Homeಮುಖಪುಟಹೈಕೋರ್ಟ್‌ ಜಡ್ಜ್‌ ನಕಲಿ ಪ್ರೊಫೈಲ್ ಸೃಷ್ಟಿ: IPS ಅಧಿಕಾರಿ ನ್ಯಾಯಾಲಯಕ್ಕೆ ಶರಣು

ಹೈಕೋರ್ಟ್‌ ಜಡ್ಜ್‌ ನಕಲಿ ಪ್ರೊಫೈಲ್ ಸೃಷ್ಟಿ: IPS ಅಧಿಕಾರಿ ನ್ಯಾಯಾಲಯಕ್ಕೆ ಶರಣು

- Advertisement -
- Advertisement -

ಪಾಟ್ನಾ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿಯೊಬ್ಬರ ನಕಲಿ ವಾಟ್ಸಾಪ್ ಪ್ರೊಫೈಲ್ ಸೃಷ್ಟಿಸಿದ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಐಪಿಎಸ್ ಅಧಿಕಾರಿ ಆದಿತ್ಯ ಕುಮಾರ್ ಅವರು ಪಾಟ್ನಾ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ.

ಒಂದು ವರ್ಷಕ್ಕೂ ಹೆಚ್ಚು ಕಾಲ ತಲೆಮರೆಸಿಕೊಂಡಿದ್ದ 2011ರ ಬ್ಯಾಚ್‌ನ ಐಪಿಎಸ್ ಅಧಿಕಾರಿ, ಸುಪ್ರೀಂಕೋರ್ಟ್‌ ಬಂಧನ ಪೂರ್ವ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ನ್ಯಾಯಾಲಯಕ್ಕೆ ಶರಣಾದರು.

ಎಸ್ಪ್ಪಿ ಶ್ರೇಣಿಯ ಪೊಲೀಸ್ ಅಧಿಕಾರಿ ಕುಮಾರ್, ಮಾಜಿ ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್ ಅವರ ಫೋಟೋವನ್ನು ಪ್ರೊಫೈಲ್ ಚಿತ್ರವನ್ನಾಗಿ ಹೊಂದಿರುವ ನಕಲಿ ವಾಟ್ಸಾಪ್ ಖಾತೆಯ ಮೂಲಕ ಆಗಿನ ಬಿಹಾರ ಡಿಜಿಪಿ ಎಸ್‌ಕೆ ಸಿಂಘಾಲ್ ಅವರನ್ನು ವಂಚಿಸಿದ್ದಾರೆ.

ಈ ಕುರಿತು ಕೆಳ ನ್ಯಾಯಾಲಯಗಳು ಜಾಮೀನು ಅರ್ಜಿ ತಿರಸ್ಕರಿಸಿದ ನಂತರ ಕುಮಾರ್ ಸುಪ್ರೀಂಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದರು. ಆದರೆ ಉನ್ನತ ನ್ಯಾಯಾಲಯವು ಮನವಿಯನ್ನು ರದ್ದುಗೊಳಿಸಿತು ಮತ್ತು ಶರಣಾಗುವಂತೆ ಐಪಿಎಸ್ ಅಧಿಕಾರಿಗೆ ಸೂಚಿಸಿತ್ತು. ಮುಖ್ಯವಾಗಿ ಅಪರಾಧಗಳ ಗಂಭೀರತೆ ಮತ್ತು ತನಿಖೆಗೆ ಸಂಬಂಧಿಸಿ ಸ್ಪಷ್ಟವಾದ ಅಸಹಕಾರದ ಕಾರಣದಿಂದಾಗಿ ಅರ್ಜಿದಾರರು ನಿರೀಕ್ಷಣಾ ಜಾಮೀನಿನ ಪ್ರಯೋಜನಕ್ಕೆ ಅರ್ಹರಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತ್ತು.

ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ, ಅನಿರುದ್ಧ ಬೋಸ್ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರ ವಿಭಾಗೀಯ ಪೀಠವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ಕುಮಾರ್‌ಗೆ ಎರಡು ವಾರಗಳಲ್ಲಿ ಶರಣಾಗುವಂತೆ ಸೂಚಿಸಿದೆ.

ಈ ಪ್ರಕರಣದ ಸಂಪೂರ್ಣ ಕೇಸ್‌ ಡೈರಿಯನ್ನು ಮುಂದಿನ ವಿಚಾರಣೆಯ ಡಿ.12ರಂದು ಸೀಲ್‌ ಮಾಡಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಹಸ್ತಾಂತರಿಸುವಂತೆ ಬಿಹಾರ ಪೊಲೀಸರ ಆರ್ಥಿಕ ಅಪರಾಧಗಳ ಘಟಕಕ್ಕೆ ಸುಪ್ರೀಂಕೋರ್ಟ್‌ ಸೂಚಿಸಿದೆ.

2022ರ ಅ.15ರಂದು ಮದ್ಯದ ಮಾಫಿಯಾ ಜೊತೆ ನಂಟಿನ ಆರೋಪದಲ್ಲಿ ಗಯಾದ ಫತೇಪುರ್ ಪೊಲೀಸ್ ಠಾಣೆಯಲ್ಲಿ ಆರ್ಥಿಕ ಅಪರಾಧಗಳ ಘಟಕವು ಕುಮಾರ್‌ ವಿರುದ್ಧ ಪ್ರಕರಣವನ್ನು ದಾಖಲಿಸಿದೆ. ಆ ಬಳಿಕ ಐಪಿಎಸ್ ಅಧಿಕಾರಿ ಆದಿತ್ಯ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿತ್ತು.

ಕುಮಾರ್‌ ವಿರುದ್ಧದ ಪ್ರಕರಣವನ್ನು ಮುಚ್ಚಿಹಾಕಲು ಅವರ ಸಹಚರ ಅಭಿಷೇಕ್ ಅಗರ್ವಾಲ್ ಪಾಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರ ನಕಲಿ ವಾಟ್ಸಾಪ್‌ ಪ್ರೊಫೈಲ್ ಸೃಷ್ಟಿಸಿದ್ದಾನೆ ಮತ್ತು ಆಗಿನ ಬಿಹಾರದ ಡಿಜಿಪಿ ಎಸ್‌ಕೆ ಸಿಂಘಾಲ್‌ನ್ನು ಸಂಪರ್ಕಿಸಿ ಕುಮಾರ್ ವಿರುದ್ಧದ ಪ್ರಕರಣವನ್ನು ಕೈಬಿಡುವಂತೆ ಕೇಳಿಕೊಂಡಿದ್ದಾನೆ.

ಇದನ್ನು ಓದಿ: ಬಾಬರಿ ಮಸೀದಿ ಧ್ವಂಸಕ್ಕೆ 31 ವರ್ಷ: ಅಜೆಂಡಾ ಯಶಸ್ವಿಗೊಳಿಸುವತ್ತ ಬಿಜೆಪಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ದೆಹಲಿ ಜನರು ನಮಗೆ 56% ಮತ ನೀಡಿದ್ದಾರೆ, ಅವರು ಪಾಕಿಸ್ತಾನಿಗಳೇ..?’; ಅಮಿತ್‌ ಶಾ ವಿರುದ್ಧ...

0
'ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಕಾರಣ ಅವರು ಅಹಂಕಾರಿಯಾಗಿದ್ದಾರೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್...