Homeಮುಖಪುಟಮೈಕ್ ಆಫ್ ಮಾಡಿರುವುದು ನನ್ನ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ, ಅವಮಾನ ಮಾಡಲಾಗಿದೆ: ಮಲ್ಲಿಕಾರ್ಜುನ ಖರ್ಗೆ

ಮೈಕ್ ಆಫ್ ಮಾಡಿರುವುದು ನನ್ನ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ, ಅವಮಾನ ಮಾಡಲಾಗಿದೆ: ಮಲ್ಲಿಕಾರ್ಜುನ ಖರ್ಗೆ

- Advertisement -
- Advertisement -

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ರಾಜ್ಯಸಭೆಯ ಕಲಾಪದಲ್ಲಿ ಮಾತನಾಡುವಾಗ ಮೈಕ್ ಆಫ್ ಮಾಡಿದ್ದರ ಬಗ್ಗೆ ಬುಧವಾರ ಪ್ರಸ್ತಾಪಿಸಿದ್ದು, ನನ್ನ ಮೈಕ್ ಆಫ್ ಮಾಡುವ ಮೂಲಕ ನನ್ನ “ಸ್ವಾಭಿಮಾನಕ್ಕೆ ಸವಾಲು ಹಾಕಲಾಗಿದೆ” ಎಂದು ಹೇಳಿದ್ದಾರೆ.

ಮಂಗಳವಾರ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡುವ ವೇಳೆ ಮೈಕ್​ ಆಫ್​​ ಮಾಡಿದ ಕುರಿತು ವಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಪ್ರತಿಭಟಿಸಿ ಸಭಾತ್ಯಾಗ ಮಾಡಿದ್ದವು.

ಮಣಿಪುರದಲ್ಲಿ ಮೂರು ತಿಂಗಳ ಕಾಲ ನಡೆದ ಜನಾಂಗೀಯ ಘರ್ಷಣೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಒತ್ತಾಯಿಸಿ ಪ್ರತಿಪಕ್ಷದ ಸದಸ್ಯರು ಘೋಷಣೆಗಳನ್ನು ಎತ್ತುವುದರೊಂದಿಗೆ ಸದನದಲ್ಲಿ ಗದ್ದಲದ ನಡುವೆಯೇ ಈ ಕ್ರಮವು ನಡೆಯಿತು. ಇದಕ್ಕೆ ಪ್ರತಿಯಾಗಿ ಆಡಳಿತಾರೂಢ ಬಿಜೆಪಿ ನೇತೃತ್ವದ ಮೈತ್ರಿಕೂಟದ ಸದಸ್ಯರು ‘ಮೋದಿ, ಮೋದಿ’ ಎಂದು ಘೋಷಣೆ ಕೂಗಿ ಸದನವನ್ನು ಗೊಂದಲದಲ್ಲಿ ಮುಳುಗಿಸಿದರು. ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

ಈ ಕುರಿತು ಬುಧವಾರ ಪ್ರತಿಕ್ರಿಯಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು, ”ನನ್ನ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿದೆ. ಮಣಿಪುರದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಜನಾಂಗೀಯ ಘರ್ಷಣೆ ಕುರಿತು ಪ್ರಧಾನಿ ಮೋದಿ ಹೇಳಿಕೆ ನೀಡುವಂತೆ ಒತ್ತಾಯಿಸಿದ್ದೆವು. ಆದರೆ, ಮಾತನಾಡುವ ವೇಳೆ ಮೈಕ್​ ಆಫ್​​ ಮಾಡಿರುವ ಕ್ರಮ ಸರಿಯಲ್ಲ” ಎಂದು ಕಿಡಿಕಾರಿದ್ಧಾರೆ.

”ನಾನು ನನ್ನ ಸಮಸ್ಯೆಗಳನ್ನು ಸದನದ ಮುಂದೆ ಇಡುತ್ತಿದ್ದೆ ಮತ್ತು 267ರ ಮೇಲೆ 50 ಜನರು ನೋಟಿಸ್ ನೀಡಿದಾಗ ಸಂಸತ್ತಿನಲ್ಲಿ ಮಾತನಾಡಲು ನನಗೆ ಅವಕಾಶ ಸಿಗಲಿಲ್ಲ. ಆದರೆ ನಾನು ಮಾತನಾಡುವಾಗ ನನ್ನ ಮೈಕ್ ಅನ್ನು ಸ್ವಿಚ್ ಆಫ್ ಮಾಡಲಾಗಿದೆ. ಈ ಮೂಲಕ ನನ್ನ ಅವಕಾಶಗಳನ್ನು ಕಿತ್ತುಕೊಳ್ಳಲಾಗಿದೆ. ಇದು ನನಗೆ ಮಾಡಿದ ಅವಮಾನ, ನನ್ನ ಸ್ವಾಭಿಮಾನಕ್ಕೆ ಸವಾಲು ಹಾಕಿದ್ದಾರೆ. ಸರ್ಕಾರದ ಸೂಚನೆಯ ಮೇರೆಗೆ ಸದನ ನಡೆಸಿದರೆ, ಅದು ಪ್ರಜಾಪ್ರಭುತ್ವವಲ್ಲ” ಎಂದು ಖರ್ಗೆ ಹೇಳಿದ್ದಾರೆ.

ಮೇಲ್ಮನೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಖರ್ಗೆ ಅವರು ಭಾಷಣವನ್ನು ಮಧ್ಯದಲ್ಲಿ ಅಡ್ಡಿಪಡಿಸಿದ ನಂತರ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಇದು ಪ್ರತಿಪಕ್ಷ ಸದಸ್ಯರ ತಕ್ಷಣದ ಗದ್ದಲಕ್ಕೆ ಕಾರಣವಾಯಿತು. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು ಎಲ್ಲರಿಗೂ ತಮ್ಮ ಸ್ಥಾನಗಳಲ್ಲಿ ಕುಳಿತುಕೊಳ್ಳಲು ಹೇಳಿದರು.

ಸಂಸದರು ತಮ್ಮ ಹಿಂದಿನ ಸಾಲಿನಲ್ಲಿ ನಿಂತಿದ್ದಾರೆ ೆನ್ನುವುದನ್ನು ಗಮನಿಸಿದ ಖರ್ಗೆ ಅವರು, ”ಅವರು ನನ್ನ ಹಿಂದೆ ನಿಲ್ಲಬಾರದು ಎಂದರೆ ಅವರು ಹೋಗಿ ಮೋದಿ ಹಿಂದೆ ನಿಲ್ಲಬೇಕೇ?” ಎಂದು ಕೇಳಿದರು.

ಶಾಂತಿಯಿಂದ ಕಲಾಪ ನಡೆಯಲು ಅವಕಾಶ ಮಾಡಿಕೊಡಬೇಕು ಎಂದು ಧನಕರ್‌ ಅವರು ಖರ್ಗೆ ಮತ್ತು ಸಭಾನಾಯಕ ಪಿಯೂಷ್ ಗೋಯಲ್ ಅವರಿಗೆ ಮನವಿ ಮಾಡಿದರು.

ಮೈಕ್ ಆಫ್ ಮಾಡಿಲ್ಲ ಎಂದು ಹೇಳಿದ ಸಭಾಪತಿಗಳು, ಸದನವು ಶಾಸಕಾಂಗ ವಿಷಯದ ಬಗ್ಗೆ ಚರ್ಚೆ ನಡೆಸುತ್ತಿದ್ದಾಗ  ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡಲಾಯಿತು ಎಂದು ಹೇಳಿದರು.

ಮುಂಗಾರು ಅಧಿವೇಶನದ ಆರಂಭದಿಂದಲೂ ಸಂಸತ್ತಿನಲ್ಲಿ ನಿರಂತರ ಸ್ತಬ್ಧತೆಗೆ ಕಾರಣವಾಗಿರುವ ವಿವಾದದ ಕೇಂದ್ರ ಬಿಂದುವಾದ ಮಣಿಪುರದಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಸಂಸದರು ನೋಟಿಸ್‌ಗಳನ್ನು ಮಂಡಿಸಿದ್ದರಿಂದ ಅಧಿವೇಶನದಲ್ಲಿ ಗದ್ದಲ ನಡೆಯಿತು.

ಇದನ್ನೂ ಓದಿ: ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಮೈಕ್ರೋಫೋನ್‌ ಸ್ವಿಚ್ಡ್ ಆಫ್: ವಿಪಕ್ಷಗಳ ಸಭಾತ್ಯಾಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...