Homeಮುಖಪುಟಭಾರತ್ ಜೋಡೋ ನ್ಯಾಯ ಯಾತ್ರೆ: ಗುವಾಹಟಿ ನಗರ ಪ್ರವೇಶಿಸಲು ಅನುಮತಿ ನಿರಾಕರಿಸಿದ ಅಸ್ಸಾಂ ಸರ್ಕಾರ

ಭಾರತ್ ಜೋಡೋ ನ್ಯಾಯ ಯಾತ್ರೆ: ಗುವಾಹಟಿ ನಗರ ಪ್ರವೇಶಿಸಲು ಅನುಮತಿ ನಿರಾಕರಿಸಿದ ಅಸ್ಸಾಂ ಸರ್ಕಾರ

- Advertisement -
- Advertisement -

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆಯು ಗುವಾಹಟಿಯ ಒಳ ರಸ್ತೆಗಳ ಮೂಲಕ ತೆರಳಲು ಅನುಮತಿ ನಿರಾಕರಿಸಿಲಾಗಿದೆ. ಯಾತ್ರೆಯು ಇಂದು ಮೇಘಾಲಯದ ನಂತರ ಅಸ್ಸಾಂಗೆ ಮರುಪ್ರವೇಶಿಸಿದೆ.

ಭಾರತ್ ಜೋಡೋ ನ್ಯಾಯ್ ಯಾತ್ರೆಯಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ ಎಂದು ಎಂದು ಬಿಜೆಪಿ ಸರ್ಕಾರ ಅನುಮತಿ ನಿರಾಕರಿಸಿದ್ದು, ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಮಾತಿನ ವಿನಿಮಯ ನಡೆದಿದೆ.

ಗುವಾಹಟಿಯ ಪ್ರಮುಖ ರಸ್ತೆಗಳ ಮೂಲಕ ಯಾತ್ರೆ ಚಲಿಸಲು ಅವಕಾಶ ನೀಡುವುದರಿಂದ ಸಂಚಾರ ದಟ್ಟಣೆಗೆ ಕಾರಣವಾಗಬಹುದು ಎಂದು ವಾದಿಸಿ, ರಾಜ್ಯ ಆಡಳಿತವು ಯಾತ್ರೆಯು ಕೆಳ ಅಸ್ಸಾಂ ಕಡೆಗೆ ಚಲಿಸುವ ಮೂಲಕ, ರಾಷ್ಟ್ರೀಯ ಹೆದ್ದಾರಿ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಿದೆ. ನಗರದ ಸುತ್ತ ವರ್ತುಲ ರಸ್ತೆಯಂತೆ ಕಾರ್ಯನಿರ್ವಹಿಸುವ ರಾಷ್ಟ್ರೀಯ ಹೆದ್ದಾರಿ 27ರಲ್ಲಿ ಯಾತ್ರೆ ಕೈಗೊಳ್ಳುವಂತೆ ಕೋರಲಾಗಿದೆ.

ಅಸ್ಸಾಂನಲ್ಲಿ 15ನೇ ಶತಮಾನದ ಸಮಾಜ ಸುಧಾರಕನ ದೇವಾಲಯದ ಬಳಿ ನಿನ್ನೆ ನಾಟಕೀಯ ಬೆಳವಣಿಗೆಗಳು ನಡೆದ ಒಂದು ದಿನದ ನಂತರ ಬಿಜೆಪಿ ಆಡಳಿತ ಮತ್ತೊಮ್ಮೆ ಯಾತ್ರೆಗೆ ಅಡ್ಡಿಪಡಿಸಿದೆ. ರಾಹುಲ್ ಗಾಂಧಿ ಅವರು ನಿನ್ನೆ ಗುವಾಹಟಿ ಬಳಿಯ ವೈಷ್ಣವ ಸಂತ ಶ್ರೀಮಂತ ಶಂಕರದೇವರ ಜನ್ಮಸ್ಥಳಕ್ಕೆ ಭೇಟಿ ನೀಡಲು ಯೋಜಿಸಿದ್ದರು. ದೇವಾಲಯ ಪ್ರವೇಶ ಸುದ್ದಿಯನ್ನು ಘೋಷಿಸಿದ ಕೂಡಲೇ, ಮುಖ್ಯಮಂತ್ರಿ ಶರ್ಮಾ ಅವರು ಅಯೋಧ್ಯೆಯಲ್ಲಿ ರಾಮಮಂದಿರ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಮೊದಲು ದೇಗುಲಕ್ಕೆ ಭೇಟಿ ನೀಡದಂತೆ ರಾಹುಲ್ ಅವರನ್ನು ಒತ್ತಾಯಿಸಿದರು.

‘ಮಹಾಪುರುಷ ಶ್ರೀಮಂತ ಶಂಕರದೇವರ ಜನ್ಮಸ್ಥಳಕ್ಕೆ ಭೇಟಿ ನೀಡುವುದರಿಂದ ರಾಮಮಂದಿರ ಮತ್ತು ಬಟದ್ರವ ಸತ್ರದ ನಡುವೆ ಪೈಪೋಟಿ ಇದೆ ಎಂಬ ಕಲ್ಪನೆಯನ್ನು ಹುಟ್ಟು ಹಾಕಬೇಡಿ’ ಎಂದು ನಾನು ರಾಹುಲ್ ಗಾಂಧಿಗೆ ಮನವಿ ಮಾಡುತ್ತೇನೆ ಸಿಎಂ ಶರ್ಮಾ ನಿನ್ನೆ ಹೇಳಿದ್ದರು.

ದೇಗುಲದ ವ್ಯವಸ್ಥಾಪನಾ ಸಮಿತಿಯು ಸಹ, ರಾಹುಲ್ ಗಾಂಧಿಯವರನ್ನು ಮಧ್ಯಾಹ್ನ 3 ಗಂಟೆಯ ಮೊದಲು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಎಂದು ಹೇಳಿದರು.

ದೇಗುಲಕ್ಕೆ ತೆರಳುತ್ತಿದ್ದ ರಾಹುಲ್ ಮತ್ತು ಕಾಂಗ್ರೆಸ್ ಮುಖಂಡರು, ಸಂಗಡಿಗರನ್ನು ಸಿಬ್ಬಂದಿ ತಡೆದರು. ಇದರಿಂದ ಕೋಪಗೊಂಡ ಕೈ ಮುಖಂಡರು, ರಸ್ತೆ ತಡೆದು ಸ್ಥಳದಲ್ಲೇ ಧರಣಿ ಕುಳಿತರು. ಪಕ್ಷದ ಸಂಸದ ಗೌರವ್ ಗೊಗೊಯ್ ಮತ್ತು ಬಟದ್ರಾವ ಶಾಸಕ ಸಿಬಾಮೋನಿ ಬೋರಾ ಅವರು ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದ ರಾಹುಲ್ ಗಾಂಧಿ, ‘ತಾವು ಶಂಕರದೇವರ ತತ್ವದಲ್ಲಿ ನಂಬಿಕೆ ಇಟ್ಟವರು. ನಾವು, ಅವರಂತೆ ಜನರನ್ನು ಒಟ್ಟಿಗೆ ಸೇರಿಸುವುದರಲ್ಲಿ ಮತ್ತು ದ್ವೇಷವನ್ನು ಹರಡುವುದಿಲ್ಲ ಎಂದು ನಂಬುತ್ತೇವೆ. ಅವರು ನಮಗೆ ಗುರುವಿನಂತಿದ್ದಾರೆ ಮತ್ತು ನಮಗೆ ಮಾರ್ಗದರ್ಶನ ನೀಡುತ್ತಾರೆ. ಹಾಗಾಗಿ ನಾನು ಅಸ್ಸಾಂಗೆ ಬಂದಾಗ ಅವರಿಗೆ ನನ್ನ ನಮನಗಳನ್ನು ಸಲ್ಲಿಸಬೇಕು ಎಂದು ಯೋಚಿಸಿದ್ದೆ’ ಎಂದು ಹೇಳಿದರು.

‘ದೇವಾಲಯಕ್ಕೆ ಗೌರವ್ ಗೊಗೊಯ್ ಮತ್ತು ಇತರರು ಹೋಗಬಹುದು. ಆದರೆ ರಾಹುಲ್ ಗಾಂಧಿ ಮಾತ್ರ ಹೋಗಲು ಸಾಧ್ಯವಿಲ್ಲ. ಇದಕ್ಕೆ ಏನಾದ್ರೂ ಕಾರಣ ಇರಬಹುದೋ ಗೊತ್ತಿಲ್ಲ, ಅವಕಾಶ ಸಿಕ್ಕಾಗ ಬಟದ್ರವ ಹೋಗ್ತೇನೆ’ ಅಂದರು.

ದೇವಾಲಯ ಪ್ರವೇಶ ನಿರಾಕರಣೆ ನಂತರ ಇದೀಗ ಕಾಂಗ್ರೆಸ್ ಯಾತ್ರೆಗೆ ಗುವಾಹಟಿ ರಸ್ತೆ ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿದೆ. ಬದಲಾಗಿ, ಯಾತ್ರೆಯು ರಾಷ್ಟ್ರೀಯ ಹೆದ್ದಾರಿ 27 ರ ಮೂಲಕ ಗುವಾಹಟಿಯನ್ನು ಬೈಪಾಸ್ ಮೂಲಕ ತಲುಪಬೇಕು ಎಂದು ಹೇಳಲಾಗಿದೆ.

‘ಹಿಮಂತ ಬಿಸ್ವ ಶರ್ಮಾ ಸರ್ಕಾರ ಯಾತ್ರೆಗೆ ಅಡೆತಡೆಗಳನ್ನು ಸೃಷ್ಟಿಸುತ್ತಿದೆ’ ಎಂದು ಕಾಂಗ್ರೆಸ್ ಆರೋಪಿಸಿದೆ. ರಾಹುಲ್ ಗಾಂಧಿ ಅವರ ಯಾತ್ರೆ ಸಾಗುತ್ತಿರುವಾಗ ಕಾರ್ಯಕರ್ತರ ಗುಂಪು ‘ಜೈ ಶ್ರೀ ರಾಮ್’ ಮತ್ತು ‘ಮೋದಿ, ಮೋದಿ’ ಘೋಷಣೆಗಳನ್ನು ಎತ್ತಲು ಪ್ರಾರಂಭಿಸಿದ ಘಟನೆಯನ್ನು ಅವರು ಉಲ್ಲೇಖಿಸಲಾಗಿದೆ. ‘ನಾವು ಅಸ್ಸಾಂಗೆ ಪ್ರವೇಶಿಸಿದಾಗಿನಿಂದ, ಭಾರತದ ಅತ್ಯಂತ ಭ್ರಷ್ಟ ಸಿಎಂ ತನ್ನ ಗೂಂಡಾಗಳನ್ನು ಬಳಸಿಕೊಂಡು ನಮ್ಮ ಬೆಂಗಾವಲು ಪಡೆಗಳು, ಆಸ್ತಿಗಳು ಮತ್ತು ನಾಯಕರ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆಯಡ, ಬಿಜೆಪಿಯು ಆಡಳಿತಾರೂಢ ಮೈತ್ರಿಕೂಟದ ಭಾಗವಾಗಿರುವ ಮೇಘಾಲಯದಲ್ಲಿ ರಾಹುಲ್ ಗಾಂಧಿಯವರ ಯಾತ್ರೆಯು ರಸ್ತೆ ತಡೆಯನ್ನು ಹೊಡೆದಿದೆ.

ಮೇಘಾಲಯದ ವಿಶ್ವವಿದ್ಯಾಲಯವೊಂದರಲ್ಲಿ ಕಾಂಗ್ರೆಸ್ ನಾಯಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂವಾದದ ಯೋಜನೆಯನ್ನು ಅನುಮತಿ ನಿರಾಕರಿಸಿದ ನಂತರ ರದ್ದುಗೊಳಿಸಲಾಯಿತು. ರಾಹುಲ್ ಗಾಂಧಿ ಅವರು ಈಗ ಅಸ್ಸಾಂ-ಮೇಘಾಲಯ ಗಡಿ ಬಳಿಯ ಹೋಟೆಲ್‌ನಲ್ಲಿ ವಿದ್ಯಾರ್ಥಿಗಳನ್ನು ಭೇಟಿಯಾಗಲಿದ್ದಾರೆ. ಮೇಘಾಲಯದಲ್ಲಿ ಅವರು ಈಶಾನ್ಯ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಲಿದ್ದಾರೆ.

ಇದನ್ನೂ ಓದಿ; ರಾಹುಲ್ ಗಾಂಧಿಯನ್ನು ರಾವಣನಿಗೆ ಹೋಲಿಸಿದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿಯ ಪತನ ಶುರು: ‘ಸೋನ್ ಪಾಪ್ಡಿ’ಯಿಂದ ಮೂವರಿಗೆ ಜೈಲು ಶಿಕ್ಷೆ

0
ಪತಂಜಲಿ ನವರತ್ನ ಎಲೈಚಿ ಸೋನ್ ಪಾಪ್ಡಿ(ಸಾಂಪ್ರದಾಯಿಕ ಸಿಹಿತಿಂಡಿ) ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆ ಉತ್ತರಾಖಂಡದ ನ್ಯಾಯಾಲಯವು ಪತಂಜಲಿ ಆಯರ್ವೇದ ಲಿಮಿಟೆಡ್‍ನ ಸಹಾಯಕ ವ್ಯವಸ್ಥಾಪಕ ಸೇರಿದಂತೆ ಮೂರು ಮಂದಿಗೆ ಆರು ತಿಂಗಳ ಜೈಲು ಶಿಕ್ಷೆ...