Homeಮುಖಪುಟಗುಜರಾತ್‌ ಗಲಭೆ ಕುರಿತ ಬಿಬಿಸಿ ಸಾಕ್ಷ್ಯಾಚಿತ್ರ ಅಂತಾರಾಷ್ಟ್ರೀಯ ಪಿತೂರಿ ಎಂದ ವಕೀಲರ ಸಂಘ: ತನಿಖೆಗೆ ಒತ್ತಾಯ

ಗುಜರಾತ್‌ ಗಲಭೆ ಕುರಿತ ಬಿಬಿಸಿ ಸಾಕ್ಷ್ಯಾಚಿತ್ರ ಅಂತಾರಾಷ್ಟ್ರೀಯ ಪಿತೂರಿ ಎಂದ ವಕೀಲರ ಸಂಘ: ತನಿಖೆಗೆ ಒತ್ತಾಯ

- Advertisement -
- Advertisement -

ಅಖಿಲ ಭಾರತ ವಕೀಲರ ಸಂಘದ (ಎಐಬಿಎ) ಅಧ್ಯಕ್ಷ ಮತ್ತು ಹಿರಿಯ ವಕೀಲ ಡಾ. ಆದೀಶ್ ಸಿ ಅಗರ್‌ವಾಲಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, “ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ಬಿಬಿಸಿಯ ಇತ್ತೀಚಿನ ಸಾಕ್ಷ್ಯಚಿತ್ರದಲ್ಲಿನ ಅಂತಾರಾಷ್ಟ್ರೀಯ ಪಿತೂರಿ ಕುರಿತು ಎಲ್ಲ ಆಯಾಮದಲ್ಲೂ (360 ಡಿಗ್ರಿ) ತನಿಖೆಗೆ ಆದೇಶಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಈ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡುವ ಯೂಟ್ಯೂಬ್ ಚಾನೆಲ್‌ಗಳು ಮತ್ತು ಟ್ವಿಟರ್ ಹ್ಯಾಂಡಲ್‌ಗಳನ್ನು ನಿರ್ಬಂಧಿಸುವ ಸರ್ಕಾರದ ಕ್ರಮವನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿರುವ ಎಐಬಿಎ ಅಧ್ಯಕ್ಷರು, “ಸುಪ್ರೀಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು, ನ್ಯಾಯಶಾಸ್ತ್ರಜ್ಞರು ಮತ್ತು ತನಿಖಾಧಿಕಾರಿಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಿ ಸಾಕ್ಷ್ಯಾಚಿತ್ರದ ವಿರುದ್ಧ ತನಿಖೆ ನಡೆಸಬೇಕು” ಎಂದು ಪತ್ರದಲ್ಲಿ ಕೋರಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಈ ಸಾಕ್ಷ್ಯಚಿತ್ರದ ಹಿಂದೆ ಕಾಣದ ಕೈಗಳಿವೆ. ಅಪಖ್ಯಾತಿಗೊಳಗಾದ ಮತ್ತು ತಿರಸ್ಕರಿಸಲ್ಪಟ್ಟ ಸಾಕ್ಷಿಗಳೊಂದಿಗೆ ಕಾಲ್ಪನಿಕ ಕತೆಗಳನ್ನು ರೂಪಿಸಲು ಸೇರಿಕೊಂಡಿರುವ ಮನಸ್ಸುಗಳನ್ನು ಗುರುತಿಸಿ ತನಿಖೆ ಮಾಡಬೇಕು” ಎಂದು ಅಗರವಾಲಾ ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ.

“ಸಾಕ್ಷ್ಯಚಿತ್ರ ಎಂದು ಕರೆಯಲ್ಪಡುವ ಇದು ಹೊಸ ವಿಚಾರಗಳನ್ನೇನೂ ಹೊಂದಿಲ್ಲ. ಅದರ ಹೆಚ್ಚಿನ ವಿಷಯಗಳನ್ನು ಸಾರ್ವಜನಿಕವಾಗಿ ಸಂಪೂರ್ಣವಾಗಿ ಪ್ರಕಟಿಸಲಾಗಿದೆ ಮತ್ತು ಚರ್ಚಿಸಲಾಗಿದೆ. ಭಾರತದ ಸುಪ್ರೀಂ ಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳು ಪರಿಗಣಿಸಿ, ಅವುಗಳನ್ನು ತಿರಸ್ಕರಿಸಿವೆ” ಎಂದು ತಿಳಿಸಿದ್ದಾರೆ.

“20 ವರ್ಷಗಳ ಹಿಂದಿನ ಗುಜರಾತ್ ಗಲಭೆಯು ಹಲವಾರು ಪದರಗಳನ್ನು ಹೊಂದಿದೆ. ಆದರೆ ಈ ಬಿಬಿಸಿ ಸಾಕ್ಷ್ಯಾಚಿತ್ರವು ಏಕಮುಖವಾಗಿದೆ. ಸಾಕಷ್ಟು ದುರುದ್ದೇಶಪೂರಿತವಾಗಿದೆ. ನಮ್ಮ ಪ್ರಧಾನಮಂತ್ರಿ ಮತ್ತು ರಾಷ್ಟ್ರ ಟೀಕೆ ಎದುರಿಸುವಂತಾಗಿದೆ” ಎಂದು ಗೃಹ ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.

ತನಿಖೆಯ ಜೊತೆಗೆ, ಈ ಸಾಕ್ಷ್ಯಾಚಿತ್ರ ನಿರ್ಮಾಣವಾಗಲು ಕಾರಣವಾದ ಜನರನ್ನು ಗುರುತಿಸಬೇಕು, ಅವರ ಹಿನ್ನೆಲೆಯನ್ನು ತನಿಖೆ ಮಾಡಬೇಕು, ಬಿಬಿಸಿ ಮತ್ತು ಅದರ ಹಿಡಿತದಲ್ಲಿರುವ ದಾಖಲೆಗಳನ್ನು ಪಡೆದುಕೊಳ್ಳಬೇಕು, ಭಾರತ ಸರ್ಕಾರದೊಂದಿಗೆ ಇನ್ನಷ್ಟು ಸಹಕರಿಸಲು ಯುಕೆ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಪತ್ರದಲ್ಲಿ ಎಐಬಿಎ ಅಧ್ಯಕ್ಷರು ಮನವಿ ಮಾಡಿದ್ದಾರೆ.

ಭಾನುವಾರ ಪ್ರತಿಕ್ರಿಯಿಸಿದ್ದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, “ದುರುದ್ದೇಶಪೂರಿತ ಪ್ರಚಾರಗಳನ್ನು ಮಾಡುವಾಗ ಕೆಲವರು ಸುಪ್ರೀಂಕೋರ್ಟ್‌ಗಿಂತ ಬಿಬಿಸಿಯನ್ನು ಹೆಚ್ಚು ಪರಿಗಣಿಸುತ್ತಾರೆ” ಎಂದು ಆರೋಪಿಸಿದ್ದರು.

ವೆಬ್‌ಸೈಟ್‌ನಲ್ಲಿ ಡಾಕ್ಯುಮೆಂಟರಿ ಪ್ರಕಟಿಸಿದ ಬಿಬಿಸಿ

2002ರ ಗುಜರಾತ್ ಗಲಭೆಯ ವಿಚಾರಣೆಗೆ ಬ್ರಿಟನ್ ಸರ್ಕಾರ ಕಳುಹಿಸಿದ ತಂಡವೊಂದು, “ಹಿಂಸಾಚಾರಕ್ಕೆ ಕಾರಣ ಅವತ್ತಿನ ಅಲ್ಲಿಯ ಭಯದ ವಾತಾವರಣ ಹಾಗಾಗಿ ಆ ಪರಿಸ್ಥಿತಿಗೆ ರಾಜ್ಯದ ಅವತ್ತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರೇ ನೇರ ಹೊಣೆ” ಎಂದು ಉಲ್ಲೇಖಿಸಿರುವ ಬಿಬಿಸಿ ಸಾಕ್ಷ್ಯಚಿತ್ರವನ್ನು ಮತ್ತೆ ಮರು ಅಪ್ಲೋಡ್ ಮಾಡಲಾಗಿದೆ. ಅಧಿಕೃತವಾಗಿ ಮಂಗಳವಾರ ಬಿಡುಗಡೆಯಾಗಿದ್ದ ‘ಮೋದಿ ಪ್ರಶ್ನೆ’ ಎಂಬ ಶೀರ್ಷಿಕೆಯ ಈ ಸಾಕ್ಷ್ಯಚಿತ್ರವನ್ನು ಯೂಟ್ಯೂಬ್‌ನಿಂದ ಬುಧವಾರ ತೆಗೆದುಹಾಕಲಾಗಿತ್ತು. ಈಗ ಬಿಬಿಸಿ ವೆಬ್‌ಸೈಟ್ ನಲ್ಲಿ ಅದನ್ನು ನೋಡಬಹುದಾಗಿದೆ.

ಇದನ್ನೂ ಓದಿರಿ: ಬರ್ತ್‌ ಡೇ ಪಾರ್ಟಿಗೆ ನುಗ್ಗಿ ಮುಸ್ಲಿಂ ಯುವಕರಿಗೆ ಥಳಿತ: ಬಜರಂಗದಳದ ದುಷ್ಕರ್ಮಿಗಳಿಗೆ ರಕ್ಷಣೆ; ಸಂತ್ರಸ್ತರೇ ಅರೆಸ್ಟ್!

ಗುಜರಾತ್‌ನ ಗೋಧ್ರಾದಲ್ಲಿ 2002ರ ಫೆಬ್ರವರಿ ಮತ್ತು ಮಾರ್ಚ್‌ ಸಮಯದಲ್ಲಿ ಹಿಂದೂ ಯಾತ್ರಾರ್ಥಿಗಳು ತುಂಬಿದ್ದ ಪ್ಯಾಸೆಂಜರ್ ರೈಲಿನ ಕೋಚ್‌ಗೆ ಬೆಂಕಿ ಹಚ್ಚಿದ ನಂತರ ಗುಜರಾತ್‌ನಲ್ಲಿ ದೊಡ್ಡ ಪ್ರಮಾಣದ ಕೋಮುಗಲಭೆ ಭುಗಿಲೆದ್ದಿತ್ತು. ಗಲಭೆಯಲ್ಲಿ 790 ಮುಸ್ಲಿಮರು ಮತ್ತು 254 ಹಿಂದೂಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ದಾಖಲೆಗಳು ತೋರಿಸುತ್ತವೆ. ಈ ಗಲಭೆಯನ್ನು ತಡೆಯಲು ಸರ್ಕಾರ ಪ್ರಯತ್ನ ಮಾಡಿಲ್ಲ ಮತ್ತು ಗಲಭೆಗೆ ಮೋದಿಯವರೆ ಹೊಣೆ ಎಂಬ ಆರೋಪಗಳು ಕೇಳಿಬಂದಿದ್ದವು.

ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆದ ಈ ಹಿಂಸಾಚಾರವನ್ನು ತಡೆಯಲು ಗುಜರಾತ್ ಪೊಲೀಸರಿಗೆ ಕಾರ್ಯನಿರ್ವಹಿಸದಂತೆ ಮೋದಿ ತಡೆದಿದ್ದಾರೆ ಎಂದು ಬ್ರಿಟಿಷ್ ತನಿಖಾ ತಂಡ ಆರೋಪಿಸಿದೆ ಎಂದು ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ಹೇಳಿಕೊಂಡಿದೆ. ಸಾಕ್ಷ್ಯ ಚಿತ್ರ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...