Homeಮುಖಪುಟಬಿಹಾರ: ಮೀಸಲಾತಿ ಪ್ರಮಾಣ 50% ರಿಂದ 65%ಕ್ಕೆ ಹೆಚ್ಚಿಸಿ ಮಸೂದೆ ಅಂಗಿಕಾರ

ಬಿಹಾರ: ಮೀಸಲಾತಿ ಪ್ರಮಾಣ 50% ರಿಂದ 65%ಕ್ಕೆ ಹೆಚ್ಚಿಸಿ ಮಸೂದೆ ಅಂಗಿಕಾರ

- Advertisement -
- Advertisement -

ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಜಾತಿ ಆಧಾರಿತ ಮೀಸಲಾತಿಯನ್ನು 50% ರಿಂದ 65% ಕ್ಕೆ ಹೆಚ್ಚಿಸುವ ಮಸೂದೆಯನ್ನು ಬಿಹಾರ ವಿಧಾನಸಭೆ ಗುರುವಾರ ಸರ್ವಾನುಮತದಿಂದ ಅಂಗೀಕರಿಸಿದೆ, ಇದು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಿತಿಯನ್ನು ದಾಟಿದೆ. ಈಗ ಮಸೂದೆ ಕಾನೂನಾಗಲು ರಾಜ್ಯಪಾಲರ ಒಪ್ಪಿಗೆ ಬೇಕಾಗಿದೆ.

ವಿಧಾನಸಭೆಯಲ್ಲಿ ಜಾತಿ ಗಣತಿ ಕುರಿತು ಸಂಪೂರ್ಣ ವರದಿಯನ್ನು ಬಿಡುಗಡೆ ಮಾಡಿದ ನಂತರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೆಚ್ಚಳವನ್ನು ಪ್ರಸ್ತಾಪಿಸಿದ ಮೂರು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.

ಮಸೂದೆಯ ಅಡಿಯಲ್ಲಿ, ಪರಿಶಿಷ್ಟ ಜಾತಿಗಳಿಗೆ 16% ರಿಂದ 20% ಮೀಸಲಾತಿ ಸಿಗುತ್ತದೆ, ಪರಿಶಿಷ್ಟ ಪಂಗಡಗಳ ಕೋಟಾವನ್ನು 1% ರಿಂದ 2% ಕ್ಕೆ ದ್ವಿಗುಣಗೊಳಿಸಲಾಗಿದೆ. ಇತರೆ ಹಿಂದುಳಿದ ವರ್ಗಗಳಿಗೆ 12% ರಿಂದ 15% ಮೀಸಲಾತಿ ಸಿಗುತ್ತದೆ. ಅತ್ಯಂತ ಹಿಂದುಳಿದ ವರ್ಗಗಳಿಗೆ, ಕೋಟಾವನ್ನು 18% ರಿಂದ 25% ಕ್ಕೆ ಏರಿಸಲಾಗುತ್ತದೆ ಎಂದು PTI ವರದಿ ಮಾಡಿದೆ.

ಇನ್ನೂ 10% ಆರ್ಥಿಕವಾಗಿ ದುರ್ಬಲ ವರ್ಗಗಳ ಕೋಟಾವು ವಿಭಿನ್ನ ಕಾಯಿದೆಯಡಿಯಲ್ಲಿ ಪರಿಣಾಮಕಾರಿಯಾಗಿರುವುದರಿಂದ, ಅದು ಪ್ರಸ್ತುತ ಮಸೂದೆಯ ಭಾಗವಾಗಿರುವುದಿಲ್ಲ ಎಂದು ಸರ್ಕಾರ ವಿವರಿಸಿದೆ. 10% ಮೀಸಲಾತಿಯೊಂದಿಗೆ, ರಾಜ್ಯದಲ್ಲಿ ಒಟ್ಟು ಕೋಟಾ ಮಿತಿಯು ಈಗ 75% ಕ್ಕೆ ಹೆಚ್ಚಾಗುತ್ತದೆ.

1992ರಲ್ಲಿ ಸುಪ್ರೀಂ ಕೋರ್ಟ್ ಒಟ್ಟು ಜಾತಿ ಆಧಾರಿತ ಮೀಸಲಾತಿಗೆ ನಿಗದಿಪಡಿಸಿದ 50% ಮಿತಿಯನ್ನು ಇದು ಮೀರರುತ್ತದೆ.

ಮಸೂದೆಯ ಮೇಲಿನ ಚರ್ಚೆಯ ನಂತರ ಮಾತನಾಡಿದ ಕುಮಾರ್, ”ಮೀಸಲಾತಿಯನ್ನು ವಿಸ್ತರಿಸಲು ನಿರ್ಧರಿಸುವ ಮೊದಲು ಬಿಹಾರ ಎಲ್ಲಾ ಸತ್ಯಗಳನ್ನು ತಿಳಿದುಕೊಳ್ಳಲು ವಿವರವಾದ ಕೆಲಸವನ್ನು ಮಾಡಿದೆ” ಎಂದು ಹೇಳಿದರು.

”ಕೋಟಾ ಹೆಚ್ಚಳವು ಒಬಿಸಿಗಳು ಮತ್ತು ಇಬಿಸಿಗಳು ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಪಾಲನ್ನು ಹೊಂದಲು ಅನುವು ಮಾಡಿಕೊಡುತ್ತದೆ” ಎಂದು ಮುಖ್ಯಮಂತ್ರಿ ಹೇಳಿದರು.

”ತಮ್ಮ ಜಾತಿ ಸಂಖ್ಯೆ ಕಡಿಮೆಯಾಗಿದೆ ಅಥವಾ ಕೆಲವು ಜಾತಿಗಳು ಅಂಕಿಅಂಶಗಳನ್ನು ಹೆಚ್ಚಿಸಿವೆ ಎಂದು ಹೇಳುವವರು ಕಸದ ಮಾತುಗಳನ್ನಾಡುತ್ತಿದ್ದಾರೆ. 1931ರ ನಂತರ ಇದು ಮೊದಲ ಜಾತಿ ಸಮೀಕ್ಷೆಯಾಗಿದೆ. ಯಾವುದೇ ಅಧ್ಯಯನವಿಲ್ಲದೆ ಅವರು ತಮ್ಮ ಸಂಖ್ಯೆಯನ್ನು ಹೇಗೆ ತಿಳಿಯುತ್ತಾರೆ?” ಎಂದು ಪ್ರಶ್ನೆ ಮಾಡಿದ್ದಾರೆ.

ಬಿಜೆಪಿಯು ಈ ಕೋಟಾ ಹೆಚ್ಚಳದ ನಿರ್ಧಾರಕ್ಕೆ ಗುರುವಾರ ತನ್ನ ಬೆಂಬಲವನ್ನು ನೀಡಿತು.

ಬಿಹಾರದಲ್ಲಿ ಮೀಸಲಾತಿ ಮಿತಿ ಹೆಚ್ಚಳಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಿದೆ. ಮೀಸಲಾತಿಗಾಗಿ ಯಾವುದೇ ಪಕ್ಷಕ್ಕಾಗಲಿ ಬಿಜೆಪಿಯು ಯಾವಾಗಲೂ ಬೆಂಬಲ ನೀಡುತ್ತದೆ ಎಂದು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಸಾಮ್ರಾಟ್ ಚೌಧರಿ ಹೇಳಿದ್ದಾರೆ.

ಇದನ್ನೂ ಓದಿ: ಬಿಹಾರ: ಬಡತನದಲ್ಲಿರುವ 94 ಲಕ್ಷಕ್ಕೂ ಹೆಚ್ಚು ಕುಟುಂಬಗಳು: ಜಾತಿಗಣತಿಯಲ್ಲಿ ಬಹಿರಂಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಲೋಕಸಭಾ ಅಭ್ಯರ್ಥಿಗಳ ಪೈಕಿ ಶೇ. 25ರಷ್ಟು ಮಂದಿ ಇತರ ಪಕ್ಷಗಳಿಂದ ವಲಸೆ ಬಂದವರು

0
ಈ ಬಾರಿಯ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪೈಕಿ ಶೇ 25ರಷ್ಟು ಮಂದಿ ಬೇರೆ ಪಕ್ಷಗಳಿಂದ ವಲಸೆ ಬಂದವರು ಎಂದು ವರದಿಗಳು ಹೇಳಿವೆ. ಬಿಜೆಪಿ ಕಣಕ್ಕಿಳಿಸಿರುವ 435 ಅಭ್ಯರ್ಥಿಗಳ ಪೈಕಿ 106 ಮಂದಿ...