Homeಮುಖಪುಟಕ್ರಿಶ್ಚಿಯನ್ನರ ಮೇಲೆ ಹಿಂದುತ್ವ ಗುಂಪಿನ ದೌರ್ಜನ್ಯ

ಕ್ರಿಶ್ಚಿಯನ್ನರ ಮೇಲೆ ಹಿಂದುತ್ವ ಗುಂಪಿನ ದೌರ್ಜನ್ಯ

- Advertisement -
- Advertisement -

ದೇಶದಲ್ಲಿ ಕ್ರಿಶ್ಚಿಯನ್ನರ ಮೇಲೆ ಹಿಂದುತ್ವ ಗುಂಪುಗಳ ದೌರ್ಜನ್ಯ ಮುಂದುವರಿದಿದೆ. ಮತಾಂತರದ ಆರೋಪದಲ್ಲಿ ಕ್ರಿಶ್ಚಿಯನ್‌ ಪಾದ್ರಿಗಳು, ಪ್ರಾರ್ಥನಾ ಸಭೆಗಳ ಮೇಲೆ ದಾಳಿಗಳು, ಧಾರ್ಮಿಕ ಕೇಂದ್ರಗಳ ಮೇಲೆ ದಾಳಿಗಳು ದೇಶದ ವಿವಿಧೆಡೆ ಈ ಮೊದಲು ನಡೆದಿತ್ತು. ಇಂತದ್ದೇ ಸಾಮ್ಯತೆಯ ಘಟನೆ ರಾಮಮಂದಿರದ ಉದ್ಘಾಟನೆಯ ಹೊಸ್ತಿಲಲ್ಲಿ ಛತ್ತೀಸ್‌ಗಢದಲ್ಲಿ ನಡೆದಿದೆ.

ಛತ್ತೀಸ್‌ಗಢದ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಪ್ರತಿನಿಧಿಸುವ ಕುಂಕುರಿ  ವಿಧಾನಸಭಾ ಕ್ಷೇತ್ರದ ಕ್ರಿಶ್ಚಿಯನ್‌ ಸಮುದಾಯದ ಜನರ ಗುಂಪಿನ ಮೇಲೆ ಜನವರಿ 21ರಂದು ಹಿಂದುತ್ವದ ಗುಂಪಿನ ಸದಸ್ಯರು ಹಲ್ಲೆ ನಡೆಸಿದ್ದಾರೆ ಮತ್ತು ಸಮುದಾಯದ ಮಹಿಳೆಯರಿಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಕುರಿತು ಸ್ಥಳೀಯರಾದ ಶಿವಪ್ರಸಾದ್ ಮೆಹ್ತೋ, ಪಾದ್ರಿ ಮಹಾನಂದ ಎಫ್‌ಐಆರ್‌ ದಾಖಲಿಸಿದ್ದು, ದುಲ್ದುಲಾ ಪೊಲೀಸ್ ಠಾಣಾ ವ್ಯಾಪ್ತಿಯ ಬಸುದೋಪುರ ಗ್ರಾಮದ ಶಿವನ ಮನೆಗೆ ಊಟಕ್ಕೆಂದು ತೆರಳಿದ್ದೆವು. ಊಟ ಮುಗಿಸಿ ವಾಪಸ್ಸು ಬರುವಾಗ ನಮ್ಮ ಮೇಲೆ ಹಿಂದುತ್ವವಾದಿ ಗುಂಪಿನ ಸದಸ್ಯರು ಹಲ್ಲೆ ನಡೆಸಿದ್ದಾರೆ ಮತ್ತು ಸಮುದಾಯದ ಜನರಿಗೆ ಗ್ರಾಮಕ್ಕೆ ಮತ್ತೆ ಭೇಟಿ ನೀಡದಂತೆ ಬೆದರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿದ ಕ್ರಿಶ್ಚಿಯನ್‌ ಸಮುದಾಯ ಜನರ ತಂಡದಲ್ಲಿದ್ದ ಕಿಶೋರ್, ನಾವು ಶಿವ ಅವರ ಮನೆಯಿಂದ ವಾಪಾಸ್ಸು ಬರುವಾಗ ಅವರು ಕೈಯಲ್ಲಿ ಕೋಲುಗಳನ್ನು ಹಿಡಿದುಕೊಂಡು ನಮ್ಮನ್ನು ತಡೆದಿದ್ದಾರೆ. ಅದೇ ಜನರು ರಾಮ ಮಂದಿರದ ರ್ಯಾಲಿಗಳಲ್ಲಿ ಭಾಗವಹಿಸುತ್ತಿದ್ದರು. ಉತ್ತರ ಭಾರತದ ವಿವಿಧ ಭಾಗಗಳಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆ ಮೆರವಣಿಗೆ ನಡೆದಿತ್ತು. ಅವರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ, ಈ ವೇಳೆ ತಡೆಯಲು ಪ್ರಯತ್ನಿಸಿದ ಮಹಿಳೆಯರನ್ನು ರಸ್ತೆಯಲ್ಲಿ ಎಳೆದಾಡಿ ದೌರ್ನಜ್ಯ ನಡೆಸಿದ್ದಾರೆ. ಘಟನೆ ವೇಳೆ ಪಾದ್ರಿ ಮಹಾನಂದ ಪ್ರಜ್ಞೆ ಕಳೆದುಕೊಂಡಿದ್ದಾರೆ ಮತ್ತು ಅವರ ಕುಟುಂಬವು ಅವರನ್ನು ಸ್ಥಳೀಯ ಸ್ವಾಸ್ಥ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿಂದ ಅವರನ್ನು ಕುಂಕೂರಿನ ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಎಫ್‌ಐಆರ್‌ನಲ್ಲಿ ಆರೋಪಿಗಳಾಗಿ ಹೆಸರಿಸಲಾದ ನರೇಶ್ ಕುಮಾರ್ ಯಾದವ್ ಮತ್ತು ಇತರರು ಶಿವ ಮತ್ತು ಇತರರ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ಪಾದ್ರಿ ಮತ್ತು ಇತರರನ್ನು ಗ್ರಾಮಕ್ಕೆ ಏಕೆ ಬಂದಿದ್ದೀರಿ ಎಂದು ಪ್ರಶ್ನಿಸಿದ್ದೇವೆ ಈ ವೇಳೆ ಅವರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿಲಾಗಿದೆ.

ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ವರದಿಯ ಪ್ರಕಾರ 2023ರಲ್ಲಿ 23 ರಾಜ್ಯಗಳಲ್ಲಿ ಕ್ರಿಶ್ಚಿಯನ್ನರ ವಿರುದ್ಧ ಹಿಂಸಾಚಾರ ಸಂಭವಿಸಿದೆ. ಉತ್ತರ ಪ್ರದೇಶವೊಂದರಲ್ಲೇ 155 ಘಟನೆಗಳು ನಡೆದಿದ್ದು, ಕ್ರಿಶ್ಚಿಯನ್ನರ ವಿರುದ್ಧ ಹಿಂಸಾಚಾರದಲ್ಲಿ ಉತ್ತರಪ್ರದೇಶ ಮುಂಚೂಣಿಯಲ್ಲಿದೆ. ಛತ್ತೀಸ್‌ಗಢದಲ್ಲಿ 84 ಘಟನೆಗಳು ನಡೆದಿದೆ. ಕಳೆದವಾರ  ಜಶ್ಪುರ್ ಪ್ರದೇಶದಲ್ಲಿ ಹಿಂದುತ್ವದ ಗುಂಪು ಐವರು ಪಾದ್ರಿಗಳನ್ನು ಥಳಿಸಿದ್ದರು.

ಜನವರಿ 21ರಂದು ಕುಂದ್ರಾ ಗ್ರಾಮದಲ್ಲಿ ಹಿಂದುತ್ವವಾದಿಗಳ ಗುಂಪೊಂದು ಸ್ಥಳೀಯ ಪಾದ್ರಿಯ ಮನೆಗೆ ನುಗ್ಗಿ ಅವರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಮತ್ತು ಅವರ ಮನೆಯಲ್ಲಿ ಕೇಸರಿ ಧ್ವಜವನ್ನು ಹಾರಾಟ ಮಾಡಿದ್ದಾರೆ ಎಂದು ಛತ್ತೀಸ್‌ಗಢ ಕ್ರಿಶ್ಚಿಯನ್ ಫೋರಂ ಹೇಳಿದೆ. ಹಿಂದೂ ಧರ್ಮಕ್ಕೆ ಮತಾಂತರಗೊಳ್ಳದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿತ್ತು.

ಕಳೆದ ಭಾನುವಾರದಂದು ಮಧ್ಯಪ್ರದೇಶದ ಝಬುವಾದಲ್ಲಿ ಚರ್ಚ್‌ವೊಂದರ ಮೇಲೆ ಹತ್ತಿದ ದುಷ್ಕರ್ಮಿಗಳ ಗುಂಪು ಕೇಸರಿ ಧ್ವಜವನ್ನು ಹಾರಾಟ ನಡೆಸಿ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿದ್ದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವಿಡಿಯೋವು ದುಷ್ಕರ್ಮಿಯೋರ್ವ ಚರ್ಚ್‌ ಮೇಲೆ ಹತ್ತಿ ಕೇಸರಿ ಧ್ವಜವನ್ನು ಹಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಕೇಸರಿ ಧ್ವಜದಲ್ಲಿ ಅಯೋಧ್ಯೆಯ ರಾಮ ಮಂದಿರದ ಚಿತ್ರವಿತ್ತು ಮತ್ತು ಅದರ ಮೇಲೆ ‘ಜೈ ಶ್ರೀ ರಾಮ್’ ಎಂದು ಬರೆಯಲಾಗಿತ್ತು.

ಇದನ್ನು ಓದಿ: ದಲಿತ ಯುವತಿಗೆ ಕಿರುಕುಳ: ಎಫ್‌ಐಆರ್‌ ದಾಖಲಾಗಿ 5 ದಿನ ಕಳೆದರೂ ಅರೆಸ್ಟ್‌ ಆಗದ ಶಾಸಕರ ಮಗ, ಸೊಸೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...