡಿದ್ದಾರೆ. ಸ್ಟೀಲ್ ಲೇಪಿತ ರಕ್ಷಾಕವಚ, ಚುಚ್ಚುವ ಬುಲೆಟ್‌ಗಳು, ಸ್ಫೋಟಕಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಗರಿಷ್ಠ ಹಾನಿಯನ್ನುಂಟುಮಾಡುವ ಉದ್ದೇಶದಿಂದ ಪಾಕಿಸ್ತಾನದಿಂದ ಡ್ರೋನ್‌ ಮೂಲಕ ಕಳುಹಿಸಲಾಗಿದೆ” ಎಂದು ಸಿಂಗ್ ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಬಂಧಿತ ಆರೋಪಿಗಳಲ್ಲಿ ಒಬ್ಬನನ್ನು ನಿಸಾರ್ ಅಹ್ಮದ್ ಎಂದು ಗುರುತಿಸಿರುವ ಪೊಲೀಸ್ ಮಹಾನಿರ್ದೇಶಕರು, “ಅವನು ಮತ್ತು ಅವನ ಕುಟುಂಬವು ಉಗ್ರಗಾಮಿಗಳಿಗೆ ಆಹಾರ, ಆಶ್ರಯವನ್ನು ಒದಗಿಸಿದೆ” ಎಂದು ಮಾಹಿತಿ ನೀಡಿದ್ದಾರೆ.

ಗಾಳಿಯಲ್ಲಿ ಬಿದ್ದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಅಹ್ಮದ್ ಸ್ವೀಕರಿಸಿದ್ದಾರೆ ಎಂದು ತಿಳಿಸಿದ್ದಾರೆ.

“ಸ್ಥಳೀಯ ಬೆಂಬಲವಿಲ್ಲದೆ ಇಂತಹ ದಾಳಿಗಳನ್ನು ನಡೆಸಲಾಗುವುದಿಲ್ಲ” ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ.

“ಭಯೋತ್ಪಾದಕರಿಗೆ ಒಂದು ಸ್ಥಳದಲ್ಲಿ ಆಶ್ರಯ ಮತ್ತು ಇನ್ನೊಂದು ಸ್ಥಳದಲ್ಲಿ ದಾಳಿ ನಡೆಸಲು ಸಾರಿಗೆಯನ್ನು ಒದಗಿಸಲಾಗಿದೆ. ಅವರು ಪ್ರದೇಶವನ್ನು ಸರಿಯಾಗಿ ತಿಳಿದುಕೊಂಡರು. ಮಳೆಯ ಹೊರತಾಗಿಯೂ, ಬಹುತೇಕ ಶೂನ್ಯ ವೇಗದಲ್ಲಿ ಚಲಿಸುವ ಸೇನಾ ವಾಹನವನ್ನು ಗುರಿಯಾಗಿಸುವಲ್ಲಿ ಯಶಸ್ವಿಯಾದರು” ಎಂದಿದ್ದಾರೆ.

ದಾಳಿಯಲ್ಲಿ ಭಾಗಿಯಾಗಿರುವ ಉಗ್ರರು ಇತರ ಸ್ಥಳಗಳಿಗೆ ವಲಸೆ ಹೋಗಬಹುದು ಎಂಬ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಇದುವರೆಗೆ 200 ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿರಿ: ‘ಈದಿನ’ ಚುನಾವಣಾ ಸಮೀಕ್ಷೆ: ಯೋಗೇಂದ್ರ ಯಾದವ್‌- ಬಿ.ಎಲ್.ಸಂತೋಷ್ ನಡುವೆ ಟ್ವೀಟ್ ವಾರ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗದಿದ್ದರೆ ಮತ್ತೆ ಹಾಗೆ ಮಾಡ್ತಾರೆ: ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಹೇಳಿಕೆ

0
"ಪ್ರಜ್ವಲ್ ಮತ್ತು ರೇವಣ್ಣ ಯಾವತ್ತೂ ತಲೆ ಎತ್ತಿ ನಡೆಯಬಾರದು, ಅಂತಹ ಶಿಕ್ಷೆಯಾಗಬೇಕು" ಎಂದು ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯೊಬ್ಬರ ಸಹೋದರಿ ಮಾಲಾ (ಹೆಸರು ಬದಲಿಸಲಾಗಿದೆ) ಹೇಳಿರುವುದಾಗಿ thenewsminute.com ವರದಿ ಮಾಡಿದೆ. ಮಾಲಾಗೆ ತನ್ನ ಸಹೋದರಿ...