Homeಮುಖಪುಟರಾಜಸ್ಥಾನ ವಿಧಾನಸಭಾ ಚುನಾವಣೆ: 20 ಮಹಿಳಾ ಅಭ್ಯರ್ಥಿಗಳಿಗೆ ಜಯ

ರಾಜಸ್ಥಾನ ವಿಧಾನಸಭಾ ಚುನಾವಣೆ: 20 ಮಹಿಳಾ ಅಭ್ಯರ್ಥಿಗಳಿಗೆ ಜಯ

- Advertisement -
- Advertisement -

ಭಾನುವಾರ ಪ್ರಕಟಗೊಂಡ ರಾಜಸ್ಥಾನ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ 20 ಮಹಿಳೆಯರು ಜಯಗಳಿಸಿದ್ದಾರೆ. ಈ ಬಾರಿ ವಿವಿಧ ಪಕ್ಷಗಳಿಂದ ಒಟ್ಟು 50 ಮಹಿಳೆಯರು ಚುನಾವಣೆಗೆ ಸ್ಪರ್ಧಿಸಿದ್ದರು. ಕಳೆದ ವಿಧಾನಸಭೆಗೆ ಹೋಲಿಸಿದರೆ, ಈ ಬಾರಿ ಮಹಿಳಾ ಶಾಸಕಿಯರ ಸಂಖ್ಯೆ ಕೊಂಚ ಕಡಿಮೆಯಾಗಿದೆ. ಕಳೆದ ಬಾರಿ 24 ಜನ ಮಹಿಳಾ ಶಾಸಕಿಯರಿದ್ದರು.

ಈ ಬಾರಿ ಗೆದ್ದಿರುವ ಮಹಿಳೆಯರ ಪೈಕಿ ತಲಾ ಒಂಬತ್ತು ಮಂದಿ ಬಿಜೆಪಿ ಮತ್ತು ಕಾಂಗ್ರೆಸ್‌ ಹಾಗೂ ಇಬ್ಬರು ಪಕ್ಷೇತರರು. ಒಟ್ಟು 50 ಮಹಿಳಾ ಅಭ್ಯರ್ಥಿಗಳಲ್ಲಿ ಬಿಜೆಪಿಯಿಂದ 20, ಕಾಂಗ್ರೆಸ್‌ನಿಂದ 28 ಮತ್ತು ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಒಂಬತ್ತು ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳೆಂದರೆ, ಶಿಮ್ಲಾ ದೇವಿ (ಅನುಪುಗಢ), ಸುಶೀಲಾ ದುಡಿ (ನೋಖಾ), ರೀಟಾ ಚೌಧರಿ (ಮಾಂಡವಾ), ಶಿಕಾ ಮೀಲ್ ಬರಾಲಾ (ಚೋಮು), ಶೋಭಾರಾಣಿ ಕುಶ್ವಾಹ್ (ಧೋಲ್ಪುರ್), ಅನಿತಾ ಜಾತವ್ (ಹಿಂದೌನ್), ಇಂದ್ರ (ಬಮನ್ವಾಸ್), ಗೀತಾ ಬರ್ವಾರ್. (ಭೋಪಾಲ್ಗಢ), ಮತ್ತು ರಮಿಲಾ ಖಾಡಿಯಾ (ಕುಶಾಲ್ಗಢ). ಬಿಜೆಪಿಯ ಮಹಿಳಾ ಅಭ್ಯರ್ಥಿಗಳೆಂದರೆ, ದಿಯಾ ಕುಮಾರಿ (ವಿದ್ಯಾಧರ್ ನಗರ), ಅನಿತಾ ಭಾದೆಲ್ (ಅಜ್ಮೀರ್ ಸೌತ್), ಮಂಜು ಬಾಗ್ಮಾರ್ (ಜಯಾಲ್), ಶೋಭಾ ಚೌಹಾಣ್ (ಸೋಜತ್), ದೀಪ್ತಿ ಕಿರಣ್ ಮಹೇಶ್ವರಿ (ರಾಜಸಮಂದ್), ಕಲ್ಪನಾ ದೇವಿ (ಲಾದ್‌ಪುರ), ವಸುಂಧರಾ ರಾಜೇ ( ಝಲ್ರಾಪಟನ್), ಸಿದ್ಧಿ ಕುಮಾರಿ (ಬಿಕಾನೇರ್ ಪೂರ್ವ), ನೌಕ್ಷಮ್ ಚೌಧರಿ (ಕಮಾನ್). ರಿತು ಬನಾವತ್ (ಬಯಾನಾ) ಮತ್ತು ಪ್ರಿಯಾಂಕಾ ಚೌಧರಿ (ಬಾರ್ಮರ್) ಪಕ್ಷೇತರರಾಗಿ ಗೆದ್ದಿದ್ದಾರೆ.

ಕಳೆದ 15ನೇ ವಿಧಾನಸಭೆ 24 ಮಹಿಳಾ ಸದಸ್ಯರನ್ನು ಹೊಂದಿತ್ತು. ಈ ಪೈಕಿ ಕಾಂಗ್ರೆಸ್‌ನ 12, ಬಿಜೆಪಿಯ 10, ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (ಆರ್‌ಎಲ್‌ಪಿ) ದಿಂದ ಒಬ್ಬರು ಮತ್ತು ಸ್ವತಂತ್ರ ಒಬ್ಬರು ಇದ್ದರು.

ಕಳೆದ ವಾರ ನಡೆದಿದ್ದ ರಾಜಸ್ಥಾನ ವಿಧಾನಸಭಾ ಚುನಾವಣೆಯ ಮತ ಎಣಿಕೆ ಭಾನುವಾರ ನಡೆದಿದ್ದು, 199 ಸ್ಥಾನಗಳಲ್ಲಿ 115 ಸ್ಥಾನಗಳನ್ನು ಗೆದ್ದು ಬಿಜೆಪಿ ಸರ್ಕಾರ ರಚಿಸಲು ಅಣಿಯಾಗಿದೆ. ರಾಜ್ಯದಲ್ಲಿ ಐದು ವರ್ಷಕೊಮ್ಮೆ ಸರ್ಕಾರ ಬದಲಾಗುವ ಸಂಪ್ರದಾಯದಂತೆ ಈ ಬಾರಿ ಕಾಂಗ್ರೆಸ್ ಸೋಲನುಭವಿಸಿದೆ. ಕಾಂಗ್ರೆಸ್ ಈ ಬಾರಿ 68 ಸ್ಥಾನಗಳನ್ನು ಪಡೆದಿದೆ. ಭಾರತ ಆದಿವಾಸಿ ಪಕ್ಷವು ಮೂರು ಸ್ಥಾನಗಳನ್ನು, ಬಹುಜನ ಸಮಾಜ ಪಕ್ಷವು ಎರಡು ಸ್ಥಾನಗಳನ್ನು ಮತ್ತು ರಾಷ್ಟ್ರೀಯ ಲೋಕದಳ ಮತ್ತು ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷವು ತಲಾ ಒಂದು ಸ್ಥಾನಗಳನ್ನು ಗೆದ್ದಿವೆ. ಎಂಟು ಸ್ಥಾನಗಳನ್ನು ಸ್ವತಂತ್ರರು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : ತೆಲಂಗಾಣದ ಸಂಭಾವ್ಯ ಸಿಎಂ ರೇವಂತ್ ರೆಡ್ಡಿ ಯಾರು..ಇವರ ಹಿನ್ನೆಲೆ ಏನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

0
ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ...