Homeಮುಖಪುಟಬೆಂಗಳೂರಿನ ಬಟ್ಟೆ ವ್ಯಾಪಾರಿ ಈಗ ರಾಜಸ್ಥಾನದ ಶಾಸಕ

ಬೆಂಗಳೂರಿನ ಬಟ್ಟೆ ವ್ಯಾಪಾರಿ ಈಗ ರಾಜಸ್ಥಾನದ ಶಾಸಕ

- Advertisement -
- Advertisement -

ಈ ಬಾರಿ ಪಂಚರಾಜ್ಯ ಚುನಾವಣೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಅವುಗಳಲ್ಲಿ ಒಂದು ಬೆಂಗಳೂರಿನ ಬಟ್ಟೆ ವ್ಯಾಪಾರಿಯೊಬ್ಬರು ರಾಜಸ್ಥಾನದ ಶಾಸಕರಾಗಿ ಆಯ್ಕೆಯಾಗಿರುವುದು.

ಹೌದು, ಒಂದು ಸಮಯದಲ್ಲಿ ಬೆಂಗಳೂರಿನ ರಾಜಾಜಿನಗರದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ, ಪ್ರಸ್ತುತ ಚಿಕ್ಕಪೇಟೆಯಲ್ಲಿ ಕುಟುಂಬದ ವ್ಯವಹಾರ ಹೊಂದಿರುವ 52 ವರ್ಷದ ಲಾಡುಲಾಲ ಪಿಟ್ಲಿಯಾ ರಾಜಸ್ಥಾನ ಸಹರಾ ಕ್ಷೇತ್ರದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಲಾಡುಲಾಲ ಪಿಟ್ಲಿಯಾ 1.17 ಲಕ್ಷ ಮತಗಳ ಭಾರೀ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ತ್ರಿವೇದಿ ಅವರನ್ನು ಸೋಲಿಸಿದ್ದಾರೆ. ತ್ರಿವೇದಿ ಅವರು 54,684 ಮತಗಳನ್ನು ಪಡೆದಿದ್ದಾರೆ. ಲಾಡುಲಾಲ ಪಿಟ್ಲಿಯಾ ಅವರ ಗೆಲುವಿನ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಎಸ್‌. ಸುರೇಶ್ ಕುಮಾರ್, “ರಾಜಾಜಿನಗರ ಪ್ರಸ್ತುತ ಇಬ್ಬರು ಶಾಸಕರರನ್ನು ಹೊಂದಿದೆ. ‘ಒಬ್ಬರು ಹಾಜರು, ಇನ್ನೊಬ್ಬರು ಗೈರು'” ಎಂದು ಹಾಸ್ಯ ಮಾಡಿದ್ದಾರೆ.

“ಲಾಡುಲಾಲ ಪಿಟ್ಲಿಯಾ ಒಂದು ಸಮಯದಲ್ಲಿ ರಾಜಾಜಿನಗರದ ಎರಡನೇ ಹಂತದ ಜುಗನಹಳ್ಳಿಯಲ್ಲಿ ವಾಸವಿದ್ದರು. ಅವರು ಅಲ್ಲಿ ದೊಡ್ಡ ಮನೆಯನ್ನು ಹೊಂದಿದ್ದರು. ಪಿಟ್ಲಿಯಾ ಅವರು ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಪ್ರಸ್ತುತ ಆ ವ್ಯವಹಾರವನ್ನು ಚಿಕ್ಕಪೇಟೆಯಲ್ಲಿ ಅವರ ಮಕ್ಕಳು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ” ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

“2018ರ ರಾಜಸ್ಥಾನದ ಚುನಾವಣೆಯಲ್ಲಿ ಪಿಟ್ಲಿಯಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇದು ಬಿಜೆಪಿಗೆ ಸಮಸ್ಯೆ ತಂದೊಡ್ಡಿತ್ತು. ಆ ಸಂದರ್ಭದಲ್ಲಿ ಅವರ ಮನವೊಲಿಕೆಗೆ ಮನೆಗೆ ಹೋಗಿರುವುದು ನನಗೆ ನೆನಪಿದೆ. ಆದರೆ, ಪಿಟ್ಲಿಯಾ ಮನವೊಲಿಕೆಗೆ ಒಪ್ಪಲಿಲ್ಲ. ಆ ಚುನಾವಣೆಯಲ್ಲಿ ಪಿಟ್ಲಿಯಾ 30,573 ಮತಗಳನ್ನು ಪಡೆದಿದ್ದರು. ಇದು ಕಾಂಗ್ರೆಸ್ ಅಭ್ಯರ್ಥಿ ಗೆಲುವು ಪಡೆಯಲು ನೆರವಾಗಿತ್ತು” ಎಂದು ಸುರೇಶ್ ಕುಮಾರ್ ನೆನಪಿಸಿಕೊಂಡಿದ್ದಾರೆ.

ಪಿಟ್ಲಿಯಾ ಅವರ ಚುನಾವಣೆಯ ಅಫಿಡವಿಟ್ ಪ್ರಕಾರ ಅವರು ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಹಲವು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಇದನ್ನೂ ಓದಿ : ರಾಜಸ್ಥಾನ ವಿಧಾನಸಭಾ ಚುನಾವಣೆ: 20 ಮಹಿಳಾ ಅಭ್ಯರ್ಥಿಗಳಿಗೆ ಜಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರ: ಪೊಲೀಸ್‌ ಕಸ್ಟಡಿಯಲ್ಲಿದ್ದ ಇಬ್ಬರು ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ; ಠಾಣೆಗೆ ಬೆಂಕಿ ಹಚ್ಚಿದ ಗುಂಪು

0
ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಆರೋಪದಲ್ಲಿ ಬಂಧಿತ ಯುವಕ ಮತ್ತು ಆತನ ಅಪ್ರಾಪ್ತ 'ಪತ್ನಿ' ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲಿ ಕೋಪಗೊಂಡ ಗ್ರಾಮಸ್ಥರು ಪೊಲೀಸ್‌ ಠಾಣೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಉದ್ರಿಕ್ತರು,...